Health Tips Kannada
Health Tips Kannada
ರಕ್ತಹೀನತೆ ದೂರ ಮಾಡುವ ಕಬ್ಬಿಣ
ಆರೋಗ್ಯಕರ ರಕ್ತ ಪರಿಚಲನೆಗೆ ಕಬ್ಬಿಣ ಬಹಳ ಮುಖ್ಯ. ರಕ್ತ
ಮತ್ತು ಗ್ರಂಥಿಗಳ ಚಟುವಟಿಕೆಗೆ ಸೂಕ್ತ
ಕಿಣ್ವಗಳನ್ನು ಸಜ್ಜುಗೊಳಿಸುತ್ತದೆ. ಕಬ್ಬಿಣ ಮುಖ್ಯವಾಗಿ ರಕ್ತದಲ್ಲಿ ಹಿಮೋಗ್ಲೋಬಿನ್
ರೂಪದಲ್ಲಿರುತ್ತದೆ.
ರಕ್ತಹೀನತೆ ಎಂದರೆ ಆರೋಗ್ಯ ಪೂರ್ಣ ಕೆಂಪು
ರಕ್ತ ಕಣಗಳ ಕೊರತೆ, ಇದು ನಾವು ಶ್ವಾಸಕೋಶದ ಮೂಲಕ ಸ್ವೀಕರಿಸಿದ
ಆಮ್ಲಜಕನವನ್ನು ಜೀವಕೋಶಗಳಿಗೆ ಪಸರಿಸುತ್ತದೆ. ದೇಹದ ಉಷ್ಣತೆ ಮತ್ತು ಶಕ್ತಿ ಕಾಪಾಡುವ ಅತ್ಯುತ್ತಮ
ಖನಿಜ. ದೇಹದಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸಲು ಇದು ಬಹಳ ಅಗತ್ಯ.
iron deficiency symptoms
ಕಬ್ಬಿಣದ ಅಂಶ ದ್ರಾಕ್ಷಿ, ಒಣದ್ರಾಕ್ಷಿ, ಕೇಸರಿ ಅಂಜೂರ, ಬಸಳೆ
ಸೊಪ್ಪು ಮತ್ತು ಎಲ್ಲ ಬಗೆಯ ಹಸಿರು ತರಕಾರಿಗಳಲ್ಲಿ ಇರುತ್ತದೆ. ದ್ವಿದಳ ಧಾನ್ಯಗಳು, ಹಣ್ಣುಗಳು, ಖರ್ಜೂರ, ಮೊಟ್ಟೆ
ಇತ್ಯಾದಿಯಲ್ಲೂ ಕಬ್ಬಿಣದ ಅಂಶವಿರುತ್ತದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ
ಶಿಫಾರಸಿನ ಪ್ರಕಾರ ವಯಸ್ಕರಿಗೆ ಪ್ರತಿದಿನ 20ರಿಂದ 30 ಎಂಜಿಯಷ್ಟು ಕಬ್ಬಿಣಾಂಶದ ಸೇವನೆ ಅಗತ್ಯ.
iron deficiency treatment
ಕಬ್ಬಿಣದ ಕೊರತೆ ಸಾಮಾನ್ಯವಾಗಿ ರಕ್ತಸ್ರಾವ,
ಅಪೌಷ್ಟಿಕತೆ, ಕರುಳಿನಲ್ಲಿ ಕೊಕ್ಕೆಹುಳು, ಸೋಂಕುಗಳು ಮತ್ತು ಹೆಚ್ಚು ಔಷಧ ಮತ್ತು ರಾಸಾಯನಿಕಗಳ ಅತಿಯಾದ ಬಳಕೆಯಿಂದ
ಉಂಟಾಗುತ್ತದೆ. ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ, ರೋಗನಿರೋಧಕ
ಶಕ್ತಿ ಕುಂಠಿತವಾಗುವುದು, ಪೇಲವಗೊಳ್ಳುವುದು ಉಸಿರಾಟದಲ್ಲಿ ತೊಂದರೆ,
ಲೈಂಗಿಕ ಚಟುವಟಿಕೆಯಲ್ಲಿ ನಿರಾಸಕ್ತಿ ಉಂಟಾಗಬಹುದು.
ರಕ್ತಹೀನತೆಗೆ ಕಬ್ಬಿಣಾಂಶ ಸೇವನೆಯೇ ಮದ್ದು,
ರಕ್ತಹೀನತೆಯಲ್ಲಿ ಹಲವಾರು ವಿಧಗಳಿದ್ದು ಕಬ್ಬಿಣದ ಕೊರತೆಯಿಂದ ಉಂಟಾಗುವ
ರಕ್ತಹೀನತೆ ಅದರಲ್ಲಿ ಒಂದು ಅತೀ ಸಾಮಾನ್ಯ ವಿಧದ ಅನೀಮಿಯಾ ರಕ್ತ ಕಣಗಳನ್ನು ಗಾಜಿನ ಲೇಪನದಲ್ಲಿ,
ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಯಾವ ಅಂಶ ಪೂರೈಸಬೇಕು ಎಂದು ತಿಳಿಯುತ್ತದೆ.
iron deficiency anemia treatment
ಸ್ತ್ರೀಯರಿಗೆ ಅಗತ್ಯ ಕಬ್ಬಿಣಾಂಶ
ಮಹಿಳೆಯರಿಗೆ ಮುಟ್ಟು ಸಹಜಕ್ರಿಯೆ. ಅತಿಯಾದ
ಋತುಸ್ರಾವ ಸ್ತ್ರೀಯರ ಸಾಮಾಜಿಕ ಜೀವನದಲ್ಲಿ ಮತ್ತು ಹಲವಾರು ಹಂತಗಳಲ್ಲಿ ಅವರ ಆರೋಗ್ಯದ ಮೇಲೆ
ಗಮನಾರ್ಹ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಂದಕ್ಕಿಂತಲೂ ಹಲವಾರು ಪರಿಣಾಮ ಬೀರುವುದಿದೆ.
ಸ್ತ್ರೀಯರ ಸಂತಾನೋತ್ಪಾದನೆಯ ವಯಸ್ಸಿನಲ್ಲಿ
ಅತಿಯಾದ ರಕ್ತನಷ್ಟದಿಂದ ಉಂಟಾಗುವ ರಕ್ತಹೀನತೆಯಿಂದ ಅವರ ಕಾರ್ಯಸಾಮರ್ಥ್ಯ ಕುಗ್ಗುವುದಲ್ಲದೆ
ಅವರಲ್ಲಿ ನಿರಾಸಕ್ತಿ ಮತ್ತು ಸುಸ್ತು ಉಂಟು ಮಾಡುತ್ತದೆ.
iron deficiency anemia symptoms
ರಕ್ತಹೀನತೆ ರೋಗನಿರೋಧಕ ಸಾಮರ್ಥ್ಯವನ್ನು
ಕುಗ್ಗಿಸುತ್ತದೆ. ಇದರಿಂದ ಇಂತಹ ಸ್ತ್ರೀಯರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ರಕ್ತಹೀನತೆಯಿಂದ ಕಣ್ಣು ಮತ್ತು ಮೆದುಳಿನ
ಸಾಮರ್ಥ್ಯವನ್ನೂ ಕುಗ್ಗಿಸುತ್ತದೆ ಅದರಲ್ಲೂ ಗಮನ ಮತ್ತು ಏಕಾಗ್ರತೆಯನ್ನು ಕ್ಷೀಣಗೊಳಿಸುತ್ತದೆ.
ಹದಿವಯಸ್ಕರಲ್ಲಿ ಮತ್ತು ಶಾಲೆಗೆ ಹೋಗುವ
ಮಕ್ಕಳಲ್ಲಿ ಇದು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತದೆ.
iron deficiency food
ಋತುಸ್ರಾವದಿಂದ ಸ್ತ್ರೀಯರು ವರ್ಷಕ್ಕೆ ಒಂದು
ಲೀಟರ್‌ನಷ್ಟು ರಕ್ತ ಕಳೆದುಕೊಳ್ಳುತ್ತಾರೆ. ಅದು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದ್ದಕ್ಕೆ
ಸಮವಾಗಿರುತ್ತದೆ.
ಇದು ರೋಗನಿರೋಧಕ ವ್ಯವಸ್ಥೆಗೂ ಆತಂಕ
ತರುವುದಲ್ಲದೆ, ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗು
ಇಬ್ಬರಿಗೂ ಕಂಟಕವಾಗುತ್ತದೆ.
ಋತುಸ್ರಾವದಿಂದ ಸ್ತ್ರೀಯರು ಒಂದು ಲೀಟರ್‌ವರೆಗೆ
ಅಂದರೆ ಶೇ.22ರಷ್ಟು ರಕ್ತ ಕಳೆದುಕೊಳ್ಳುತ್ತಾರೆ.
iron-rich fruits and vegetables
ಆದರೆ ರಕ್ತ ಉತ್ಪಾದನೆಯಾಗಲು ಅದಕ್ಕೆ
ತಕ್ಕಷ್ಟು ಪೋಷಕಾಂಶಗಳನ್ನು ಸೇವಿಸುವುದಿಲ್ಲ. ಅಲ್ಲದೆ ಆಹಾರ ಪದ್ಧತಿಯಿಂದಲೂ ಅವರು ರಕ್ತಹೀನತೆಗೆ
ಒಳಗಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಭಾರತದ ಶೇ.80ಕ್ಕಿಂತ
ಹೆಚ್ಚು ಸ್ತ್ರೀಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಯಾವುದೇ ಜಾತಿ, ಮತ ಪಂಗಡಗಳನ್ನು ಆರ್ಥಿಕ ಪರಿಸ್ಥಿತಿಗಳನ್ನು ಮೀರಿ ಸಾರ್ವಜನಿಕ ಆರೋಗ್ಯದ
ಸಮಸ್ಯೆಯಾಗಿದೆ ಎನ್ನುತ್ತಾರೆ.
ಭಾರತೀಯ ಆಹಾರ ಪದ್ಧತಿ ಅದರಲ್ಲೂ ಸಸ್ಯಾಹಾರ
ರಕ್ತ ಉತ್ಪಾದಿಸುವ ಪೋಷಕಾಂಶಗಳನ್ನು ತಕ್ಕಷ್ಟು ಪ್ರಮಾಣದಲ್ಲಿ ಪೂರೈಸಲು ಶಕ್ತವಾಗಿಲ್ಲ.
iron-rich fruits and vegetables during pregnancy
ಅರ್ಧ ಕಪ್ ಅಕ್ಕಿಯಲ್ಲಿ ಶೇ.0.1ಗ್ರಾಂ ಕಬ್ಬಿಣಾಂಶವಿರುತ್ತದೆ. ಋತುಸ್ರಾವಕ್ಕೆ ಒಳಗಾಗುವ ಸ್ತ್ರೀಯರಿಗೆ
ಪ್ರತಿನಿತ್ಯ 28 ಎಂಜಿಯಷ್ಟು ಕಬ್ಬಿಣಾಂಶ ಅವರ ಆಹಾರದಿಂದ
ಪೂರೈಕೆಯಾಗಬೇಕು.
ಇದರೊಂದಿಗೆ ಗೋಧಿ ಹಿಟ್ಟು ಮತ್ತು ಇತರೆ
ಧಾನ್ಯಗಳಲ್ಲಿರುವ ಕಬ್ಬಿಣಾಂಶ ಹೀರುವ ಫೈಟೇಟ್ ಎನ್ನುವ ಅಂಶದಿಂದ ಕಬ್ಬಿಣಾಂಶ ದೇಹಕ್ಕೆ ಸಾಕಷ್ಟು
ಪ್ರಮಾಣದಲ್ಲಿ ದೊರಕುವುದಿಲ್ಲ.
ಫೆರಿಕ್ ರೂಪದ ಕಬ್ಬಿಣಾಂಶವು ಕರುಳಲ್ಲಿ
ಬೇಗನೇ ಹೀರಲು ಅನುಕೂಲ. ಫಾಸ್ಟ್ ಫುಡ್ ಮತ್ತು ಕಾಫಿ, ಚಹಾದಿಂದ
ಫೆರಿಕ್ ರೂಪದ ಅನುಕೂಲಕರ ಕಬ್ಬಿಣವು "ಫೆರಸ್" ಎನ್ನುವ ಕರುಳು ಹೀರದ ರೂಪದ
ಕಬ್ಬಿಣಾಂಶವಾಗಿ ಪರಿವರ್ತನೆಯಾಗುತ್ತವೆ.
top 10 iron-rich foods iron-rich fruits and vegetables
ಕಾಫಿಯಲ್ಲಿರುವ ಕೆಫಿನ್, ಚಹಾ ಮತ್ತು ಕೋಲಾಗಳಿಂದ ಕಬ್ಬಿಣಾಂಶವನ್ನು ಸಮತೋಲನಗೊಳಿಸಲು ಕಷ್ಟವಾಗುತ್ತದೆ.
ಆಹಾರದಲ್ಲಿರುವ ಫೈಟೇಟ್ ಕಬ್ಬಿಣಾಂಶವನ್ನು ಕರುಳು ಹೀರುವುದನ್ನು ತಡೆಯುತ್ತದೆ.
ಎಲ್ಲ ಸ್ತ್ರೀಯರು ನಿಯಮಿತವಾಗಿ ತಮ್ಮ ವೈದ್ಯರನ್ನು
ಸಂಪರ್ಕಿಸಿ ತನ್ನ ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ಕಬ್ಬಿಣದ ಅಂಶದ
ಕೊರತೆ ಮತ್ತು ಇತರೆ ಪೋಷಕಾಂಶಗಳ ಸೇವನೆಯಲ್ಲಿ ಕೊರತೆಯಿಂದ ಸ್ತ್ರೀಯರು ರಕ್ತಹೀನತೆಗೆ
ಒಳಗಾಗುತ್ತಾರೆ.
iron-rich fruits and vegetables during pregnancy
ಕಬ್ಬಿಣಾಂಶದ ಅತ್ಯುತ್ತಮ ಮೂಲಗಳೆಂದರೆ
ಸೊಪ್ಪು, ಅಂಜೂರ,
ಕೇಸರಿ ದಳ, ಕ್ಯಾರೆಟ್, ಬೀಟ್‌ರೂಟ್,
ಮೆಂತ್ಯ ಕಾಳು/ ಮೆಂತ್ಯ ಸೊಪ್ಪು, ಗೋಧಿ, ಮೊಳಕೆ ಆಹಾರದಿಂದ ದೇಹ ಕಬ್ಬಿಣಾಂಶವನ್ನು ಗ್ರಹಿಸುತ್ತದೆ. ಅದನ್ನು ಹೆಚ್ಚಿಸಲು
ವಿಟಮಿನ್ ಸಿ (ಉದಾ: ನಿಂಬೆ, ಕಿತ್ತಳೆ ಮತ್ತು ನೆಲ್ಲಿ) ಮತ್ತು ಬಿ12 ಅಂಶಗಳಿರುವ ಆಹಾರ ಹೆಚ್ಚು ಸೇವಿಸುವುದು ಅಗತ್ಯ.
iron deficiency foods to eat iron-rich foods vegetarian
ಅಲ್ಲದೆ ಕಬ್ಬಿಣಾಂಶ ಹೆಚ್ಚು ಇರುವ ಆಹಾರ
ಪದಾರ್ಥಗಳನ್ನೂ ಸೇವಿಸುವುದು ಅಗತ್ಯ. ಪೌಷ್ಟಿಕಾಂಶಗಳನ್ನು ಉತ್ತೇಜಿಸುವ ಆಹಾರ ಪದಾರ್ಥ ಮತ್ತು
ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವನೆ ರಕ್ತ ಉತ್ಪಾದನೆ ಮತ್ತು ರಕ್ತ ಪರಿಚಲನೆಗೆ
ಸಹಕಾರಿ.
ಆಹಾರ ಪದಾರ್ಥಗಳನ್ನು ಕಬ್ಬಿಣದ ಪಾತ್ರೆಯಲ್ಲಿ ತಯಾರಿಸುವುದರಿಂದಲೂ ಕಬ್ಬಿಣಾಂಶವು ಹೆಚ್ಚಾಗಿ ದೊರಕುತ್ತದೆ. ವಿಟಮಿನ್ ಡಿ3, ರಕ್ತ ಉತ್ಪಾದನೆಯಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಮೂಳೆ ಮಜ್ಜೆಯಲ್ಲಿ ಇರುವ ಮೂಲ ಕೋಶಗಳ ವ್ಯವಸ್ಥಿತ ಕೆಲಸಗಳಿಗೆ ವಿಟಮಿನ್ ಡಿ ಅತೀ ಅಗತ್ಯ.

