sperm count increase food | heart problem | weight loss | solution

sperm count increase food | heart problem | weight loss | solution

  sperm count increase food | heart problem | weight loss | solution

ವೀರ್ಯ ಹೆಚ್ಚಿಸಲು,ಬೊಜ್ಜು ಕರಗಿಸಲು, ಹೃದಯ ಕಾಯಿಲೆಗ್ಯಾಸ್ ಟ್ರಬಲ್ಮುಟ್ಟಿನ ಕಾಲದ ಸೊಂಟ ನೋವು ಎಲ್ಲಾ ನೋವಿಗು ಇಲ್ಲಿದೆ ಮನೆ ಮದ್ದು

ಸ್ನೇಹಿತರೆ ನಾವು ಇಂದು ಎದುರಿಸುತ್ತಿರುವ ಸಾವಿರ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಮನೆಮದ್ದು ಇದೆ, ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯ ಅರ್ಥದಂತೆ ನಾವು ಅದನ್ನು ಪರಿಗಣಿಸದೆ ಇರುವುದು ನಮ್ಮ ದುರದ್ರುಷ್ಟವೇ ಸರಿ, ಸ್ನೇಹಿತರೇ ಬೆಳ್ಳುಳ್ಳಿ ಬಗ್ಗೆ ನಿಮಗೆಲ್ಲ ಎಷ್ಟು ಗೊತ್ತು, ಸಾಮನ್ಯವಾಗಿ ಬೆಳ್ಳುಳ್ಳಿಯನ್ನು ನಾವು ಒಗ್ಗರಣೆಗೆ ಉಪಯೋಗಿಸುತ್ತೆವೆ, ಇನ್ನ ಒಂದು ವೇಳೆ ಊಟದಲ್ಲಿ ಬೆಳ್ಳುಳಿ ಸಿಕ್ಕರು ಅದನ್ನು ತಿನ್ನುವವರಿಗಿಂತ ಪಕ್ಕಕ್ಕೆ ತೆಗೆದಿಡುವವರೆ ಹೆಚ್ಚು, ಇಂದು ನಿಮಗೆ ನಾವು ಬೆಳ್ಳುಳ್ಳಿ ಯನ್ನು ಯಾವ ಯಾವ ಸಮಸ್ಯೆಗೆ ಯವ ಯಾವ ತರ ಉಪಯೋಗಿಸಬೇಕು ಎಂದು ತಿಳಿಸಿ ಕೋಡುತ್ತೇವೆ.

ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ವಿಶೇಷ ರುಚಿಗೆಂದು, ಅದರ ಆರೋಗ್ಯದ ಲಾಭಗಳ ದೃಷ್ಟಿಯಿಂದ ಬಳಸುವ ವಿಶೇಷ ಪದಾರ್ಥ, ಬೆಳ್ಳುಳ್ಳಿಯ ಪ್ರಯೋಜನಗಳು ಒಂದೆರಡಲ್ಲ, ಬೆಳ್ಳುಳ್ಳಿ ಸೇವನೆಯಿಂದ ಕ್ಷಯ ರೋಗ ನಿವಾರಣೆಯಾಗುತ್ತದೆ. ವೀರ್ಯ ಹೆಚ್ಚಿಸುತ್ತದೆ. ಪಚನಶಕ್ತಿಯನ್ನೂ ವೃದ್ಧಿಸುತ್ತದೆ. ಬೆಳ್ಳುಳ್ಳಿಯನ್ನು ನಿತ್ಯ ಸೇವಿಸುತ್ತಿದ್ದರೆ ನೆಗಡಿ ಕಾಡುವುದಿಲ್ಲ, ಕೀಲುನೋವು ದೂರವುಳಿಯುತ್ತದೆ.



 ಬೆಳ್ಳುಳ್ಳಿಯನ್ನು ಬೇಯಿಸಿದ ನೀರಿನಿಂದ ಗಾಯ ತೊಳೆಯುತ್ತಿದ್ದರೆ ಗಾಯದಲ್ಲಿನ ರೋಗಾಣುಗಳು ನಾಶವಾಗುತ್ತವೆ. ಗಾಯಗಳೂ ಸುಲಭವಾಗಿ ಗುಣವಾಗುತ್ತವೆ. ಬೆಳ್ಳುಳ್ಳಿ ಸಿಪ್ಪೆಯ ಹೊಗೆ ಹಾಕಿದರೆ ಮನೆಯೊಳಗೆ ಇರುವ ವಿಷಜಂತುಗಳು ಹೊರಕ್ಕೆ ಹೋಗುತ್ತವೆ. ಸತತವಾದ ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯವೃದ್ಧಿಯಾಗುತ್ತದೆ, ಆಯುಷ್ಯವೂ ವೃದ್ಧಿಯಾಗುತ್ತದೆ. ಬೆಳ್ಳುಳ್ಳಿ ರಸ ಸೇವಿಸುವುದಲಂದ ಕೆಮ್ಮು, ನೆಗಡಿ ಗುಣವಾಗುತ್ತವೆ.

ಚೇಳು ಕುಟುಕಿದಾಗ ಬೆಳ್ಳುಳ್ಳಿಯನ್ನು ತೇದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ. ದಪ್ಪಗಿರುವವರು ಬೆಳ್ಳುಳ್ಳಿಯನ್ನು ಬಳಸುವ ಮೂಲಕ ತಮ್ಮ ದೇಹತೂಕ ಕಡಿಮೆ ಮಾಡಿಕೊಳ್ಳಬಹುದು. ಗ್ಯಾಸ್ ಟ್ರಬಲ್ ನಿಯಂತ್ರಿಸುವಲ್ಲ ಬೆಳ್ಳುಳ್ಳಿ ಗಮನಾರ್ಹ ಪಾತ್ರ ವಹಿಸುತ್ತದೆ. ನಿತ್ಯ ಊಟದಲ್ಲಿ ಬೆಳ್ಳುಳ್ಳಿ ಇದ್ದರೆ ರಕ್ತ ವೃದ್ಧಿಯಾಗುತ್ತದೆ. ಬೆಳ್ಳುಳ್ಳಿ ರಸವನ್ನು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ಮಲವಿಸರ್ಜನೆಯಲ್ಲಿ ಹೊರಬೀಳುತ್ತವೆ.

ಕಿವಿ ನೋವಿಗೆ ಬೆಳ್ಳುಳ್ಳಿಯನ್ನು ಹರಳೆಣ್ಣೆಯಲ್ಲ ಉಗುರು ಬೆಚ್ಚಗಿರುವಂತೆ ಮಾಡಿ ಹನಿ ಹನಿಯಾಗಿ ಕಿವಿಗೆ ಬಿಟ್ಟುಕೊಂಡರೆ ಕಿವಿನೋವು ನಿವಾರಣೆಯಾಗುತ್ತದೆ. ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿ ತೊಳೆಗಳನ್ನು ಪ್ರತಿದಿನವೂ ಸೇವಿಸಿದರೆ ಉಬ್ಬಸ ರೋಗ ನಿಯಂತ್ರಣಕ್ಕೆ ಬರುತ್ತದೆ. ರಕ್ತದ ಒತ್ತಡ ಹೆಚ್ಚಾಗಿರುವ ರೋಗಿಗಳು ಖಚಿತವಾಗಿ ಬೆಳ್ಳುಳ್ಳಿಯನ್ನು ಬಳಸಲೇ ಬೇಕು. ಹಾಲಿನಲ್ಲಿ ಬೆಳ್ಳುಳ್ಳಿ ತೊಳೆಯನ್ನು ಬೆಯಿಸಿ ಪ್ರತಿವಿನ ತಿನ್ನುತ್ತಿದ್ದರೆ ಉಬ್ಬಸ ರೋಗ ಗುಣವಾಗುವುದು

ಬೆಳ್ಳುಳ್ಳಿಯು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಕ್ರಿಮಿಸೋಂಕುಗಳಿಂದ ರಕ್ಷಿಸುತ್ತದೆ. ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರತಿಬಂಧಿಸುತ್ತದೆ. ಅಧಿಕ ರಕ್ತದ ಒತ್ತಡವನ್ನು ಸಹ ತಕ್ಕಮಟ್ಟಿಗೆ ನಿಯಂತ್ರಿಸುತ್ತದೆ. ಬೂಷ್ಟಿನ ಸೋಂಕನ್ನು ನಿವಾಲಸುತ್ತದೆ. ನಿಜಕ್ಕೂ ಇದು ಬಡವರ ಕಸ್ತೂರಿ.



ಬಾಯಲ್ಲಿ ಕೆಟ್ಟವಾಸನೆಯೆಂಬ ಕಾರಣಕ್ಕೆ ಬೆಳ್ಳುಳ್ಳಿಯನ್ನು ತಿನ್ನುತ್ತಿರಲಿಲ್ಲ, ಇಂದು ನಾವು ಬೆಳ್ಳುಳ್ಳಿಯ ಔಷಧಿ ಗುಣಕ್ಕಾಗಿ ಮತ್ತು ಸಾಂಬಾರ ಗುಣಧರ್ಮಕ್ಕಾಗಿ ಆ ಸಸ್ಯವನ್ನು ಪೂಜಿಸುತ್ತಿದ್ದ ಪ್ರಾಚೀನ ಈಜಿಪ್ಟ್ ಸಂಸ್ಕೃತಿಯನ್ನು ಅನುಸಸುವ ಕಾಲ ಬಂದಿದೆ.

ಬೆಳ್ಳುಳ್ಳಿಯ ರೋಗ ನಿವಾರಕ ಶಕ್ತಿಗೆ ಕಾರಣ ಅದರಲ್ಲಿರುವ ಗಂಧಕದ ಘಟಕಗಳು. ಬೆಳ್ಳುಳ್ಳಿಯ ಎಸಳನ್ನು ಜಜ್ಜಿದಾಗ ಅಥವಾ ಜಗಿದಾಗ, ಅಲೈನ್ ಎಂಬ ಘಟಕ, ಆಲಸಿನ್ ಘಟಕವಾಗಿ ಮಾರ್ಪಾಡಾಗುತ್ತದೆ. ಈ ಆಅಸಿನ್ ಎಂಬ ಘಟಕ ಅತ್ಯಂತ ಮುಖ್ಯವಾದುದು. ಇದು ಬೆಳ್ಳುಳ್ಳಿಯ ವಾಸನೆಗೆ ಮತ್ತು ಔಷಧಿ ಗುಣಕ್ಕೆ ಮೂಲ. ಇದಲ್ಲದೇ ಕೆಲವೊಮ್ಮೆ ಆಲಸಿನ್ ಘಟಕಗಳು, ವಿಭಜನೆ ಹೊಂದಿ, ಇನ್ನೂ ಕೆಲವು ಗಂಧಕದ ಘಟಕಗಳಾಗಿ ಮಾರ್ಪಾಡಾಗುತ್ತದೆ. ಉದಾಹರಣೆಗೆ ಆಲನ್, ಅಜೇಯನ್, ಮ್ಯೂಸಿಲೇಜ್ ಇತ್ಯಾದಿ. ಈ ಔಷಛಿ ಪದಾರ್ಥಗಳೂ ಆರೋಗ್ಯಕ್ಕೆ ಹಿತಕಾರಿ.

ಬೆಳ್ಳುಳ್ಳಿಯನ್ನು ಬೇಯಿಸಿದಾಗ ಅದು ಅಲಿಸಿನ್ ಆಗಿ ಪರಿವರ್ತನೆ ಆಗುವುದಿಲ್ಲ ಮತ್ತು ಅದರಲ್ಲಿನ ಕ್ರಿಮಿ ನಿರೋಧಕ ಶಕ್ತಿ ಹೊರಟೇ ಹೋಗುತ್ತದೆ. ಅದಾಗ್ಯೂ, ಬೇಯಿಸಿದ ಬೆಳ್ಳುಳ್ಳಿ ರಕ್ತಕಣಗಳ ಕಾಯಿಲೆಯಲ್ಲಿ ಉಪಯುಕ್ತ. ಉಪಯುಕ್ತತೆ ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಚರ್ಮರೋಗ, ಕ್ರಿಮಿರೋಗಗಳಿಂದ ಹಿಡಿದು ಮೂಲವ್ಯಾಧಿಯ ಚಿಕಿತ್ಸೆಗಾಗಿ ಬಳಸುತ್ತಿದ್ದರು. ಇಂದಿನ ನವನವೀನ ಅನುಸಂಧಾನ ಹೃದಯದ ರಕ್ತನಾಳಗಳ ಕಾಯಿಲೆ ಮೇಲೆ, ಕ್ಯಾನ್ಸರ್‌ನ ಅನಾಹುತಗಳನ್ನು ಪ್ರತಿಬಂಧಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಬೆಳ್ಳುಳ್ಳಿ ಕೊಬ್ಬನ್ನು ಕಡಿಮೆ ಮಾಡುವುದರಲ್ಲಿ ಉಪಯುಕ್ತ. ಬೆಳ್ಳುಳ್ಳಿ ವ್ಯಕ್ತಿಯ ರಕ್ತದ ಕೊಲೆಸ್ಟ್ರಾಲ್, ಟ್ರೈಲ್ಲಿಸರೈಡ್‌ಗಳನ್ನು ಕಡಿಮೆ ಮಾಡಿ ಮಾನವನಿಗೆ ಉಪಯುಕ್ತ ಒಳ್ಳೆಯ ಕೊಲೆಸ್ಟ್ರಾಲ್‌ನ ಮಟ್ಟವನ್ನು ರಕ್ತದಲ್ಲಿ ಹೆಚ್ಚಿಸುತ್ತದೆ.



ಬೆಳ್ಳುಳ್ಳಿಯು ರಕ್ತದಲ್ಲಿನ ಪ್ಲೇಟ್‌ಲೆಟ್ ಕಣಗಳು ಪರಸ್ಪರ ಅಂಟಿಕೊಂಡು ಉದ್ಭವಿಸುವ ರಕ್ತನಾಳಗಳ ಗಡಸಾಗುವಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿಯು ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ರಕ್ತನಾಳಗಳ ಮುಚ್ಚುವಿಕೆಯನ್ನು ತಡೆಗಟ್ಟುತ್ತದೆ.

ಬೆಳ್ಳುಳ್ಳಿ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್. ಆದುದರಿಂದ ಹೃದಯದ ಕಾಯಿಲೆಗಳ ಉಪಶಮನದಲ್ಲಿ ಬಹಳ ಉಪಯುಕ್ತ ದೀರ್ಘಾಯುಷ್ಯಕ್ಕೂ ಸಹಕಾರಿ.

ಬೆಳ್ಳುಳ್ಳಿಯ ಸತ್ವವು ಜಠರದ ಹುಣ್ಣಿಗೆ ಕಾರಣೀಭುತವಾದ ಬ್ಯಾಕ್ಟಿರಿಯಾವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳ್ಳುಳ್ಳಿಯ ಸೇವನೆ ಕ್ಯಾನ್ಸರ್ ರೋಗಿಗಳಲ್ಲೂ ಲಾಭದಾಯಕವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಹೊಟ್ಟೆಯ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್, ಸ್ತನದ ಕ್ಯಾನ್ಸರ್‌ಗಳಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ರೋಗಿಗಳಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ.

ಬೆಳ್ಳುಳ್ಳಿ ಆಹಾರ ರೂಪದ ಆ್ಯಂಟಿಬಯೊಟಿಕ್. ಇದು ವೈರಸ್, ಬ್ಯಾಕ್ಟಿರಿಯಾ ಮತ್ತು ಬೂಸ್ಟಿನ ಸೋಂಕುಗಳಲ್ಲಿ ಪರಿಣಾಮಕಾರಿ.

ಬೆಳ್ಳುಳ್ಳಿಯ ಎಣ್ಣೆ ಕಿವಿನೋವಿನಲ್ಲಿ ಉಪಯುಕ್ತ. ಹೃದಯದ ತೆರೆದ ಕವಾಟಗಳ ಶಸ್ತ್ರ ಚಿಕಿತ್ಸೆಯ ನಂತರ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟದಿರುವ ಔಷಧಿಗಳನ್ನು ವರ್ಷಗಟ್ಟಲೆ ಕೊಡುತ್ತಾರೆ. ಇದು ದುಬಾರಿ. ಬೆಳ್ಳುಳ್ಳಿಯ ಸೇವನೆಯಿಂದ ಈ ರಕ್ತ ಹೆಪ್ಪುಗಟ್ಟುವಿಕೆ ತಡೆಯುವ ಔಷಧಿಗಳ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬಹುದೆಂದು ಇತ್ತೀಚಿನ ವೈದ್ಯಕೀಯ ಸಂಶೋಧನೆಗಳಿಂದ ಧೃಢಪಟ್ಟಿದೆ



ಒಸಡುಗಳಲ್ಲಿ ಕೀವಾಗುವಿಕೆ, ಮೈ ಮೇಲೆ ಆಗಾಗ ಕೀವಿನ ಗುಳ್ಳೆಗಳು ಏಳುತ್ತಿದ್ದರೆ 60 ದಿನಗಳ ಕಾಲ ಬೆಳ್ಳುಳ್ಳಿ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ಪ್ರಯೋಜನ ಕಂಡುಬರುವುದು.

40 ವರ್ಷ ಮೇಲ್ಪಟ್ಟವರು ಹೃದಯ ಮತ್ತು ರಕ್ತನಾಳಗಳ ರೋಗಗಳನ್ನು ಪ್ರತಿಬಂಧಿಸಲು ಪ್ರತಿದಿನ ಒಂದು ಗಾರ್ಲಿಕಾನ್ ಕ್ಯಾಸ್ಟೋಲ್‌ನ್ನು ಅಥವಾ ನಾಲ್ಕು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇವಿಸಬಹುದು.

ಬೆಳ್ಳುಳ್ಳಿಯ ಕೆಲವು ಪ್ರಯೋಜನಗಳು

ವಾಂತಿ, ಭೇದಿ, ಪ್ಲೂಗಳ ಪಿಡುಗು, ಊರಲ್ಲಿ ಹರಡಿರುವಾಗ ಮನೆ ಜನರೆಲ್ಲ ಬೆಳಿಗ್ಗೆ ಅರ್ಧ ಚಮಚೆ ಬೆಳ್ಳುಳ್ಳಿ ರಸವನ್ನು ಒಂದು ಚಮಚೆ ಜೇನಿನೊಂದಿಗೆ ಸೇವಿಸುವುದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚುವುದು ಮತ್ತು ಸ್ವಲ್ಪ ಸೋಂಕು ಇದ್ದರೂ ನಿವಾರಣೆಯಾಗುತ್ತದೆ.

ಮುಟ್ಟಿನ ಕಾಲದ ಸೊಂಟ ನೋವು, ಹೊಟ್ಟೆನೋವುಗಳಲ್ಲಿ ಮುಟ್ಟು ಶುರುವಾಗುವ ಒಂದು ವಾರದ ಮೊದಲೇ ಎರಡು ಬೆಳ್ಳುಳ್ಳಿಯ ಎಸಳು ಮತ್ತು ಅದರ ಎರಡು ಪಟ್ಟು ಬೆಲ್ಲ ಸೇರಿಸಿ ಅರೆದು, ಸೇವಿಸಿ. ಅದರೊಂದಿಗೆ ಅರ್ಧ ಗ್ಲಾಸ್ ಹಾಲು ಕುಡಿಯಬೇಕು. ಇದನ್ನು ಮುಟ್ಟಿನ ದಿನದವರೆಗೂ ಮುಂದುವರಿಸುವುದರಿಂದ ಹೊಟ್ಟೆ ನೋವು ಬರುವುದಿಲ್ಲ.

ಹೊಟ್ಟೆಯುಬ್ಬರ, ಅಜೀರ್ಣ ಇದ್ದರೆ ಅರ್ಧ ಚಮಚ ಬೆಳ್ಳುಳ್ಳಿ ರಸಕ್ಕೆ ಎಂಟು ಚಮಚ ಬಿಸಿ ನೀರು ಒಂದು ಚಿಟಿಕೆ ಸೈಂದವ ಲವಣ ಸೇರಿಸಿ ತೆಗೆದುಕೊಳ್ಳಬೇಕು.

ಸಂಧಿನೋವು ಇದ್ದಾಗ, ಬೆಳ್ಳುಳ್ಳಿ ಎರಡು ಎಸಳು, ಅರ್ಧ ಗ್ಲಾಸ್ ಹಾಲು ಮತ್ತು ನೀರು ಒಂದು ಗ್ಲಾಸ್ ಸೇರಿಸಿ, ಕುದಿಸಿ, ಇದನ್ನು ಅರ್ಧಗ್ಲಾಸಿಗೆ ಇಳಿಸಿ, ರಾತ್ರಿ ಮಲಗುವಾಗ ಕುಡಿಯಬೇಕು. ನೋವು ಹೆಚ್ಚಿರುವಾಗ ಇದನ್ನು ಬೆಳಗ್ಗೆ ಮತ್ತು ರಾತ್ರಿ ಕುಡಿಯಬೇಕು.

ಅಧಿಕ ರಕ್ತದೊತ್ತಡ, ಕಿವಿಯಲ್ಲಿ ಭೋರ್ ಎಂದು ಸಪ್ಪಳ ಕೇಳುವುದು ನಿದ್ರಾಹೀನತೆಯ ತೊಂದರೆಗಳಲ್ಲಿ ರಾತ್ರಿ ಮಲಗುವ ಮೊದಲು ಒಂದು ಇಡಿಯ ಬೆಳ್ಳುಳ್ಳಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದರಲ್ಲಿ ಹದಿನೈದು ಗ್ರಾಂ ಒಣದ್ರಾಕ್ಷಿ ಸೇರಿಸಿ, 200 ಮಿಲಿಯಷ್ಟು ಹಸುವಿನ ಹಾಲನ್ನು ಸೇರಿಸಿ, ಸಣ್ಣ ಬೆಂಕಿಯ ಮೇಲಿಟ್ಟು ಕುದಿಸಬೇಕು. ಇದನ್ನು ನಲವತ್ತೆರಡು ದಿನ ಅನುಸರಿಸಬೇಕು.

ಕೆಮ್ಮು ಮತ್ತು ಜ್ವರ : 4 ರಿಂದ 6 ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಜೇನಿನೊಂದಿಗೆ ದಿನಕ್ಕೆ ನಾಲ್ಕು ಸಾಲ ಸೇವಿಸಬೇಕು.

ways to lose weight fastest, health and fitness, health tips, health club, fitness club, health & fitness, physical fitness, fitness & nutrition, and 8 fitness, healthy lifestyle tips, fitness goals, eating tips, nutrition tip Tuesday, diet and nutrition advice, physical fitness program, cardiovascular fitness, nutrition tips, lifestyles fitness, dietary tips, wellness tips, healthy eating tips, exercise and fitness, healthy ways to lose weight, nutrition and fitness, health related fitness, healthy snack ideas for weight loss, exercise cardiovascular fitness, balanced fitness, corehealth and fitness, in shape fitness, wellness wednesday tips, men's health workout, firsthealth fitness, health advices, healthy lunch packing ideas, about health tips, 


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.