Health Tips Kannada
ಸೇಬಿನೊಂದಿಗೆ ಆರೋಗ್ಯದ ಜೀವನ
ಸೇಬು
ಕರ್ನಾಟಕದಲ್ಲಿ ಬೆಳೆಯುವ ಹಣ್ಣಲ್ಲವಾದರೂ ಅದು ತನ್ನ ವ್ಯಾಪ್ತಿಯನ್ನು ಮೀರಿ ಎಲ್ಲೆಡೆ
ಜನಪ್ರಿಯವಾಗಿದೆ. ಸಂಬಂಧಿಕರು, ಸ್ನೇಹಿತರು ಅನಾರೋಗ್ಯಕ್ಕೆ ತುತ್ತಾದರೆ ನಾವು
ಹಣ್ಣುಗಳನ್ನು ಕೊಂಡೊಯ್ಯುತ್ತೇವೆ. ಹಾಗೆ ಆಯ್ಕೆ ಮಾಡಿಕೊಳ್ಳುವ ಹಣ್ಣುಗಳಲ್ಲಿ ಸೇಬಿಗೆ ಬಹಳ
ಪ್ರಾಮುಖ್ಯತೆ. ಇದರಿಂದ ತಿಳಿಯುವುದೇನೆಂದರೆ, ಸೇಬು ಅತ್ಯಂತ
ಪೌಷ್ಟಿಕತೆಯುಳ್ಳ, ರೋಗನಿರೋಧಕ ಶಕ್ತಿಯುಳ್ಳ ಹಣ್ಣು ಎನ್ನುವುದು.
ಸೇಬಿನ ಉಪಯುಕ್ತ ಗುಣಗಳು ಹಲವಾರು. ಸೇಬನ್ನು ತುರಿದು ರಸವನ್ನು ಹಿಂಡಿ ಚಿಕ್ಕ ಮಕ್ಕಳಿಗೆ
ಕುಡಿಸಿದರೆ ಅವರಲ್ಲಿ ಹಸಿವು ಹೆಚ್ಚಾಗುವುದು.
ದೇಹದ ಅಶಕ್ತಿ
ನಿವಾರಣಿಗೆ ಸೇಬು ದಿವ್ಯ ಔಷದ, ರೋಗಬಾಧೆ, ನಿರಂತರ
ಕೆಲಸದಿಂದ ದಣಿಯುವ ದೇಹಕ್ಕೆ ಸೇಬು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ಸಂಧಿವಾತ,
ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ಸೇಬು ಸೇವನೆ ಬಹಳ ಉಪಯುಕ್ತ. ಅರ್ಧ ತಲೆನೋವು
ಬಹಳ ಮಂದಿಗೆ ಕಾಡುವ ಕಾಯಿಲೆ. ಈ ಸಮಸ್ಯೆ ಇದ್ದವರು ಇದಕ್ಕೆ ಪರಿಹಾರವೇ ಇಲ್ಲ ಎಂಬಂತೆ
ಚಿಂತಾಕ್ರಾಂತರಾಗಿರುತ್ತಾರೆ. ಅರ್ಧ ತಲೆನೋವು ಬಂದರೆ ಬೆಟ್ಟವನ್ನೇ ತಲೆಯ ಮೇಲೆ ಇಟ್ಟುಕೊಂಡವರಂತೆ
ಆಡುವುದೂ ಇದೆ, ಆದರೆ ಸೇಬು ಅರ್ಧ ತಲೆನೋವಿಗೆ ಪರಿಹಾರ
ನೀಡಬಲ್ಲುದು ಎಂದು ಎಷ್ಟು ಮಂದಿಗೆ ಗೊತ್ತಿದೆ?
ಸೇಬಿನ
ಹೋಳುಗಳನ್ನು ಉಪ್ಪಿನೊಂದಿಗೆ ಅಗೆದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ, ಕೆಲವೇ
ದಿನಗಳಲ್ಲಿ ನಿಮ್ಮ ಅರ್ಧ ತಲೆನೋವಿನ ಸಮಸ್ಯೆ ಸಂಪೂರ್ಣ ಮಾಯವಾಗುತ್ತದೆ
ಹೊಟ್ಟೆ ಹುಣ್ಣಿಗೂ
ಸೇಬು ರಾಮಬಾಣ. ಸೇಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಹೊಟ್ಟೆ ಹುಣ್ಣು ಮಂಗಮಾಯವಾಗುತ್ತದೆ.
ಮಕ್ಕಳ ಭೇದಿಗೂ
ಸೇಬು ಪರಿಹಾರ ನೀಡಬಲ್ಲುದು. ಸೇಬಿನ ಸಿಪ್ಪೆ ತೆಗೆದು ರಸ ಹಿಂಡಿ ಕುಡಿಸಿದರೆ ಮಕ್ಕಳ ಭೇದಿ
ನಿಯಂತ್ರಣಕ್ಕೆ
ಬರುತ್ತದೆ. ತುರಿದ
ಸೇಬಿನ ರಸವನ್ನು ಹಾಲಿನೊಂದಿಗೆ ಕುಡಿಸಿದರೆ ಮಕ್ಕಳನ್ನು ಕಾಡುವ ಅತಿಸಾರ ಮಾಯವಾಗುತ್ತದೆ.
ಹದಿವಯಸ್ಸಿನವರಲ್ಲಿ
ಮೊಡವೆ ಉಂಟಾಗುವುದು ಸಹಜ. ಕೆಲವರು ತಮ್ಮ ಸೌಂದರ್ಯಕ್ಕೆ ಹಾನಿ ತರುವ ಈ ಮೊಡವೆಗಳ ಗೊಡವೆಯಿಂದ ಬಹಳ
ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವರು ಇನ್ನಿಲ್ಲದ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಆದರೆ ಸೇಬನ
ತಿರುಳನ್ನು ಚೆನ್ನಾಗಿ ಅರೆದು ಪೇಸ್ಟ್ ರೀತಿಯಲ್ಲಿ ತಯಾರಿಸಿ ಅದನ್ನು ನಿಯಮಿತವಾಗಿ ಮುಖಕ್ಕೆ
ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚಾಗಿ ಸೌಂದರ್ಯದಿಂದ ಫಳಫಳಿಸುತ್ತದೆ.
ಪ್ರತಿದಿನ ಊಟದ
ನಂತರ ಸೇಬು ಸೇವಿಸಿದರೆ ದಾಹ ಹಿಂಗುತ್ತದೆ. ಯಕೃತ್ತಿನ ರೋಗ ಮತ್ತು ಸಂಧಿವಾತಗಳು
ನಿವಾರಣೆಯಾಗುತ್ತವೆ. ಕೆಂಪು ಚೆನ್ನಾಗಿ ಹಲ್ಲುಗಳಿಂದ ಕಚ್ಚಿ ತಿಂದರೆ ಹಲ್ಲುಗಳಿಗೆ ಹೊಳಪು ಬರುತ್ತದೆ.
ಜೀರ್ಣಶಕ್ತಿ ಅತ್ಯುತ್ತಮಗೊಳ್ಳುತ್ತದೆ.
ಹೊಟ್ಟೆಯಲ್ಲಿ
ಹುಣ್ಣಾದರೂ ಸೇಬು ಪರಿಹಾರ ನೀಡಬಲ್ಲುದು. ಸೇಬಿನ ಜ್ಯೂಸ್. ನಿಯಮಿತ ಸೇವನೆಯಿಂದ ಹೊಟ್ಟೆಯಲ್ಲಿನ
ಹುಣ್ಣು ಮಾಯವಾಗುವುದು.
100 ಗ್ರಾಂ
ಸೇಬಿನಲ್ಲಿ 94 ಮಿಲಿಗ್ರಾಂ ಪೊಟಾಷಿಯಂ, 3 ಮಿಲಿಗ್ರಾಂ ಸೋಡಿಯಂ, 7.3 ಮಿಲಿಗ್ರಾಂ ಗಂಧಕ,
5 ಮಿಲಿಗ್ರಾಂ ಮೆಗ್ನಿಷಿಯಂ, 0.29 ಮಿಲಿಗ್ರಾಂ ತಾಮ್ರವಿರುತ್ತದೆ.

