drinking water | benefits of drinking water | benefits of drinking hot water

benefits of drinking water


drinking water | benefits of drinking water | benefits of drinking hot water

ನೀರನ್ನು ಯಾವಾಗ ಎಷ್ಟು ಕುಡಿದರೆ ದೇಹಕ್ಕೆ ಲಾಭ ನಿಮಗೆ ಗೊತ್ತೇ ?

ನೀರು ಆಹಾರವಲ್ಲ. ಆದರೆ, ಆಹಾರದ ಒಂದು ಭಾಗ. ಆದರೆ ನೀರಿಲ್ಲದ ಆಹಾರವನ್ನು ದೇಹ ಜೀರ್ಣಿಸಿಕೊಳ್ಳಲಾರದು. ನೀರೇ , ಬರಿ ನೀರನ್ನೇ ಕುಡಿದು ಬದುಕಲಾಗದು. ಬರಿ ನೀರು ಕುಡಿದೇ ಬದುಕ ಬಹುದು ಎಂದಾಗಿದ್ದರೆ, ರಾಜ್ಯ-ರಾಜ್ಯಗಳು, ದೇಶ-ದೇಶಗಳ ನಡುವೆ ಇರುವ ನೀರಿನ ಕಿತ್ತಾಟ ತಾರಕಕ್ಕೆ ಏರಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ನೀರಿಲ್ಲದೆ ಒಂದೇ ಒಂದು ದಿವಸ ಬದುಕುವುದು ಕಷ್ಟ.

ದೇಹಕ್ಕೆ ನೀರಿನ ಅಗತ್ಯ ಉಂಟಾದಾಗ ಅದು ಬಾಯಾರಿಕೆ ಮೂಲಕ ಕೇಳುತ್ತದೆ. ನೀರಿಲ್ಲದೆ ಊಟ ಮಾಡುವುದು ಬಹುಜನರಿಗೆ ಪ್ರಾಯಾಸದ ಕೆಲಸ, ತುತ್ತಿಗೊಂದು ಗುಟುಕು ನೀರು ಕುಡಿಯುವ ಭೂಪರಿದ್ದಾರೆ. ಆದರೆ, ಊಟದ ಮಧ್ಯ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. ಊಟಕ್ಕೆ ಮುಂಚೆ ಸುಮಾರು ಒಂದು ಗಂಟೆ ಮುಂಚೆ ನೀರು ಕುಡಿದು ಊಟದ ನಂತರ ಸುಮಾರು ಒಂದು ಗಂಟೆ ನಂತರ ನೀರು ಕುಡಿಯುವುದು ಉತ್ತಮ ಅಭ್ಯಾಸ. ಊಟದ ಮಧ್ಯೆ ನೀರು ಕುಡಿದರೆ ಜೀರ್ಣ ರಸಗಳು ದುರ್ಬಲವಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ನಿಸರ್ಗ ಚಿಕಿತ್ಸಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಊಟದ ಮಧ್ಯೆ ನೀರು ಕುಡಿದರೆ ಸಾಕಷ್ಟು ಊಟ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೂ ಕೆಲವು ಊಟದ ಮಧ್ಯೆ ನೀರು ಕುಡಿಯುವುದನ್ನು ಆಕ್ಷೇಪಿಸುತ್ತಾರೆ.

ಬೇಯಿಸಿದ ಆಹಾರ, ಹುಳಿ, ಉಪ್ಪು, ಖಾರಗಳಿಂದ ಕೂಡಿದ ಆಹಾರದಿಂದ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ ಎಂಬ ವಾದವೂ ಇದೆ. ನೈಸರ್ಗಿಕ ಆಹಾರವಾದ ಹಣ್ಣು-ಹಂಪಲು, ಗೆಡ್ಡೆ ಗೆಣಸುಗಳಿಗೆ ಈ ಪ್ರಶ್ನೆ ಉದ್ಭವವಾಗುವುದಿಲ್ಲ. ನೈಸರ್ಗಿಕ ಆಹಾರ ಸೇವಿಸುವವರಿಗೆ ಮಧ್ಯೆ ಮಧ್ಯೆ ನೀರು ಕುಡಿಯಬೇಕಾದ ಪ್ರಸಂಗವೇ ಬರುವುದಿಲ್ಲ. ಏಕೆಂದರೆ ನೈಸರ್ಗಿಕ ಆಹಾರದಲ್ಲೇ ಸಾಕಷ್ಟು ನೀರು ಇರುತ್ತದೆ.

'ಏನಕ್ಕೆ ಮೂರು ಲಿಟರ್ ನೀರು ಕುಡಿಯಿರಿ, ಐದು ಲಿಟರ್ ನೀರು ಕುಡಿಯಿರಿ, ಎಂದು ವೈದ್ಯರು ಸಲಹೆ ಮಾಡುತ್ತಿರುತ್ತಾರೆ. ಒಂದೊಂದು ಸಂಶೋಧನೆಗಳು ವಿಭಿನ್ನ ಪ್ರಮಾಣದ ನೀರು ಕುಡಿಯುವಂತೆ ಸಲಹೆ ಮಾಡುತ್ತಿರುತ್ತವೆ. ಎಲ್ಲಾ ಸಂಶೋಧನೆಗಳ ಸಾರಾಂಶವೂ ಹೆಚ್ಚು ನೀರು ಕುಡಿಯಬೇಕು ಎಂಬುದೆ. ಕೋಲಾದಂಥ ನೀರನ್ನೇ ಹೆಚ್ಚು ಕುಡಿಯುವ ಮಂದಿಗೆ ಶುದ್ಧ ನೀರನ್ನು ಕುಡಿಯುವ ಅಭ್ಯಾಸವೇ ತಪ್ಪಿಹೋದಂತಿದೆ. ಇಂಥ ಪಾನೀಯಗಳು ಶುದ್ಧ ನೀರಲ್ಲ. ನೀರಡಿಕೆಯಾದಾಗ ಶುದ್ದ ನೀರನ್ನು ಕುಡಿದರೆ ನೀರಡಿಕೆ ಇಂಗುವುದು.

* ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಬೆಡ್ ಕಾಫಿಯ ಪ್ರಭಾವದಿಂದಾಗಿ ಮುಂಜಾನೆದ್ದು ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇಲ್ಲ. ಅನಕ್ಷರಸ್ತ ಅಜ್ಜಯರು ಮುಂಜಾನೆ ನೀರು ಕುಡಿಯುವುದನ್ನು ಒಪ್ಪಿಕೊಳ್ಳುವುದಿಲ್ಲ.

ಪ್ರತಿದಿನ ಬೆಳಗ್ಗೆ ಎದ್ದಕೂಡಲೆ ಸುಮಾರು ಒಂದೂಕಾಲು ಲೀಟರ್ ನೀರು ಕುಡಿದು ವ್ಯಾಯಾಮ ಮಾಡಿದರೆ, ಬಿ.ಪಿ, ಡಯಾಬಿಟಿಸ್, ಬೊಜ್ಜು, ಮುಂತಾದವು ಸಮೀಪವೂ ಸುಳಿಯುವುದಿಲ್ಲ ಎಂದು ವೈದ್ಯರೊಬ್ಬರು ಹೇಳಿದ ವಿಷಯ ಪತ್ರಿಕೆಯಲ್ಲಿ ವರದಿಯಾಗಿತ್ತು. ಕೆಲವರಿಗೆ ಮುಂಜಾನೆ ನೀರು ಕುಡಿದರೆ ವಾಂತಿಯಾಗುತ್ತದೆ. ಈ ವಾಂತಿಗೆ ನೀರು ಕಾರಣವಲ್ಲ. ಪಿತ್ತ ಹೆಚ್ಚಾದಾಗ ನೀರು ಕುಡಿದರೆ, ಪಿತ್ತವನ್ನು ಅದು ಹೊರಹಾಕುತ್ತದೆ.

ನಮ್ಮ ಆಹಾರ ಕ್ರಮ ಸರಿಯಿಲ್ಲದಿರುವುದರಿಂದ ಪಿತ್ತ ಹೆಚ್ಚಾಗುತ್ತದೆ ವಿನಹಾ ನೀರಿನಿಂದ ಅಲ್ಲ. ಪ್ರತಿದಿನ ಬೆಳಗ್ಗೆ ಒಂದು ಲೋಟ ನೀರು ಕುಡಿದು ಈ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಊಟವಾದ ನಂತರವೂ ಗಂಟೆಗೊಮ್ಮೆ ಒಂದು ಸಣ್ಣ ಲೋಟದ ನೀರನ್ನು ಕುಡಿಯುತ್ತಿರಬೇಕು. ಇದು ಶರೀರದ ಶಾಖವನ್ನು ಕಡಿಮೆ ಮಾಡುತ್ತದೆ. ಒಮ್ಮೆಗೆ ಹೆಚ್ಚು ನೀರು ಕುಡಿದರೆ, ಮೂತ್ರ ಜನಕಾಂಗ ಎಲ್ಲವನ್ನೂ ಹೊರಕ್ಕೆ ಹಾಕಿಬಿಡುತ್ತದೆ. ಬೆಳಗ್ಗೆ ಹೆಚ್ಚು ನೀರು ಕುಡಿದು ನಂತರ ಅಲ್ಪ ಪ್ರಮಾಣದಲ್ಲಿ ಕುಡಿಯುತ್ತಿರಬೇಕು.

ತಣ್ಣೀರು ಬಾಯಾರಿಕೆಯನ್ನು ತಣಿಸುತ್ತದೆ. ಆದರೆ, ಆರೋಗ್ಯಕ್ಕೆ ಬಿಸಿನೀರೇ ಸೂಕ್ತ. ಹಲವಾರು ರೋಗಗಳು ನೀರಿನಿಂದ ಹರಡುತ್ತವೆ. ಬಿಸಿನೀರು ಕುಡಿಯುವುದರಿಂದ ಇದನ್ನು ತಪ್ಪಿಸಬಹುದು. ಮಳೆಗಾಲದಲ್ಲಿ, ನೆಗಡಿಯಿದ್ದಾಗ, ಬಾಣಂತಿಯರು, ಕರಿದ ಆಹಾರವನ್ನು ಸೇವಿಸಿದಾಗ ಬಿಸಿನೀರನ್ನೇ ಕುಡಿಯುವುದು ಒಳ್ಳೆಯದು.

drinking water, benefits of drinking water, benefits of drinking hot water, coconut water benefits, lemon water benefits, hot water for weight loss, benefits of alkaline water, lemon juice benefits, benefits of hot water, benefits of warm water, benefits of copper water, ginger water benefits, copper bottle benefits, hot lemon water benefits, hot lemon water,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.