dark circles under eyes home remedy
dark circles under eyes home remedy
dark circle | dark circles under eyes home remedy | dark circles removal
ಕಣ್ಣಿನ ಅರೋಗ್ಯ, ಡಾರ್ಕ್ ಸರ್ಕಲ್, ಕಣ್ಣು ಉರಿ, ಹೀಗೆ ಮಾಡಿ
ನಿಮ್ಮ ದೇಹದಲ್ಲಿ
ಬಹಳ ದುರುಪಯೋಗವಾಗುವ ಪ್ರಮುಖ ಅಂಗವೆಂದರೆ ಕಣ್ಣು. ಟಿವಿಗಳಿಗೆ ಜಯವಾಗಲಿ, ಅಬಾಲವೃದ್ದರೆನ್ನದೆ ತನ್ನ ಆಕರ್ಷಣೆಗೆ ಒಳಪಡಿಸಿಕೊಂಡಿರುವ ಏಕೈಕ ಸಾಧನ ಈ ಟಿವಿ,
ಮಕ್ಕಳು ಹೋಮ್ ವರ್ಕ್ ಮಾಡದೆ, ಗೃಹಿಣಿಯರು ಅಡುಗೆ
ಕೆಲಸವನ್ನೂ ನಿರ್ಲಕ್ಷಿಸಿ ಟಿವಿಯತ್ತ ದೃಷ್ಟಿ ನೆಟ್ಟು ಕುಳಿತುಕೊಳ್ಳುತ್ತಾರೆ. ಇದರಿಂದ ಕಣ್ಣಿಗೆ
ಆಗುವ ಶ್ರಮ ಅಷ್ಟಿಷ್ಟಲ್ಲ.
ರಾತ್ರಿ ಬೇಗನೆ
ಮಲಗಿ ಬೆಳಕು ಹರಿಯುವ ಮುನ್ನವೇ ಅಂದರೆ ಬೆಳಗಿನ ಜಾವ ಎದ್ದೇಳುವವರ ಕಣ್ಣುಗಳ ಆರೋಗ್ಯ ನಿಜಕ್ಕೂ
ಚೆನ್ನಾಗಿರುತ್ತದೆ. ಬೆಳಗಿನ ಜಾವ ಏಳುವುದರ ಲಾಭವೆಂದರೆ ನಮ್ಮ ಕಣ್ಣುಗಳು ಇದ್ದಕ್ಕಿದ್ದಂತೆ
ಬೆಳಕಿಗೆ ಹೊಂದಿಕೊಳ್ಳಬೇಕಿಲ್ಲ. ಕತ್ತಲಿದ್ದಾಗ, ನಸುಬೆಳಕು
ಹರಡಿದಾಗ ನಿಧಾನವಾಗಿ ಬೆಳಕು ವಿಸ್ತರಿಸಿ ನಂತರ ಪೂರ್ಣ ಹಗಲಾಗುತ್ತದೆ. ಈ ಬಗೆಯಲ್ಲಿ ಬೆಳಕನ್ನು
ನೋಡಿದರೆ ಕಣ್ಣುಗಳಿಗೆ ಶ್ರಮವಾಗುವುದಿಲ್ಲ. ವಿದ್ಯುದ್ದೀಪಗಳ ಕೆಳಗೆ ಕುಳತು ರಾತ್ರಿಯೆಲ್ಲಾ
ಓದುವುದು, ಮಧ್ಯರಾತ್ರಿಯವರೆಗೂ ಟಿವಿ ನೋಡುವುದು, ಇಂತಹ ಚಟುವಟಿಕೆಗಳಿಂದ ಕಣ್ಣುಗಳು ಬೇಗನೆ ದಣಿಯುತ್ತವೆ.
ಪ್ರಕೃತಿ ನಮ್ಮ
ಕಣ್ಣುಗಳನ್ನು ಅತ್ಯಂತ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು - ಅನುವಾಗುವಂತೆ ನಿರ್ಮಿಸಿದೆ.
ಉದಾಹರಣೆಗೆ, ನಮ್ಮ ಕಣ್ಣು ರೆಪ್ಪೆಗಳು ಕಣ್ಣುಗಳಿಗೆ ರಕ್ಷಾಕವಚಗಳಾಗಿವೆ.
ಕಣ್ಣುಗಳಲ್ಲಿ ಉತ್ಪಾದನೆಯಾಗುವ ಕಣ್ಣೀರು ಕಣ್ಣಿನಲ್ಲಿ ಉಂಟಾಗುವ ಧೂಳು, ಕಸವನ್ನು
ಹೊರದಬ್ಬುತ್ತದೆ. ಅಲ್ಲದೆ ಕಣ್ಣೀರಿನಲ್ಲಿ ಲೈಸೋಜೈಮ್ ಎಂಬ ವಸ್ತುವಿದ್ದು ಯಾವುದೇ
ಬ್ಯಾಕ್ಟಿರಿಯಾಗಳಿಂದ ಕಣ್ಣುಗಳನ್ನು ಸಂರಕ್ಷಿಸುತ್ತದೆ.
ಆದರೂ ಕಣ್ಣು
ಹಲವಾರು ಕಾಯಿಲೆಗಳಿಗೆ ಈಡಾಗುತ್ತದೆ. ಅವುಗಳಲ್ಲಿ ಇಂಗ್ಲಿಷ್‌ನಲ್ಲಿ ಬ್ಲೆಫಾಲಿಟಿಸ್ ಎಂದು
ಕರೆಯುವ ಕಣ್ಣು ರೆಪ್ಪೆಗಳ ಉರಿಯೂತ ಬಹಳ ಮುಖ್ಯವಾದದ್ದು. ಈ ಉರಿಯೂತ ಅಲರ್ಜಿ, ಪೌಷ್ಟಿಕಾಂಶದ
ಕೊರತೆ, ತಲೆಯಲ್ಲಿ
ವಿಪರೀತ ಹೊಟ್ಟಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳಲ್ಲಿ ಉರಿ, ಉಜ್ಜುವಂತಹ ಭಾವನೆ
ಮೂಡುತ್ತದೆ.
ಕಣ್ಣುಗಳನ್ನು
ಆರೋಗ್ಯವಾಗಿಟ್ಟುಕೊಳ್ಳಲು ಕಣ್ಣುಗಳ ಸ್ವಚ್ಛತೆ ಮತ್ತು ವ್ಯಾಯಾಮಕ್ಕೆ ಗಮನ ನೀಡಬೇಕಾಗುತ್ತದೆ.
ಇಲ್ಲದಿದ್ದರೆ ತೀವ್ರಗೊಳ್ಳುವ ಕಣ್ಣಿನ ಸಮಸ್ಯೆ ನಿವಾರಣೆಗೆ ಶಸ್ತ್ರಚಿಕಿತ್ಸೆಯಂತಹ ಕ್ರಮಗಳು
ಅನಿವಾರ್ಯವಾಗಬಹುದು.
ಕಣ್ಣುಗಳನ್ನು
ದಿನಕ್ಕೆ ಎರಡು ಬಾರಿಯಾದರೂ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿ. ಟಿವಿ ನೋಡಿದ ನಂತರ, ಮಲಗುವ ಮುನ್ನ, ಹೊರಗಡೆ ಸುತ್ತಾಡಿ
ಸುಸ್ತಾಗಿ ಬಂದ ನಂತರ ಬಹಳ ಕಾಲ ಓದಿದ ನಂತರ ಕಣ್ಣುಗಳನ್ನು ತೊಳೆದುಕೊಳ್ಳುವುದು ಬಹಳ ಉತ್ತಮ
ಅಭ್ಯಾಸ,
ದೃಷ್ಟಿಯನ್ನು
ಸುಧಾರಿಸಲು ರಾತ್ರಿಯ ವೇಳೆ ನಾಲ್ಕು ಅಥವಾ ಐದು ಬಾದಮಿಯನ್ನು ನೆನೆಹಾಕಿಲಿ. ಮರುದಿನ ಬೆಳಗ್ಗೆ
ಅದನ್ನು ಚೆನ್ನಾಗಿ ರುಬ್ಬ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈ ಪೇಸ್ಟ್ ಅನ್ನು ನಿಯಮಿತವಾಗಿ ಕೆಲ
ತಿಂಗಳ ಕಾಲ ಊಟದ ನಂತರ ಸೇವಿಸಿ, ಬಾಳೆಹಣ್ಣು, ಕ್ಯಾರೆಟ್, ಕೊಬ್ಬರಿ, ಎಲ್ಲ ತರಕಾರಿಗಳು, ನುಗ್ಗೇಕಾಯಿ, ಹೂಕೋಸು ಮುಂತಾದವುಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ.
ನಿಮ್ಮ ಆಹಾರದಲ್ಲಿ ಇವುಗಳಿರಲಿ:
ಹಣ್ಣು ಹಂಪಲು : ಸೇಬು, ದ್ರಾಕ್ಷಿ, ಕಿತ್ತಳೆ, ಚೆರ್ರಿ, ಪಪ್ಪಾಯಿ, ಅನಾನಸ್.
ಹಸಿರು ತರಕಾರಿಗಳು
: ಎಲೆಕೋಸು, ಕ್ಯಾರೆಟ್, ಬೀಟ್‌ರೂಟ್, ಈರುಳ್ಳಿ, ಆಲೂಗಡೆ ಅಲ್ಲದೆ ಡ್ರೈ ಫೂಟ್‌ಗಳಾದ ಖರ್ಜೂರ, ಅಂಜೂರ, ದ್ರಾಕ್ಷಿ, ಗೋಡಂಬಿ ಅಲ್ಲದೆ ಹಾಲು ಬೆಣ್ಣೆ ಅಲ್ಲದೆ ಚಪಾತಿಯಂತಹ
ಆಹಾರ ಸೂಕ್ತ.
ಸಕ್ಕರೆಯನ್ನು
ಆದಷ್ಟೂ ತಪ್ಪಿಸಿ ಜೇನುತುಪ್ಪ ಸೇವಿಸಿ.
ಸಂಸ್ಕರಿತ ಆಹಾರ, ಜಾಮ್, ಕೆಚಪ್, ಬೆಲ್ಲ, ಸಿದ್ಧ ಆಹಾರ, ಫಾಸ್ಟ್‌ಫುಡ್, ಜಂಕ್ ಫುಡ್, ತಂಪು ಪಾನೀಯ, ಐಸ್‌ಕ್ರೀಂ, ಕೇಕ್
ಮುಂತಾದವುಗಳನ್ನು ಸೇವಿಸುವುದನ್ನು ಅದಷ್ಟೂ ಕಡಿಮೆ ಮಾಡಿ....
ದಾಳಿಂಬೆಯ ತಾಜಾ
ಹಣ್ಣಿನಿಂದ ರಸ ತೆಗೆದು ಒಂದರಿಂದ ಹತ್ತು ತೊಟ್ಟುಗಳಷ್ಟು ಎರಡು ಕಣ್ಣುಗಳಿಗೆ ಹಾಕಿ. ಮೂರರಿಂದ
ಏಳು ದಿನಗಳವರೆಗೆ ಮುಂದುವರೆಸಿ.
* ಕಣ್ಣಿನ ಸುತ್ತ ಕಪ್ಪು ನಿವಾರಣೆ *
- ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಉಜ್ಜಿ ರಸ ತೆಗೆದು ಹಚ್ಚಿ.
- ಬೆಳಗ್ಗೆ ಎದ್ದು ಕರಿಬೇವಿನ ಎಲೆಗಳನ್ನು ತಿನ್ನಬೇಕು.
- ಕಣ್ಣಿನ ಕೆಳಭಾಗವನ್ನು ಆಗಾಗ ಮೃದುವಾಗಿ ಮಸಾಜ್ ಮಾಡುತ್ತಾ ಇರಬೇಕು.
- ಗರಿಕೆ ಹುಲ್ಲಿನ ಮೇಲೆ ಬಿದ್ದ ಇಬ್ಬನಿಯ ನೀರನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು.
- ತಾಯಿಯ ಎದೆ ಹಾಲನ್ನು ತೆಗೆದುಕೊಂಡು ಹತ್ತಿಯಲ್ಲಿ ನೆನಸಿ ಕಣ್ಣಿನ ಸುತ್ತ ಇಟ್ಟು ವಾಶ್ ಮಾಡಿ.

