home remedies for cough | cold | headache | acidity | loose motion |
home remedies for cough | cold | headache | acidity | loose motion |
ಸರ್ವ ರೋಗಕ್ಕು ನಿಮ್ಮ ಮನೆಯ ಹಿತ್ತಲಲ್ಲೆ ಇದೆ ಮದ್ದು (ಭಾಗ -1)
ಶುಂಠಿ
ಶುಂಠಿ
ರಸವನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಆಮಶಂಕೆ ಬೇಧಿಯಲ್ಲಿ ಉಪಯುಕ್ತ.
ಶುಂಠಿ ಪುಡಿಯನ್ನು ನೀರಿನೊಂದಿಗೆ ಅರೆದು ಹಣೆಗೆ ಹಚ್ಚುವುದರಿಂದ ತಲೆಭಾರದೊಂದಿಗಿರುವ ತಲೆನೋವು ನಿವಾರಣೆಯಾಗುತ್ತದೆ.
ಮೆಣಸು
ಮೆಣಸು, ಶುಂಠಿ ಮತ್ತು ಹಿಪ್ಪಲಿ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮಿನಲ್ಲಿ ಕಫ ಕರಗಿಸಲು ಉಪಯುಕ್ತವಾಗಿದೆ.
ತುಳಸಿ
ಕೃಷ್ಣ
ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು
ನಿವಾರಣೆಯಾಗುತ್ತದೆ.
ಕೃಷ್ಣ
ತುಳಸಿ ಎಲೆಯನ್ನು ಉಪ್ಪಿನೊಂದಿಗೆ ಜಜ್ಜಿ ರಸ ಹಚ್ಚುವುದರಿಂದ ತುರಿಕಜ್ಜಿ
(ಪಾಮ) ಗುಣವಾಗುವುದು.
ದೊಡ್ಡಪತ್ರೆ
ದೊಡ್ಡಪತ್ರೆ
ಎಲೆಯಲ್ಲಿ ಉಪ್ಪು ಸೇರಿಸಿ ಜಗಿಯುವುದರಿಂದ ಅಲರ್ಜಿಯಿಂದಾಗಿರುವ ಕೆಮ್ಮಿನಲ್ಲಿ ಉಪಯುಕ್ತ.
ದೊಡ್ಡಪತ್ರೆ ಎಲೆ ರಸದ ಸೇವನೆ ಮತ್ತು ಲೇಪನ ಶೀತಪಿತ್ತ ಚರ್ಮದ ಅಲರ್ಜಿಯಲ್ಲಿ ಉಪಯುಕ್ತ.
ಆಡುಸೋಗೆ
ಆಡುಸೋಗೆ
ಎಲೆ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮಿನಲ್ಲಿ ಕಫ ಹೊರಹಾಕಲು
ಉಪಯುಕ್ತವಾಗಿದೆ.
ಕಫವನ್ನು ಕರಗಿಸಿ ಶ್ವಾಸನಿರಾಳತೆಯನ್ನು ಒದಗಿಸುವ ಗುಣವನ್ನು ಹೊಂದಿರುತ್ತದೆ
ಅರಿಶಿನ
ಇದು
ಅಲರ್ಜಿ ಕಡಿಮೆ ಮಾಡುವ ಹಾಗೂ ರೋಗ ನಿರೋಧಕ ಗುಣವನ್ನ ಹೊಂದಿರುತ್ತದೆ.
ನೆಗಡಿ
ಇದ್ದಲ್ಲಿ ಚಿಟಕಿ ಅರಿಶಿನ ಪುಡಿಯನ್ನು ಬಿಸಿ ಹಾಲು ಅಥವಾ ನೀರಿನಲಿ ಸೇವಿಸುವುದು.
ಅರಿಶಿನ ಪುಡಿಯನ್ನು ಕೆಂಡದ ಮೇಲೆ ಹಾಕಿ ಹೊಗೆಯನ್ನು ಮೂಗಿನಿಂದ ತೆಗೆದುಕೊಂಡರೂ ನೆಗಡಿ ನಿವಾರಣೆಯಾಗುತ್ತದೆ.
ನೆಲನೆಲ್ಲಿ
ನೆಲನೆಲ್ಲಿಯ
ರಸದ ಸೇವನೆಯು ಕಾಮಾಲೆ ಹಾಗೂ ಜ್ವರದಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತದೆ.
ಗರಗ
ಕಾಮಾಲೆ
ರೋಗದಲ್ಲಿ ಗರಗದ ಸೊಪ್ಪಿನ ರಸ ಸೇವನೆ ಉಪಯುಕ್ತ.
ಕೂದಲು
ಉದುರುವಿಕೆಯಲ್ಲಿ ಗರಗ ಸೊಪ್ಪನ್ನು ಉಪಯೋಗಿಸಿ ತಯಾರಿಸಿದ ಎಣ್ಣೆ ಹಚ್ಚುವುದು ಉಪಯುಕ್ತ.
ತುಂಬೆ
ತುಂಬೆ
ಹೂವಿನ ರಸವನ್ನು ಮೂಗಿಗೆ ಬಿಡುವುದರಿಂದ ಅರೆತಲೆ ನೋವು ನಿವಾರಣೆಯಾಗುತ್ತದೆ.
ಕಾಮಾಲೆ
ರೋಗದಲ್ಲಿ ಎಲೆಯ ರಸವನ್ನು ಸೇವಿಸುವುದರಿಂದ ಕಜ್ಜಿ, ತುರಿಕೆ, ಜ್ವರದಲ್ಲಿ ಪ್ರಯೋಜನವಾಗುತ್ತದೆ.
ಮುಟ್ಟಿದರೆ ಮುನಿ
ಬೇರು
ಸಹಿತ ಗಿಡವನ್ನು ತೆಗೆದುಕೊಂಡು ಜಜ್ಜಿ ನೀರಿನಲ್ಲಿ ಕುದಿಸಿ ಶೋಧಿಸಿ ಸೇವಿಸುವುದರಿಂದ ಹೆಂಗಸರ ಮುಟ್ಟಿನಲ್ಲಿ ಆಗುವ ಅತಿಯಾದ
ರಕ್ತಸ್ರಾವವು ಕಡಿಮೆಯಾಗುತ್ತದೆ.
ಬೇರು
ಸಹಿತ ಗಿಡವನ್ನು ತೆಗೆದುಕೊಂಡು ಜಜ್ಜಿ ಮೊಸರಿನೊಡನೆ ಸೇವಿಸುವುದರಿಂದ ಉರಿಮೂತ್ರ
ನಿವಾರಣೆಯಾಗುತ್ತದೆ.
ದಾಸವಾಳ
ಕೆಂಪು
ದಾಸವಾಳದ ಹೂಗಳನ್ನು ಹುಳಿ ಮಜ್ಜಿಗೆಯೊಡನೆ ಅರೆದು ಕುಡಿಯುವುದರಿಂದ ನಿಂತುಹೋದ ಮುಟ್ಟು ಪ್ರಾರಂಭವಾಗುವುದಕ್ಕೆ ಸಹಾಯ
ಮಾಡುತ್ತದೆ.
ಹಲವು ಮಕ್ಕಳ ಬೇರು
ಹಲವು
ಮಕ್ಕಳ ಬೇರಿನ ಚೂರ್ಣವನ್ನು ಹಾಲಿನೊಡನೆ ಕುದಿಡಿ ಸೇವಿಸುವುದರಿಂದ ಬಾಣಂತಿಯರಲ್ಲಿ ಎದೆ ಹಾಲು ವೃದ್ಧಿಯಾಗುತ್ತದೆ.
ಜೀರಿಗೆ
ಜೀರಿಗೆ
ಕಷಾಯ ಮಾಡಿ ಕುಡಿಯುವುದರಿಂದ ಪಿತ್ತದಿಂದ ಆಗುವ ಹೊಟ್ಟೆನೋವು ಹಾಗೂ ಮುಟ್ಟಿನ ನೋವು ಕಡಿಮೆಯಾಗುತ್ತದೆ.
ಜೀರಿಗೆ ಪುಡಿಯನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಹೊಟ್ಟೆ ಉರಿ ನಿವಾರಣೆಯಾಗುತ್ತದೆ.
ಕೊತ್ತಂಬರಿ
ಕೊತ್ತಂಬರಿ
ಬೀಜ ಹುರಿದು ಪುಡಿ ಮಾಡಿ, ಹಾಲಿನೊಂದಿಗೆ ಕುದಿಸಿ ಶೋಧಿಸಿ ಕುಡಿಯುವುದರಿಂದ ಪಿತ್ತದಿಂದಾಗುವ ಹೊಟ್ಟೆನೋವು, ಹೊಟ್ಟೆಯುಬ್ಬರ ನಿವಾರಣೆಯಾಗುತ್ತದೆ.
ಲವಂಗ
ಜೀರ್ಣ
ಶಕ್ತಿಯನ್ನು ಹೆಚ್ಚಿಸುವ ಮತ್ತು ಜಂತುಹುಳುಗಳನ್ನು ನಾಶ ಮಾಡುವ ಗುಣಗಳನ್ನು ಹೊಂದಿರುತ್ತದೆ.
ಲವಂಗವನ್ನು
ಜಜ್ಜಿ ಹಲ್ಲುಗಳ ಮಧ್ಯೆ ಒತ್ತರಿಸಿಕೊಳ್ಳುವುದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ.
ದಾಳಿಂಬೆ
ಅತಿಸಾರ
(ಭೇದಿ)ದಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಕಷಾಯ ತಯಾರಿಸಿ ಸೇವಿಸುವುದರಿಂದ ಉಪಯೋಗವಾಗುವುದು.
ದಾಳಿಂಬೆ
ಚಿಗುರು ಎಲೆಗಳ ರಸ ಮಕ್ಕಳ ಭೇದಿಯಲ್ಲಿ ಉಪಯುಕ್ತ.
ದಾಳಿಂಬೆ
ಹೂವಿನಿಂದ ರಸ ತೆಗೆದು ಹನಿಗಳನ್ನು ಮೂಗಿಗೆ ಹಾಕುವುದರಿಂದ ಮೂಗಿನಿಂದಾಗುವ ರಕ್ತಸ್ರಾವವು
ನಿಲ್ಲುತ್ತದೆ.
ಲಕ್ಕಿ (ನಿರ್ಗುಂಡಿ)
ಲಕ್ಕಿಸೊಪ್ಪು
ಹಾಗೂ ಶುಂಠಿಯ ಕಷಾಯ ತಯಾರಿಸಿ ಸೇವಿಸುವುದರಿಂದ ಕೀಲುನೋವು ಗುಣವಾಗುತ್ತದೆ.
ಎಲೆಗಳಿಂದ
ಶಾಖ ತೆಗೆದುಕೊಳ್ಳುವುದರಿಂದ ಮಾಂಸಖಂಡಗಳ ಹಾಗೂ ಕೀಲು ನೋವು ನಿವಾರಣೆಯಾಗುತ್ತದೆ.
ಅಮೃತ ಬಳ್ಳಿ
ಅಮೃತಬಳ್ಳಿಯ
ರಸ ಅಥವಾ ಕಷಾಯ ಸೇವಿಸುವುದರಿಂದ ಜ್ವರ ನಿವಾರಣೆಯಾಗುತ್ತದೆ
ಕೀಲು
ನೋವಿಗೆ ಅಮೃತದ ಕಾಂಡ ಮತ್ತು ಶುಂಠಿ ಪುಡಿಯಿಂದ ತಯಾರಿಸಿದ ಕಷಾಯ
ಉಪಯುಕ್ತ.
ಅಮೃತ
ಬಳ್ಳಿಯು ಸೋಂಕು ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
ಬಾಳೆ
ಬಾಳೆದಿಂಡಿನ
ರಸ / ಪಲ್ಯ ಸೇವಿಸುವುದರಿಂದ ಮೂತ್ರ ಕಟ್ಟುವುದು ಅಥವಾ ಮೂತ್ರಶ್ನರಿಯಲ್ಲಿ
(ಮೂತ್ರನಾಳದ / ಕಿಡ್ನಿಯಲ್ಲಿನ ಕಲ್ಲು) ಉಪಯುಕ್ತವಾಗುತ್ತದೆ.
ಗರಿಕೆ
ಹಗಲು
ರಾತ್ರಿ ನೆನೆಇಟ್ಟು ಗರಿಕೆಯನ್ನು ಶೋಧಿಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಗರಿಕೆ
ಬೇರಿನ ಕಷಾಯ ತಯಾರಿಸಿ ಸೇವಿಸುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ.
ಬೇವು
ರಕ್ತ
ಶುದ್ದಿ ಗುಣವನ್ನು ಹೊಂದಿರುವುದರಿಂದ ಚರ್ಮರೋಗಗಳಲ್ಲಿ ಉಪಯುಕ್ತ.
ಯುಗಾದಿ
ಕಾಲದಲ್ಲಿ ಬೇವಿನ ಎಲೆ ಸೇವನೆ ಬಹಳ ಪರಿಣಾಮಕಾರಿಯಾಗಿರುತ್ತದೆ.
ಬೇವಿನ
ಸೊಪ್ಪನ್ನು ಅರಿಶಿನದೊಂದಿಗೆ ಅರೆದು ಚರ್ಮಕ್ಕೆ ಹಚ್ಚುವುದರಿಂದ ಶೀತಪಿತ್ತ (ತುರಿಕೆ, ಕಜ್ಜಿ)ಯಲ್ಲಿ ಉಪಯುಕ್ತವಾಗುತ್ತದೆ.
ಹಿರೇಮದ್ದು
ನರಗಳಿಗೆ
ಬಲ ಕೊಡುವ, ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತದೆ.
ಹಿರೇಮದ್ದಿನ
ಬೇರಿನ ಪುಡಿಯನ್ನು ಬಿಸಿ ಹಾಲಿನೊಡನೆ ಸೇವಿಸುವುದರಿಂದ ದೇಹವು ಪುಷ್ಟಿಗೊಳ್ಳುತ್ತದೆ.
ನಿದ್ರಾಹೀನತೆಯಲ್ಲಿ, ಮನಸ್ಸಿನ ಉದ್ವೇಗದಲ್ಲಿ ಉಪಯುಕ್ತ.
ಬೆಳ್ಳುಳ್ಳಿ
ಬೆಳ್ಳುಳ್ಳಿಯು
ರಕ್ತದೊತ್ತಡವನ್ನು ಹಾಗೂ ರಕ್ತನಾಳದ ಕೊಬ್ಬನ್ನು ಕಡಿಮೆ ಮಾಡುವ ಗುಣವನ್ನು
ಹೊಂದಿರುತ್ತದೆ.
ಬೆಳ್ಳುಳ್ಳಿಯನ್ನು
ಜಜ್ಜಿ ಹಾಲಿನಿಂದ ಕಷಾಯ ತಯಾರಿಸಿ ಉಪಯೋಗಿಸಬಹುದು.
ಬಿಲ್ವಪತ್ರೆ
ಬಿಲ್ವಪತ್ರೆಯ
ಹಣ್ಣಿನ ತಿರುಳನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶೋಧಿಸಿ ಸೇವಿಸುವುದರಿಂದ
ಭೇದಿ / ರಕ್ತಭೇದಿಯಲ್ಲಿ ಪರಿಣಾಮಕಾರಿಯಾಗುತ್ತದೆ.
ಬಿಲ್ವಪತ್ರೆಯ
ತಿರುಳನ್ನು ಅರೆದು ಬಿಸಿಮಾಡಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.
ಈರುಳ್ಳಿ
ಬಿಳಿ
ಈರುಳ್ಳಿಯು ವೀರ್ಯವೃದ್ಧಿ ಮಾಡುವ,
ರಕ್ತ ಸಂಚಾರ
ಸುಗಮಗೊಳಿಸುವ ಹಾಗೂ ತಲೆನೋವು ನಿವಾರಣೆ ಮಾಡುವ ಗುಣಗಳನ್ನು
ಹೊಂದಿರುತ್ತದೆ.
ಈರುಳ್ಳಿ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಕಿವಿಗೆ ಬಿಡುವುದರಿಂದ ಕಿವಿನೋವು ಗುಣವಾಗುತ್ತದೆ.
ಬಜೆ
ಬಜೆಯನ್ನು
ಜೇನುತುಪ್ಪದಲ್ಲಿ ತೇಯ್ದು ನಾಲಿಗೆ ಮೇಲೆ ಲೇಪಿಸುವುದರಿಂದ ಮಕ್ಕಳಲ್ಲಿ ತೊದಲುವಿಕೆ
ನಿವಾರಣೆಯಾಗುತ್ತದೆ.

