pregnancy | pregnancy problems | pregnancy tips | Home Remedies | Health News

pregnancy problems and solutions 



pregnancy problems and solutions | Health News | Home Remedies | common discomforts of pregnancy and relief measures 

ಗರ್ಭಿಣಿಯರಿಗೆ ಮತ್ತೊಂದು ಜೀವವನ್ನು ಹೊಟ್ಟೆಯಲ್ಲಿ ಜತನ ಮಾಡಬೇಕಾದ ಅನಿವಾರ್ಯತೆ. ಇಂಥ ಸಂದರ್ಭದಲ್ಲಿ ಎಷ್ಟು ಎಚ್ಚರ ವಹಿಸಿದರೂ ಸಾಲದು. ತಮ್ಮ ಆರೋಗ್ಯದೊಂದಿಗೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಪುಟ್ಟ ಜೀವದ ಆರೋಗ್ಯವನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ತಮ್ಮ ಆಹಾರ ಸೇವನೆಯಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳಬೇಕು. ಪೌಷ್ಟಿಕಾಂಶಗಳುಳ್ಳ ಆಹಾರಸೇವನೆ ಮಾಡಬೇಕು. ಅವರಿಗಾಗಿ ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಗರ್ಬಿಣಿಯರು ತಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ನಿಶಕ್ತಿ ಕಡಿಮೆಯಾಗುವುದು ಮತ್ತು ಮಗು ಆರೋಗ್ಯವಾಗಿ ಬೆಳೆಯುವುದು.

ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣಿನ ಒಳಗಿನ ತಿರುಳನ್ನು ಬೇರ್ಪಡಿಸಿ ಹಣ್ಣನ್ನು ಸಣ್ಣದಾಗಿ ಹೆಚ್ಚಿ ಹಾಲು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ನಿಶಕ್ತಿ ಕಡಿಮೆಯಾಗುತ್ತದೆ.

ಪ್ರತಿದಿನ ಒಂದು ಬಟ್ಟಲಿನಷ್ಟು ನಿಂಬೆ ರಸ ಸೇವಿಸುವುದರಿಂದ ನಿಶ್ಯಕ್ತಿಯನ್ನು ದೂರಮಾಡಬಹುದು.

ಗರ್ಭಿಣಿಯರು ನುಗ್ಗೆ ಸೊಪ್ಪನ್ನು ತಮ್ಮ ಆಹಾರದಲ್ಲಿ ಬಳಸುವುದರಿಂದ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ.

ದಾಲ್ಚಿನಿಯನ್ನು ನುಣ್ಣಗೆ ಅರೆದು ಒಂದು ಬಟ್ಟಲು ನೀರಿನಲ್ಲಿ ಕುದಿಸಿ ಅದಕ್ಕೆ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ನಿಶ್ಯಕ್ತಿ ಕಡಿಮೆಯಾಗುತ್ತದೆ.

ಸಬ್ಬಸಿಗೆ ಬೀಜವನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಎರಡು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ನಿಶ್ಯಕ್ತಿ ಕಡಿಮೆಯಾಗುತ್ತದೆ.

ಎರಡು ಒಣ ಖರ್ಜೂರ, ಎರಡು ಬಾದಾಮಿಯನ್ನು ಹಾಲು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು, ಎರಡು ಚಮಚ ಜೇನುತುಪ್ಪ ಬೆರೆಸಿ ಒಂದು ವಾರಗಳ ಕಾಲ ಸೇವಿಸಿದರೆ ನಿಶ್ಯಕ್ತಿ ಕಡಿಮೆಯಾಗುತ್ತದೆ.

ಗರ್ಭಿಣಿಯರಿಗೆ ವಾಂತಿಯಾಗುತ್ತಿದ್ದರೆ ಏಲಕ್ಕಿಯನ್ನು ನುಣ್ಣಗೆ ಅರೆದು ಒಂದು ಬಟ್ಟಲು ಎಳನೀರಿನಲ್ಲಿ ಒಂದು ಚಮಚ ಸಕ್ಕರೆಯೊಂದಿಗೆ ಬೆರೆಸಿ ಪ್ರತಿ ಅರ್ಧ ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಸೇವಿಸುವುದರಿಂದ ವಾಂತಿ ನಿಲ್ಲುತ್ತದೆ.

ಶುಂಠಿ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ವಾಂತಿ ನಿಲ್ಲುತ್ತದೆ.

ಜೀರಿಗೆ ಮತ್ತು ಕೊತ್ತಂಬರಿಬೀಜ, ನೆಲ್ಲಚೆಟ್ಟು ನುಣ್ಣಗೆ ಅರೆದು ಒಂದು ಬಟ್ಟಲಿನ ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಅದಕ್ಕೆ ಹಾಲು, ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ವಾಂತಿ ನಿಲ್ಲುವುದು.

ಒಂದು ಬಟ್ಟಲು ಎಳನೀರಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸುತ್ತಿದ್ದರೆ ವಾಂತಿ ನಿಲ್ಲುತ್ತದೆ. ನಿಂಬೆ ಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ.

ಒಂದು ಬಟ್ಟಲು' ನೇರಳೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ.

ಗರ್ಭಿಣಿಯರಲ್ಲಿ ಬಾವು ಕಂಡು ಬಂದರೆ ದಿನಕ್ಕೆ ಎರಡು ಬಾರಿ ಬಿಲ್ವಪತ್ರೆ ಎಲೆಯ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಬಾವು ಕಡಿಮೆಯಾಗುತ್ತದೆ.

ಗರ್ಭಿಣಿಯರಲ್ಲಿ ಅತಿಯಾಗಿ ವಾಂತಿಯಾಗುತ್ತಿದ್ದರೆ ಎರಡು ಚಮಚ ಕರಿಬೇವಿನ ರಸಕ್ಕೆ ಎರಡು ಚಮಚ ನಿಂಬೆರಸ ಎರಡು ಚಮಚ ಜೇನುತುಪ್ಪಬೆರೆಸಿ ಸೇವಿಸುವುದರಿಂದ ವಾಂತಿ ನಿಲ್ಲುತ್ತದೆ.

ಗರ್ಭಿಣಿಯರು ತಾಜಾ ಕಿತ್ತಲೆ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ವಾರದಲ್ಲಿ ಎರಡು ಬಾರಿ ಸೇವಿಸುವುದರಿಂದ ಪ್ರಸವವು ಸುಖಕರವಾಗಿ ಆಗುವುದು.

ಗರ್ಭಿಣಿಯರು ಚೆನ್ನಾಗಿ ಹಣ್ಣಾದ ಪೇರಲ ಹಣ್ಣಿನ ತಿರುಳನ್ನು ಬೀಜ ತೆಗೆದು ಅದಕ್ಕೆ ಸಾಕಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಹೆಚ್ಚಿನ ಪುಷ್ಟಿ ದೊರೆಯುವುದು.

pregnancy symptoms | pregnancy | pregnancy symptoms in tamil | 9 months pregnant | early pregnancy symptoms | pregnancy week by week | 6 months pregnant | 8 months pregnant | 7 months pregnant | 5 months pregnant | very early signs of pregnancy 1 week | 3 months pregnant | 4 months pregnant | pregnancy tips | early signs of pregnancy | signs of pregnancy | 1 month pregnant | symptoms of pregnancy in first month | pregnancy symptoms week 1 | 12 weeks pregnant | white discharge during pregnancy | pregnancy week calculator


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.