ಸರ್ವ ರೋಗಕ್ಕು | ಮನೆ ಮದ್ದು | (ಭಾಗ-1) | health tips kannada | ಹೆಲ್ತ್ ಟಿಪ್ಸ್ | ಆರೋಗ್ಯ ಸಲಹೆ
0KANNADA HEALTH TIPSಜುಲೈ 27, 2022
kannada health tips
ಸರ್ವ ರೋಗಕ್ಕುಮನೆ ಮದ್ದು ಭಾಗ 1
1.ಸ್ವಚ್ಛವಾದ ಪಾರಿಜಾತದ ಎಲೆಗಳಿಂದ ತೆಗೆದ
ಒಂದೆರಡು ಚಮಚ ರಸಕ್ಕೆ ಅಷ್ಟೇ ಪ್ರಮಾಣದ ಶುದ್ಧ ಜೇನುತುಪ್ಪ ಹಾಗೂ ಸ್ವಲ್ಪ ಉಪ್ಪನ್ನುಸೇರಿಸಿ ದಿನಕ್ಕೆ ಮೂರು ಬಾರಿ ಊಟಕ್ಕೆ ಮೊದಲು
ಸೇವಿಸುತ್ತಾ ಬಂದರೆ ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬರುತ್ತದೆ.
2.ಹೊನ್ನೆ ಮರದ ಅಂಟನ್ನು ನೋವಿರುವ ಹಲ್ಲಿನ
ಮೇಲೆ ಸ್ವಲ್ಪ ಕಾಲಇಟ್ಟರೆ
ಹಲ್ಲುನೋವು ದೂರವಾಗುತ್ತದೆ.
3.ಗಟ್ಟಿಯಾದ ಜೀರಿಗೆ ಕಷಾಯವನ್ನು ದಿನಕ್ಕೆರಡು
ಬಾರಿಸೇವಿಸುವುದರಿಂದ ಮೂತ್ರ ಸಂಬಂಧೀ ರೋಗಗಳು
ದೂರವಾಗುತ್ತವೆ.
4.ಮಾವಿನ ಮರದ ತೊಗಟೆಯನ್ನು ಮೊಸರಿನಲ್ಲಿ ಅರೆದು
ಹೊಕ್ಕಳಿನ ಸುತ್ತಲೂ ಲೇಪಿಸಿದರೆ ಸ್ವಲ್ಪ ಹೊತ್ತಿಗೆ ಅಜೀರ್ಣದ ಭೇದಿ ನಿಲ್ಲುತ್ತದೆ.
5.ನವಿಲುಗರಿಯ ಕಡ್ಡಿ ಮತ್ತು ನಿಂಬೆಹಣ್ಣಿನ
ಸಿಪ್ಪೆಯನ್ನು ಸುಟ್ಟು ಬೂದಿಯಾಗಿಸಬೇಕು. ಆ ಬೂದಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಆಗಾಗ
ಸೇವಿಸುತ್ತಾ ಬಂದರೆ ವಾಂತಿ ಬೇಗ ನಿಲ್ಲುತ್ತದೆ.
6.ಎಳ್ಳನ್ನು ಚೆನ್ನಾಗಿ ಅರೆದು ಗೋಲಿ
ಗಾತ್ರದಷ್ಟು ಬೆಣ್ಣೆಯೊಂದಿಗೆ ಸೇರಿಸಿ ಸೇವಿಸುತ್ತಾ ಬಂದರೆ ರಕ್ತಬೇಧಿ ನಿಲ್ಲುತ್ತದೆ.
7.ಅವರೆ ಎಲೆಯ ರಸವನ್ನು ಒಂದು ಸಣ್ಣ ಬಟ್ಟೆಯಲ್ಲಿ
ಹಾಕಿ, ಆ ಬಟ್ಟೆಯನ್ನು ಹಣೆಯ ಮೇಲೆ ಹಾಕಿಕೊಂಡಿರಬೇಕು. ಹೀಗೆ
ಮಾಡುವುದರಿಂದ ತಲೆಭಾರ ಮತ್ತು ತಲೆನೋವು ಗುಣವಾಗುತ್ತದೆ.
9.ಸ್ವಲ್ಪ ಮೆಂತ್ಯವನ್ನು ಬಾಯಿಗೆ ಹಾಕಿಕೊಂಡು
ಸ್ವಲ್ಪ ಗಟ್ಟಿ ಮೊಸರನ್ನು ಅದರೊಂದಿಗೆ ಸೇರಿಸಿ ಕುಡಿಯಬೇಕು. ಆಮಶಂಕೆ ಪ್ರಾರಂಭವಾದ ಕೂಡಲೇ ಹೀಗೆ
ಮಾಡುವುದರಿಂದ ಗುಣವಾಗುತ್ತದೆ.
10.ಎಳ್ಳೆಣ್ಣೆಯನ್ನು ಕಣ್ಣಿನ ರೆಪ್ಪೆಯ ಮೇಲೆ
ಸವರಿದರೆ ಮತ್ತು ಕಣ್ಣಿನಂಚಿಗೆ ಹಚ್ಚಿಕೊಂಡರೆ ಅತಿ ಉಷ್ಣದ ಕಣ್ಣುನೋವು ನೀಗುತ್ತದೆ.
11.ಒಂದು ಹಿಡಿಯಷ್ಟು ಬಸಲೆಸೊಪ್ಪನ್ನು
ಶುದ್ಧವಾಗಿಸಿ, ಚೆನ್ನಾಗಿ ಅರೆದು ಒಂದು ಲೋಟ ಹಸುವಿನ
ಹಾಲಿನೊಂದಿಗೆ ಬೆರೆಸಿ ಬೆಳಗಿನ ಹೊತ್ತು ಕುಡಿಯುತ್ತಾ ಬಂದರೆ ನಾಲೈದು ದಿನಗಳಲ್ಲಿ ಬಾಣಂತಿಯರಲ್ಲಿ
ಎದೆಹಾಲು ಹೆಚ್ಚಾಗಿ ವೃದ್ಧಿಯಾಗುತ್ತದೆ.
12.ಬೆಳ್ಳುಳ್ಳಿಯನ್ನು ನಿಂಬೆಹಣ್ಣಿನ ರಸವನ್ನು
ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ ಸಂಧಿವಾತ ದೂರವಾಗುತ್ತದೆ. :
13.ಊಟ ಮಾಡುವುದಕ್ಕೆ ಅರ್ಧ ಗಂಟೆಯ ಮೊದಲು
ಎಲೆಯಡಿಕೆಯನ್ನು ಜಗಿದು ತಿಂದರೆ ಹಸಿವು ಹೆಚ್ಚಾಗುತ್ತದೆ.
14.ಬದನೆಕಾಯಿಯನ್ನು ಆಹಾರದಲ್ಲಿ ಸೇರಿಸಿ
ಸೇವಿಸುವುದರಿಂದ ಪಿತ್ತಮತ್ತು ಕಫ
ನೀಗುತ್ತವಾದರೂ ತುರಿ, ಕಜ್ಜಿ ಮುಂತಾದ ಚರ್ಮರೋಗ ಹೊಂದಿರುವಂಥವರು
ಬದನೆಕಾಯಿಯನ್ನು ಆಹಾರದೊಂದಿಗೆ ಹೆಚ್ಚಾಗಿ ಸೇವಿಸಬಾರದು.
15.ಸಾಸಿವೆ ಬಹಳ ಸಣ್ಣ ಆಹಾರ ಪದಾರ್ಥವಾದರೂ
ಅದರಲ್ಲಿ ಹೆಚ್ಚಿನ ಕೆಡುಕಿನ ಅಂಶಗಳೂ ಅಡಗಿವೆ. ಸಾಸಿವೆಯ ಹೆಚ್ಚಿನ ಬಳಕೆಯಿಂದ ರಕ್ತದೊತ್ತಡ
ಮತ್ತು ಕರುಳಿನ ತೊಂದರೆಗಳು ಬರುತ್ತವೆ.
16.ಮೂಲಂಗಿಯನ್ನು ರುಬ್ಬಿ, ಅದರ ರಸವನ್ನು ತೆಗೆದು ಪ್ರತಿ ದಿನವೂಬೆಳಿಗ್ಗೆ ಆರು ಚಹಾ ಚಮಚದಷ್ಟು ಸೇವಿಸುತ್ತಾ ಬಂದರೆ ಮೂತ್ರ ಸಂಬಂಧಿ
ತೊಂದರೆಗಳೆಲ್ಲವೂ ನೀಗುತ್ತವೆ.
17.ಅರ್ಧ ಲೋಟದಷ್ಟು ಹಾಲಿಗೆ ಒಂದು ಚಹಾ
ಚಮಚದಷ್ಟು ಓಮವನ್ನು ಸೇರಿಸಿ ಬಿಸಿ ಮಾಡಿ ಸ್ವಲ್ಪ ಸಕ್ಕರೆಯನ್ನು ಹಾಕಿ ಆರಲು ಬಿಡಬೇಕು.ಈ
ಹಾಲನ್ನು ದಿನಕ್ಕೆರಡು ಬಾರಿ ಕುಡಿಯುತ್ತಾ ಬಂದರೆ ಗಂಟಲಿನಲ್ಲಿ ಹಿಡಿದ ಥಂಡಿ ದೂರವಾಗುತ್ತದೆ.
ಹಾಲಿನಲ್ಲಿ ಕೊನೆಯದಾಗಿ ಉಳಿಯುವ ಓಮದ ಕಾಳುಗಳನ್ನು ಜಗಿದು ತಿನ್ನಬೇಕು.
19.ಹಲ್ಲುನೋವು ಮತ್ತು ವಾಯು ತೊಂದರೆಯನ್ನು
ನೀಗಿಸುವಂಥ ತರಕಾರಿಯೆಂದರೆ ಬದನೆಕಾಯಿ.
20.ನುಗ್ಗೆ ಹೂವಿನಲ್ಲಿ ಸಣ್ಣ ಸಣ್ಣ
ಹುಳುಗಳಿರುತ್ತವೆ. ಹುಳುಗಳಿಲ್ಲದ ಹೂವುಗಳನ್ನು ಮಾತ್ರ ಆರಿಸಿಕೊಂಡು ಹೂವಿನಸಮಪ್ರಮಾಣದಷ್ಟುತೊಗರಿಬೇಳೆಯನ್ನು ಸೇರಿಸಿ, ಬೇಯಿಸಿ,
ಮಧ್ಯಾಹ್ನದ ಊಟದೊಂದಿಗೆ 21 ದಿನಗಳ ಕಾಲ
ಸೇವಿಸಿದರೆ ಉತ್ತಮ ಆರೋಗ್ಯವು ಉಂಟಾಗುತ್ತದೆ.
21.ಅತ್ತಿ ಮರದ ಕಾಂಡದಿಂದ ಲಭಿಸುವ ಹಾಲಿನೊಂದಿಗೆ
ಸಮಪ್ರಮಾಣದಲ್ಲಿ ಬೆಣ್ಣೆಯನ್ನು ಸೇರಿಸಿ
ಸೇವಿಸುತ್ತಾ ಬಂದರೆ ರಕ್ತಭೇದಿ ಬೇಗನೆ ಗುಣವಾಗುತ್ತದೆ.
22.ದೊಡ್ಡ ಗಾತ್ರದ ಎರಡು ನಿಂಬೆಹಣ್ಣುಗಳ
ರಸವನ್ನು ಎರಡು ಲೀಟರ್‌ಗಳಷ್ಟು ನೀರಿನಲ್ಲಿ ಹಿಂಡಿ ಮಡಕೆಯೊಳಗೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ
ಕುದಿಸಿ, ಆ ನೀರನ್ನು ಮಲೇರಿಯಾ ರೋಗಿಗೆ ಕುಡಿಸುತ್ತಾ ಬಂದರೆ
ನಿಶ್ಯಕ್ತಿ ಕಡಿಮೆಯಾಗುತ್ತದೆ.
23.ನಿಂಬೆಹಣ್ಣಿನ ರಸವನ್ನ ತೆಗೆದು ಅದರಲ್ಲಿ
ಒಣಶುಂಠಿ, ಇಂದುಪ್ಪು (ಗ್ರಂಧಿಗೆ ಅಂಗಡಿಯಲ್ಲಿ ಸಿಗುತ್ತದೆ)
ಮುಂತಾದವುಗಳ ಪುಡಿಯನ್ನುಸೇರಿಸಿ
ಸೇವಿಸುತ್ತಾ ಬಂದರೆ ಮಲಬದ್ಧತೆ ನೀಗುತ್ತದೆ.
24.ಸ್ವಲ್ಪ ಕರಿಬೇವಿನೆಲೆಗೆ ನಾಲೈದು ಮೆಣಸನ್ನು
ಸೇರಿಸಿ ತುಪ್ಪದಲ್ಲಿಹುರಿದು, ಬಿಸಿನೀರಿನಲ್ಲಿ ಅರೆದು, ಮಕ್ಕಳು ಸ್ನಾನ ಮಾಡಿದ ನಂತರತಿನ್ನಲು ಕೊಟ್ಟರೆ ಅವರ ಮಂದವಾಗಿದ್ದ ಹೊಟ್ಟೆ ಸರಿಹೋಗುತ್ತದೆ. ಅಲ್ಲದೆ ಹಸಿವೂ
ಹೆಚ್ಚಾಗುತ್ತದೆ.
ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯ, ಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ,ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿ, ಬೆಳ್ಳುಳ್ಳಿ,ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ,ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ,ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್, ಮನೆಮದ್ದು, Health Tips Kannada,