pimples | acne | home remedies for pimples | acne types

home remedies for pimples


pimples | acne | home remedies for pimples | acne types 

ಮೊಡವೆ ಒಂದು ಚರ್ಮ ರೋಗವೇ, ಮೊಡವೆಯನ್ನು ಬುಡದಿಂದ ಇಲ್ಲವಾಗಿಸುವ ಸುಲಭ ಉಪಾಯ

ಮನುಷ್ಯ ಹಾಗೂ ಪ್ರಾಣಿಗಳ ದೇಹದ ಹೊರ ಕವಚವೇ ಚರ್ಮ. ದೇಹ ರಕ್ಷಣೆಗೆ ನಿಸರ್ಗದತ್ತವಾಗಿ ದೊರೆತ ಕೊಡುಗೆ ಇದು. ಹವಾಮಾನಕ್ಕೆ ಅನುಗುಣವಾಗಿ ಚರ್ಮ ರಚನೆಯಾಗುತ್ತದೆ. ಕೆಲವು ವಾತಾವರಣದಲ್ಲಿ ಜೀವಿಸುವ ಪ್ರಾಣಿಗಳ ಚರ್ಮ ಗಟ್ಟಿಯಾಗಿದ್ದರೆ, ಉಳಿದೆಡೆ ಜೀವಿಸುವ ಪ್ರಾಣಿಗಳ ಚರ್ಮ ಮೃದುವಾಗಿರುತ್ತದೆ. ಆದರೆ, ವಿಶ್ವದ ಯಾವುದೇ ಭಾಗದಲ್ಲಿರುವ ಮನುಷ್ಯನ ಚರ್ಮ ಬಹುತೇಕ ಒಂದೇ ರೀತಿ ಇದೆ. ಆದರೆ, ಬಣ್ಣದಲ್ಲಿ ಮಾತ್ರ ವ್ಯತ್ಯಾಸ ಕಾಣಬಹುದು. ಹವಾಮಾನ ಸ್ಥಿತಿಗಳಿಂದ ವ್ಯಕ್ತಿಯ ಚರ್ಮದ ಬಣ್ಣ, ಸ್ವರೂಪ ನಿರ್ಧಾರವಾಗುತ್ತದೆ.

ಶೀತ ಪ್ರದೇಶದಲ್ಲಿ ವಾಸಿಸುವವವರ ಚರ್ಮ ಸುಂದರವಾಗಿದ್ದು, ಹೆಚ್ಚು ಸಂವೇದನೆಗೆ ಒಳಪಡುತ್ತದೆ. ಪರಿಣಾಮವಾಗಿ ಉಷ್ಣವಲಯದ ದೇಶಗಳಿಗೆ ಈ ಜನರು ಬಂದಾಗ ತೀವ್ರ ಬಳಲುತ್ತಾರೆ. ಉಷ್ಣ ವಲಯದಲ್ಲಿರುವ ಹಾಗೂ ಕಪ್ಪು ಚರ್ಮದ ಜನರು ಚರ್ಮ ರೋಗಕ್ಕೆ ಬೇಗ ತುತ್ತಾಗುತ್ತಾರೆ.

ಚರ್ಮದಲ್ಲೂ ರಕ್ತನಾಳಗಳು, ನರಗಳು, ಬೆವರು ಗ್ರಂಥಿಗಳು, ಮುಂತಾದವು ಇರುತ್ತವೆ. ದೇಹದ ಅತ್ಯಂತ ಪ್ರಮುಖ ಅಂಗ ಇದಾಗಿದ್ದು, ಬದುಕಲು ಚರ್ಮ ಬೇಕೇ ಬೇಕು. ದೇಹ ರಕ್ಷಣೆ, ಹವಾ ನಿಯಂತ್ರಣ, ಸ್ಪರ್ಶ ಸಂವೇದನೆ ಇವು ಚರ್ಮದ ಪ್ರಮುಖ ಕಾರ್ಯ.

ಕೆಲವೊಮ್ಮೆ ಇದು ಉಸಿರಾಟದ ಅಂಗವಾಗಿಯೂ ಇದು ಕಾರ್ಯ ನಿರ್ವಹಿಸುತ್ತದೆ , ಮತ್ತು ಬೊಜ್ಜು ಚರ್ಮದಲ್ಲಿ ಶೇಖರಿಸಲ್ಪಡುತ್ತವೆ. ತ್ಯಾಜ್ಯವನ್ನು ಹೊರಹಾಕುವ ಚರ್ಮ ಕಿಡ್ನಿಗಳಿಗೆ ಸಂಗಾತಿ ಇದ್ದಂತೆ. ಚರ್ಮದ ಕಾರ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದಾಗ ಚರ್ಮ ರೋಗ ಕಾಣಿಸಿಕೊಳ್ಳುತ್ತದೆ. ಅವುಗಳು ಈ ಮುಂದಿನಂತಿವೆ.

 

ಮೊಡವೆ

ಮೊಡವೆ ಇದೊಂದು ಚರ್ಮ ರೋಗವಾಗಿದ್ದು, ಮುಖ ಮತ್ತು ಕುತ್ತಿಗೆಯಲ್ಲಿ ಇವು ಮೂಡುತ್ತವೆ. ಅಪ್ರಾಪ್ತ ವಯಸ್ಕರಲ್ಲಿ ಇದು

ಆರಂಭವಾದರೆ, ಪ್ರಾಪ್ತರಾಗುತ್ತಿದ್ದಂತೆ ಇವು ಮಾಯವಾಗುತ್ತವೆ. ಅಪ್ರಾಪ್ತರಲ್ಲಿ ಕಂಡು ಬರುವ ಮೊಡವೆಗಳನ್ನು ಅಕ್ನಿ ವಲ್ಗರಿಸ್ ಎನ್ನಲಾಗುತ್ತದೆ. ಅಕ್ನಿ ಇನ್‌ಡುರಟಾ ಎಂಬ ಮತ್ತೊಂದು ಬಗೆಯ ಮೊಡವೆಗಳು 25 ವರ್ಷಗಳ ನಂತರ ಬರುತ್ತವೆ. ಕೆಂಪು ಕೀವಿ ಹೊರಬೀಳುವುದಲ್ಲದೆ ವಿಪರೀತ ನೋವು ಉಂಟಾಗುತ್ತದೆ. ಈ ರೀತಿಯ ಮೊಡವೆಗಳು ಮುಖದ ಅಂದಕ್ಕೆ ಧಕ್ಕೆ ಉಂಟು ಮಾಡುತ್ತವೆ.

ಯಾವುದೇ ಬಗೆಯ ಮೊಡವೆಯಾದರೂ ಕಿರಿಕಿರಿ ಉಂಟಾಗುತ್ತದೆಯಲ್ಲದೆ, ಅಲ್ಪಕಾಲದಲ್ಲಿ ಇವನ್ನು ಗುಣ ಪಡಿಸಲು ಕಷ್ಟವಾಗುತ್ತದೆ. ಚಿಕಿತ್ಸೆ ಮೂಲಕ ಇದನ್ನು ಗುಣ ಪಡಿಸಬಹುದು.

ಮೊಡವೆಗಳ ನಿವಾರಣೆ

ಆಗಾಗ ತಣ್ಣೀರಿನಲ್ಲಿ ಮುಖವನ್ನು ತೊಳೆಯುತ್ತ ಇರಬೇಕು. ಒರೆಸದೇ ಹಾಗೆ ಜಡಬೇಕು,

ಮೆಂತ್ಯ ರುಬ್ಬ ಮೊಸರಿನಿಂದ ಕಲಸಿ ಹಚ್ಚಿದರೆ ಮೊಡವೆ ಕಡಿಮೆಯಾಗುವುದು.

ಐಸ್‌ಕ್ಯೂಬ್‌ನಿಂದ ಆಗಾಗ ಮುಖವನ್ನು ತೊಳೆಯುತ್ತ ಇರಿ,

ಊಟವಾದ ಮೇಲೆ ನಮ್ಮ ಕೈಯನ್ನು ಚೆನ್ನಾಗಿ ತೊಳೆದು ಮುಖವನ್ನು ಒರೆಸಬೇಕು.

ಮೊಡವೆಗೆ ಚಿಕಿತ್ಸೆ :

ಸಾಮಾನ್ಯ ಸೂಚನೆ: ಅತಿಯಾದ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿಡಬೇಕು. ಯದ್ವ ತದ್ವ ತಿನ್ನುವುದನ್ನು ಸಂಪೂರ್ಣ ಬಿಡುವುದೇ ಒಳ್ಳೆಯದು. ಹದಿಹರೆಯದಲ್ಲಿ ಆಹಾರ ಸೇವನೆ ಸಹಜವಾಗಿಯೇ ಹೆಚ್ಚಾಗಿರುತ್ತದೆಯಲ್ಲದೆ, ಆಹಾರ ಸೇವನೆಗೆ ಮಿತಿ ಹೇರಲು ಕಷ್ಟವಾಗುವುದರಿಂದ ದೈಹಿಕ ಶ್ರಮ ವ್ಯಯವಾಗುವ ಅಟೋಪಚಾರಗಳಲ್ಲಿ ಭಾಗವಹಿಸುವುದು ಸೂಕ್ತ. ಮೊಡವೆಗೆ ಅತ್ಯಂತ ಸೂಕ್ತ ಮದ್ದೆಂದರೆ ವ್ಯಾಯಾಮವೆ.

ಹದಿಹರೆಯದ ಹುಡುಗ ಹಾಗೂ ಹುಡುಗಿಯರಿಗೆ ಡಯಟ್‌ ಆಚರಿಸುವುದು ಕಷ್ಟವಾಗುವುದರಿಂದ ಅವರು ಯಥೇಚ್ಚ ಹಣ್ಣುಗಳು, ಹಣ್ಣಿನ ರಸ, ತಾಜಾ ತರಕಾರಿ, ತರಕಾರಿ ಜ್ಯೂಸ್‌ಅನ್ನು ಬಹುದೀರ್ಘ ಕಾಲ ತೆಗೆದುಕೊಳ್ಳುವುದು ಅಗತ್ಯ. ಜೀರ್ಣವಾಗುವ ಕಚ್ಚಾ ಅಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕರ.

ಮೊಡವೆ ಸಂಪೂರ್ಣ ಗುಣವಾಗುವವರೆಗೆ ಕೊಬ್ಬು, ಮಸಾಲೆ, ಎಣ್ಣೆ ಪದಾರ್ಥ, ಉಪ್ಪಿನಕಾಯಿ, ಚಹ, ಕಾಫಿ, ಐಸ್ ಕ್ರೀಮ್, ಕೋಲಾದಂಥ ಪಾನೀಯಗಳು, ಬ್ರೆಡ್, ಬಿಸ್ಕಟ್ಟೆ ಮತ್ತು ಸ್ವೀಟ್‌ಗಳ ಸೇವನೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು.

ಮೊಡವೆ ಗುಣಪಡಿಸಲು ವಿಟಮಿನ್ ಎ ಮತ್ತು ವಿಟಮಿನ್ ಎ ಬಹಳ ಮುಖ್ಯ. ಈ ಲವಣಾಂಶಗಳು ಮೊಳಕೆ ಹೊಡೆದ ಕಾಳುಗಳು, ಹಸಿರು ತರಕಾರಿ ಹಾಗೂ ಹಣ್ಣುಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ. ಯಾವುದೇ ತೆರನಾದ ಚರ್ಮ ರೋಗ ಕಂಡು ಬಂದರೂ ಅದು ಅಜೀರ್ಣದಿಂದಲೇ ಆರಂಭವಾಗುತ್ತದೆ ಎಂಬುದು ಮುಖ್ಯವಾದುದು. ಚರ್ಮರೋಗಗಳು ತೀವ್ರ ಸ್ವರೂಪ ಪಡೆಯುವ ಮುನ್ನ ಸಹಜ ಚಿಕಿತ್ಸೆಗಳ ಮೂಲಕ ನಿವಾರಿಸಬಹುದು.

ಹೈಡೋಥೆರಪಿ: 

ತುಳಸಿ ಎಲೆಗಳನ್ನು ಬೇಯಿಸಿದ ನೀರಿನಿಂದ ಮುಖ ತೊಳೆದರೆ ಮೊಡವೆ ಕಡಿಮೆಯಾಗುತ್ತವೆ.

ಯೋಗಾಸನ: 

ಮತ್ಸಾಸನ, ಧನುರಾಸನ, ಯೋಗಮುದ್ರ, ಭುಜಂಗಾಸನ, ಸಿಂಹಮುದ್ರ ಮುಂತಾದವುಗಳನ್ನು ನಿಯಮಿತವಾಗಿ ಮಾಡುತ್ತಿದ್ದರೆ ಮೊಡವೆ ಬರುವುದಿಲ್ಲ.

ಮನೆ ಔಷಧಿಗಳು

ತುಳಸಿ ಎಲೆಗಳನ್ನು ಸುಮಾರು 5 ನಿಮಿಷಗಳ ಕಾಲ ಬೇಯಿಸಿ ಮುಖವನ್ನು ತೊಳೆಯಿರಿ.

ಚರ್ಮ ರೋಗ ನಿವಾರಣೋಪಾಯಗಳು

ಒಣಗಿದ ಕರಿಬೇವಿನ ಎಲೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಅದ್ದಿ ಸುಮಾರು ದಿನಗಳು ಬಿಸಿಲಿಗೆ ಇಡಿ. ನಂತರ ಈ ಎಣ್ಣೆಯಿಂದ ಮಸಾಜ್ ಮಾಡಿ, ಸ್ನಾನ ಮಾಡುವ ಮುನ್ನ ಸುಮಾರು 1ರಿಂದ 2 ಗಂಟೆಗಳ ಕಾಲ ಬಿಡಿ. ಈ ರೀತಿ ಮಾಡುವುದರಿಂದ ಚರ್ಮರೋಗಗಳು ಕಾಣಿಸಿಕೊಳ್ಳಲಾರವು.

ಕತ್ತಿನ ಸುತ್ತ ಕಪ್ಪು ನಿವಾರಣೆ

·         ನಿಂಬೆ ಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು, ಹರಿಶಿನ ಸೇರಿಸಿ ಹಚ್ಚಿ.

·         ವಾರಕ್ಕೆ ಒಂದು ಸಲ ಬೆಣ್ಣೆಯಿಂದ ಉಜ್ಜಿ.

·         ಕುತ್ತಿಗೆಗೆ ಸಂಬಂಧಪಟ್ಟ ಕೆಲವು ವ್ಯಾಯಾಮಗಳನ್ನು ಮಾಡುತ್ತಾ ಇರಿ.

·         ಮೆಂತ್ಯ ಸೊಪ್ಪಿನ ರಸದ ಜೊತೆಗೆ ಸೇರಿಸಿ Herbal Powder Pack ಮಾಡಿ ವಾಶ್‌ ಮಾಡಿ.


pimples, acne, home remedies for pimples, acne types, pimples on face, pimples on forehead, tiny bumps on face, acne types, acne face, pimple on eyelid, types of pimples, blemishes on face, bumps on skin, small bumps on face, home remedies for acne, small pimples on face, pimple on lip, forehead acne, bumps on face, causes of acne, butt pimples, pimple in nose, types of acne scars, pimples on head, home remedies for acne scars, white pimples on face, pimples on chin, pimples on scalp


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.