Eating disorders
eating disorders | solution | Home Remedies | eating disorders types
ಹಸಿವಿಲ್ಲದ ಮೇಲೆ ಆಹಾರದ ಹಂಗೇಕೆ?
ಹಸಿವಿಲ್ಲದಾಗಲೂ
ತಿನ್ನುವುದು ಮಾನವನಿಗೆ ಮಾತ್ರ ಅಂಟಿಕೊಂಡಿರುವ ಚಟ. ಜಗತ್ತಿನ ಸಕಲ ಜೀವಿಗಳೂ ಹಸಿವಾದಾಗ ಮಾತ್ರ
ಆಹಾರ ಸೇವಿಸಿದರೆ ಮಾನವರು ಮಾತ್ರ ಹಸಿದಾಗಲೂ ಇಲ್ಲದಾಗಲೂ ಬಾಯಿಗೆ ಕೆಲಸ ನೀಡುತ್ತಲೇ ಇರುತ್ತಾರೆ.
ಗೆಳೆಯರೊಂದಿಗೆ ಸೇರಿದಾಗ ಏನಾದರೂ ತಿನ್ನುವ ಬಯಕೆ, ಏನೂ
ಕೆಲಸ ಇಲ್ಲದಿರುವಾಗ ಒಂದಿಷ್ಟು ತಿನ್ನುತ್ತಾ ಸಮಯ ಕಳೆಯುವ ಬಯಕೆ, ಹೊರಗಡೆ
ಸುತ್ತಾಡುವಾಗ ಒಂದಿಷ್ಟು ಹೊಟ್ಟೆಗೆ ಹಾಕಿಕೊಂಡರೇನೇ ಸಮಾಧಾನ. ಇದು ನಮ್ಮ ಜೀವನಶೈಲಿ, ಹಸಿವಾದಾಗ ಮಾತ್ರ ತಿನ್ನುವುದನ್ನು ಕಲಿಯಬೇಕು.
ಹಸಿವಿಲ್ಲದಾಗ
ಯಾವುದೇ ಕಾರಣಕ್ಕೂ ತಿನ್ನಬಾರದು ಎನ್ನುವುದನ್ನು ಸೂಚ್ಯವಾಗಿ ತಿಳಿಸಲು ಹಿರಿಯರು ಬಹಳ ಹಿಂದೆಯೇ
ಮೂರೊತ್ತುಂಡವ ರೋಗಿ ಎಂದಿದ್ದಾರೆ. ಆರೋಗ್ಯಕರ ಜೀವನಕ್ಕೆ ದಿನಕ್ಕೆ ಎರಡು ಹೊತ್ತು ಊಟ ಮಾಡಿದರೆ
ಸಾಕು ಎನ್ನುವುದು ಅವರ ಹೇಳಿಕೆ, ದಿನಕ್ಕೆ ಎರಡು ಬಾರಿ ನಿಜವಾದ
ಹಸಿವಾಗುತ್ತದೆ. ಆದರೆ ಹೆಚ್ಚು ಶ್ರಮದ ಕೆಲಸ ಮಾಡುವವರಲ್ಲಿ ಎರಡು ಬಾರಿಗೆ ಮೀರಿದಂತೆ ಹಸಿವು
ಉಂಟಾಗಬಹುದು. ಆದರೆ ಸದಾ ಆಹಾರ ಸೇವಿಸುವವರಿಗೆ ಮಾತ್ರ ಹಸಿವಿನ ಭ್ರಮೆ ಹೋಗುವುದಿಲ್ಲ. ಹೆಚ್ಚು
ಆಹಾರ ಸೇವಿಸಿದರೆ ಅದರಿಂದಲೇ ತೊಂದರೆ ಉಂಟಾಗುತ್ತದೆ.
ದಿನಕ್ಕೆ ಎರಡು
ಬಾರಿ ಊಟ ಸೇವಿಸಿದರೆ ಸಾಕು. ಆದರೆ ನಗರದ ಜೀವನಶೈಲಿಯಲ್ಲಿ ಬೆಳಿಗ್ಗೆ ಮನೆ ಬಿಟ್ಟವರು ಮತ್ತೆ ಮನೆ
ತಲುಪುವುದು ತಡರಾತ್ರಿಯೇ ಆಗುವುದರಿಂದ ಬೆಳಗ್ಗೆ ತಿಂಡಿ ಅನಿವಾರ್ಯವಾಗಿದೆ. ಬೆಳಿಗ್ಗೆಯೇ ಹೊಟ್ಟೆ
ತುಂಬ ಊಟ ಮಾಡಿದರೆ ಮತ್ತೆ ಪ್ರಯಾಣ ಕಷ್ಟವಾಗುತ್ತದೆ.
ಆದರೆ ಆಹಾರ
ಸೇವಿಸುವ ನಡುವಿನ ಅಂತರವನ್ನು ನಾವು ಎಚ್ಚರದಿಂದ ಕಾಯ್ದುಕೊಳ್ಳಬೇಕು. ವಿವಿಧ ಬಗೆಯ ಆಹಾರ
ಜೀರ್ಣವಾಗುವ ಅವಧಿಯನ್ನು ಇದು ಅವಲಂಬಿಸುತ್ತದೆ. ಹಣ್ಣುಗಳು ಜೀರ್ಣವಾಗಲು ಎರಡರಿಂದ ಎರಡೂವರೆ
ಗಂಟೆ ಸಾಕು. ತರಕಾರಿಗಳು ಮೂರು ಗಂಟೆಗೂ ಹೆಚ್ಚು ಕಾಲ ಬೇಕು. ಬೇಳೆ ಕಾಳುಗಳು ಜೀರ್ಣವಾಗಲು
ಮೂರರಿಂದ ಐದರಿಂದ ಆರು ಗಂಟೆ ಬೇಕು.
ನಾವು ಸೇವಿಸಿದ
ಆಹಾರ ಜೀರ್ಣವಾದ ನಂತರ ಜೀರ್ಣಾಂಗಕ್ಕೆ ಒಂದು ಗಂಟೆ ವಿಶ್ರಾಂತಿ ಅಗತ್ಯ. ಈ ಲೆಕ್ಕಾಚಾರದಲ್ಲಿ
ದಿನಕ್ಕೆ ಎರಡು ಊಟ ಸೂಕ್ತ. ಆದರೆ ನಮ್ಮ ವಯಸ್ಸು, ನಮ್ಮ ಜೀರ್ಣಶಕ್ತಿ, ನಮ್ಮ ಆರೋಗ್ಯ ಮುಂತಾದವುಗಳನ್ನು ಆಧರಿಸಿ ಆಹಾರ
ಸೇವಿಸುವುದು ಸೂಕ್ತ. ನಮ್ಮ ಜೀರ್ಣಶಕ್ತಿ ಕಡಿಮೆ ಇದ್ದರೆ ಸತತವಾಗಿ ಆಹಾರ ಸೇವಿಸುವುದು ಸರಿಯಲ್ಲ.
ಮೂಲಭೂತವಾಗಿ ಭಾರತೀಯ ಆಹಾರ ಪದ್ಧತಿ ಸೂಕ್ತವಾಗಿದೆ. ಆದರೆ ಅದನ್ನು ನಿರ್ಲಕ್ಷಿಸಿ ನಾವು
ಪಾಶ್ಚಿಮಾತ್ರ ಆಹಾರಪದ್ಧತಿಗೆ ಮಾರು ಹೋಗಿದ್ದೇವೆ. ಇದೇ ಎಲ್ಲಾ ಸಮಸ್ಯೆಗಳ ಮೂಲ.
ಶಕ್ತಿಯ ಮೂಲ
ಆಹಾರ. ಆಹಾರ ಸೇವನೆ ಸಮತೋಲನದಲ್ಲಿರಬೇಕು. ಅನಗತ್ಯವಾಗಿ ಬಾಯಿಗೆ ಸಿಕ್ಕಿದ್ದನ್ನೆಲ್ಲ ತುರುಕಲು
ಹೋಗಬಾರದು. ದೀರ್ಘಾಯುಷಿಗಳನ್ನು ನಿಮ್ಮ ದೀರ್ಘಾಯಸ್ಸಿನ ಗುಟ್ಟೇನು ಎಂದು ಕೇಳಿ. ಅದಕ್ಕೆ ಅವರ
ಕೊಡುವ ಮೊದಲ ಉತ್ತರ ಮಿತಾಹಾರ ಎನ್ನುವುದು. ಮಿತವಾದ, ಪೌಷ್ಟಿಕತೆಯುಳ್ಳ ಆಹಾರದಿಂದ ನಮ್ಮ ಆಯಸ್ಸು
ವೃದ್ಧಿಸುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಕಡಿಮೆ ಆಹಾರ ಸೇವಿಸಿದರೆ ಆರೋಗ್ಯ
ಹೆಚ್ಚುತ್ತದೆ ಎಂದು ಸಂಶೋಧನೆಗಳೂ ದೃಢಪಡಿಸಿವೆ.
ನೆಲದ ಮೇಲೆ
ಕುಳಿತು ಆಹಾರ ಸೇವಿಸುವ ನಮ್ಮ ಪದ್ಧತಿಯೇ ನಮಗೆ ಹೆಚ್ಚು ಆಹಾರ ಸೇವಿಸದಂತೆ ತಡೆಯಲು ಅತ್ಯುತ್ತಮ
ಉಪಾಯವಾಗಿತ್ತು. ಈಗ ಹಾಗಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಡೈನಿಂಗ್ ಟೇಬಲ್ ಬಂದಿದೆ. ಕೈಕಾಲು ಮಡಚಿ
ತಲೆ ಬಗ್ಗಿಸಿ ಊಟ ಸೇವಿಸುವ ಅಗತ್ಯವಿಲ್ಲ. ಇದರಿಂದ ಊಟದಲ್ಲೇ ಸಹಜವಾಗಿ ಸಿಗುತ್ತಿದ್ದ ಆಹಾರ
ನಿಯಂತ್ರಣವೂ ದೊರೆಯುತ್ತಿಲ್ಲ. ಹಸಿವು ಉಂಟಾಗದಿದ್ದರೆ ಆಹಾರ ಬಿಟ್ಟುಬಿಡಿ. ಹಸಿವು ಇಲ್ಲದೆಯೂ
ಆಹಾರ ಸೇವಿಸುವ ಸಂದರ್ಭ ಬಂದರೆ ಲಘುವಾದ ಆಹಾರ ಸೇವಿಸಿ. ಆಗಾಗ್ಗೆ ಬಾಯಾಡಿಸಲಿ. ಒಂದು ತುತ್ತೂ
ಹೆಚ್ಚಾಗಿ ತಿನ್ನುವುದು ಅರೋಗ್ಯಕ್ಕೆ ಒಳ್ಳೆಯದಲ್ಲ. ಊಟಕ್ಕೆ ಕುಳಿತಾಗ ನಿರ್ಮಲ ಮನಸ್ಸಿನಿಂದ
ಎಲ್ಲಿ ಹೆಚ್ಚಾಗುತ್ತದೋ ಎನ್ನುವ ಆತಂಕ ದೂರ ಮಾಡಿ ಆಹಾರ ಸೇವಿಸಿ.

