ನೀವು “ಓಟ್ಸ್” ತಿಂತೀರ | ಓಟ್ಸ್ | ಹೇಗೆ ಬಳಸಬೇಕು | ಬೊಜ್ಜು | ಸಲಹೆ | Health Tips Kannada | ಮನೆಮದ್ದು

 Health Tips Kannada


Health Tips Kannada 

ಓಟ್‌ಮೀಲ್ ಒಂದು ಸಮೃದ್ಧ ಆಹಾರ

ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಜನರಿಗೆ ಒಂದು ಬಟ್ಟಲು ಓಟ್ ಮೀಲ್ ಗಂಜಿಯೇ ಅವರ ಬೆಳಗಿನ ಆರೋಗ್ಯಕರ ಉಪಾಹಾರ, ಓಟ್ ಎಂದರೆ ಅದು ಕಿರು ಧಾನ್ಯ ಮಾತ್ರವಾದರೂ ಅದು ಪೌಷ್ಟಿಕಾಂಶಯುಕ್ತವಾಗಿರುತ್ತದೆ. ಇತರೆ ಧಾನ್ಯಗಳು ಹೊರಸಿಪ್ಪೆ ತೆಗೆದ ಕೂಡಲೇ ತಮ್ಮ ಪೌಷ್ಟಿಕತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಓಟ್‌ಮೀಲ್ ಹಾಗಲ್ಲ. ಆದ್ದರಿಂದಲೇ ಓಟ್ಸ್ ಗೆ - ಮತ್ತು ಓಟ್ ಮೀಲ್ ಅನ್ನು ಬಹಳಷ್ಟು ವೈದ್ಯರು ಮತ್ತು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ.

 how to use oats for weight loss

ಅನುಕೂಲಗಳು ಅಪಾರ:

1. ಓಟ್ ಗಳಲ್ಲಿ ಕರಗಬಲ್ಲ ನಾರಿನ೦ಶ ಹೆಚ್ಚಿನ  ಪ್ರಮಾಣದಲ್ಲಿದ್ದು ಇದು ನಿಧಾನವಾಗಿ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

2. ಓಟ್‌ಮೀಲ್ ಉತ್ತಮ ಕೊಬ್ಬಿನಂಶದ ಪ್ರಮಾಣ ಹೆಚ್ಚಿಸುವುದರಿಂದ ಹೃದಯಸಂಬಂಧಿ ರೋಗಗಳು ಕಡಿಮೆಯಾಗುತ್ತವೆ. ಅಲ್ಲದೆ ಕೆಟ್ಟ ಕೊಬ್ಬಿನಂಶದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

3. ಓಟ್‌ಮೀಲ್ ನಿಧಾನವಾಗಿ ಜೀರ್ಣವಾಗುವುದರಿಂದ ಶಕ್ತಿಯ ಬಿಡುಗಡೆಯನ್ನೂ ನಿಧಾನ ಮಾಡುತ್ತದೆ. ನಿಧಾನದ ಜೀರ್ಣದಿಂದ ಪದೇ ಪದೇ ಹೊಟ್ಟೆ ಹಸಿವು ಕಾಡುವುದಿಲ್ಲ.

how to eat oats for breakfast

4. ಓಟ್‌ಗಳು ಕ್ಯಾನ್ಸರ್‌ನಿರೋಧಕ ಅಂಶಕ್ಕೆ ಹೆಸರಾಗಿದ್ದು, ಕರುಳಿನ ಕ್ಯಾನ್ಸರ್ ದೂರವಿರಿಸುತ್ತವೆ.

5. ತೂಕ ಇಳಿಸುವಲ್ಲಿ ಓಟ್‌ಗಳ ಲಾಭ ಅಧಿಕ. ಈ ಎಲ್ಲ ಆರೋಗ್ಯದ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ 7-10 ಗ್ರಾಂ ನಾರಿನಂಶವುಳ್ಳ ಓಟ ಆಹಾರವನ್ನು ನಿತ್ಯವೂ ಸೇವಿಸಬೇಕು. ಒಂದೂವರೆ ಬಟ್ಟಲು ಓಟ್‌ಮೀಲ್ ಸೇವಿಸಿದರೆ 3-4 ಗ್ರಾಂನಷ್ಟು ನಾರಿನಂಶ ದೇಹ ಸೇರುತ್ತದೆ.

6, ಡಯಾಬಿಟೀಸ್ ನವರಿಗೆ ಇದು ಉತ್ತಮ ಸಕ್ಕರೆ ನಿಯಂತ್ರಣಕ್ಕೆ ಓಟ್ಮೀಲ್ ಬಹಳ ಒಳ್ಳೆಯದು. {ಗ್ಲೇಸೀಮಿಕ ಇಂಡೆಕ್ಸ್ - ಗ್ಲೈಕೇಟಡ್ ಹಿಮೋಗ್ಲೋಬಿನ್} ಗಳು ಉತ್ತಮ ನಿಯಂತ್ರಣ ಮಟ್ಟವನ್ನು ಕಾಯ್ದುಕೊಳ್ಳಲು ಈ ಆಹಾರ ತುಂಬಾ ಒಳ್ಳೆಯದು.

how to eat oats to reduce weight

ಇದೇ ಕಾರಣಕ್ಕೆ ನಿಮ್ಮ ಆಹಾರದ ಅಗತ್ಯಕ್ಕೆ ತಕ್ಕಂತೆ ಓಟ್ಸ್‌ನ ಸೇವನೆಯ ಪ್ರಮಾಣ ಕಂಡುಕೊಳ್ಳುವುದು ಅಗತ್ಯ. ಪೌಷ್ಠಿಕ ತಜ್ಞರ ಓಟ್ಸ್‌ನಲ್ಲಿ ಕಡಿಮೆ ಪ್ರಮಾಣದ ಕೈಸೆಮಿಕ್ ಇಂಡೆಕ್ಸ್ ಇದ್ದು ರಕ್ತದಲ್ಲಿನ ಗ್ಲೋಕೋಸ್ ಅಂಶವನ್ನು ನಿಯಂತ್ರಿಸಿ ಹೈಪೋಥೈಸಿಮಿಯಾ ತಪ್ಪಿಸುತ್ತದೆ. ರಕ್ತದಲ್ಲಿನ ಕೊಲೆಸ್ಟರಾಲ್ ಅಂಶವನ್ನೂ ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದು ಬಹಳ ಅಗತ್ಯವಾಗಿದ್ದು ಇದರಿಂದ ಉತ್ತಮ ಕೊಲೆಸ್ಟರಾಲ್ ಅಂಶ ಹೆಚ್ಚಾಗುತ್ತದೆ. ಅಲ್ಲದೆ ತೂಕ ಇಳಿಸುವಲ್ಲಿ ಓಟ್‌ನಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಇದರಿಂದ ಹಸಿವಿನ ಭಾವನೆಯೂ ಉಂಟಾಗುವುದಿಲ್ಲ ಎನ್ನುತ್ತಾರೆ.

healthiest way to eat oats

ಓಟ್‌ಮೀಲ್ ಬರಿಯ ಉಪಾಹಾರವಲ್ಲ, ಪೂರ್ಣ ಆಹಾರ

ಸಾಂಪ್ರದಾಯಿಕ ಓಟ್ ಗಂಜಿಯಲ್ಲದೆ ಓಟ್‌ಗಳನ್ನು ಇತರೆ ಆಹಾರದಲ್ಲಿಯೂ ಬಳಸಲು ಸ್ಕಾಟಿಷ್ ಜನರು ಖ್ಯಾತಿ ಪಡೆದಿದ್ದಾರೆ. ಎಲ್ಲ ಬಗೆಯ ಆಹಾರ ಪದಾರ್ಥಗಳಿಗೂ ಓಟ್‌ಮೀಲ್ ಸೇರಿಸುತ್ತಾರೆ. ಓಟ್‌ಗಳಲ್ಲಿ ಮೂರು ವಿಧ. ಓಟ್ ದೊರೆಯುವುದು ಮೂರು ವಿಧದಲ್ಲಿ ಕೋರ್ಸ್, ಪಿನ್ ಹೆಡ್ ಮತ್ತು ಫೈನ್. ಅವುಗಳನ್ನು ಹೀಗೆ ಬಳಸಬಹುದು:

ಬೇಕಿಂಗ್, ಕುಕೀಸ್, ಓಟ್‌ಕೇಕ್, ಸೂಪ್ ಗಟ್ಟಿಗೊಳಿಸಲು ಜೋಳದ ಹಿಟ್ಟಿನ ಬದಲಿಗೆ ಮೀನು ತವೆಯ ಮೇಲೆ ಹುರಿಯಲು ಕಡುಬಿಗೆ ಮಾಮೂಲ ಹಿಟ್ಟಿನ ಜೊತೆ ಬಳಸಬಹುದು.

how to eat oats to reduce weight

ಓಟ್ ಬಳಸಿದರೆ ಇತರೆ ಆಹಾರದಲ್ಲಿ ಮೂರನೇ ಒಂದು ಭಾಗ ಹಿಟ್ಟಿನ ಬಳಕೆ ಕಡಿಮೆ ಮಾಡಬಹುದು.

ಓಟ್‌ಮೀಲ್ ವಿವಿಧ ರೂಪ ಮತ್ತು ಪ್ರಮಾಣಗಳಲ್ಲಿ ದೊರೆಯುತ್ತದೆ.

ನಿಮ್ಮ ನಿತ್ಯದ ಅಗತ್ಯಕ್ಕೆ ತಕ್ಕಂತೆ ಒಂದು ಬಟ್ಟಲು ಓಟ್ಮೀಲ್ ಅನ್ನು ವಿವಿಧ ಆಹಾರದ ಮೇಲ್ಪದರವಾಗಿ ಬಳಸುವ ಮೂಲಕ ರುಚಿಕರಗೊಳಿಸಬಹುದು. ಇತರೆ ಆಹಾರದಲ್ಲೂ ವೈವಿಧ್ಯಮಯ ಓಟ್ಸ್ ಬಳಸಬಹುದು.

how to eat oats with water

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ರುಚಿಕರಗೊಳಿಸಲು ಅದರ ಮೇಲೆ ಓಟ್‌ಮೀಲ್ ಸಿಂಪಡಿಸಿ.

ಹಚ್ಚಿಟ್ಟ ಹಣ್ಣುಗಳಿಗೆ ಓಟ್‌ಮೀಲ್ ಮೇಲೆ ಹಾಕಿ.

ಓಟ್‌ಮೀಲ್ ಬಟ್ಟಲಿಗೆ ಕಲ್ಲುಸಕ್ಕರೆ /ಬೆಲ್ಲ ಮತ್ತು ಒಣದ್ರಾಕ್ಷಿ ಸೇರಿಸಿ.

ಕ್ರೀಂ ಮತ್ತು ಹಣ್ಣಿನ ರಸಕ್ಕೆ ಓಟ್‌ಮೀಲ್ ಸೇರಿಸಿ.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.