Health Tips Kannada
Health Tips Kannada
ಉಪ್ಪು ನಿಮಗೆ ಅಗತ್ಯವಿರುವಷ್ಟು
ಉಪ್ಪು ಎನ್ನುವುದು ದೇಹಕ್ಕೆ ಅಗತ್ಯವಿರುವ ಸೋಡಿಯಂ ಮೂಲ. ಸಾಮಾನ್ಯ ಉಪ್ಪಿನಲ್ಲಿ ( ಸೋಡಿಯಂ
ಕ್ಲೋರೈಡ್) ಶೇ.39ರಷ್ಟು ಸೋಡಿಯಂ ಇರುತ್ತದೆ. ಇದು ಹಲವಾರು
ಖನಿಜಗಳೊಂದಿಗೆ ಹೊಂದಿಕೊಂಡಿರುತ್ತದೆ. ಆರೋಗ್ಯಕರವಾಗಿರುವ ವ್ಯಕ್ತಿ 65
ಕೆಜಿ ತೂಕವಿದ್ದರೆ ಅವನ ದೇಹದಲ್ಲಿ 256 ಗ್ರಾಂ ಸೋಡಿಯಂ ಕ್ಲೋರೈಡ್ ಇರುತ್ತದೆ.
ಇದರಲ್ಲಿ 96ಗ್ರಾಂ ಮೂಳೆಗಳಲ್ಲಿ 32 ಗ್ರಾಂ ಜೀವಕೋಶಗಳಲ್ಲಿರುತ್ತದೆ.
ಇದು ದೇಹದಲ್ಲಿ
ನೀರಿನ ಅಂಶದ ಸಮತೋಲನ ಕಾಪಾಡಲು ನೆರವಾಗುತ್ತದೆ. ಇದು ಆಮ್ಲದ ಸಮತೋಲನ ಕಾಪಾಡುವಲ್ಲಿ ಕೆಲಸ
ಮಾಡುತ್ತದೆ. ಅಲ್ಲದೆ ಗ್ಲೋಕೋಸ್ ಅಂಶವನ್ನು ಗ್ರಹಿಸುತ್ತದೆ. ಮೆದುಳನ್ನು ಶಾಂತವಾಗಿರಿಸಿ ಮಾನಸಿಕ
ಶ್ರಮ ಕಡಿಮೆ ಮಾಡುತ್ತದೆ. ಇದು ಕ್ಯಾಲ್ಸಿಯಂ ಅಂಶವನ್ನು ಹಿಡಿತದಲ್ಲಿ ಇರಿಸಿಕೊಳ್ಳುವುದರಿಂದ
ದೇಹದಲ್ಲಿ ಮೂತ್ರಜನಕಾಂಗ ವ್ಯವಸ್ಥೆಯು ಕಲ್ಲುಗಳು ಉತ್ಪಾದನೆಯಾಗುವುದನ್ನು ತಡೆಯುತ್ತದೆ.
which salt is good for health
ನಾವು ಸೇವಿಸುವ
ಪ್ರತಿ ಆಹಾರದಲ್ಲೂ ನೈಸರ್ಗಿಕ ಉಪ್ಪಿನ ಅಂಶ ಕೊಂಚ ಇದ್ದೇ ಇರುತ್ತದೆ. ನುಗ್ಗೆಕಾಯಿ, ಕಲ್ಲಂಗಡಿ, ನಿಂಬೆ, ಕಿತ್ತಳೆ,
ಕ್ಯಾಬೇಜ್, ಜೋಳ, ಬೆಂಡೇಕಾಯಿ,
ಕುಂಬಳಕಾಯಿ, ಆಲ್ಮಂಡ್ ಅಲ್ಲದೆ ಮೀನು, ಬೆಣ್ಣೆಯಲ್ಲೂ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ.
ಪ್ರತಿವ್ಯಕ್ತಿಗೂ
ಸೋಡಿಯಂ ಕ್ಲೋರೈಡ್‌ನ ಅವಶ್ಯಕತೆ ಇದೆ, ಪ್ರತಿದಿನ ಲಘುವಾದ ಕೆಲಸ ಮಾಡುವವರಿಗೆ
10ರಿಂದ 15ಗ್ರಾಂನಷ್ಟು ಕಠಿಣ
ಕೆಲಸ ಮಾಡುವವರಿಗೆ 15ರಿಂದ 20 ಗ್ರಾಂನಷ್ಟು
ಬೇಕಾಗುತ್ತದೆ. ಮಕ್ಕಳಿಗೆ ಇದರ ಅವಶ್ಯಕತೆ 5ರಿಂದ 10ಗ್ರಾಂನಷ್ಟಿರುತ್ತದೆ.
which salt is best for health
ಉಪ್ಪಿನ ಕೊರತೆ
ಮತ್ತು ಉಪ್ಪಿನಾಂಶದ ಹೆಚ್ಚಳ ಎರಡೂ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಉಪ್ಪಿನ
ಕೊರತೆಯ ಸಮಸ್ಯೆಗಳು ಅಪರೂಪ. ಆದರೆ ಹೆಚ್ಚು ಬೆವರುವುದು, ತೀವ್ರ ಅತಿಸಾರ
ಇತ್ಯಾದಿಗಳಿಂದ ಉಪ್ಪಿನ ಕೊರತೆ ಉಂಟಾಗಬಹುದು. ಉಪ್ಪಿನ ಕೊರತೆಯಿಂದ ಹೊಟ್ಟೆ ತೊಳಸುವುದು, ಸ್ನಾಯುಗಳ
ದೌರ್ಬಲ್ಯ, ಮಾನಸಿಕ
ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.
ಸೋಡಿಯಂ ಕ್ಲೋರೈಡ್
ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಅದಕ್ಕೆ ಕಾರಣ ಆಹಾರದಲ್ಲಿ
ಸಾಮಾನ್ಯ ಉಪ್ಪನ್ನು ಹೆಚ್ಚಾಗಿ ಸೇವಿಸುವುದು. ಹೆಚ್ಚಿನ ಸೋಡಿಯಂನಿಂದ ಹೆಚ್ಚು ರಕ್ತದೊತ್ತಡ, ಹೊಟ್ಟೆಯ ಅಲ್ಸರ್, ಕ್ಯಾನ್ಸರ್, ರಕ್ತನಾಳಗಳ
ಗಟ್ಟಿಯಾಗುವಿಕೆ ಮತ್ತು ಹೃದಯರೋಗಗಳನ್ನು ಉಂಟು ಮಾಡಬಹುದು.
which salt is good for weight loss
ಸೋಡಿಯಂ ಕ್ಲೋರೈಡ್
ಕೊರತೆಯಾದ ಸಂದರ್ಭದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಸುಸ್ತಾಗುತ್ತದೆ. ಒಂದು ಚಮಚೆಯಷ್ಟು ಸಾಮಾನ್ಯ
ಉಪ್ಪನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಅಥವಾ ಹಣ್ಣಿನ ರಸ ಒಂದು ಲೋಟ ಕುಡಿದರೆ
ಕೂಡಲೇ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತದೆ.

