ನಿಮಗೂ ಕ್ಯಾಲ್ಸಿಯಂ ತೊಂದರೆ ಇದಿಯಾ | Health Tips Kannada | ಮನೆಮದ್ದು | calcium deficiency

Health Tips Kannada


Health Tips Kannada

symptoms of calcium deficiency

ಗಟ್ಟಿ ದೇಹಕ್ಕೆ ಕ್ಯಾಲ್ಸಿಯಂ ಬೇಕೆ ಬೇಕು

ಟೀವಿ ನೋಡಿದರೆ ಕ್ಯಾಲ್ಸಿಯಂ ಅಂಶವನ್ನು ನೀಡುತ್ತವೆ ಎಂದು ಹೇಳುವ ಎಷ್ಟೋ ತಿಂಡಿಗಳ ಜಾಹೀರಾತುಗಳನ್ನು ನಾವು ಕಾಣುತ್ತೇವೆ. ಬೇರೆ ಯಾವುದೇ ಖನಿಜಕ್ಕಿಂತ ಇದು ನಮ್ಮ ದೇಹಕ್ಕೆ ಬಹಳ ಅಗತ್ಯ. 70 ಕೆಜಿ ತೂಕದ ಒಬ್ಬಯ ವ್ಯಕ್ತಿಯಲ್ಲಿ ಒಂದು ಕೆಜಿಯಷ್ಟು ಕ್ಯಾಲ್ಸಿಯಂ ಇರುತ್ತದೆ. ಇದರ ಶೇ.99ರಷ್ಟು ನಮ್ಮ ದೇಹದ ಸದೃಢ ಮೂಳೆಗಳು ಮತ್ತು ಹಲ್ಲುಗಳ ನಿರ್ಮಾಣಕ್ಕೆ ಬಳಕೆಯಾಗುತ್ತದೆ. ಉಳಿದ ಶೇ.1ರಷ್ಟು ಮಾತ್ರ ರಕ್ತ, ಸ್ನಾಯು ಮತ್ತು ನರಗಳಿಂದ ಬಳಕೆಯಾಗುತ್ತದೆ.

ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಮೂಳೆಗಳು ವೇಗವಾಗಿ ಬೆಳೆಯುವುದರಿಂದ ಅವರಲ್ಲಿ ಶೇ.60ರಷ್ಟು ಕ್ಯಾಲ್ಸಿಯಂ ಗ್ರಹಿಸಲ್ಪಡುತ್ತದೆ. ವಯಸ್ಕರಾದಂತೆ ಅದು ಶೇ.15ರಿಂದ 20ಕ್ಕೆ ಇಳಿಯುತ್ತದೆ. ವಯಸ್ಸಾದಂತೆಲ್ಲ ಅದರ ಪ್ರಮಾಣ ಕಡಿಮೆಯಾಗುತ್ತಾ ಇರುತ್ತದೆ. ವಿಟಮಿನ್ ಡಿ ಆಹಾರದಿಂದ ಕಡಿಮೆ ಲಭಿಸುತ್ತದೆ ಮತ್ತು ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡಿದಾಗ ಚರ್ಮದಿಂದಲೇ ಉತ್ಪಾದನೆಯಾಗುತ್ತದೆ. ಇದು ದೇಹದ ಕ್ಯಾಲ್ಸಿಯಂ ಗ್ರಹಿಕೆಯನ್ನು ಉತ್ತಮಗೊಳಿಸುತ್ತದೆ.

symptoms of calcium deficiency in females

ದೇಹ ಹೀರಿಕೊಂಡ ಕ್ಯಾಲ್ಸಿಯಂನ ಗಮನಾರ್ಹ ಪ್ರಮಾಣ ಮೂತ್ರ, ಮಲ ಮತ್ತು ಬೆವರಿನ ಮೂಲಕ ಹೊರಹೋಗುತ್ತದೆ. ಆದರೆ ಹೆಚ್ಚು ಕೆಫಿನ್ ಸೇವನೆಯಿಂದ ಕ್ಯಾಲ್ಸಿಯಂ ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಿ ದೇಹದಲ್ಲಿ ಇರುವ ಕ್ಯಾಲ್ಸಿಯಂ ಅಂಶ ಹೊರಹೋಗುವಂತೆ ಮಾಡುತ್ತದೆ ಎನ್ನುವುದನ್ನು ಗಮನಿಸಬಹುದು.

ಮದ್ಯಪಾನವೂ ಕೂಡ ದೇಹ ಕ್ಯಾಲ್ಸಿಯಂ ಗ್ರಹಿಸುವುದಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಕ್ಯಾಲ್ಸಿಯಂ ನಷ್ಟ ತಡೆಗಟ್ಟಬಹುದು. ಹಾಗೆಯೇ ಧಾನ್ಯಗಳಲ್ಲಿ ಅಪಾರ ಪ್ರಮಾಣದ ಕ್ಯಾಲ್ಸಿಯಂ ಅಂಶವಿರುತ್ತದೆ.

what are the symptoms of calcium deficiency in adults

ಮಕ್ಕಳಲ್ಲಿ ಹಾಗೂ ಹದಿವಯಸ್ಸಿನಲ್ಲಿ ಮೂಳೆಗಳು ಗಾತ್ರ ಹಾಗೂ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತವೆ. 30ರ ವಯಸ್ಸಿನಲ್ಲಿ ಇದು ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಇದು ಹೆಚ್ಚಿದ್ದಷ್ಟೂ ವಯಸ್ಸಾದಂತೆಲ್ಲ ಮೂಳೆಗೆ ಹಾನಿಯಾಗುವುದು ತಪ್ಪುತ್ತದೆ. ಆದ್ದರಿಂದ ಎಳೆ ವಯಸ್ಸಿನಲ್ಲಿ ಹೆಚ್ಚು ಕ್ಯಾಲ್ಸಿಯಂ ಅಂಶವನ್ನು ಸೇವಿಸಬೇಕು.

ಮೂಳೆಗಳಲ್ಲಿ ಖನಿಜಗಳ ಅಂಶ ಕಡಿಮೆಯಾದರೆ ಅದು ಆಸ್ಟಿಯೋಪೋರೋಸಿಸ್‌ಗೆ ತಿರುಗುತ್ತದೆ. ಇದರಿಂದ ರೊಂಡಿ, ಬೆನ್ನುಮೂಳೆ, ಮೊಣಕೈ ಇತ್ಯಾದಿಗೆ ಹಾನಿಯುಂಟಾಗುತ್ತದೆ. ಇದಕ್ಕೆ ಕಾರಣ ಅವರ ದೇಹ ಕ್ಯಾಲ್ಸಿಯಂ ಪ್ರಮಾಣವನ್ನು ಅತ್ಯಂತ ಕಡಿಮೆ ಹೀರಿಕೊಂಡಿರುವುದು. ತಕ್ಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವಿಸಿ ನಿಯಮಿತ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯಕರ ಮೂಳೆಗಳನ್ನು ಹೊಂದಬಹುದು.

symptoms of lack of calcium

ಈ ಖನಿಜಾಂಶದ ಕೊರತೆಯಿಂದ ಸ್ನಾಯುಗಳ ಆಕುಂಚನ / ಸಂಕಲಪನ ಸರಿಯಾಗಿ ಆಗುವುದಿಲ್ಲ; ರಕ್ತ ಹೆಪ್ಪುಗಟ್ಟುವುದಿಲ್ಲ. ಕ್ಯಾಲ್ಸಿಯಂ ಜೀರ್ಣಶಕ್ತಿಯನ್ನು ಉತ್ತೇಜಿಸುವುದಲ್ಲದೆ ದೇಹದ ಎಲ್ಲ ಖನಿಜಾಂಶಗಳ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ. ಕ್ಯಾಲ್ಸಿಯಂ ಹಾಲು ಮತ್ತು ಹಾಲಿನ ಉತ್ಪನ್ನಗಳು, ಗೋಧಿ, ಎಲೆಕೋಸು, ಹೂಕೋಸು, ಕ್ಯಾರೆಟ್, ಕಿತ್ತಳೆ, ಆಲ್ಮಂಡ್, ನಿಂಬೆ ಇತ್ಯಾದಿಗಳಲ್ಲಿ ಇರುತ್ತದೆ. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಇದರ ಪ್ರಮಾಣ ಹೆಚ್ಚು ಅಗತ್ಯ. ಸಾಧಾರಣ ವಯಸ್ಕರಿಗೆ 0.4ಗ್ರಾಂನಿಂದ 0.6ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸಿದರೆ ಸಾಕು. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಹಾನಿಗೊಳ್ಳಬಹುದು, ಹಲ್ಲುಗಳು ಕೊಳೆಯುತ್ತವೆ. ಇನ್‌ಸೋಮ್ಮಿಯಾ ಕೂಡಾ ಉಂಟಾಗುತ್ತದೆ. ರಿಕೆಟ್ಸ್ ರೋಗದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ. ಆಗ ದೇಹಕ್ಕೆ ಹೆಚ್ಚು ಕ್ಯಾಲ್ಸಿಯಂ ಖನಿಜವನ್ನು ಪೂರೈಸಬೇಕಾಗುತ್ತದೆ.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.