Health Tips Kannada
ಅಡುಗೆ ಮನೆಯಲ್ಲಿರುವ ಈ 6 ವಸ್ತುಗಳಿಂದ ಗುಣವಾಗುತ್ತೇ 108 ಆರೋಗ್ಯ ಸಮಸ್ಯೆಗಳು
ನಿಂಬೆಹಣ್ಣು
- ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಸಿ ಸ್ವಲ್ಪ ಸ್ವಲ್ಪವೆ ಕುಡಿಯುತ್ತಿದ್ದರೆ ವಾಂತಿ ನಿಲ್ಲುವುದು.
- ಅಜೀರ್ಣದಿಂದ ಹೊಟ್ಟೆ ನೋವು ಉಂಟಾಗಿದ್ದರೆ ಒಂದು ನಿಂಬೆ ರಸವನ್ನು ಒಂದು ಬಟ್ಟಲು ಬಿಸಿ ನೀರಿಗೆ ಹಾಕಿ ಒಂದು ಟೀ ಚಮಚ ಸೋಡ ಬೆರೆಸಿ ಸೇವಿಸಿದರೆ ಶೀಘ್ರ ಗುಣವಾಗುವುದು.
- ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆ ಹಣ್ಣನ್ನು ಇಂಡಿ ತಕ್ಷಣ ಸೇವಿಸಬೇಕು , ಇದೇ ರೀತಿ ಹತ್ತು ದಿನಗಳ ಕಾಲ ಸೇವಿಸುತ್ತ ಬಂದರೆ ಮೂಲವ್ಯಾಧಿ ಗುಣಮುಖವಾಗುವುದು.
- ತಾಜಾ ಕಬ್ದನ ಹಾಲಿಗೆ ಎಳನೀರು ಹಸಿ ಶುಂಠಿ, ನಿಂಬೆ ರಸ ಸೇರಿಸಿ ಸೇವಿಸುವುದರಿಂದ ಮೂತ್ರ ವಿಸರ್ಜನೆ ಚೆನ್ನಾಗಿ ಆಗುವುದು.
- ಎಳ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಿಂಡುಕೊಂಡು ಕುಡಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗುವುದು, ಉರಿ ಮೂತ್ರ ರೋಗ ನಿವಾರಣೆಯಾಗುವುದು.
- ನಿಂಬೆ ಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಕುಡಿದರೆ ವಾಂತಿ ಮತ್ತು ತಲೆಸುತ್ತುವಿಕೆ ಸ್ಥಗಿತವಾಗುವುದು.
- ಬಿಸಿ ಬಿಸಿಯಾದ ಟೀಗೆ ನಿಂಬೆ ಹಣ್ಣಿನ ರಸವನ್ನು ಹಿಂಡಿ ಕುಡಿಯುವುದರಿಂದವ ಬಾಯಾರಿಕೆ ದೂರವಾಗುವುದು ನೆಗಡಿ ಗುಣವಾಗುವುದು,
- ಒಂದು ಬಟ್ಟಲು ನೀರಿಗೆ ನಿಂಬೆರಸ ಉಪ್ಪು ಬೆರೆಸಿ ಸೇವಿಸಿದರೆ ಉರಿಮೂತ್ರ ರೋಗ ನಿವಾರಣೆಯಾಗುವುದು.
- ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸದರೆ ರಕ್ತದ ಒತ್ತಡ ಮತ್ತು ತಲೆಶೂಲೆಯ ಗುಣವಾಗುತ್ತದೆ.
ಮೆಂತ್ಯ
- ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
- ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
- ಮೆಂತ್ಯದ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ ಮೈಕೈನೋವು, ಬೆನ್ನುನೋವು, ಸೊಂಟನೋವು ಗುಣವಾಗುತ್ತದೆ. •
- ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು ಅಂಗೈ ಉರಿ ಉಪಶಮನವಾಗುವುದು.
- ಮೆಂತ್ಯ ಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ ಸಾಕಷ್ಟು ಉಪ್ಪು ಬೆರೆಸಿ ಮೆಣಸು ಮತ್ತು ಜೀರಿಗೆಯ ತುಪ್ಪದ ಒಗ್ಗರಣೆ ಹಾಕಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುವುದು.
- ಒಂದು ಕಪ್ಪು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಶುಂಠಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫಾ ಶೀಘ್ರವೇ ನಿವಾರಣೆಯಾಗುವುದು.
- ಮೆಂತ್ಯದ ಸೊಪ್ಪಿನ ಪಲ್ಯ ಮತ್ತು ಹುಳಿಯನ್ನು ಕ್ರಮವಾಗಿ ಸೇವಿಸಿದರೆ ಶ್ವಾಸಕೋಶಗಳು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುವುದು.
ಶುಂಠಿ
- ಹಸಿ ಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮುರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುತ್ತದೆ.
- ಮಕ್ಕಳಿಗೆ ಹಸಿ ಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುವುವು.
- ನಾಲಿಗೆಗೆ ರುಚಿ ಇಲ್ಲದಂತೆ ಆಗಿರುವಾಗ ಒಂದು ಹಸಿ ಶುಂಠಿ ನಾಲೈದು ಕಾಳು ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗೆದು ಚಪ್ಪರಿಸುವುದರಿಂದ ರುಚಿ ಗ್ರಹಣ ಶಕ್ತಿ ಅಧಿಕಗೊಳ್ಳುವುದು.
- ಗಂಟಲು ಹೊಡೆದು ಮಾತನಾಡಲು ಕಷ್ಟವಾದಗ ಸ್ವಲ್ಪ ಶುಂಠಿ ಒಂದೆರಡು ಲವಂಗ ಮತ್ತು ನಾಲ್ಕು ಉಪ್ಪಿನ ಅರಳುಗಳನ್ನು ಅಗೆದು ಚಪ್ಪರಿಸಿದರೆ ಗುಣವಾಗುತ್ತದೆ.
ಜೀರಿಗೆ
- ಊಟಕ್ಕೆ ಮೊದಲು ಜೀರಿಗೆಯನ್ನು ಅಗೆದು ತಿನ್ನುವುದರಿಂದ ಹಸಿವು ಹೆಚ್ಚಾಗುವುದು. ಊಟದ ನಂತರ ಜೀರಿಗೆಯನ್ನು ಅಗೆದು ತಿನ್ನುವುದಲಂದ ದಂತಕ್ಷಯದಲ್ಲಿ ಗುಣ ಕಂಡುಬರುವುದು..
- ಆಗಾಗ್ಗೆ ಜೀರಿಗೆಯನ್ನಾಗಲೀ, ಹಸಿ ಈರುಳ್ಳಿಯನಾಗಲ್ಲಿ ಅಗಿಯುತ್ತಿದ್ದರೆ ಹಲ್ಲಿನ ಸವೆತಕ್ಕೆ ತಡೆಯುಂಟಾಗುವುದು.
ಜೇನುತುಪ್ಪ
- ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಬಾರಿ ಜೇನುತುಪ್ಪ ಹಚ್ಚಬೇಕು.
- ಜೇನು ತುಪ್ಪವನ್ನು ಕ್ರಮವಾಗಿ ಸೇವಿಸುವುದರಿಂದ ಮಲ ಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.
- ಶುದ್ದವಾದ ಜೇನು ತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತ ಬಂದರೆ ಬಹು ಮೂತ್ರ ರೋಗವೇ ಇರುವುದಿಲ್ಲ.
- ಉಪ್ಪು ಮತ್ತು ಜೇನು ತುಪ್ಪವನ್ನು ನಂಬಿಕೊಂಡು ಹೀಚು ಮಾವಿನ ಕಾಯಿ ತಿಂದರೆ ಮಲ ಬದ್ಧತೆ, ಅಜೀರ್ಣ, ರೋಗಗಳಲ್ಲಿ ಗುಣ ಕಂಡು ಬರುವುದು.
- ಜೇನು ತುಪ್ಪದೊಂದಿಗೆ ಬೆಳ್ಳುಳ್ಳಿ ರಸದ ಒಂದು ಟೀ ಚಮಚವನ್ನು ಸೇವಿಸುವುದರಿಂದ ಜಂತು ಹುಳುಗಳು ಮಲದೊಂದಿಗೆ ಹೊರಬೀಳುವುದು
- ಒಂದು ಕಪ್ಪು ಎಳನೀರಿಗೆ ಜೇನು ತುಪ್ಪ ಸೇರಿಸಿಕೊಂಡು ದಿನಾ ಸೇವಿಸುತ್ತಿದರೆ ಸಂಭೋಗ ಶಕ್ತಿಯು ವೃದ್ಧಿಯಾಗುತ್ತದೆ
- ಹೆಚ್ಚು ಮೂತ್ರ ವಿಸರ್ಜನೆಯಾಗುತ್ತಿದ್ದರೆ ದಾಲ್ಟಿನ್ನಿ ಪುಡಿಯನ್ನು ಜೇನು ತುಪ್ಪದಲ್ಲಿ ಮಿಶ್ರಮಾಡಿ ಕುಡಿದರೆ ಮೂತ್ರ ವಿಸರ್ಜನೆ ಹತೋಟಿಗೆ ಬರುತ್ತದೆ. ನರಗಳು ಅನಗತ್ಯ ಪ್ರಚೋದನೆಗೆ ಒಳಪಡದೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
- ಜೇನು ತುಪ್ಪದೊಂದಿಗೆ ನೇರಳೆ ಹಣ್ಣಿನ ಶರಬತ್ತು ಸೇವಿಸಿದರೆ ಕಣ್ಣುರಿ ಮತ್ತು ಮೂಲವ್ಯಾಧಿ ನಿವಾರಣೆಯಾಗುವುದು.
ಏಲಕ್ಕಿ
- ವಿಷ ಹಾಕಬಹುದೆಂದು ಭಯವಿದ್ದಲ್ಲಿ, ಊಟಕ್ಕೆ ಮುಂಚೆ ವಿಷಹರವಾಗಿ ವರ್ತಿಸುವ ಏಲಕ್ಕಿಯನ್ನು ಮುನ್ನೆಚ್ಚರಿಕೆಯ ತಾತ್ಕಾಲಿಕ ರೂಪದಲ್ಲಿ ಸೇವಿಸುವುದು ಒಳ್ಳೆಯದು.
- ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು ನುಂಗುವುದರಿಂದ ಬಾಯಿ ಸುವಾಸವನೆಯಿಂದ ಕೂಡಿರುವುದು. ಬಾಯಾರಿಕೆ ಹೋಗಿ ಆಹಾರ ಚೆನ್ನಾಗಿ ಜೀರ್ಣವಾಗುವುದು. ಹೊಟ್ಟೆ ತೊಳಸುವಿಕೆ ಇಲ್ಲವಾಗುವುದು.
- ಬೆಲ್ಲದೊಂದಿಗೆ ಓಮಿನ ಕಾಳನ್ನು ತಿನ್ನುತ್ತಿದ್ದರೆ ಅನೇಕ ರೀತಿಯ ಚರ್ಮ ರೋಗಗಳು ದೂರವಾಗುವವು.
- ಗಂಟಲು ಹುಣ್ಣಾಗಿದ್ದರೆ, ಗಂಟಲು ಕಟ್ಟಿಕೊಂಡಿದ್ದರೆ ಓಮಿನ ಕಷಾಯಕ್ಕೆ ಅಡಿಗೆ ಉಪ್ಪು ಸೇರಿಸಿ ಆಗಾಗ್ಗೆ ಬಾಯಿ ಮುಕ್ಕಳಿಸಿದರೆ ಶೀಘ್ರವಾಗಿ ಗುಣವಾಗುವುದು
- ಊಟದ ನಂತರ ಓಮಿನ ಕಾಳನ್ನು ಜಗಿದು ತಿನ್ನುವುರಿಂದ ಕರುಳಿನ ಅನೇಕ ಹಾನಿಕಾರಕ ಜೀವಿಗಳು ನಾಶಪಡಿಸುವುದು. ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಅಮಶಂಕೆಯ ನಿವಾರೆಯಾಗುವುದು.
- ಕಡಲೆಯ ಹಿಟ್ಟನ್ನು ಸೋಪಿಗೆ ಬದಲಾಗಿ ಬಳಸಿದರೆ ಚರ್ಮದ ಕಾಂತಿ ಹೆಚ್ಚುವುದು ಮತ್ತು ಮೃದುವಾಗುವುದು.
- ಖರ್ಜೂರವನ್ನು ಸಣ್ಣಗೆ ಚೂರು ಮಾಡಿ ಹುರಿಗಡಲೆ ಹಿಟ್ಟಿನೊಂದಿಗೆ ಸೇರಿಸಿ ಹಾಲು ಮತ್ತು ಸಕ್ಕರೆಯೊಂದಿಗೆ ಮಿಶ್ರಮಾಡಿ ಸೇವಿಸಿದರೆ ದೇಹದ ತೂಕ ಹೆಚ್ಚುವುದು, ವೀರ್ಯವೃದ್ಧಿಯಾಗುವುದು.
- ಓಮು ಕುಡಿದರೆ ಉತ್ತೇಜನಕವಾಗಿರುತ್ತದೆ. ಅತಿಯಾಗಿ ಕುಡಿದರೆ ಪಚನ ಶಕ್ತಿ ಕುಂಠಿತವಾಗುತ್ತದೆ.
- ಬೆಲ್ಲ ಹಾಕಿ ಬೇಲದ ಹಣ್ಣಿನ ಪಾನಕ ತಯಾರಿಸಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸೇವಿಸುವುದರಿಂದ ಬಾಯಾರಿಕೆ ಕಡಿಮೆಯಾಗುವುದು, ಬಾಯಿಯಿಂದ ಹೊರಡುವ ದುರ್ನಾತ ದೂರವಾಗುವುದು.

