Health Tips Kannada
ಯಾವುದರಲ್ಲಿ ಹೆಚ್ಚು ಪೋಷಕಾಂಶ ಇದೆ ಸಸ್ಯಹಾರದಲ್ಲೋ ಮಾಂಸಾಹಾರದಲ್ಲೋ
ಪೌಷ್ಟಿಕಾಂಶದ ಕೊರತೆ ನಿವಾರಣೆಯಿಂದ ಉತ್ತಮ ಆರೋಗ್ಯ
ಮಾಂಸಾಹಾರಕ್ಕಿಂತ
ಶಾಖಾಹಾರ ಹೆಚ್ಚು ಆರೋಗ್ಯಕರ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಆದರೆ ವೈದ್ಯರು
ಪೌಷ್ಟಿಕಾಹಾರ ತಜ್ಞರು ಮತ್ತು ಸಾಮಾನ್ಯ ಜನರಲ್ಲಿ ಉತ್ತರವಿಲ್ಲದ ಪ್ರಶ್ನೆಗಳು ಹಾಗೇ
ಉಳಿಯುತ್ತವೆ.
ಹಾಲು ಮತ್ತು
ಹಾಲಿನ ಉತ್ಪನ್ನಗಳು ಒಳಗೊಂಡ ಆಹಾರವೇ ಶಾಖಾಹಾರ ಎಂದು ಕೆಲವರು ಭಾವಿಸಿದರೆ ಮೊಟ್ಟೆ ಶಾಖಾಹಾರವೇ
ಎಂಬ ವಾದ ಮಂಡಿಸಿ ಶಾಖಾಹಾರಿಗಳೆಂದು ಹೇಳಿಕೊಳ್ಳುವರು ಹಲವರು.
ಹಣ್ಣು ಮತ್ತು
ತರಕಾರಿಗಳನ್ನು ಸೇವಿಸಿ ಇದೇ ಆರೋಗ್ಯಕ್ಕೆ ಉತ್ತಮ ಎಂದು ಭಾವಿಸಿರುವವರೂ ಇದ್ದಾರೆ. ಆದರೆ ಯಾವ
ಶಾಖಾಹಾರಿಗಳಾದರೂ ಮಾಂಸಾಹಾರಿಗಳಾದರೂ ಒಂದೋ ಹಲವೋ ಪೌಷ್ಟಿಕಾಂಶದ ಕೊರತೆ ಎದುರಾಗುವುದು
ತಪ್ಪುವುದಿಲ್ಲ.
ಶಾಖಾಹಾರಿಗಳಿಗೆ
ಹೆಚ್ಚು ಪೌಷ್ಟಿಕಾಂಶ ದೊರೆಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸೋಯಾಬೀನ್ಸ್ ಹೊರತುಪಡಿಸಿ
ಧಾನ್ಯ, ಬೇಳೆ ಕಾಳುಗಳಲ್ಲಿ ಎಲ್ಲ ಪೌಷ್ಟಿಕಾಂಶಗಳೂ
ಇರುವುದಿಲ್ಲ. ಆದರೆ ಸ್ವಲ್ಪ ಎಚ್ಚರಿಕೆಯಿಂದ ವಿವಿಧ ಕಾಳು ಬೇಳೆ ಮತ್ತು ತರಕಾರಿಗಳನ್ನು
ಒಟ್ಟುಗೂಡಿಸಿ ಸೇವಿಸುವುದರಿಂದ ಎಲ್ಲ ಪೌಷ್ಟಿಕಾಂಶಗಳು ದೇಹಕ್ಕೆ ಲಭಿಸುತ್ತವೆ.
ಪೌಷ್ಟಿಕಾಂಶ
ಮೊಟ್ಟೆಯಲ್ಲಿ
ಶರೀರಕ್ಕೆ ಅವಶ್ಯವಿರುವ ಹೆಚ್ಚು ಪೌಷ್ಟಿಕಾಂಶಗಳು ದೊರೆಯುತ್ತವೆ ಎಂದು ಪೌಷ್ಟಿಕಾಂಶ ತಜ್ಞರು
ಹೇಳುತ್ತಾರೆ. ವಯಸ್ಕರಲ್ಲಿ ಅವರ ತೂಕದ ಒಂದು ಕೆ.ಜಿ.ಗೆ 0.70
ಗ್ರಾಮಿನಷ್ಟು ಪೌಷ್ಟಿಕಾಂಶ, 1.0 ನಷ್ಟು ತರಕಾರಿಯ ಪೌಷ್ಟಿಕಾಂಶದ
ಅವಶ್ಯವಿರುತ್ತದೆ. ಶರೀರಕ್ಕೆ ಹಾಲು, ಕೆನೆ, ಬೆಣ್ಣೆ,
ತುಪ್ಪ ದೊರೆಯದಿದ್ದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹಾಲು ಮತ್ತು
ಮೊಟ್ಟೆ ಸೇವಿಸದ ಶಾಖಾಹಾರಿಗಳು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದರಲ್ಲಿ ಸಂದೇಹವಿಲ್ಲ. ಬೆಳೆಯುತ್ತಿರುವ
ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸ್ತನ್ಯಪಾನ ಮಾಡಿಸುವವರಿಗೆ ಪೌಷ್ಟಿಕಾಂಶದ ಆಹಾರ
ಲಭ್ಯವಿಲ್ಲದಿದ್ದರೆ ಕನಿಷ್ಟ ಅದಕ್ಕೆ ಪರ್ಯಾಯ ವ್ಯವಸ್ಥೆ ಎಂದರೆ ಪೌಷ್ಟಿಕಾಂಶಉಳ್ಳ ಟಾನಿಕ್ ಅಥವಾ
ಕ್ಯಾಪ್ಸೂಲ್‌ಗಳನ್ನು ತೆಗೆದುಕೊಳ್ಳುವುದು ಅವಶ್ಯ.
ಶರೀರಕ್ಕೆ ಸಾಕಷ್ಟು
ಖನಿಜಗಳ ಅವಶ್ಯವಿದೆ. ಅದರಲ್ಲಿ ಕಬ್ಬಿಣದ ಅಂಶ ಅತ್ಯಂತ ಅವಶ್ಯವಾದುದು. ಬೇಳೆ ಕಾಳುಗಳು, ಹಸಿರು ತರಕಾರಿ ಮತ್ತು ಸೊಪ್ಪುಗಳಲ್ಲಿ ಇದು ಲಭಿಸುತ್ತದೆ. ನಾವು ಸೇವಿಸುವ
ಬೇಳೆಕಾಳುಗಳಲ್ಲಿನ ಶೇ. 2ರಿಂದ 3
ರಷ್ಟು ಪ್ರಮಾಣದಲ್ಲಿ ಮಾತ್ರ ಕಬ್ಬಿಣದ ಅಂಶವನ್ನು ಹೀರಿಕೊಳ್ಳುತ್ತದೆ ಎಂದು ನಮ್ಮ ದೇಶದ
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್) ಅಂದಾಜು ಮಾಡಿದೆ. ಮಾಂಸಾಹಾರದಲ್ಲಿರುವ ಕಬ್ಬಿಣದ
ಅಂಶವನ್ನು ಶೇ. 10 ರಿಂದ 20 ರಷ್ಟು ಹೀರಿ ಕೊಳ್ಳುತ್ತದೆ ಎಂದು
ಅಂದಾಜಿಸಲಾಗಿದೆ.
ಶಾಖಾಹಾರಿಗಳು
ತಮಗೆ ಅವಶ್ಯವಿರುವ ಪ್ರಮಾಣಕ್ಕಿಂತ 10ರಿಂದ 20
ಪಟ್ಟು ಹೆಚ್ಚು ಪೌಷ್ಟಿಕಾಂಶಗಳನ್ನು ಸೇವಿಸಬೇಕು ಎಂದು ಎನ್‌ಐಎನ್ ಸಲಹೆ ನೀಡಿದೆ.
ಲಿವರ್ ಮತ್ತು
ಮಾಂಸದಲ್ಲಿ ಹೆಚ್ಚು ಕಬ್ಬಿಣದ ಅಂಶವಿರುತ್ತದೆ. ಹಾಲಿನಿಂದ ಅಂಥ ಪ್ರಯೋಜನವಿಲ್ಲ. ಹಾಗಾಗಿ
ಶಾಖಾಹಾರಿಗಳಿಗೆ ಅವಶ್ಯವಿರುವ ಕಬ್ದಣದ ಅಂಶ ದೊರೆಯದು. ಬಹಿಷ್ಟು ಆಗುವ ಮಹಿಳೆಯರಲ್ಲಿ
ಋತುಸ್ರಾವದಲ್ಲಿ ಕಬ್ಬಣದ ಅಂಶ ಹೆಚ್ಚು ಹೋಗುವುದರಿಂದ ಅವರಿಗೆ ಮತ್ತಷ್ಟು ಕೊರತೆ ಎದುರಾಗುತ್ತದೆ.
ಸಾಮಾನ್ಯವಾಗಿ ಅವಶ್ಯ ಇರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಕಬ್ದಣದ
ಅಂಶ ಗರ್ಭಿಣಿಯರಿಗೆ ಬೇಕಾಗುತ್ತದೆ. ಇದರಿಂದ ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆಯಿಂದ
ಬಳಲುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚು.
ಈ ಎಲ್ಲ
ಸಮಸ್ಯೆಗಳಿಗೆ ಪರಿಹಾರವಿದೆ. ನಿಂಬೆ, ಟಮೋಟಾ ಸೀಬೆ ಹಣ್ಣು, ಮೊಳಕೆ ಕಾಳು, ಸೊಪ್ಪು ಸೇವಿಸುವುದರಿಂದ ಇದರಲ್ಲಿರುವ 'ಸಿ' ಅನ್ನಾಂಗ ಕಬ್ಬಿಣದ ಅಂಶವನ್ನು ಹೆಚ್ಚು ಹೀರಿಕೊಳ್ಳಲು
ಸಹಾಯಕವಾಗುತ್ತದೆ.
ಹೊಟ್ಟೆ ಅಥವಾ
ಕರುಳಿನ ಹುಣ್ಣಿನಿಂದ ರಕ್ತಸ್ರಾವವಾಗಿ ಅದರ ಜೊತೆ ಕಬ್ಬಿಣದ ಅಂಶ ಹೊರಹೋಗಿ ಕಬ್ಬಣದ
ಕೊರತೆಯುಂಟಾಗಬಹುದು. ನಿಮ್ಮ ವೈದ್ಯರನ್ನು ಸಂಪರ್ಕಿಸಿ ಕೊರತೆಯಾದ ಕಬ್ಬಣದ ಅಂಶ ಭರ್ತಿಯಾಗಲು
ಪೂರಕವಾದ ಯಾವ ಔಷಧಿ ತೆಗೆದುಕೊಳ್ಳಬೇಕೆಂದು ಸಲಹೆ ಪಡೆಯಿರಿ.
ಮೂಳೆಗಳು
ಗಟ್ಟಿಮುಟ್ಟಾಗುವುದಕ್ಕೆ ಅಗತ್ಯವಾದ ಸುಣ್ಣದ ಅಂಶ ಹಣ್ಣು ಮತ್ತು ತರಕಾರಿಯಲ್ಲಿ ಲಭ್ಯವಾಗುತ್ತದೆ.
ಅದ್ದರಿಂದ ಶಾಖಾಹಾರಿಗಳಲ್ಲಿ ಮೂಳೆಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುವುದು ಕಡಿಮೆ.
ಪಾಲಾಕಿನಲ್ಲಿ ಹೆಚ್ಚು ಸುಣ್ಣದ ಅಂಶ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಅದರ ಸೇವನೆ ಉಪಯುಕ್ತ.
ಸುಣ್ಣದ ಅಂಶ ಹೆಚ್ಚಿರುವ ಪದಾರ್ಥವೆಂದರೆ ಹಾಲು, ಹಾಲಿನಿಂದ ಕೆನೆ ತೆಗೆದರೂ ಅದರಲ್ಲಿ ಡಿ ಅನ್ನಾಂಗ ಹಾಗೇ
ಉಳಿಯುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸದವರು ಕಾಫಿ, ಕೋಲಾ ಮತ್ತು
ಚಹಾದಂಥ ಪೇಯಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಕಾರಣ ಈ ಪೇಯಗಳು ಕ್ಯಾಲ್ಟಿಯಂ
ಹೀರುವಿಕೆಯನ್ನು ಕಡಿಮೆಗೊಳಿಸುತ್ತವೆ.
ಮದ್ಯಪಾನ ಮತ್ತು
ಧೂಮಪಾನದಿಂದಲೂ ಸಹ ಈ ಸಮಸ್ಯೆ ಎದುರಾಗುತ್ತದೆ. ನೀವು ತಿನ್ನುವ ಉಪ್ಪಿನ ಪ್ರಮಾಣವನ್ನು ಕಡಿಮೆ
ಮಾಡಿ. ಹೆಚ್ಚು ಉಪ್ಪು ಸೇವನೆ ಒಳ್ಳೆಯದಲ. ಸುಣ್ಣದ ಅಂಶದ ಕೊರತೆ ಇದ್ದರೆ ವೈದ್ಯರನ್ನು
ಸಂಪರ್ಕಿಸಿ ಸೂಕ್ತ ಪೂರಕ ಜಾತಿ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳಿ,

