ನೀವು ಉಪವಾಸ ಮಾಡ್ತೀರ ? | Health Tips Kannada | ಮನೆಮದ್ದು | ಹೆಲ್ತ್ ಟಿಪ್ಸ್

Health Tips Kannada 


Health Tips Kannada 

ಉಪವಾಸ

ಉಪವಾಸ ಎನ್ನುವುದು ಒಂದು ಧಾರ್ಮಿಕ ಸಂಪ್ರದಾಯವಾಗಿ ನಾವು ಕಾಣುತ್ತೇವೆ. ಇದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾದ ಒಂದು ಅಭ್ಯಾಸ, ಉಪವಾಸ ಎಂದರೆ ಅದು ನಮ್ಮ ಜೀರ್ಣಾಂಗಗಳಿಗೆ ನಾವು ನೀಡುವ ವಿಶ್ರಾಂತಿ. ಉಪವಾಸದ ಸಂದರ್ಭದಲ್ಲಿ ಜೀರ್ಣಾಂಗ ವ್ಯವಸ್ಥೆ ಕೆಲಸ ಸ್ಥಗಿತಗೊಳಿಸಿರುವುದರಿಂದ ಶಕ್ತಿ ಚಯಾಪಚಯ ಮತ್ತು ಪ್ರತಿರಕ್ಷಣೆಯ ಕಡೆಗೆ ಹರಿಯುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ.

ನಾವು ಉಪವಾಸದಲ್ಲಿರುವಾಗ ನಮ್ಮ ದೇಹದಲ್ಲಿ ಸಂಗ್ರಹಗೊಂಡ ವಿಷಕಾರಿ ಮತ್ತು ಅಪಾಯಕಾರಿ ತ್ಯಾಜ್ಯ ವಸ್ತುಗಳನ್ನು ಹೊರದಬ್ಬುವ ಪ್ರಕ್ರಿಯೆ ತೀವ್ರವಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರಪಿಂಡ, ಶ್ವಾಸಕೋಶ, ಚರ್ಮ, ಲಿವರ್ ಕರುಳಿನ ಮೂಲಕ ಹೊರದಬ್ಬುತ್ತದೆ. ದೇಹದಲ್ಲಿ ಆಹಾರ ಲಭ್ಯವಿಲ್ಲದಿರುವಾಗ ಕೊಬ್ಬಿನ ಅಂಶದಿಂದ ಶಕ್ತಿ ಪಡೆದುಕೊಳ್ಳಲಾರಂಭಿಸುತ್ತದೆ.

ಮಾನವನ ಕೊಬ್ಬು ಪ್ರತಿ ಪೌಂಡ್‌ಗೆ 3500 ಕ್ಯಾಲೊರಿಗಳಷ್ಟು ಮೌಲ್ಯ ಹೊಂದಿದೆ. ದೇಹಕ್ಕೆ ಸಹಜವಾಗಿ ಕಾರ್ಯ ನಿರ್ವಹಿಸಲು ಇಷ್ಟು ಕೊಬ್ಬಿನ ಅಂಶ ಸಾಕು ಎಂದು ನಂಬಲಾಗಿದೆ. ಈ ಕೊಬ್ಬಿನ ಅಂಶ ದೇಹದಲ್ಲಿ ಸಂಗ್ರಹವಾಗುವುದು ದೇಹದಲ್ಲಿ ಹೆಚ್ಚುವರಿ ಗ್ಲುಕೋಸ್ ಇತರೆ ಕಾರ್ಬೊಹೈಡ್ರೆಟ್‌ಗಳು ಶಕ್ತಿ ಅಥವಾ ಬೆಳವಣಿಗೆಗೆ ಬಳಕೆಯಾಗದ ಸಂದರ್ಭದಲ್ಲಿ. ಆದ್ದರಿಂದ ಅವುಗಳು ಕೊಬ್ಬಿನ ಅಂಶವಾಗಿ ಪರಿವರ್ತನೆಯಾಗುತ್ತವೆ. ಉಪವಾಸ ಮಾಡಿದಾಗ ಕೊಬ್ಬಿನ ಅಂಶದಿಂದ ಶಕ್ತಿ ಪಡೆಯಲು ದೇಹ ಬಳಸಿದಾಗ ಅದು ಕೊಬ್ಬಿನ ಆಮ್ಲಗಳಿಂದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಮೇಲೆ ಹೇಳಲಾದ ಅಂಗಗಳು ಹೊರದಬ್ಬುತ್ತವೆ. ರಾಸಾಯನಿಕಗಳು ಆಹಾರದಲ್ಲಿ ಇಲ್ಲದೇ ಇರಬಹುದು. ಆದರೆ ಪರಿಸರದಿಂದ ಗ್ರಹಿಸಲ್ಪಡುತ್ತವೆ. ಡಿಡಿಟಿ ಕೊಬ್ಬಿನ ಸಂಗ್ರಹದಲ್ಲಿದು ಕೊಬ್ಬಿನೊಂದಿಗೆ ಹೊರಹೋಗುತ್ತದೆ.

ಉಪವಾಸದಿಂದ ಮತ್ತೊಂದು ಪ್ರಯೋಜನವಿದೆ. ದೇಹದಲ್ಲಿ ಆಗುವ ಅಸಹಜ ಬೆಳವಣಿಗೆಗಳು ಟ್ಯೂಮರ್ ಇತ್ಯಾದಿಗಳಿಗೆ ದೇಹದಲ್ಲಿ ಸಂಪೂರ್ಣ ಬೆಂಬಲ ದೊರೆಯುವುದಿಲ್ಲ. ಉಪವಾಸ ಇರುವಾಗ ಪ್ರೊಟೀನ್‌ಗಳನ್ನು ಕೂಡ ತುಂಡು ತುಂಡು ಮಾಡಿ ಅಮೈನೋ ಆಸಿಡ್ ಅನ್ನು ಬಿಡುಗಡೆ ಮಾಡಲಾಗುತ್ತದೆ.

ಆದ್ದರಿಂದಲೇ ಪ್ರಾಣಿಗಳು ಗಾಯಗೊಂಡರೆ ತಿನ್ನುವುದನ್ನು ನಿಲ್ಲಿಸುತ್ತವೆ. ಅಲ್ಲದೆ ಯಾವುದೇ ಸೋಂಕು ತಗುಲಿದಾಗ ಮನುಷ್ಯರಲ್ಲೂ ಹಸಿವು ಕಾಣೆಯಾಗುತ್ತದೆ. ಇದರೊಂದಿಗೆ ದೇಹದ ಉಷ್ಣಾಂಶವೂ ಹೆಚ್ಚಾಗುತ್ತದೆ.

ಉಪವಾಸದಿಂದ ದೇಹದ ಪುನಶ್ವೇತನ ಮತ್ತು ಜೀವಿತಾವಧಿ ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟಿದೆ. 1930ರಲ್ಲಿ ಎರೆಹುಳುಗಳ ಮೇಲೆ ಉಪವಾಸದ ಪ್ರಭಾವವನ್ನು ಅಧ್ಯಯನ ನಡೆಸಲಾಯಿತು. ಒಂದು ಎರೆಹುಳುವನ್ನು ಅದರ ಸಂಬಂಧಿಗಳಿಂದ ಪ್ರತ್ಯೇಕಗೊಳಿಸಿ ಅದಕ್ಕೆ ನಿಯಮಿತ ಆಹಾರ ಮತ್ತು ಉಪವಾಸವನ್ನು ರೂಡಿಸಲಾಯಿತು. ಈ ಪ್ರತ್ಯೇಕಗೊಳಿಸಿದ ಎರೆಹುಳು ಅದರ ಸಂಬಂಧಿಗಳಿಂದ 19 ತಲೆಮಾರುಗಳ ಕಾಲ ಜೀವಿಸಿದ್ದೇ ಅಲ್ಲದೆ ತನ್ನ ಯೌವನ ಹಾಗೂ ದೈಹಿಕ ಶಕ್ತಿಯನ್ನೂ ಕಾಪಾಡಿಕೊಂಡಿತ್ತು.

ಈ ಹುಳುವಿನಲ್ಲಿ ಕಾಣಿಸಿಕೊಂಡ ಜೀವಿತಾವಧಿಯ ಹೆಚ್ಚಳದ ಮನುಷ್ಯರನ್ನು  600-700 ವರ್ಷಗಳ ಕಾಲ ಜೀವಂತವಾಗಿಡಬಲ್ಲುದು ಎಂಬುದು ಸಂಶೋಧನೆಯಿಂದ ಕಂಡುಕೊಂಡ ಸತ್ಯ.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.