Types of head ache
migraine | head ache | migraine treatment | types of head ache
ಎಲ್ಲಾ ತಲೆ ನೋವು ಒಂದೇ ಅಲ್ಲಾ, ಯಾವ ಭಾಗದ ತಲೆ ನೋವಿಗೆ ಏನು ಪರಿಹಾರ ಇಲ್ಲಿದೆ ನೋಡಿ
ತಲೆಯನ್ನು ಕಾಡುವ ನೋವು
ತಲೆ ಇರುವ ವರೆಗೂ
ತಲೆ ನೋವು ತಪ್ಪಿದ್ದಲ್ಲ. ಬೇಡದ ಕೆಲಸದಿಂದ ತಪ್ಪಿಸಿಕೊಳ್ಳಲೂ
ಕೊಡ ಒಮ್ಮೊಮ್ಮೆ ಇದು ಕಾಣಿಸಿಕೊಳ್ಳುವುದು ಉಂಟು. ಚಿಕ್ಕ ಮಕ್ಕಳಿಗೆ
ಬರುವ ತಲೆ ನೋವು ಇತರರ ತಲೆ ನೋವಿಗಿಂತ ಭಿನ್ನ, ಈ ಹೋಮ್‌ವರ್ಕ್
ಮುಗಿಸಿ ಎಂದಾಗ ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆ ನೋವು ಈ ಮಕ್ಕಳೇ ಟಿ ವಿ ನೋಡುವಾಗ
ಕಾಣಿಸಿಕೊಳ್ಳುವುದಿಲ್ಲ. ಇದೆ ತೆರನಾದ ತಲೆ ನೋವು ಮಹಿಳೆಯರಲ್ಲೂ ಕಾಣಿಸಿಕೊಳ್ಳುತ್ತದೆ.
ಮನೆಯಲ್ಲಿ ಒಬ್ಬರೇ
ಇದ್ದಾಗ ಮಹಿಳೆಗೆ ಬರುವ ತಲೆ ನೋವು ಯಾರಾದರೂ ವದಂತಿ ಹಬ್ಬಿಸುವವರು ಸಿಕ್ಕಾಗ ಇರುವುದಿಲ್ಲ. ಜನರ
ಜಂಜಡದಲ್ಲಿ ಇದ್ದಾಗ ಬರುವ ತಲೆ ನೋವು ಹೊರಗೆ ಹೋಗಿ ತಂಗಾಳಿಯಲ್ಲಿ ಅಡ್ಡಾಡಿದ ನಂತರ ಇರುವುದಿಲ್ಲ.
ಹೊಟ್ಟೆ ಹಸಿವಿನಿಂದ ತಲೆ ನೋವು ಎನ್ನುವ ಮಗು ಏನಾದರೂ ತಿಂದ ನಂತರ ಮುಗುಳ್ನಗುತ್ತದೆ. ಅಂದರೆ
ಒಬ್ಬರಿಗೆ ಆಗುವ ತಲೆ ನೋವು ಮತ್ತೊಬ್ಬರಿಗೆ ಇರುವುದಿಲ್ಲ. ಒಬ್ಬೊಬ್ಬರ ತಲೆ ನೋವು ಕೂಡ ಭಿನ್ನ
ವಿಭಿನ್ನ.
ಇದೊಂದು ರೋಗ ಲಕ್ಷಣ :
ಕಣ್ಣಿಗೆ
ಆಯಾಸವಾದಾಗ, ಹಸಿವಾದಾಗ, ಸಾಮಾನ್ಯ
ಶೀತ ಉಂಟಾದಾಗ, ಆಹಾರದಲ್ಲಿ ಅಲರ್ಜಿಯಿಂದಾಗಿ ತಲೆ ನೋವು
ಕಾಣಿಸಿಕೊಳ್ಳುತ್ತದೆ.
ತಲೆ ನೋವಿಗೆ
ಹಲವಾರು ಕಾರಣಗಳಿವೆ. ನವೆ, ಕೋಪ, ದ್ವೇಷ,
ಭಿನ್ನಾಭಿಪ್ರಾಯ, ಉದ್ವೇಗ, ಒತ್ತಡ
ಮುಂತಾದವುಗಳಿಂದಲೂ ತಲೆ ನೋವು ಬರುತ್ತದೆ. ಆದರೆ, ಈ ರೀತಿಯ ತಲೆ
ನೋವನ್ನು ಕೆಲವು ಸಾಮಾನ್ಯ ಚಟುವಟಿಕೆಗಳ ಮೂಲಕ ಶಮನಗೊಳಿಸಬಹುದು. ಪ್ರವಾಸ ಹೋಗುವುದು, ತಲೆ ನೋವಿಗೆ ಕಾರಣರಾಗುವ ವ್ಯಕ್ತಿಗಳನ್ನು, ಪರಿಸ್ಥಿತಿಯನ್ನು
ತಡೆಯುವ ಮೂಲಕ ಇದಕ್ಕೆ ಪರಿಹಾರ ಸಾಧ್ಯ. ಆದರೆ, ಭಾವೋದ್ವೇಗದಿಂದ
ಉಂಟಾಗುವ ತಲೆ ನೋವು, ಆ ಕ್ಷಣಕ್ಕೆ ಮಾಯವಾದರೂ ಮರಳಿ ಬರುತ್ತದೆ.
ತಲೆ ನೋವಿನಲ್ಲಿ ಹಲವಾರು ವಿಧಗಳಿಗೆ
ಅವುಗಳೆಂದರೆ
1) ನಂಜಿನ (ಟಾಕ್ಸಿಕ್) ತಲೆ ನೋವು:
ವಿಪರೀತ
ಕುಡಿಯವವರು ತಲೆ ತಿರುಗುತ್ತಿರುತ್ತದೆ ಎನ್ನುತ್ತಿರುತ್ತಾರೆ. ತಲೆ ನೋವು ವಾದಾಗ ಈ ರೀತಿ ಅವರು
ಹೇಳುತ್ತಿರುತ್ತಾರೆ. ಇವರಿಗೆ ಕಣ್ಣುಗುಳ್ಳೆಗಳು ಉರಿದು ಹೋದವೇನೋ ಎನ್ನುವಂತಾಗುತ್ತಿರುತ್ತದೆ. ಇಂಥ ತಲೆ ನೋವನ್ನು ಯಾವ ಔಷಧವೂ ಶಮನಗೊಳಿಸಲಾರದು.
ಆಲ್ಕೋಹಾಲ್,
ಡ್ರಗ್ಸ್, ಕಾಫಿ, ಚಹದಿಂದ
ನಂಜನ ತಲೆ ನೋವು ಕಾಣಿಸಿಕೊಳ್ಳುತ್ತದೆ. ಅವುಗಳ ಸೇವನೆಯಿಂದ ದೇಹ ವ್ಯವಸ್ಥೆಯಲ್ಲಿ ನಂಜು
ಸೃಷ್ಟಿಯಾಗುತ್ತದೆ. ಆದರೆ, ಬಹುತೇಕರು ಕಾಫಿ, ಚಹದಿಂದ ತಲೆನೋವು ಕಡಿಮೆಯಾಗುತ್ತದೆ
ಎಂದುಕೊಂಡಿರುತ್ತಾರೆ. ಆದರೆ, ತಲೆ ನೋವನ್ನು ಕಡಿಮೆ ಗೊಳಿಸುವ ಬದಲು ಇವು
ಹೆಚ್ಚಾಗಿಸುತ್ತವೆ. ಇಂಥ ಪಾನೀಯಗಳನ್ನು ಅತಿಯಾಗಿ ಸೇವಿಸಿದರೆ, ತಲೆ
ನೋವು ನಿರಂತರವಾಗಿ ಕಾಣಿಸಿಕೊಳ್ಳುತ್ತದೆ.
2) ಸಂಧಿವಾತದಿಂದಾಗುವ ತಲೆ ನೋವು (RHEUMATICHEADACHE)
ಋತುಮಾನಗಳು
ಬದಲಾದಂತೆ ವಿಷೇಶವಾಗಿ ಬಿಸಿ ಹವಾಮಾನವು ಶೀತ ಹವಮಾನಕ್ಕೆ ತಿರುಗಿದಾಗ, ಕೆಲವರಲ್ಲಿ
ಈ ರೀತಿಯ ತಲೆ ನೋವು ಕಾಣಿಸಿಕೊಳ್ಳುತ್ತದೆ. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಲಾಗದವರಲ್ಲಿ
ರಾತ್ರಿ ಹಾಗೂ ಮುಂಜಾವಿನ ವೇಳೆ ತಲೆ ನೋವಿಗೆ ತುತ್ತಾಗುತ್ತಾರೆ. ಸೂರ್ಯೋದಯವಾದ ನಂತರ ತಲೆ ನೋವು
ತಂತಾನೆ ಕಡಿಮೆಯಾಗುತ್ತದೆ. ಇಂಥ ತಲೆ ನೋವನ್ನು ಸಹಿಸಿಕೊಳ್ಳಬಹುದು. ಈ ರೀತಿಯ ರೋಗ ಲಕ್ಷಣ
ಇರುವವರಿಗೆ ತಲೆ ಬುರುಡೆ, ದವಡೆಗಳಲ್ಲಿ ನೋವು ಉಂಟಾಗುತ್ತದೆ. ಭಾರಿ ಮಳೆ
ಮತ್ತು ಆದ್ರ್ರತೆ ಇದ್ದಾಗ ಈ ರೀತಿ ನೋವು ಉದ್ಭವಿಸುತ್ತದೆ.
3) ಶೀತದಿಂದಾಗುವ ತಲೆ ನೋವು:
ಕೀವು ಸುರಿಯುವಿಕೆ,
ದುರ್ವಾಸನೆ ಹಾಗೂ ಮೂಗಿನ ಹೊಳ್ಳೆಗಳಲ್ಲಿ ಶುಷ್ಕತೆ ಉಂಟಾದಾಗ ಈ ರೀತಿಯ ತಲೆ ನೋವು
ಬರುತ್ತದೆ. ಹಣೆ, ಉಬ್ಬು, ಮೂಗಿನಲ್ಲಿ
ಈ ನೋವಿನ ಅನುಭವ ಆಗುತ್ತದೆ. ಆದರೆ, ತಲೆ ಮತ್ತು ಮುಖದಲ್ಲಿ ಹೆಚ್ಚು ನೋವಿನ
ಅನುಭವಾಗುತ್ತದೆ. ಶೀನುವಾಗ ಹಾಗೂ ಸಿಂಬಳ ತೆಗೆದಾಗ ನೋವು ಸ್ವಲ್ಪ ಕಡಿಮೆ ಎನಿಸುತ್ತದೆ.
4) ಅಜೀರ್ಣದಿಂದಾಗುವ ತಲೆ ನೋವು :
ಅತಿಯಾಗಿ ಊಟ ಮಾಡಿ
ಹೆಚ್ಚು ನೀರು ಕುಡಿದಾಗ ಬರುವ ತಲೆ ನೋವಿದು. ತೀವ್ರ ನೋವಿನಿಂದ ಓಕರಿಕೆ ಉತ್ಪತ್ತಿಯಾಗಿ
ಕಿರಿಕಿರಿ ಉಂಟು ಮಾಡುತ್ತದೆ. ವಾಂತಿಯಾದ ನಂತರ ನೋವು ಕಡಿಮೆಯಾಗುತ್ತದೆ.
5) ಪ್ರತಿಫಲಿತ ತಲೆ ನೋವು :
ಋತು ಚಕ್ರದ ವೇಳೆ
ಗರ್ಭಕೋಶಕ್ಕೆ ಧಕ್ಕೆಯಾದಾಗ, ಗ್ಯಾಸ್ಟಿಕ್ ತೊಂದರೆಯಾದಾಗ ಹಾಗೂ ಕಣ್ಣಿಗೆ
ಆಯಾಸವಾದಾಗ ಈ ನೋವು ಸೃಷ್ಟಿಯಾಗುತ್ತದೆ.
6) ಭೀತಿಯ ತಲೆ ನೋವು :
ಅನಿರೀಕ್ಷತ
ಪರಿಸ್ಥಿತಿ ಎದುರಾದಾಗ, ಅಕಾಲಿಕ ಆಹಾರ ಸೇವನೆ, ಉದರ ಮುಂತಾದವುಗಳು ಈ ನೋವಿಗೆ ಕಾರಣವಾಗುತ್ತವೆ. ಈ ನೋವು ಹಣಿಯಲ್ಲಿ ಅಲ್ಪ
ಪ್ರಮಾಣದಲ್ಲಿದ್ದರೂ ಕಣ್ಣುಗಳನ್ನು ಒಳಗೊಂಡಂತೆ ಇಡಿ ತಲೆಯನ್ನೇ ವ್ಯಾಪಿಸುತ್ತದೆ.
7) ನರಶೂಲೆ ತಲೆ ನೋವು :
ಮುಖ, ಕಣ್ಣಿನ ಸುತ್ತು ಹಾಗು ಕೆನ್ನೆ ಮೇಲಿನ ನರಗಳಿಂದ ಈ ಬಾಧೆ ಉಂಟಾಗುವುದು. ನಿದ್ದೆ
ಸಾಲದಿದ್ದರೆ ಈ ನೋವು ಮತ್ತಷ್ಟು ಹೆಚ್ಚಾಗುತ್ತದೆ. ಕೆಲವೊಮ್ಮೆ ಓಕಲಿಕೆ ಮತ್ತು
ವಾಂತಿಯಾಗುವವರೆಗೂ ಈ ನೋವು ಇಳಿಯುವುದಿಲ್ಲ. ತಲೆ ಹಿಂಭಾಗಕ್ಕೂ ಇದು ವ್ಯಾಪಿಸುವ ಸಾಧ್ಯತೆ ಇದೆ.
8) ರಕ್ತಹೀನತೆಯಿಂದ ತಲೆ ನೋವು :
ರಕ್ತಹೀನತೆಯೂ ತಲೆ
ನೋವಿಗೆ ಕಾರಣವಾಗುತ್ತದೆ. ರಕ್ತಹೀನತೆಯಿಂದ ಖಿನ್ನತೆ, ಉದ್ವೇಗ,
ಜಡ್ಡುತನ ಉಂಟಾಗಿ ನಂತರ ತಲೆ ನೋವು ಶುರುವಾಗುತ್ತದೆ. ಋತುಸ್ರಾವದ ವೇಳೆ ಹೆಚ್ಚು
ರಕ್ತ ಹೊರ ಹೋಗುವುದರಿಂದ ಮಹಿಳೆಯರಲ್ಲಿ ಈ ಬಾಧೆ ಹೆಚ್ಚಾಗಿ ಕಂಡುಬರುತ್ತದೆ.
9) ಕ್ಲಸ್ಟರ್ ತಲೆ ನೋವು : -
ಈ ರೀತಿಯ ತಲೆ
ನೋವು ವಯಸ್ಕರಿಗಿಂತ ಅಪ್ರಾಪ್ತರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ನೋವು ಆಗಾಗ್ಗೆ ಬಂದು
ಮತ್ತೆ ಮಾಯವಾಗುತ್ತದೆಯಾದರು ಇದು ನಿರಂತರ. ಸಾಮಾನ್ಯವಾಗಿ ಮಲಗುವಾಗ ಹಾಗೂ ಬೆಳಗ್ಗೆ ಏಳುವ ಮುನ್ನ
ಈ ರೀತಿ ತೊಂದರೆ ಉಂಟಾಗುವುದು. ಹಠಾತ್ ಆಗಿ ಕಾಣಿಸಿಕೊಳ್ಳುವ ನೋವಿನಿಂದ ಗಾಢ
ನಿದ್ದೆಯಲ್ಲಿದ್ದವರೂ ಒಮ್ಮೆ ಎದ್ದು ಕುಳಿತುಕೊಳ್ಳುತ್ತಾರೆ. ಇದು ತಲೆ ಒಂದು ಪಾರ್ಶ್ವದಲ್ಲಿ
ಉಂಟಾಗುತ್ತದೆ. ಒಂದು ಕಣ್ಣು ಕೆಂಪು ಬಣ್ಣಕ್ಕೆ ತಿರುತ್ತದೆ.
ಇತರ ರೀತಿಯ ತಲೆ
ನೋವೆಂದರೆ ಸೈಕೋಜೆನಿಕ್ ತಲೆ ನೋವು, ಹಲ್ಲಿನ ಸಮಸ್ಯೆಯಿಂದಾಗುವ ತಲೆ ನೋವು,
ರಕ್ತನಾಳಗಳ ಸಂಕುಚಿತತೆ, ರಕ್ತದ ಒತ್ತಡ, ಹಿಸ್ಟೀರಿಯಾ
ಮುಂತಾದವುಗಳಿಂದಲೂ ತಲೆ ನೋವು ಬರುವುದುಂಟು.
ತಲೆ ನೋವಿಗೆ ಪರಿಹಾರ:
ಸಾಮಾನ್ಯ ಸೂಚನೆ:
·
ತಾಜ ಹಣ್ಣುಗಳು, ಹಸಿರು
ತರಕಾರಿ, ತರಕಾರಿ ಜ್ಯೂಸ್, ಆಹಾರದಲ್ಲಿ
ಮೊಳಕೆ ಕಾಳುಗಳ ಬಳಕೆಯಿಂದ ಸಾಧಾರಣ ತಲೆ ನೋವನ್ನು ತಡೆಯಬಹುದು. ತಲೆ ನೋವು ಸಂಪೂರ್ಣ ಗುಣವಾಗುವ
ವರೆಗೆ ಕೃತಕ ಹಾಗೂ ಫಾಸ್ಟ್ ಫುಡ್‌ಗಳನ್ನು ತಿನ್ನಬಾರದು.
·
ಯೋಗಾಸನ: ಮಕರಾಸನ, ವಜ್ರಾಸನ,
ಮತ್ತು ಶವಾಸನ ಮಾಡುವುದು ತಲೆ ನೋವು ನಿವಾರಣೆಗೆ ಸಹಕಾರಿ.
·
ಪ್ರಾಣಾಯಾಮ: ಪ್ರಾಣಾಯಾಮವು ತಲೆ ನೋವಿಗೆ
ಅತ್ಯುತ್ತಮ ಮದ್ದು.
ತಲೆ ನೋವಿಗೆ ಮನೆ ಮದ್ದು
·
ಅಜೀರ್ಣದಿಂದ ಉಂಟಾಗುವ ತಲೆ ನೋವು ನಿವಾರಣೆಗೆ
ಪ್ರತಿ ದಿನ ಬೆಳಗಿನ ಉಪಹಾರದ ವೇಳೆ ಎರಡು ಚೂರು ಸೇಬಿನ ಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಸುಮಾರು
- ಒಂದು ತಿಂಗಳ ಕಾಲ ಸೇವಿಸಬೇಕು.
·
ಕ್ಯಾರೆಟ್, ಬಿಟ್
ಹಾಗೂ ಬಸಳೆ ಸೊಪ್ಪನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಾಡಿದ ಒಂದು ಲೋಟ ಜ್ಯೂಸ್‌ಅನ್ನು ಉಪಹಾರದ
ವೇಳೆ ಒಂದು ತಿಂಗಳ ಕಾಲ ತೆಗೆದುಕೊಳ್ಳಿ.
·
ಉಷ್ಣದಿಂದಾಗ ತಲೆ ನೋವಿಗೆ ಈರುಳ್ಳಿ
ಚೂರುಗಳನ್ನು ಅಂಗಾಲಿಗೆ ತಿಕ್ಕಬೇಕು.
·
ಯಾವುದೇ ತೆರನಾದ ತಲೆ ನೋವಿಗೆ ಒಂದು ನಿಂಬೆ
ಹಣ್ಣು, ಶುಂಠಿ, ಹಾಗೂ ಜೇನು
ತುಪ್ಪವನ್ನು ಅರ್ಧ ಲೋಟ ಬಿಸಿ ನೀರಿಗೆ ಬೆರೆಸಿ ಸೇವಿಸುವುದು ಒಳ್ಳೆಯದು.
·
ಹಣೆಯ ಮೇಲೆ ಅಥವಾ ಹುಬ್ಬುಗಳ ನಡುವೆ ತಲೆನೋವು
ಇದ್ದರೆ ಶುಂಠಿಯ ಒಣಗಿದ ಬೇರನ್ನು ಕುಟ್ಟಿ ಪುಡಿ ಮಾಡಬೇಕು, ಅರ್ಧ
ಚಮಚ ಪುಡಿಯನ್ನು ನೀರಿನ ಜೊತೆ ಬೆರೆಸಿ ಕುದಿಸಿ ಲೇಪನವನ್ನಾಗಿಸಬೇಕು. ತೊಂದರೆಗೆ ತುತ್ತಾದ ಭಾಗದ
ಮೇಲೆ ಲೇಪಿಸಬೇಕು.
·
ತಲೆ ಹಿಂಭಾಗದಲ್ಲಿ ನೋವಿದ್ದರೆ ಅಳಲೇಕಾಯಿ
ಹಣ್ಣಿನ ಸಿಪ್ಪೆಯನ್ನು ಕುಟ್ಟಿ ಪುಡಿಮಾಡಬೇಕು, ಒಂದು ಚಮಚ
ಪುಡಿಯನ್ನು ಬಿಸಿ ಹಾಲು ಅಥವಾ ನೀರಿನಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು.

