pepper benefits
pepper | pepper benefits | black pepper benefits | black pepper
ಆರೋಗ್ಯರಕ್ಷಣೆಗೆ ಮೆಣಸಿನ ಸೂತ್ರ
ನಮ್ಮ ನಿತ್ಯ
ಬಳಕೆಯ ಹಲವಾರು ವಸ್ತುಗಳಲ್ಲಿ ಔಷಧೀಯ ಗುಣಗಳಿವೆ. ನಾವು ಅವುಗಳನ್ನು ಕಂಡುಕೊಂಡಿರುವುದಿಲ್ಲ
ಅಷ್ಟೇ. ಭಾರತೀಯ ಆಹಾರ ಪದ್ಧತಿ ಬಹಳ ಶ್ರೇಷ್ಠವಾಗಿದ್ದು ನಾವು ನಿತ್ಯ ಸೇವಿಸುವ ಆಹಾರವೇ
ಸಮತೋಲನವಾಗಿದೆ. ನಾವು ನಿತ್ಯ ಸೇವಿಸುವ ಆಹಾರ ಪದಾರ್ಥಗಳು ಪೌಷ್ಟಿಕತೆ ಹೊಂದಿದ್ದು ನಾವು ಬಳಸುವ
ಸಾಂಬಾರ ಪದಾರ್ಥಗಳಂತೂ ಔಷಧೀಯ ಗುಣಗಳಿಂದ ಜಾಗತಿಕ ಪ್ರಶಂಸೆ ಗಳಿಸಿವೆ. ಅದಕ್ಕೆ ಅತ್ಯುತ್ತಮ
ಉದಾಹರಣಿ ಮೆಣಸು, ಅದರಲ್ಲಿ ಔಷಧೀಯ ಗುಣಗಳ ಬಗ್ಗೆ ಮಾಹಿತಿಯನ್ನು
ಇಲ್ಲಿ ಪಡೆಯೋಣ.
ಅಜೀರ್ಣ
ಒಂದು ಟೀ ಚಮಚ
ಮೆಣಸನ್ನು ಹದವಾಗಿ ಹುರಿದು ತುಳಸಿ ಎಲೆಯನ್ನು ಒಂದು ಬಟ್ಟಲು ಕುದಿಯುವ ನೀರನ್ನು ಹಾಕಿ ಹತ್ತು
ನಿಮಿಷಗಳ ಕಾಲ ಕುದಿಸಿ ನಂತರ ಶೋಧಿಸಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಿದರೆ ಅಜೀರ್ಣ ಸಂಪೂರ್ಣವಾಗಿ ಗುಣವಾಗುತ್ತದೆ.
ನಾವು ಹೊಟ್ಟೆ ತುಂಬಾ ಊಟ ಮಾಡಿದ ನಂತರ ಮೆಣಸಿನಿಂದ ತಯಾರಿಸಿದ ರಸ ಕುಡಿಯುವುದನ್ನು ಕಾಣುತ್ತೇವೆ. ಇದರಿಂದ ಹೆಚ್ಚು ತಿಂದು ಅಜೀರ್ಣವಾಗುವ ಸಂಭವ ತಪ್ಪುತ್ತದೆ.
ಹೊಟ್ಟೆ ಉಬ್ಬರ
ಒಂದು ಚಮಚ ಕಾದ
ತುಪ್ಪಕ್ಕೆ ಕಾಳೂ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ. ನಂತರ ಅದರಲ್ಲಿ ಅನ್ನ
ಕಲಸಿಕೊಂಡು ತಿಂದರೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ ಉಬ್ಬರ ನಿಲ್ಲುತ್ತದೆ.
ಮೊಸರು ಅನ್ನಕ್ಕೆ
ಬೆಲ್ಲ ಮತ್ತು ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಊಟ ಮಾಡುವುದರಿಂದ ಮೂತ್ರದ್ವಾರ ಮತ್ತು
ಗುದದ್ವಾರದಲ್ಲಿನ ಉರಿ ನಿವಾರಣೆಯಾಗುತ್ತದೆ.
ಕಾಮಾಲೆ
ಎಳೆಯಾದ ಹಸಿ
ಮೂಲಂಗಿಯ ಹೋಳುಗಳಿಗೆ ಕರಿ ಮೆಣಸಿನಪುಡಿ, ನಿಂಬೆರಸ, ಉಪ್ಪು ಸೇರಿಸಿ ತಿನ್ನುವುದರಿಂದ ಅರಿಶಿನ ಕಾಮಾಲೆ ವಾಸಿಯಾಗುತ್ತದೆ.
ಮಲೇರಿಯಾ
ಒಂದು ಬಟ್ಟಲು ಕುದಿಯುವ
ನೀರಿಗೆ ಒಂದು ಊಟದ ಚಮಚ ಮೆಣಸನ್ನು ಜಜ್ಜಿ ಹಾಕಿ ಒಂದು ಬೆಳ್ಳುಳ್ಳಿಯನ್ನು ಬಿಡಿಸಿ ಕುದಿಯುವ
ನೀರಿಗೆ ಹಾಕಿ ಐದು ನಿಮಿಷಗಳ ನಂತರ ಕಷಾಯವನ್ನು ಒಲೆಯಿಂದ ಇಳಿಸಿ ಶೋಧಿಸಿ ಜೇನುತುಪ್ಪ ಸೇರಿಸಿ
ದಿನಕ್ಕೆ ಮೂರುಬಾರಿ ಕುಡಿದರೆ ಮಲೇರಿಯಾ ದೂರವಾಗುತ್ತದೆ.
ಬಾಯಾರಿಕೆ
ಅರ್ಧ ಟೀ ಚಮಚ
ಮೆಣಸನ್ನು ಚೆನ್ನಾಗಿ ಹುರಿದು ನುಣ್ಣಗೆ ಪುಡಿ ಮಾಡಿ ಎರಡು ಬಟ್ಟಲು ನೀರಿಗೆ ಈ ಪುಡಿಯನ್ನು ಹಾಕಿ
ಮತ್ತೊಮ್ಮೆ ಕುದಿಸಿ ನಂತರ ಅದರ ನೀರನ್ನು ಕುಡಿದರೆ ಅತಿಯಾದ ಬಾಯಾರಿಕೆ ವಾಸಿಯಾಗುವುದು.
ತಲೆನೋವು
ನುಗ್ಗೆಸೊಪ್ಪಿನ
ರಸದಲ್ಲಿ ಒಂದೆರಡು ಕಾಳು ಮೆಣಸನ್ನು ನುಣ್ಣಗೆ ಅರೆದು ಕಪೋಲಗಳಿಗೆ ಹಚ್ಚುವುದರಿಂದ ತಲೆನೋವು
ಬಿಟ್ಟು ಹೋಗುವುದು.
ನೆಗಡಿ ಮತ್ತು ಕೆಮ್ಮು
ಒಂದು ಬಟ್ಟಲು
ನೀರಿಗೆ ಅರ್ಧ ಟೀ ಚಮಚ ದಾಲ್ಟಿನ್ನಿ ಮತ್ತು ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ
ಚೆನ್ನಾಗಿ ಕುದಿಸಿ. ನಂತರ ಈ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ
ಕುಡಿದರೆ ನೆಗಡಿ ಇಲ್ಲವಾಗುತ್ತದೆ.
ಒಂದು ವೀಳ್ಯದೆಲೆ, ಕಾಳುಮೆಣಸು ಮತ್ತು
ಉಪ್ಪನ್ನು ಸೇರಿಸಿಕೊಂಡು ಅಗಿದು ತಿಂದರೆ ಕೆಮ್ಮು ಕಡಿಮೆಯಾಗಿ ಕಫ ನಿವಾರಣೆಯಾಗುವುದು.
ಬಿಸಿಯಾದ ಹಾಲನ್ನು
ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
ತುಪ್ಪದಲ್ಲಿ ಹುರಿದ
ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿ ಮಾಡಿ ದಿನಕ್ಕೆ ಮೂರು ಸಲ ಅರ್ಧ ಟೀ
ಚಮಚದೊಂದಿಗೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ಮೂರು ಬಾರಿ ಸೇವಿಸಿದರೆ
ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಬಿಸಿಯಾದ ಹಸುವಿನ
ಹಾಲಿಗೆ ಅರಿಶಿನ ಪುಡಿ, ಕಾಳು ಮೆಣಸಿನ ಪುಡಿ ಮತ್ತು ಸಕ್ಕರೆ ಸೇವಿಸಿ ಕುಡಿದರೆ ನೆಗಡಿ, ಕೆಮ್ಮು ಮತ್ತು
ಗಂಟಲನೋವು ನಿವಾರಣೆಯಾಗುತ್ತದೆ.
ಒಂದು ಚಿಟಿಕೆ
ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿಯನ್ನು ಒಂದು ಬಟ್ಟಲು ಹಾಲಿಗೆ ಕೂಡಿಸಿ
ಚೆನ್ನಾಗಿ ಕುದಿಸಿ ಊಟದ ನಂತರ ರಾತ್ರಿ ಮೂರು ಬಾರಿ ಸೇವಿಸಿದರೆ ರೋಗ ರುಜಿನಗಳು
ಪರಿಹಾರವಾಗುವುದಲ್ಲದೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಮೆಣಸನ್ನು
ನುಣ್ಣಗೆ ಹುರಿದು ಪುಡಿ ಮಾಡಿ ಕಾಲು ಚಮಚೆಯಷ್ಟು ಪುಡಿ ಜೇನುತುಪ್ಪದಲ್ಲಿ ಕಲೆಸಿ 2 ಬಾರಿ
ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಉಪಶಮನವಾಗುತ್ತವೆ.
ಒಡೆದ ಮೆಣಸು ಕೊಂಚ
ಓಮು ಮತ್ತು ಒಂದೆರಡು ಉಪ್ಪಿನ ಹರಳನ್ನು ಬಾಯಿಯಲ್ಲಿ ಇಟ್ಟುಕೊಂಡು ಚಪ್ಪರಿಸಿ ನುಂಗುತ್ತಿದ್ದರೆ
ಕೆಮ್ಮು ನಿವಾರಣೆಯಾಗುತ್ತದೆ.
ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಟಿನ್ನಿ ಚೂರ್ಣ ಮತ್ತು ಒಂದು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುದಿಸಿ ಈ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ.
ಬಿಸಿ ಹಾಲಿಗೆ
ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುವುದು.
ಮೆಣಸನ್ನು ಹುರಿದು
ನುಣ್ಣಗೆ ಪುಡಿಮಾಡಿ ಕಾಲು ಚಮಚದಷ್ಟು ಚೂರ್ಣವನ್ನು ಜೇನು ತುಪ್ಪದೊಂದಿಗೆ ಕಲಸಿ ದಿನಕ್ಕೆ ಎರಡು
ಬಾರಿ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೊರಲು ರೋಗಗಳ ಉಪಶಮನವಾಗುತ್ತದೆ.
ಹಲ್ಲು ನೋವು
ಮೆಣಸನ್ನು
ನುಣ್ಣಗೆ ಅರೆದು ವಸಡಿಗೆ ತಿಕ್ಕಿಕೊಂಡರೆ ಕೆಟ್ಟ ನೀರು ಸುರಿದು ಹೋಗಿ ಹಲ್ಲು ನೋವು
ಕಡಿಮೆಯಾಗುವುದು.
ಮೊಡವೆ
ಮೆಣಸನ್ನು
ನೀರಿನಲ್ಲಿ ತೇದು ಮೊಡವೆಗಳಿಗೆ ಹಚ್ಚಿದರೆ ಗುಣ ಕಂಡು ಬರುವುದು.
ತಲೆಯ ಕೂದಲು ಉದುರುವುದು
ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಎರಡು ಮೂರು ದಿನ ಹಚ್ಚಿ ಸ್ನಾನ ಮಾಡಿದರೆ ತಲೆಯ ಕೂದಲು ಉದುರುವುದು ನಿಂತು ಹೋಗುವುದು ಮತ್ತು ಹೊಟ್ಟು ಏಳುವುದಿಲ್ಲ.

