Health Tips Kannada
Health Tips Kannada
ತಲೆನೋವು ಎನ್ನುವುದು ಮೈಗ್ರೇನ್, ದೃಷ್ಟಿದೋಷ, ನೆಗಡಿಗೆ ಸಂಬಂದಿಸಿದ ತೊಂದರೆಗಳು, ಜ್ವರ, ತಲೆನೋವಿನ ಇತರೆ ತೊಂದರೆಗಳು ಇತ್ಯಾದಿಯಾಗಿ ಹಲವಾರು ಕಾರಣಗಳಿಂದ ಬರುತ್ತದೆ. ಆದರೆ ಈ ಎಲ್ಲಾ ಕಾರಣಗಳಲ್ಲಿ 'ಮೈಗ್ರೇನ್' ತಲೆನೋವು ಅತ್ಯಂತ ಸಾಮಾನ್ಯವಾದದ್ದು.
migraine headache symptoms
ಮೈಗ್ರೇನ್ ಎಂದರೇನು ?
ಮೈಗ್ರೇನ್ ತಲೆನೋವು ಬಂದಾಗ ಆ ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ಥಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕ ಸಿತ' ವಾಗುತ್ತದೆ. ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ ನರಗಳು ಉದ್ರೇಕಗೊಂಡು ನೋವು ಉಂಟಾಗುತ್ತದೆ.
ಈ ತರಹದ ನೋವು ತಲೆಯ ಯಾವ ಭಾಗದಲ್ಲಾದರೂ ಉಂಟಾಗಬಹುದು ಹಾಗೂ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಬರಬಹುದು. ಕೆಲವರಿಗೆ ಕೇವಲ ಕಣ್ಣಿನ ಸುತ್ತ ಮಾತ್ರವೇ ನೋವು ಬರಬಹುದು. ಹಾಗೂ ಕೆಲವರಿಗೆ ಹಿಂಭಾಗದಲ್ಲಿ ಕುತ್ತಿಗೆಯವರೆಗೂ ನೋವು ಉಂಟಾಗುಬಹುದು. ತೀವ್ರವಾದ ತಲೆನೋವು ಬಲ ಎಡಭಾಗದಲ್ಲಿ ಹೆಚ್ಚು ಬರುತ್ತದೆ.
migraine headache treatment
ತಲೆನೋವಿನ ಜೊತೆಗೆ ಇನ್ನಿತರ ಲಕ್ಷಣಗಳು :
ಕೆಲವರಿಗೆ ತಲೆನೋವು ಜಾಸ್ತಿಯಾದಾಗ ವಾಂತಿ ಅಥವಾ ಹೊಟ್ಟೆ ತೊಳಿಸಿದಂತೆ ಆಗುವುದು ಸಾಮಾನ್ಯ, ತಲೆ ಸುತ್ತಿದಂತೆ ಆಗುವೂದು ಸಹ ಸಾಧ್ಯವಿರುತ್ತದೆ ಸಾಮಾನ್ಯವಾದ ಶಬ್ದ, ಬೆಳಕು, ವಾಸನೆಗಳಿಂದ ಅಸಹನೆ ಹೆಚ್ಚಾಗಬಹು ಮಾತನಾಡಲು ಕಷ್ಟವಾಗಬಹುದು. ಕೈ ಅಥವಾ ಕಾಲುಗಳು ಮರಗಟ್ಟಿದ ಬಿಗಿಯಾದ ಅನುಭವವಾಗಬಹುದು. Classic Migraine ಎಂಬ ರೀತಿಯಲ್ಲಿ ತಲೆನೋವು ಬರುವ " ಮುನ್ನ ದೃಷ್ಟಿ ಮಂಜಾದಂತೆ, ಮಿಂಚಿದಂತೆ ಅಥವಾ ಬಣ್ಣ ಬಣ್ಣದ ಅಲೆಗಳು
ಕಾಣಿಸಿದಂತೆ ಸಹ ಆಗಬಹುದು. ಒಟ್ಟಿನಲ್ಲಿ ನಿಮ್ಮ ದೈನಂದಿಕ ಕೆಲಸಗಳನ್ನು ಮಾಡಲು ತೊಂದರೆಯಾಗುತ್ತಿದ್ದರೆ, ಬಹುಶಃ ಅದು ಮೈಗ್ರೇನ್ ಆಗಿರಬಹುದು.
headache home remedies
ಮೈಗ್ರೇನ್ ತಲೆನೋವಿಗೆ ಕಾರಣವೇನು ?
ಮೈಗ್ರೇನ್ ತಲೆನೋವು ಬರುವ ರೀತಿ ತಿಳಿದಿದ್ದರೂ, ಆ ರೀತಿ ಉಂಟಾಗುವ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಬಹುಶಃ ವ್ಯಕ್ತಿಯ ದೇಹ ಪ್ರಕೃತಿ, ಅನುವಂಶಿಕ ಕಾರಣಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಇರಬಹುದು.
headache home remedies in kannada
headache remedies
ಮೈಗ್ರೇನ್ ತಲೆನೋವು ಉದ್ರೇಕವಾಗುವ ಸಂದರ್ಭಗಳು
- ಮೈಗ್ರೇನ್ ಇರುವವರಿಗೆ, ತಲೆನೋವು ಯಾವುದೇ ರೀತಿಯ ದೈಹಿಕ ಅಥವಾ ವಾನ ಸಿಕ ವಾಗಿ ಆಯಾಸ ವಾಗುವ ಸಂದರ್ಭಗಳಲ್ಲಿ ಹೆಚ್ಚು ಪ್ರಕಟವಾಗುತ್ತದೆ.
- ಸಾಮಾನ್ಯವಾಗಿ ಪ್ರಯಾಣ ಮಾಡಿದಾಗ, ಬಿಸಿಲಿನಲ್ಲಿ ಇದ್ದಾಗ, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭಗಳಲ್ಲಿ ಭಾಗವಹಿಸಿದಾಗ ಬರುವ ಸಂಭವ ಹೆಚ್ಚು.
- ಕೆಲವರಿಗೆ ಹೆಚ್ಚಾಗಿ ಓದುವುದರಿಂದ, ಸಿನಿಮಾ ಟಿವಿ ನೋಡುವುದರಿಂದಲು ಬರಬಹುದು.
- ಕೆಲವರಲ್ಲಿ ಋತು ಚಕ್ರದ ದಿನಗಳಲ್ಲಿ ಮಾತ್ರ ಬರಬಹುದು. ಈ ಕಾರಣಗಳು ಒಬ್ಬರಿಗಿಂತ ಮತ್ತೊಬ್ಬರಿಗೆ ವ್ಯತ್ಯಾಸವಾಗುತ್ತದೆ.
headache treatment at home
- ಮಾನಸಿಕ ಒತ್ತಡಗಳಾದ ಕೋಪ, ಚಿಂತಿ, ಖಿನ್ನತೆ, ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.
- ಆಹಾರ ಸೇವನೆಯಲ್ಲಿ ವ್ಯತ್ಯಾಸಗಳಿಂದ ಅಂದರೆ, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದರಿಂದ, ಹಸಿವು, ಮದ್ಯಸೇವನೆ, ಕಡಿಮೆ ನೀರು ಕುಡಿಯುವುದರಿಂದಲೂ ತಲೆನೋವು ಉದ್ರೇಕವಾಗುತ್ತದೆ.
- ನಿದ್ರೆ ಮಾತ್ರೆ ಸೇವನೆ, ಬಿಪಿ, ಹಲ್ಲುನೋವು, ಕಣ್ಣಿನ ತೊಂದರೆ ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿತ ಆಹಾರ ಸೇವನೆ, ನಿದ್ರಾಹೀನತೆ ಮುಂತಾದವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.
headache relief pressure points
ಮೈಗ್ರೇನ್ ಶಮನವಾಗುವ ರೀತಿ
ಕೆಲವರಿಗೆ ಮೈಗ್ರೇನ್ ತಲೆನೋವು ಬಂದಾಗ, ಯಾವುದಾದರೂ ನೋವು ನಿವಾರಕ ಗುಳಿಗೆಗಳನನ್ನು ತೆಗೆದುಕೊಂಡ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ. ಕೆಲವರಿಗೆ ಮಾತ್ರೆ ಏನನ್ನೂ ಉಪಯೋಗಿಸದೇ, ನಿಶ್ಯಬ್ದವಾದ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ಕಡಿಮೆಯಾಗಬಹುದು.
hypertension headache treatment at home
ಜೀವನ ಶೈಲಿ ಬದಲಾವಣೆಯಿಂದ ತಲೆನೋವು ನಿಯಂತ್ರಿಸಬಹುದು
- ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು
- ನಿತ್ಯ ವ್ಯಾಯಾಮ - ಸರಿಯಾದ ಊಟದ ಕ್ರಮ, ಪೌಷ್ಠಿಕ ಆಹಾರ ಸೇವನೆ
- ತಂಬಾಕು, ಮದ್ಯಸೇವನೆಯಿಂದ ದೂರವಿರುವುದು ಮತ್ತು ಕಾಫಿ ಕಡಿಮೆಗೊಳಿಸುವುದು.
- ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ.
instant home remedies for headache
ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ
- ಮೈಗ್ರೇನ್ ತಲೆನೋವಿಗೆ ಶಾಶ್ವತವಾದ ಪರಿಹಾರ ಇಲ್ಲ. ಆದರೆ ಈ ತರಹದ ತಲೆನೋವನ್ನು ಅದಕ್ಕೆ ಸಂಬಂಧಿಸಿದ ಔಷಧಗಳನ್ನು ಉಪಯೋಗಿಸುವುದರಿಂದ ಸಾಕಷ್ಟು ನಿಯಂತ್ರಿಸಬಹುದು.
- ಮೈಗ್ರೇನ್ ನಿವಾರಣಾ ಔಷಧಗಳಲ್ಲಿ ಎರಡು ಬಗೆ ಇರುತ್ತದೆ. ಒಂದು ನೋವು ಬಂದಾಗ ಮಾತ್ರ ಉಪಯೋಗಿಸುವ ಔಷಧಗಳು. ಇದನ್ನು ಮೈಗ್ರೇನ್ ತಿಂಗಳಿಗೆ 4-6ಕ್ಕಿಂತ ಕಡಿಮೆ ಬರುತ್ತಿದ್ದರೆ ಆ ದಿನಗಳಲ್ಲಿ ಮಾತ್ರ ಉಪಯೋಗಿಸಿದರೆ ಸಾಕು.
how to get rid of a headache in 2 minutes
- ಆದರೆ ಮೈಗ್ರೇನ್ ತಲೆನೋವು 4-6 ಬಾರಿಗಿಂತಲೂ ಹೆಚ್ಚು ಬರುತ್ತಿದ್ದರೆ ಅದನ್ನು ತಡೆಗಟ್ಟುವ ಔಷಧಗಳನ್ನು ನಿತ್ಯವು ಕೆಲವು ವಾರಗಳವರೆಗೆ ಉಪಯೋಗಿಸಬೇಕಾಗುತ್ತದೆ. ಇದರಿಂದ ಈ ರೀತಿಯ ತಲೆನೋವು ಬರುವ ಶೀಘ್ರತೆ ಹಾಗೂ ತೀವ್ರತೆ : ನಿಯಂತ್ರಣವಾಗುತ್ತದೆ.
how to get rid of a headache with pressure points
ಹೆಚ್ಚುವರಿ ಪರೀಕ್ಷೆಗಳು
ಮೈಗ್ರೇನ್ ತಲೆನೋವನ್ನು ಖಚಿತ ಪಡಿಸುವ ಪರೀಕ್ಷೆಗಳಿಲ್ಲ. ಆದರೆ ಮೈಗ್ರೇನ್ ಅಲ್ಲದೆ ಬೇರೆ ಕಾಯಿಲೆಗಳಿಂದ ತಲೆನೋವು ಬರುವ ಸಂಶಯಗಳಿದ್ದರೆ, ಆ ದೋಷಗಳಿಗೆ ಅಗತ್ಯವಾದ C.T.Scan,X-Ray, ರಕ್ತ ಪರೀಕ್ಷೆ ಮುಂತಾದವುಗಳನ್ನು ಮಾಡಿಸಬೇಕಾಗುತ್ತದೆ. ಈ ಬಗ್ಗೆ ವೈದ್ಯರು ತಲೆನೋವಿನ ವಿವರ ಹಾಗೂ ಸಂಪೂರ್ಣ ಪರೀಕ್ಷೆಗಳನ್ನು ಮಾಡಿದ ನಂತರ ಸಲಹೆ ನೀಡುತ್ತಾರೆ.
pressure points on head
ಕನ್ನಡಕಗಳಿಂದ ಮೈಗ್ರೇನ್ ತಲೆನೋವು ತಡೆಯಬಹುದೇ ?
ಖಂಡಿತಾ ಇಲ್ಲ, ಮೈಗ್ರೇನ್ ತಲೆನೋವಿಗೆ ಕನ್ನಡಕ ಉಪಯೋಗಿಸುವುದರಿಂದ ಅಥವಾ ಬದಲಾಯಿ ಸುವುದರಿಂದ ಅನುಕೂಲವಾಗುವುದಿಲ್ಲ.
pressure points on head to relieve stress
ಮುಂಚೆ ತಲೆನೋವಿಗೆ ಕನ್ನಡಕಗಳನ್ನು ಕೊಡಲಾಗುತ್ತಿತ್ತು ?
ಕನ್ನಡಕಗಳಿಂದ ಮೈಗ್ರೇನ್ ತಲೆನೋವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಮೈಗ್ರೇನ್ ಜೊತೆಯಲ್ಲಿ ದೃಷ್ಟಿದೋಷ ಸಹ ಇದ್ದರೆ, ಅದಕ್ಕೆಮಾತ್ರ (ದೃಷ್ಟಿಯನ್ನು ಉತ್ತಮಗೊಳಿಸಲು ಅಥವಾ ದೃಷ್ಟಿ ದೋಷದ ಆಯಾಸವನ್ನು ನೀಗಿಸಲು) ಕನ್ನಡಕ ಉಪಯೋಗಿಸಬೇಕಾಗುತ್ತದೆ.

