ಯಾವ ಕೊಬ್ಬು ಹೃದಯಕ್ಕೆ ಒಳ್ಳೆಯದು..? | Health Tips Kannada | ಮನೆಮದ್ದು | ಕೊಲೆಸ್ಟರಾಲ್

Health Tips Kannada


ನಾವು ಸೇವಿಸಬೇಕಾದ, ತಿರಸ್ಕರಿಸಬೇಕಾದ ಕೊಬ್ಬಿನಂಶಗಳು

ಕೊಬ್ಬಿನಿಂದ ಮುಕ್ತವಾಗುವುದು ಬಹಳ ಅಗತ್ಯ ಎಂದು ಎಲ್ಲರ ಮನಸ್ಸಿನಲ್ಲೂ ಅತ್ಯಂತ ಆಳವಾಗಿ ಬೇರೂರಿದೆ. ಆಹಾರದಲ್ಲಿರುವ ಎಲ್ಲ ಕೊಬ್ಬಿನಂಶವೂ ದೇಹಕ್ಕೆ ಅನಗತ್ಯ. ಆದ್ದರಿಂದ ಅವುಗಳಿಂದಲೂ ದೂರವುಳಿಯುವುದು ಅಗತ್ಯ ಎಂದು ಎಲ್ಲರೂ ಭಾವಿಸಿದ್ದಾರೆ. ಕೊಬ್ಬು ನಮ್ಮಲ್ಲಿನ ಕೊಲೆಸ್ಟರಾಲ್ ಅಂಶವನ್ನು ಹೆಚ್ಚಿಸಿ ಅದರಿಂದ ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು, ಕ್ಯಾನ್ಸರ್ ಮತ್ತಿತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದು ಜನಪ್ರಿಯ ನಂಬಿಕೆ.

- ಈ ಕೊಬ್ಬಿನ ಭಯಕ್ಕೆ ಪ್ರತಿಯಾಗಿ ನಿಜವಾಗಿಯೂ ಎಲ್ಲ ಕೊಬ್ಬುಗಳೂ ದೇಹಕ್ಕೆ ಕೆಟ್ಟವಲ್ಲ. ಅವುಗಳಲ್ಲಿ ಕೆಲವು ಆರೋಗ್ಯಕ್ಕೆ ಬಹಳ ಒಳ್ಳೆಯವು. ಅವುಗಳ ಕೊರತೆಯೇ ನಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು.

ಆರೋಗ್ಯಕರ ಕೊಬ್ಬುಗಳನ್ನು ನಾಲ್ಕು ವಿಭಿನ್ನ ಇಎಫ್‌ಎ ಎಂದು ವರ್ಗೀಕರಿಸಲಾಗಿದೆ. ಅವುಗಳನ್ನು ಸ್ಯಾಚುರೇಟೆಡ್, ಟ್ರಾನ್‌ಫ್ಯಾಟಿ, ಮೊನೊ ಸ್ಯಾಚುರೇಟೆಡ್ ಮತ್ತು ಪಾಲಿ ಅನ್‌ಸ್ಯಾಚುರೇಟೆಡ್ ಎಂದು ಹೆಸರಿಸಲಾಗಿದೆ. ಹೆಚ್ಚು ಪ್ರೋಟೀನ್‌ಯುಕ್ತ ಸ್ಯಾಚುರೇಟೆಡ್ ಕೊಬ್ಬು (ಬೆಣ್ಣೆ, ಕೊಬ್ಬರಿ ಮತ್ತು ತಾಳೆ ಎಣ್ಣೆಗಳಲ್ಲಿರುವಂತಹುದು) ಹೆಚ್ಚು ದೈಹಿಕ ಶ್ರಮದ ಮಾಡುವವರಿಗಾಗಿ ಮಾತ್ರ ಕಡಿಮೆ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಕೊಬ್ಬಿನ ಅಗತ್ಯ ಕಡಿಮೆಯಿರುತ್ತದೆ. ಕೊಬ್ಬಿನಿಂದ ಪಡೆಯಬಲ್ಲ ಶಕ್ತಿ ಒಟ್ಟು ಶಕ್ತಿಯ ಶೇಖಡ 30ಕ್ಕಿಂತ ಹೆಚ್ಚಾಗಬಾರದು.

ಕೊಬ್ಬಿನಂಶ ಹೆಚ್ಚಾದಂತೆಲ್ಲಾ ಹೆಚ್ಚು ಹೈಡೋಜನ್ ಅಂಶ ಹೆಚ್ಚಾಗುತ್ತದೆ. ಇದರಿಂದ ದೇಹಕ್ಕೆ ಕೊಬ್ಬಿನ ಬಳಕೆ ಕಷ್ಟಕರವಾಗುತ್ತದೆ. ಕೆಂಪು ಮಾಂಸ ಮತ್ತು ಡೈರಿ ಉತ್ಪನ್ನಗಳು , ಈ ಕೊಬ್ಬಿನ ಮೂಲ ಅಂಶಗಳು. ಈ ಕೊಬ್ಬನಿಂದ ಕೆಟ್ಟ ಕೊಲೆಸ್ಟರಾಲ್ ಮಟ್ಟವು ಹೆಚ್ಹುತ್ತ ಹೋಗಿ ಅಭಿಧಮನಿ ಸಂಕುಚಿತವಾಗುತ್ತದೆ.

ಮತ್ತೊಂದು ಕೆಟ್ಟ ಆಯ್ಕೆ ಎಂದರೆ, ಟ್ರಾನ್ಸ್ ಫ್ಯಾಟಿ ಆಸಿಡ್. ಇದು ನೈಸರ್ಗಿಕವಾಗಿ ದೊರೆಯುವುದು ಬಹಳ ಅಪರೂಪ. ಫ್ಯಾಟಿ ಆಸಿಡ್‌ಗಳಿಗೆ ಅತ್ಯಂತ ಹೆಚ್ಚಿನ ಉಷ್ಣತೆಯ ಹೈಡ್ರೋಜನ್ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಟ್ರಾನ್ಸ್ ಫ್ಯಾಟ್‌ಗಳು ತಿಂಡಿಗಳ ತಯಾರಕರಿಗೆ ಬಹಳ ಇಷ್ಟ. ಏಕೆಂದರೆ ಅವುಗಳಿಂದ ತಿಂಡಿ ಪದಾರ್ಥಗಳು ಹೆಚ್ಚು ಕಾಲ ಕೆಡದೆ ಉಳಿಯುತ್ತವೆ. ಅಲ್ಲದೆ ಎಣ್ಣೆಯನ್ನು ಕಡಿಮೆಗೊಳಿಸುತ್ತವೆ. ಎಲ್ಲ ವ್ಯಾಪಾರದ ತಿಂಡಿಗಳು, ಸಿದ್ಧ ಆಹಾರ, ಸಂಸ್ಕರಿಸಲ್ಪಟ್ಟ ಅಹಾರ (ಬರ್ಗರ್, ಪಿಜ್ಜಾ, ಕೃತಕ ಗಿಣ್ಣು ಮುಂತಾದವು) ಗಳನ್ನು ಟ್ರಾನ್ಸ್ ಫ್ಯಾಟಿ ಆಸಿಡ್‌ನಿಂದ ತಯಾರಿಸಲಾಗುತ್ತದೆ. - ಡಾ. ಇಶಿ ಖೋಸ್ಲಾ (ಪೌಷ್ಠಿಕಾಂಶ ತಜ್ಞ ಮತ್ತು ವೋಲ್ ಫುಡ್ಸ್ ನಿರ್ದೇಶಕ) ಅವರ ಪ್ರಕಾರ, ಪ್ರತಿ ದಿನ 5 ಗ್ರಾಂ ಟ್ರಾನ್ಸ್ ಫ್ಯಾಟಿ ಆಸಿಡ್ ಸೇವಿಸಿದರೆ ಹೃದಯ ಕಾಯಿಲೆಯ ಸಂಭವನೀಯತೆ ಶೇ.25ರಷ್ಟು ಹೆಚ್ಚಾಗುತ್ತದೆ.

ಮ್ಯಾಕ್‌ಡೊನಾಲ್ಡ್ ಒಳಗೊಂಡಂತೆ ಹಲವಾರು ಕಂಪನಿಗಳು ಪರ್ಯಾಯ ಮಾರ್ಗಕ್ಕೆ ಸತತವಾಗಿ ಅನ್ವೇಷಣೆ ನಡೆಸುತ್ತಿವೆ. ಟ್ರಾನ್ಸ್‌ಫ್ಯಾಟ್ ಮುಕ್ತವಾದ ಮೊದಲ ಮ್ಯಾಕ್‌ಡೊನಾಲ್ಡ್ ಉತ್ಪನ್ನ ಪ್ರಿಟೊ ಲೇ ಎಂಬ ಚಿಪ್. ಅವರು ಈ ಟ್ರಾನ್ಸ್‌ಫ್ಯಾಟ್ ಮಾಹಿತಿಯನ್ನು ಪ್ಯಾಕೇಜಿಂಗ್ ಮೇಲೆ ನೀಡುತ್ತಿದ್ದಾರೆ. ಇದರಿಂದ ಲೇಸ್ ಪೊಟಾಟು ಚಿಪ್, ಕುರ್‌ಕುರೆ, ಚೀಟೊಸ್, ಅಂಕಲ್ ಚಿಪ್, ಲೆಹರ್ ನಮ್ಕೀನ್..... ಮುಂತಾದ ಉತ್ಪನ್ನಗಳು ವಿಶ್ವಾಸ ಪಡೆದಿವೆ. ಈ ಉತ್ಪನ್ನಗಳು ಜೋಳ ಮತ್ತು ಸೂರ್ಯಕಾಂತಿ ಬಳಸುತ್ತವೆ. ಅವುಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿರುತ್ತದೆ. ಅಲ್ಲದೆ ಹೆಚ್ಚು ಪ್ರಾಮಣದ ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್  ಮತ್ತು ಮಾನೋ ಅನ್‌ಸ್ಯಾಚುಂಬ ಅಸಿಡ್ಗಳನ್ನು ಹೊಂದಿರುತ್ತವೆ. ಇವು ಹೃದಯ ರೋಗದ ಸಂಭವನೀಯತೆಯನ್ನು ಕಡಿಮೆ ಮಾಡುತ್ತವೆ.

ಬೆಣ್ಣೆ ಅಥವಾ ಸ್ಯಾಚುರೇಟೆಡ್ ಕೊಬ್ಬಿನಂಶದ ಕೆನೋಲಾ ಅಥವಾ ಆಲಿವ್ ಎಣ್ಣೆ ಮತ್ತು ಟ್ರಾನ್ಸ್ ಫ್ಯಾಟ್‌ಗಳ ಸೇವನೆಯಿಂದ ಎಲ್‌ಡಿಎಲ್ (ಕೆಟ್ಟ ಕೊಬ್ಬಿನಂಶ) ಪ್ರಮಾಣ ಹೆಚ್ಹುತ್ತದೆ, ಎಚ್‌ಡಿಎಲ್ (ಉತ್ತಮ ಕೊಬ್ಬಿನಂಶ) ಪ್ರಮಾಣ ಕುಗ್ಗುತ್ತದೆ. ಇದರಿಂದ ಒಟ್ಟಾರೆ ಕೊಬ್ಬಿನಂಶ ಹೆಚ್ಚಾಗಿ ಅಗತ್ಯವಾದ ಫ್ಯಾಟಿ ಆಸಿಡ್‌ಗಳ ಕೊರತೆ ಉಂಟು ಮಾಡುತ್ತದೆ, ಈ ಬಗೆಯ ಕೊಬ್ಬಿನಂಶದ ಉಪಯೋಗದ ಬಗ್ಗೆ ಮಾಹಿತಿಯಿಲ್ಲ. ಈ ಕೊಬ್ಬಿನಂಶದಿಂದ ಹೃದಯಾಘಾತದ ತೊಂದರೆ ಹೆಚ್ಚಾಗುತ್ತದೆ.

ಮೋನೋ ಸ್ಯಾಚುರೇಟೆಡ್ ಮತ್ತು ಪಾಲಿ ಸ್ಯಾಚುರೇಟೆಡ್ ಕೊಬ್ಬನಂಶ ಆರೋಗ್ಯಕರ ಆಯ್ಕೆಯಾಗಿದ್ದು ನೈಸರ್ಗಿಕವಾಗಿ ಉತ್ಪಾದನೆಯಾಗುತ್ತವೆ. ಬಹಳಷ್ಟು ತರಕಾರಿ ಮತ್ತು ಧಾನ್ಯಗಳಲ್ಲಿರುತ್ತವೆ. ಉದಾಹರಣೆಗೆ, ಆಲಿವ್ ಎಣ್ಣೆ ಮೆಡಿಟರೇನಿಯನ್ ಪ್ರದೇಶದ ಆಹಾರದಲ್ಲಿ ಸಹಜವಾಗಿ ಬಳಕೆಯಾಗುತ್ತಿದ್ದು ಅದರ ಆರೋಗ್ಯಕರ ಅಂಶಗಳು ಎಲ್ಲರಿಗೂ ಗೊತ್ತಿವೆ. ಈ ಕೊಬ್ಬಿನಂಶ ಅಭಿಧಮನಿಯನ್ನು ಸಂಕುಚಿತಗೊಳಿಸುವುದಿಲ್ಲ.

ಅಭಿಧಮನಿ ಸಂಕುಚಿತಗೊಳಿಸುವ ಟ್ರಾನ್ಸ್ ಫ್ಯಾಟಿ ಆಸಿಡ್‌ಗಳು ಉತ್ಪಾದನೆಯ ಹಂತದಲ್ಲಿ ತಯಾರಾಗುತ್ತವೆ. ಇವು ನಮ್ಮೊಂದಿಗೆ 20ನೇ ಶತಮಾನಕ್ಕೂ ಹಿಂದಿನಿಂದ ಇವೆ. ಇವುಗಳನ್ನು ಕಡಿಮೆ ಸೇವಿಸಿದರೂ ಹೃದಯರೋಗದ ಸಂಭವನೀಯತೆ ಹೆಚ್ಚಿಸುತ್ತವೆ. ಈ ಕೊಬ್ಬಿನಂಶ ದಿನಕ್ಕೆ ಒಂದು ಗ್ರಾಂ ಸೇವಿಸಿದರೂ ಸುರಕ್ಷಿತವಲ್ಲ. ಒಟ್ಟು ಪ್ರಮಾಣದ ಶೇ.1 ರಿಂದ ಶೇ.3ರಷ್ಟು ಸೇವಿಸಿದರೂ ಹೃದಯರೋಗದತ್ತ ಕೊಂಡೊಯ್ಯುತ್ತವೆ. ಜನವರಿ 1, 2006ರಂತೆ ಟ್ರಾನ್ಸ್ ಫ್ಯಾಟ್‌ಗಳು ಆಹಾರದ ಹೊದಿಕೆಯಲ್ಲಿ ನಮೂದಿಸಬೇಕು. ಇದರೊಂದಿಗೆ ಕೆಟ್ಟ ಕೊಬ್ಬು (ಸ್ಯಾಚುರೇಟೆಡ್) ಮತ್ತು ಉತ್ತಮ ಕೊಬ್ಬು (ಅನ್‌ಸ್ಯಾಚುರೇಟೆಡ್)ಗಳನ್ನೂ ಎಂಬುದನ್ನೂ ನಮೂದಿಸಬೇಕು. ಟ್ರಾನ್ಸ್‌ಫ್ಯಾಟ್‌ನ ಅಂಶವನ್ನೂ ನಮೂದಿಸಬೇಕು. ಇದರಿಂದಾಗಿ ಕಂಪನಿಗಳು ಅವುಗಳನ್ನು ನಿವಾರಿಸಲು ಬಹಳ ಪ್ರಯತ್ನ ಮಾಡುತ್ತಿವೆ.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.