ಬಂಜೆತನ ಸ್ತ್ರೀಯರ ಸಮಸ್ಯೆ ಮಾತ್ರವಲ್ಲ | ಬಂಜೆತನ | infertility causes | Health Tips Kannada | ಮನೆಮದ್ದು

Health Tips Kannada



ಬಂಜೆತನ ಸ್ತ್ರೀಯರ ಸಮಸ್ಯೆ ಮಾತ್ರವಲ್ಲ ?

ಮಧ್ಯಮ / ಮೇಲ್ಮಧ್ಯಮ ವರ್ಗದಲ್ಲಿ ಪತಿಪತ್ನಿಯರಿಬ್ಬರೂ 10-11 ಗಂಟೆಗಳ ಕಾಲ ದುಡಿತಕ್ಕಾಗಿ ಮನೆಯಿಂದ ಹೋಗಿರುತ್ತಾರೆ. ಸುಸ್ತಾದ ದಂಪತಿಗಳು ಮಿಲನಕ್ಕೆ ಬೇಸರಿಸುತ್ತಾರೆ | ಮುಂದೂಡುತ್ತಾರೆ. ಹಾಗೇ ಗರ್ಭಕಟ್ಟಬಹುದಾದ ದಿನಗಳಲ್ಲಿ ಸೇರುವ ಒಂದು ವಿಷಯಕ್ಕೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

infertility causes in male

ಈ ಆರೋಪಿತ ಸನ್ಯಾಸತ್ವ ಕೂಡ ಒಂದು ಕಾರಣವೆಂದರೆ ಆಶ್ಚರ್ಯ ಪಡುವುದು ಬೇಡ !! ಈ ದಿನಗಳಲ್ಲಿಯೂ ಲೈಂಗಿಕತೆ ಕುರಿತು ಬಹಳ ಅಜ್ಞಾನ / ಅರೆಬರೆ ಜ್ಞಾನ ಇದೆ ಎಂದರೆ ಅಚ್ಚರಿಯಾದರೂ ಇದು ವಾಸ್ತವ ಸತ್ಯ.

ಬಹಳ ಜೋಡಿಗಳಿಗೆ ಗಂಡ - ಹೆಂಡತಿಯಾದ ಸೂಕ್ಷ್ಮ ಸಂಬಂಧದ ಅರಿವಿಲ್ಲ. ಬಸುರಿಯಾಗುವ ಸಾಧ್ಯತೆಯಿರುವ ದಿನಗಳ ಅರಿವಿಲ್ಲ. ಈ ಸಮಸ್ಯೆ ಸಮರ್ಥ ಆಪ್ತ ಸಲಹೆಯಿಂದ ಸರಿಯಾಗುವುದು.ಪ್ರತಿ ಎಂಟು ದಂಪತಿಗಳಲ್ಲಿ ಒಂದು ದಂಪತಿಗೆ ಬಂಜೆತನ ಕಾಡುತ್ತದೆ. ಆದರೆ ಬಹಳಷ್ಟು ಜನರು ಈ ಸಾಮಾನ್ಯ ಪರಿಸ್ಥಿತಿಯ ಕುರಿತು ಏನೂ ತಿಳಿದಿಲ್ಲ.

infertility causes in female

ಬಂಜೆತನ ಸಾಮಾನ್ಯವಾಗಿ ಸ್ತ್ರೀಯರ ಸಮಸ್ಯೆ ಎನ್ನುವುದು ಸುಳ್ಳು, ಬಂಜೆತನ 'ಅವಳ' ಸಮಸ್ಯೆ ಮಾತ್ರವಲ್ಲ. ಬಹಳಷ್ಟು ಮಂದಿಗೆ ಗೊತ್ತಿಲ್ಲದ ವಿಚಾರವೆಂದರೆ ಬಂಜೆತನ ಶೇ.35ರಷ್ಟು ಪ್ರಕರಣಗಳಲ್ಲಿ ಮಾತ್ರ ಸ್ತ್ರೀಯರ ಸಮಸ್ಯೆಯಾಗಿದೆ. ಶೇ.35ರಷ್ಟು

- ಪ್ರಕರಣಗಳಲ್ಲಿ ಪುರುಷರ ಸಮಸ್ಯೆಯಾಗಿದೆ. ಶೇ.20ರಷ್ಟು ಪ್ರಕರಣಗಳಲ್ಲಿ ಇಬ್ಬರಿಗೂ ಸಂಬಂಧಪಟ್ಟಿದೆ. ಕಾರಣ ವಿವರಿಸಲಾಗದ ಪ್ರಕರಣಗಳು ಶೇ.10ರಷ್ಟಿವೆ. ಆದ್ದರಿಂದ ಬಂಜೆತನದ ಚಿಕಿತ್ಸೆ ದ೦ಪತಿಗಳಿಬ್ಬರನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ಮತ್ತು ಅವರು ಒಂದು ತಂಡದಂತೆ ಕೆಲಸ ಮಾಡುವುದಕ್ಕೆ ಗಮನ ನೀಡುತ್ತವೆ. ಬಂಜೆತನದ ಚಿಕಿತ್ಸೆಯಲ್ಲಿ ಪುರುಷ ಹಾಗೂ ಸ್ತ್ರೀ ಇಬ್ಬರನ್ನೂ ಗಮನಿಸುವುದು ಅಗತ್ಯ. 35 ವರ್ಷ ವಯೋಮಾನದ ಸ್ತ್ರೀ ಕೂಡಾ 25ರ ಸ್ತ್ರೀಯಂತೆಯೇ ಸುಲಭವಾಗಿ ಗರ್ಭ ಧರಿಸಬಹುದು ಎನ್ನುವುದು ಸುಳ್ಳು. ಬಹಳಷ್ಟು ಸ್ತ್ರೀಯರು ತಮ್ಮ ಉದ್ಯೋಗದ ಕಾರಣಗಳಿಗಾಗಿ ಮಕ್ಕಳು ಹೇರುವುದನು ಮುಂದೂಡುತ್ತಾರೆ. ಅದಕ್ಕಾಗಿಯೇ ತಡವಾಗಿ ವಿವಾಹವಾಗುತ್ತಾರೆ. ಅಲ್ಲದೆ ಖ್ಯಾತನಾಮ ಸ್ತ್ರೀಯರು ತಮ್ಮ 40ನೇ ವಯಸ್ಸಿನಲ್ಲಿ ಮಕ್ಕಳನ್ನು ಹೆರುವುದನ್ನು ಕೇಳಿ ತಮ್ಮ ಜೈವಿಕ ಗಡಿಯಾರವನು ಮರೆಯುತ್ತಾರೆ. ಕೆಲವು ಸ್ತ್ರೀಯರು ಕಾಯಬಹುದು. ಆದರೆ ಎಲ್ಲರೂ ಅಲ್ಲ. ಅಮೆರಿಕನ್ ಸೊಸೈಟಿ ಆಫ್ ರಿಪ್ರೊಡಕ್ಟಿವ್ ಮೆಡಿಸಿನ್ ಪ್ರಕಾರ, ಮೂರನೇ ಎರಡರಷ್ಟು ಸ್ತ್ರೀಯರು 40ನೇ ವಯಸ್ಸು ಮೀರಿದ ಮೇಲೆ ಗರ್ಭ ಧರಿಸುವುದು ಸೂಕ್ತವಲ್ಲ.

infertility treatment

ಸ್ತ್ರೀಯರ ಗರ್ಭಧಾರಣೆ ಸಾಮರ್ಥ್ಯ 23ರ ವಯಸ್ಸಿನಲ್ಲಿ ಅತ್ಯಂತ ಉಚ್ಛಾಯದಲ್ಲಿದ್ದು 38ರ ನಂತರ ಅದು ಕುಸಿಯುತ್ತದೆ. 25ನೇ ವಯಸ್ಸಿನ ಸ್ತ್ರೀ ನಿಯಮಿತವಾಗಿ ಪುರುಷನನ್ನು ಸೇರಿದರೆ ಶೇ.86ರಷ್ಟು ಗರ್ಭಧಾರಣೆಯ ಅವಕಾಶವಿರುತ್ತದೆ. 35 ಮುಟ್ಟಿದ ನಂತರ ಆಕೆಯ ಅವಕಾಶಗಳು ಶೇ.52ಕ್ಕೆ ಕುಸಿಯುತ್ತದೆ. ಒತ್ತಡ ಬಂಜೆತನ ಉಂಟು ಮಾಡುತ್ತದೆ ಎನ್ನುವುದೂ ನಿಜ. ವಾಸ್ತವವಾಗಿ ಬಂಜೆತನದ ಸಮಸ್ಯೆಗಳನ್ನು ವೈದ್ಯರಿಗೆ ವಿವರಿಸುವುದು ಮತ್ತು ಚಿಕಿತ್ಸೆಯಲ್ಲಿ ಬಹಳ ಕಾಲ ಕಳೆಯುವುದು ಕೂಡಾ ಬಹಳ ಒತ್ತಡ ಉಂಟು ಮಾಡುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಒತ್ತಡ ಕಡಿಮೆ ಮಾಡುವುದು ಉತ್ತಮ. ಕೆಲವು ಸ್ತ್ರೀಯರಿಗೆ ಗರ್ಭಕೋಶದ ಸಮಸ್ಯೆಗಳು ಅಂತರ್ಗತವಾಗಿರುತ್ತವೆ ಅದಕ್ಕೆ ಕಾರಣ 21-ಹೈಡೋಕ್ಸಿಲೈಸ್ ಎನ್ನುವ ಕಿಣ್ವದ ಕೊರತೆ. ಈ ಕಿಣ್ವ ಕೊಲೆಸ್ಟರಾಲ್ ಅನ್ನು ಕಾರ್ಟಿಸಾಲ್ ಆಗಿ ಪರಿವರ್ತಿಸುತ್ತದೆ. ಈ ಕಿಣ್ವದ ಕೊರತೆ ಪುರುಷ ಹಾರ್ಮೋನುಗಳನ್ನು ವೃದ್ಧಿಸುತ್ತದೆ.

infertility causes

ಒತ್ತಡದ ಅವಧಿಯಲ್ಲಿ ದೇಹಕ್ಕೆ ಕಾರ್ಟಿಕೊಸ್ಟಿರಾನ್‌ನ ಬೇಡಿಕೆ ಹೆಚ್ಚಾಗುತ್ತದೆ. ದೇಹ ಅದನ್ನು ಪೂರೈಸಲು ಸಜ್ಜಾಗುತ್ತದೆ. ಇದರಿಂದ 21-ಹೈಡೋಕ್ಸಿಲೈಸ್ ಕಿಣ್ವದ ಉತ್ಪಾದನೆ ಹೆಚ್ಚಾಗಿ ಪುರುಷ ಹಾರ್ಮೋನುಗಳ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಅನಿಯಮಿತ ಮತ್ತು ಅವಧಿ ಮೀರಿದ ಋತುಸ್ರಾವ ಉಂಟಾಗುತ್ತದೆ. ಹೀಗೆ ಒತ್ತಡದಿಂದ ಸ್ವಲ್ಪಮಟ್ಟಿಗೆ ಬಂಜೆತನ ಉಂಟಾಗುತ್ತದೆ.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.