benefits of fruits
benefits of vegetables
benefits of fruits | benefits of vegetables | nutrients of fruits
ಯಾವ ತರಕಾರಿ, ಯಾವ ಹಣ್ಣು ತಿಂದರೆ ಏನಾಗುತ್ತದೆ ಒಮ್ಮೆ ಇಲ್ಲಿ ನೋಡಿ, ನಂತರ ತಿನ್ನಿ
ತರಕಾರಿ
1. 1. ಎಲೆಕೋಸನ್ನು ಹಸಿಯಾಗಿಯೇ ತಿಂದರೆ ಹೊಟ್ಟೆ
ಹುಣ್ಣು, ಮೈನವೆ ಇತ್ಯಾದಿ ರೋಗಗಳು ದೂರವಾಗುತ್ತವೆ.
2.
ಚಕ್ಕೋತನೆ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ
ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.
3.
ನಾಲೈದು ತಿಂಗಳು ಬೆಳಗ್ಗೆ ಎದ್ದ ತಕ್ಷಣ ಒಂದು
ದೊಡ್ಡ ಟೊಮ್ಯಾಟೋ ಹಣ್ಣನ್ನು ತಿನ್ನುತ್ತಾ ಬಂದರೆ ಬೊಜ್ಜು ಕರಗಿ ಹೋಗುವುದು.
4.
ಮುಟ್ಟಿನ ಸಮುಯದಲ್ಲಿ ಹೆಚ್ಚು ರಕ್ತ
ಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪು ಬಳಸಿದರೆ ಗುಣವಾಗುವುದು.
5.
ಅಜೀರ್ಣ, ಹೊಟ್ಟೆ
ಉಬ್ಬರ ಮತ್ತು ನೆಗಡಿ ಇದ್ದರೆ ಪುದೀನಾ ಸೊಪ್ಪಿನ ಟೀ ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ವಾಸಿಯಾಗುತ್ತದೆ.
6.
ಬದನೆಕಾಯಿ ಪಲ್ಯ ಮಾಡಿಕೊಂಡು ತಿಂದರೆ ಕಣ್ಣಿನ
ರೋಗಗಳು ದೂರವಾಗುವವು.
7.
ಬೀಟ್‌ರೂಟ್ ಪ್ರತಿ ದಿನ ಬಳಸುತ್ತಿದ್ದರೆ
ರಕ್ತದ ಒತ್ತಡ ಕಡಿಮೆಯಾಗುತ್ತದೆ.
8.
ಹಸುವಿನ ತುಪ್ಪದಲ್ಲಿ ಗಜ್ಜುಗ ಗಾತ್ರದ
ಬೆಲ್ಲವನ್ನು ಬರಿ ಹೊಟ್ಟೆಯಲ್ಲಿ ಪ್ರತಿದಿನ ನಾಲ್ಕು ದಿನಗಳ ಕಾಲ ತಿಂದರೆ ಅರ್ಧ ತಲೆನೋವು
ಮಾಯವಾಗುವುದು.
9.
ಊಟದ ಜೊತೆ ಹಸಿ ಮೂಲಂಗಿಯ ಚೂರನ್ನು
ಉಪಯೋಗಿಸುವುದರಿಂದ ಊಟ ಮಾಡಿದ ಆಹಾರ ಚೆನ್ನಾಗಿ ಜೀರ್ಣವಾಗುವುದು.
10.
ಹಸಿ ಮೂಲಂಗಿಯನ್ನು ಯಥೇಚ್ಛವಾಗಿ
ತಿನ್ನುವುದರಿಂದ ಮೂಲವ್ಯಾಧಿ ಗುಣವಾಗುವುದು.
11.
ಹಸಿ ಮೂಲಂಗಿಯ ಹೋಳುಗಳಿಗೆ ಕಾಳು ಮೆಣಸಿನ
ಪುಡಿ, ಉಪ್ಪು, ನಿಂಬೆರಸವನ್ನು
ಹಾಕಿಕೊಂಡು ತಿಂದರೆ ಅಜೀರ್ಣ ಮಲಬದ್ಧತೆ, ದೃಷ್ಟಿಮಾಂದ್ಯ ಗುಣವಾಗುತ್ತವೆ.
12.
ನಿದ್ರೆ ಬಾರದವರು ಸಬ್ಬಸಿಗೆ ಸೊಪ್ಪನ್ನು
ಹೆಚ್ಚು ಬಳಸುವುದರಿಂದ ಒಳ್ಳೆಯ ನಿದ್ರೆ ಬರುವುದು. ಆರೋಗ್ಯ ಹೆಚ್ಚುವುದು.
13.
ಸೋರೆಕಾಯಿಯ ರಸವನ್ನು ಅಂಗೈ, ಅಂಗಾಲು ಉರಿಗೆ, ಮೈನವೆಗೆ ಲೇಪಿಸುವಿದರಿಂದ ಗುಣವಾಗುವುದು.
14.
ಸೌತೇಕಾಯಿ ಹೆಚ್ಚಿ ಮುಖದ ಚರ್ಮದ ಮೇಲೆ
ತಿಕ್ಕಿದರೆ ಮುಖ ಕಾಂತಿಯುಕ್ತವಾಗುತ್ತದೆ
15.
ಸೌತೇಕಾಯಿ ತಿರುಳಿನಿಂದ ಅಂಗಾಲು
ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ರೆ ಆವರಿಸುವುದು.
16.
ಸೌತೇಕಾಯಿ ಮೂತ್ರ ರೋಗಕ್ಕೆ ಅತ್ಯುತ್ತಮ
ಔಷಧಿ.
17.
ಹಾಗಲಕಾಯಿ ಸೀಗೊಟ್ಟು ಮಾಡಿಕೊಂಡು ಕ್ರಮವಾಗಿ
ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು, ಕರುಳಿನ ಹುಣ್ಣು,
ಮೂಲವ್ಯಾಧಿ, ಕೆಮ್ಮು ನಿವಾರಣೆಯಾಗುವುದು.
18.
ಹಿಂಗನ್ನು ಮಿತವಾಗಿ ಬಳಸುವುದರಿಂದ ಗ್ಯಾಸ್
ಟ್ರಬಲ್ ಬರುವ ಸಂಭವವಿರುವುದಿಲ್ಲ.
19.
ಕೆಸವಿನ ದಂಟು ಸೇವಿಸಿದರೆ ಜೀರ್ಣಶಕ್ತಿ
ಹೆಚ್ಚಾಗುವುದು.
20.
ನುಗ್ಗೆಕಾಯಿ ನಿರಂತರವಾಗಿ ಸೇವಿಸುವುದರಿಂದ
ಪಚನ ಶಕ್ತಿ ವೃದ್ಧಿಗೊಳ್ಳುವುದು, ಅಸಾಧ್ಯ ರೋಗಿಗಳಿಗು ಸಹ ಇದು
ಪಥ್ಯಕರವಾಗಿರುತ್ತದೆ
21.
ಕಿರುನೆಲ್ಲಿ ಕಾಯಿಯನ್ನು ಉಪ್ಪು ಸಹಿತ
ತಿಂದರೆ ತಲೆ ಸುತ್ತುವಿಕೆ, ಅಜೀರ್ಣ ನಿವಾರಣೆಯಾಗುವುದು
22.
ನಿರಂತರವಾಗಿ ನೆಲ್ಲಿಕಾಯಿಯ ರಸವನ್ನು
ಸೇವಿಸಿದರೆ ಕಣ್ಣಿನ ದೋಷಗಳು ದೂರವಾಗುವವು
23.
ತೊಂಡೆಕಾಯಿಯನ್ನು ಹಸಿಯಾಗಿ ತಿಂದರೆ 'ಎ' ಮತ್ತು 'ಸಿ'
ವಿಟಮಿನ್‌ಗೆ ಹೇರಳವಾಗಿ ದೊರಕುತ್ತದೆ.
24.
ನೆಗಡಿ ವಾಸಿಯಾಗಲು ತುಳಸಿ ಸೊಪ್ಪಿನ ಕಷಾಯವನ್ನು ತಯಾರಿಸಿ ಸರಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು.
25.
ಮುಖವನ್ನು ಸ್ವಚ್ಛವಾಗಿ ತೊಳೆದು , ಸೌತೇಕಾಯಿ ಚಲ್ಲೆಂಖಂದ ಮುಖದ ಆದಂತ ನಯವಾಗಿ
ಉಜ್ಜಿ, ಪ್ರತಿದಿನವೂ ೫-೧೦ ನಿಮಿಷಗಳ ಕಾಲ ಈ ಉಪಚಾರ
ಮಾಡುವುದರಿಂದ ಸುಡು ಬಿಸಿಲಿನ ಬೇಗೆಯಿಂದ ಮುಖ ಕಪ್ಪಾಗಿರುವುದು ಹೋಗುತ್ತದೆ.
26.
ಕೆಸವಿನ ಗೆಡ್ಡೆಯನ್ನು ನುಣ್ಣಗೆ ಅರೆದು
ಕೂದಲು ಬುಡಕ್ಕೆ ಹಚ್ಚುತ್ತಿದ್ದರೆ ಕೂದಲು ಉದುರುವುದು ನಿಲ್ಲುತ್ತದೆ.
27.
ಚೆನ್ನಾಗಿ ಮಾಗಿದ ಟೊಮ್ಯಾಟೊ ಹಣ್ಣು
ಸೇವಿಸುವುದರಿಂದ ಬಾಯಿ ಹುಣ್ಣು ಗುಣವಾಗುವುದು.
28.
ಪ್ರತಿದಿನ ಹಸಿ ಈರುಳ್ಳಿಯನ್ನು ತಿಂದರೆ ಹೃದಯ
ರೋಗದ ತೊಂದರೆ ಇರುವುದಿಲ್ಲ
29.
ಈರುಳ್ಳಿಯನ್ನು ಬೆಲ್ಲದ ಸಹಿತ ತಿಂದರೆ
ರಕ್ತವೃದ್ಧಿಯಾಗುತ್ತದೆ, ಶರೀರದ ತೂಕವು ಸಹ ಹೆಚ್ಚುತ್ತದೆ
30.
ಊಟದ ಜೊತೆಗೆ ಈರುಳ್ಳಿ ನಂಚಿಕೊಂಡು ತಿಂದರೆ
ಕಣ್ಣು ನೋವು, ತಲೆನೋವು ದೂರವಾಗುವುದು
31.
ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಬಿರುಕು
ಬಿಟ್ಟಿರುವ ಅಂಗಾಲಿಗೆ ಲೇಪಿಸಿದರೆ ಅಂಗಾಲು ಒಡೆದು ಜರುಕು ಬಿಟ್ಟಿರುವುದು ಹೋಗುತ್ತದೆ.
32.
ಮಜ್ಜಿಗೆ ಅನ್ನದೊಂದಿಗೆ ಹಸಿ ಈರುಳ್ಳಿಯನ್ನು
ತಿಂದರೆ ಉಷ್ಣದ ಕೆಮ್ಮು ನಿವಾರಣೆಯಾಗುವುದು.
ಹಣ್ಣುಗಳು
1. 1. ಸೇಬು ಹಣ್ಣು ಹಲ್ಲಿನಿಂದಲೇ ಕಚ್ಚಿ ಸಿಪ್ಪೆ
ಸಹಿತ ಊಟವಾದ ನಂತರ ತಿನ್ನಬೇಕು ಅದರಿಂದ ದೈಹಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ, ಜ್ಞಾಪಕ ಶಕ್ತಿಯು ಹೆಚ್ಚುತ್ತದೆ.
3.
ಹಲ್ಲುಗಳಿಂದ ಸೇಬನ್ನು ಕಚ್ಚಿ
ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚಿ ವಸಡುಗಳು ಸಹ ಗಟ್ಟಿಯಾಗುತ್ತವೆ.
4.
ಊಟವಾದ ನಂತರ ನಿರಂತರವಾಗಿ ನಲವತ್ತು ನಾಲ್ಕು
ದಿನಗಳ ವರೆಗೆ ಸೇಬಿನ ಹಣ್ಣನ್ನು ಭಕ್ಷಿಸಿದರೆ ಕಫ ಕಟ್ಟುವ ಸಾಧ್ಯತೆ
ಇರುವುದಿಲ್ಲ.
5.
ಅಲ್ಸರ್‌ನಿಂದ ನರಳುತ್ತಿರುವ ರೋಗಿಗಳು ಸೇಬಿನ
ಹಣ್ಣಿನ ರಸವನ್ನು ದೀರ್ಘಕಾಲ ಸೇವಿಸುತ್ತ ಬಂದರೆ ಖಾಯಿಲೆ ಮಾಯವಾಗುವುದು.
6.
ಮಲ ಸರಿಯಾಗಿ ಆಗದೆ ಇರುವಾಗ ಕಲ್ಲಂಗಡಿ ಹಣ್ಣು
ತಿಂದರೆ ಸುಲಭವಾಗಿ ಮಲವಿಸರ್ಜನೆ ಆಗುವುದು.
7.
ಮೂಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದ
ಆಯಾಸ ಪರಿಹಾರವಾಗುವುದು. ಬಾಯಾರಿಕೆ ಹೋಗಿ ಹಸಿವು ಕಾಣಿಸಿಕೊಳ್ಳುವುದು. ರಕ್ತದ ಶುದ್ದಿಯಲ್ಲಿ ಈ
ರಸ ವಿಶೇಷ ಕಾರ್ಯ ನಿರ್ವಹಿಸುವುದು.
8.
ಕಿತ್ತಲೆ ಹಣ್ಣನ್ನು ಸೇವಿಸುವುದರಿಂದ
ಬಾಯಾರಿಕೆ ತಗ್ಗುವುದು ಹಾಗೂ ರಕ್ತ ಶುದ್ಧಿಯಾಗುವುದು.
9.
ಕೆಂಪು ಮೂಲಂಗಿಯ ಜ್ಯೂಸ್ ತಯಾರಿಸಿ
ಸೇವಿಸಿದರೆ ಶಕ್ತಿ ಅಧಿಕವಾಗುತ್ತದೆ ಕೆಮ್ಮು, ಸಂಧಿವಾತ ರೋಗಗಳ
ನಿವಾರಣೆಯಾಗುತ್ತದೆ.
10.
ಕೆಂಪು ಮೂಲಂಗಿಯನ್ನು ತುರಿದು ಕೋಸಂಬರಿ
ಮಾಡಿಕೊಂಡು ತಿಂದರೆ ದೇಹ ತಂಪಾಗುತ್ತದೆ. ಕಣ್ಣಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸುವುದು.
11.
ಖರ್ಜೂರವನ್ನು ನಿಯಮಿತವಾಗಿ ಸೇವಿಸುತ್ತಾ
ಇದ್ದರೆ ಅಮಶಂಕೆ, ಅತಿಸಾರ ರೋಗಗಳು ಸಹ ಉಪಶಮನವಾಗುವುವು.
12.
ದಾಳಿಂಬೆಯ ಹಣ್ಣಿನ ದಿಂಡನ್ನು ಬೇಯಿಸಿ ಕಷಾಯ
ತಯಾರಿಸಬೇಕು, ಅ ಕಷಾಯಕ್ಕೆ ಉಪ್ಪು ಸೇರಿಸಿ ಹಲವು ಸಾರಿ
ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು, ಹಲ್ಲುನೋವು, ಗಂಟಲುನೋವು ಗುಣವಾಗುವುದು,
13.
ನೇರಳೆಹಣ್ಣು ಶರಬತ್ತು ತಯಾರಿಸಿ
ಭೇದಿಯಾಗುತ್ತಿರುವ ಮಕ್ಕಳಿಗೆ ಕುಡಿಸಿದರೆ ಭೇದಿ ತಟ್ಟನೆ ನಿಲ್ಲುವುದು.
14.
ಹಲಸಿನ ಹಣ್ಣಿನ ಬೀಜಗಳನ್ನು ಹುರಿದು ಚಟ್ನಿ
ಮಾಡಿ ತಯಾರಿಸಿ ತಿಂದರೆ ವೀರ್ಯ ವೃದ್ಧಿಯಾಗುತ್ತದೆ.
15.
ಸಪೋಟ ಹಣ್ಣುಗಳನ್ನು ಸೇವಿಸುವುದರಿಂದ ವೀರ್ಯ
ವೃದ್ಧಿಯಾಗುತ್ತದೆ.
16.
ಕಲ್ಲಂಗಡಿ ಹಣ್ಣನ್ನು ಪುಡಿ ಮಾಡಿದ ಜೀರಿಗೆ
ಮತ್ತು ಸಕ್ಕರೆಯೊಂದಿಗೆ ಸೇವಿಸಿದರೆ ಅತಿಯಾದ
ಬಾಯಾರಿಕೆ ನಿವಾರಣೆಯಾಗುತ್ತದೆ.
17.
ಊಟಕ್ಕೆ ಮೊದಲು ಅನಾನಸ್ ಹಣ್ಣಿನ ರಸವನ್ನು
ಅಡಿಗೆ ಉಪ್ಪು ಕಾಳು ಮೆಣಸಿನ ಪುಡಿಯನ್ನು
ಮಿಶ್ರ ಮಾಡಿಕೊಂಡು ಕುಡಿದರೆ ಹೊಟ್ಟೆ ತೊಳಸುವಿಕೆ, ತಲೆ
ಸುತ್ತುವಿಕೆ - ನೆಗಡಿ ಮುಂತಾದ ರೋಗಗಳು ಗುಣವಾಗುವವು.
18.
ಬಿಳಿ ದ್ರಾಕ್ಷಿಯನ್ನು ನಿರಂತರವಾಗಿ ತಿಂದರೆ
ಹೊಟ್ಟೆ ಹುಣ್ಣು ದೂರವಾಗುವುದು .
19.
ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕಿವುಚಿ ನಂತರ
ಶೋಧಿಸಿ ಕುಡಿಯುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
20.
ದ್ರಾಕ್ಷಿ ಹಣ್ಣಿನ ರಸದೊಂದಿಗೆ ಜೇನು ತುಪ್ಪ
ಬೆರೆಸಿ ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು, ಸುಸ್ತದ
ನರಗಳಲ್ಲಿ ನವಶಕ್ತಿ ತುಂಬಿಕೊಳ್ಳುವುದು.
21.
ಪರಂಗಿ ಕಾಯಿಯ ಸಿಪ್ಪೆಯನ್ನು ತೆಗೆದು ಸಣ್ಣ
ಹೋಳುಗಳಾಗಿ ಮಾಡಿಕೊಂಡು ಕಾಳು ಮೆಣಸಿನ ಪುಡಿ, ನಿಂಬೆರಸ ಮತ್ತು ಉಪ್ಪಿನೊಡನೆ
ಬೆರೆಸಿ ಚೆನ್ನಾಗಿ ಅಗೆದು ತಿನ್ನುವುದರಿಂದ ತು ಡು ಹುಳುಗಳು ನಾಶವಾಗಿ ಮಲ ಬದ್ಧತೆಯ ನಿವಾರಣೆಯಾಗುವುದು.
22.
ಪರಂಗಿ ಕಾಯಿಯನ್ನು ಸಕ್ಕರೆಯೊಂದಿಗೆ ತಿಂದರೆ ಜಂತು ಹುಳುಗಳು ಮಲದಿಂದ ಹೊರಬೀಳುವುದು.
23.
ಊಟವಾದ ನಂತರ ಪರಂಗಿ ಹಣ್ಣನ್ನು ನಿಯಮಿತವಾಗಿ
ಸೇವಿಸದರೆ ಊಟ ಮಾಡಿದ ಆಹಾರ ಚೆನ್ನಾಗಿ ಜೀರ್ಣವಾಗುವುದು.

