fruit juice benefits
juice benefits | fruit juice benefits | benefits of fruit juice | disadvantages of fruit juice |
ನೀವು ಜ್ಯೂಸ್ ಕುಡಿತೀರ ?? fruit juice benefits
ಹಣ್ಣು, ತರಕಾರಿಗಳ ರಸ ಕುಡಿಯುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಜೀವಶಕ್ತಿ ಲಭಿಸುತ್ತದೆ. ಕೆಲವು ರಸಗಳಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕರ ಜೀವನಕ್ಕೆ ಬಹಳ ಅಗತ್ಯ. ಜ್ಯೂಸ್ ಅಂಗಡಿಗಳಿಗೆ ಹೋದಾಗ ಬಹುತೇಕ ಜನರು ಮೂಸಂಬಿ ಜ್ಯೂಸ್ ಕೋಡಿ ಎನ್ನುತ್ತಾರೆ.
ಮೂಸಂಬಿ
ಅನಾರೋಗ್ಯದಲ್ಲಿರುವವರಿಗೂ ಮೂಸಂಬಿ ರಸ ನೀಡುತ್ತಾರೆ. ಏಕೆಂದರೆ, ಮೂಸಂಬಿ
ಜ್ವರ ಇಳಿಸುವಲ್ಲಿ ಬಹಳ ಸಹಕಾರಿ. ಮೂತ್ರಜನಕಾಂಗವನ್ನು ಶುದ್ದೀಕರಿಸುತ್ತದೆ. ವಯಸ್ಸಾದ ನಂತರ
ಹಾಲು ಕುಡಿದರೆ ಜೀರ್ಣವಾಗುವುದಿಲ್ಲ. ಆದ್ದರಿಂದ ಹಾಲು ಕುಡಿದ ನಂತರ ಕಿತ್ತಲೆರಸವನ್ನು
ಕುಡಿಯಬೇಕು. ಮೂಸಂಬಿ ರಸವು ಜ್ವರ, ಮಲಬದ್ಧತೆ, ಗರ್ಭಿಣಿಯರ
ವಾಂತಿಭೇದಿ ನಿಯಂತ್ರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ದ್ರಾಕ್ಷಿರಸ
ದ್ರಾಕ್ಷಿರಸದಲ್ಲಿ
ಸಿಟ್ರಿಕ್, ಟಾರ್ಟಾರಿಕ್ ಆಮ್ಲಗಳು ನೈಸರ್ಗಿಕ
ರೂಪದಲ್ಲಿವೆ. ಇವುಗಳಲ್ಲದೆ ಪೊಟಾಸಿಯಂ, ಸೋಡಿಯಂ, ಕ್ಯಾಲ್ಸಿಯಂ ಮುಂತಾದ ಖನಿಜಗಳಿವೆ. ರಕ್ತ
ಹೆಪ್ಪುಗಟ್ಟದಂತೆ ತಡೆಯುವಲ್ಲಿ ಸಿಟ್ರಿಕ್ ಮತ್ತು ಟಾರ್ಟಾರಿಕ್ ಆಮ್ಲಗಳು ಪ್ರಮುಖ ಪಾತ್ರ
ವಹಿಸುತ್ತವೆ. ಮಲಬದ್ಧತೆ, ಪಿತ್ತವಿಕಾರ, ಮೂಲವ್ಯಾಧಿ
ಮುಂತಾದ ರೋಗಗಳ ನಿವಾರಣೆಯಲ್ಲಿ ದ್ರಾಕ್ಷಿರಸ ಪ್ರಮುಖ ಪಾತ್ರ ವಹಿಸುತ್ತದೆ.
ನಿಂಬೆರಸ
ನಿಂಬೆರಸ ವಿವಿಧ
ರೋಗಗಳಿಗೆ ರಾಮಬಾಣ. ಕಣ್ಣಿಗೆ ಒಳ್ಳೆಯದು. ಹಲ್ಲು ಹುಳುಕು, ಎಲುಬು ದುರ್ಬಲವಾಗುವುದು ಮುಂತಾದ ಮೂಳೆಗಳ
ಕ್ಯಾಲ್ಸಿಯಂ ಕೊರತೆ ನಿವಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಜೀರ್ಣ, ಹೊಟ್ಟೆನೋವು
ಮುಂತಾದ ಸಂದರ್ಭಗಳಲ್ಲಿ ಆಹಾರ ಜೀರ್ಣಿಸಿ ವಿಷಯುಕ್ತ ಮಲವನ್ನು ಹೊರದೂಡಿ ಹೊಟ್ಟೆಯ ತೊಂದರೆಯನ್ನು
ನಿವಾರಿಸುತ್ತದೆ. ಮಲಬದ್ಧತೆಗೆ ದಿವ್ಯ ಔಷಧ.
ಕಲ್ಲಂಗಡಿ ಹಣ್ಣಿನ ರಸ
ಕಲ್ಲಂಗಡಿ ಹಣ್ಣಿನ
ರಸದಿಂದ ಬಾಯಾರಿಕೆ ದೂರವಾಗುತ್ತದೆ. ಮೂತ್ರಜನಕ ತೊಂದರೆ ನಿವಾರಿಸುತ್ತದೆ. ರಕ್ತ ಶುದ್ದೀಕರಣಕ್ಕೆ
ಸಹಕಾರಿ.
ಬೀಟ್‌ರೂಟ್
ಬೀಟ್‌ರೂಟ್ ನಮ್ಮ
ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ. ಬೀಟ್‌ರೂಟ್ ರಸದಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ಬೀಟ್‌ರೂಟ್
ತಂಪು.. ರಕ್ತ ವ್ರುದ್ದಿಗೆ ಸಹಕಾರಿ. ಬೀಟ್‌ರೂಟ್‌ನಲ್ಲಿರುವ ಬೀಟೈನ್ ಅಂಶದಿಂದ ಕರುಳು
ಶುದ್ಧಿಯಾಗುತ್ತದೆ.
ಹಾಗಲಕಾಯಿ
ಹಾಗಲಕಾಯಿ ರಸ ಹಸಿವನ್ನು ಹೆಚ್ಚಿಸಲು ಸಹಕಾರಿ. ಜೀರ್ಣಶಕ್ತಿ ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿರುವ ಹುಳುಗಳನ್ನು ಹೊರದೂಡುತ್ತದೆ. ರಕ್ತಹೀನತೆ ನಿವಾರಿಸುತ್ತದೆ. ಅರಿಶಿನ ಕಾಮಾಲೆ ಇದ್ದಾಗ ಬಹಳ ಉಪಕಾರಿ.
ಕಬ್ಬು
ಹಲ್ಲುಗಳಿಂದ ಕಬ್ಬು ಸಿಗಿದು ತಿಂದರೆ, ದಂತಕ್ಷಯ ನಿವಾರಣೆಯಾಗುತ್ತದೆ. ಸಾಕಷ್ಟು ತಿನ್ನುತ್ತಿದ್ದರೆ ಅರಿಶಿನ ಕಾಮಾಲೆ ರೋಗ ಬರುವುದೇ ಇಲ್ಲ.


Red Bull
ಪ್ರತ್ಯುತ್ತರಅಳಿಸಿ