ಸೌಂದರ್ಯ ಸಲಹೆ | ಕೂದಲು ಉದುರುವಿಕೆ | ತಲೆ ಹೊಟ್ಟು | ಮುಖದ ಕಪ್ಪು ಕಲೆ | ಸನ್ ಬರ್ನ್ | Health Tips Kannada | ಮನೆಮದ್ದು
0KANNADA HEALTH TIPSಜುಲೈ 13, 2022
Health Tips Kannada
ಸೌಂದರ್ಯ ಸಲಹೆ ಭಾಗ-1
ತಲೆಹೊಟ್ಟು ನಿವಾರಣೆ ಮತ್ತು ಕೂದಲು
ಉದುರುವುದನ್ನು ತಡೆಗಟ್ಟಲು
ದಾಸವಾಳದ ಎಲೆ
(ಯಾವುದೇ ಬಣ್ಣದ ಹೂವಿನ ಎಲೆ) ತೊಳೆದು ಸ್ವಲ್ಪ ನೀರು, ಮೊಸರುಹಾಕಿ ರುಬ್ಬಿ ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ
ಮಾಡಿ
ಬಿಸಿ ನೀರನ್ನೂ
ಆದಷ್ಟು ಕಡಿಮೆ ಉಪಯೋಗಿಸಿ ತಲೆಗೆ ಉಗುರು ಬೆಚ್ಚನೆಯ ನೀರನ್ನುಉಪಯೋಗಿಸಿ.
ತೆಂಗಿನ ಕಾಯಿಯ
ರಸವನ್ನು ತೆಗೆದು ಎಣ್ಣೆ ಜೊತೆ ಸೇರಿಸಿ ವಾರಕ್ಕೆ ಒಂದು ಸಲಹಚ್ಚುವುದರಿಂದ ಒರಟು ನಿವಾರಣೆಯಾಗುವುದು
ಮೆಹಂದಿಯನ್ನು
ಬಿಳಿ ವಿನೆಗರ್ ಮತ್ತು ೨ ಚಮಚ ಮೊಸರು, ೨ ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ಕಲಸಿ
ತಲೆಗೆ ಹಚ್ಚುವುದರಿಂದ ಕಾಂತಿ ಹಾಗೂ ಬೆಳವಣಿಗೆ ಮತ್ತು ಬಿಳಿಕೂದಲು ಬರುವುದು ಕಡಿಮೆಯಾಗುವುದು.
ಒದ್ದೆ ಕೂದಲನ್ನು
ಬಾಚಬಾರದು, ಹೇರ್ ಡ್ರೈಯರ್‌ನಿಂದ ಹೆಚ್ಚಾಗಿ ತಲೆ
ಒಣಗಿಸಬಾರದು ಜಡೆಯ ಹಾಗೂ ಕೂದಲಿನ ಬುಡಕ್ಕೆ ಬಿಗಿಯಾಗಿ ರಬ್ಬರ್ ಬ್ಯಾಂಡ್ ಹಾಕಬಾರದು. ಇದರಿಂದ
ಕೂದಲು ತುಂಡಾಗುತ್ತದೆ.
ಆಗಾಗ ಉಪ್ಪು ಹಾಕದ
ಮಜ್ಜಿಗೆಯನ್ನು ಕೂದಲಿಗೆ ಹಾಕಿ ಸ್ನಾನ ಮಾಡುವುದರಿಂದಹೊಟ್ಟು ನಿವಾರಣೆಯಾಗುವುದು.
ಕೊಬ್ಬರಿ ಎಣ್ಣೆಗೆ
ಕರ್ಪೂರ ಪುಡಿ ಮಾಡಿ ಹಾಕಿ ಹಚ್ಚುವುದರಿಂದ ತಲೆಯಲ್ಲಿ ಹೇನುನಾಶವಾಗುವುದು.
ಬೇಸಿಗೆಗೆ ತಂಪಾದ ಫೇಸ್ ಪ್ಯಾಕ್‌ಗಳು
ಬೇಸಿಗೆಯ
ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಡೆದಾಡಿದರೆ ಸಾಕು, ಮುಖ
ಕಳೆ ಹೀನವಾಗುತ್ತದೆ. ಆ ತ್ವಚೆಗೆ ಮತ್ತೆ ಚೈತನ್ಯ ತುಂಬಲು ಫೇಸ್ ಪ್ಯಾಕ್‌ನಿಂದ ಸಾಧ್ಯ. ಕೆಲವು
ತಂಪಾದ ಫೇಸ್ ಪ್ಯಾಕ್‌ಗಳು ಈ ಬೇಸಿಗೆಯಲ್ಲಿ.
ಒಂದು ಕ್ಯಾರೆಟ್
ತುರಿದು ರಸ ತೆಗೆಯಿರಿ. ಅನಂತರ ಅದನ್ನು ಮುಖಕ್ಕೆ ತೆಳುವಾಗಿ ಲೇಪಿಸಿ ಅರ್ಧಗಂಟೆ ಬಿಟ್ಟು
ತೊಳೆಯಿರಿ.
ಎರಡು ಟೇಬಲ್ ಚಮಚ
ಕೆನೆಯುಕ್ತ ಹಾಲು, ಒಂದು ಟೀ ಚಮಚ ಬಾದಾಮಿ ಎಣ್ಣೆಗೆ ಒಂದೆರಡು
ಹನಿ ರೋಸ್‌ವಾಟರ್ ಸೇರಿಸಿ. ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಚಿಟ್ಟು ತೊಳೆಯಿರಿ.
ಸೌತೇಕಾಯಿಯನ್ನು
ಸಣ್ಣಗೆ ತುರಿದು ರಸ ತೆಗೆಯಿರಿ. ಹತ್ತಿಯ ತುಂಡನ್ನು ಅದರಲ್ಲಿ ಅದ್ದಿ ಮುಖದ ಮೇಲೆ ಮೃದುವಾಗಿ
ಉಜ್ಜಿ, ಇದರಿಂದ ಆಯಾಸಗೊಂಡ ಜೀವಕಣಗಳಿಗೆ ಅರೈಕೆ ಸಿಗುತ್ತದೆ.
ಒಂದು ಮಧ್ಯಮ
ಗಾತ್ರದ ಸೌತೇಕಾಯಿಯನ್ನು ತುರಿದು ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ, ಒಂದು
ಟೀ ಚಮಚ ಸ್ಕಿನ್ ಟಾನಿಕ್, ಎರಡು ಟೀ ಚಮಚ ಹಾಲು ಸೇರಿಸಿ ಮಿಶ್ರಣ ತಯಾರಿಸಿ.
ಅದಕ್ಕೆ ಕೆಲವು ಐಸ್‌ಕ್ಯೂಬ್ ಸೇರಿಸಿ ಮುಖಕ್ಕೆ ಲೇಪಿಸಿ. ಚರ್ಮದ ತಾಜಾತನಕ್ಕೆ ಇದು ಸಹಕಾರಿ.
ಹತ್ತಿಯ ತುಂಡನ್ನು
ನೀರಿನಲ್ಲಿ ಅದ್ದಿ ಹಿಂಡಬೇಕು. ಅದಕ್ಕೆ ಕೆಲವು ಹನಿ ಮೋಸಂಬಿ, ರಸ
ಸೇರಿಸಿ ಮುಖಕ್ಕೆ ಮೃದುವಾಗಿ ಉಜ್ಜಬೇಕು. ಇದು ಎಲ್ಲಾ ವಿಧದ ಚರ್ಮಕ್ಕೂ ಹಿತಕರ.
ಕಡೆದ ಮಜ್ಜಿಗೆ
ಅಥವಾ ಹಾಲು ಮುಖಕ್ಕೆ ಒಂದು ಉತ್ತಮ ಪೋಷಕ. ಒಂದು ಪಾತ್ರೆಯಲ್ಲಿ 3 ಟೀ
ಚಮಚ ಹಾಲು ತೆಗೆದುಕೊಂಡು ಅದಕ್ಕೆ ಒಂದೆರಡು ಹನಿ ಯಾವುದಾದರೂ ಹಣ್ಣಿನ ಅಥವಾ ತರಕಾರಿ ರಸ ಸೇರಿಸಿ.
ಒಂದು ತುಂಡು ಹತ್ತಿಯನ್ನು ಅದರಲ್ಲಿ ಅದ್ದಿ ಮುಖಕ್ಕೆ ಉಜ್ಜಿ.
ಸೌತೇಕಾಯಿಯ
ತುಂಡನ್ನು ಮುಖದ ಮೇಲೆ ಉಜ್ಜಿ ಕೆಲವು ನಿಮಿಷ ಒಣಗಲು ಬಿಡಬೇಕು. ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
ಹೀಗೆ ಮಾಡುವುದರಿಂದ ಮುಖದಲ್ಲಾದ ದಣಿವಿನ ಪರಿಣಾಮ ಮಾಯವಾಗುತ್ತದೆ.
ಚರ್ಮದ ರಕ್ಷಣೆ ಹೇಗೆ ಮಾಡಬೇಕು
ಆಯಾ ಕಾಲದಲ್ಲಿ
ಸಿಗುವ ಕೆಲವು ಹಣ್ಣುಗಳ ರಸವನ್ನು ಬಳಸುವುದರಿಂದ ಚರ್ಮದರಕ್ಷಣೆ ಮಾಡಬಹುದು.
ವಾರಕ್ಕೊಮ್ಮೆ
ಗಸಗಸೆಯನ್ನು ನೆನೆಸಿ ರುಬ್ದ ರಸ ತೆಗೆದು ಮಸಾಜ್ ಮಾಡುವುದರಿಂದಕಪ್ಪು ಕಲೆ ಮಾಯವಾಗುವುದು.
ಮುಂಜಾನೆಯ ಇಬ್ಬನಿ
ಹನಿಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಯಾವುದೇಅಲರ್ಜಿ ವಾಸಿಯಾಗುವುದು.
ಕರಿಬೇವಿನ
ಎಲೆಯನ್ನು ತಿನ್ನಬೇಕು (೫ ರಿಂದ ೧೦ ಎಲೆ)
ಬೆಳಗ್ಗೆ ಎದ್ದು
ನಿ ಅಂದ ೪ ಗ್ಲಾಸ್ ನೀರನ್ನು ಕುಡಿಯಬೇಕು.
ತೆಂಗಿನ ಕಾಯಿ
ಒಡೆದ ನೀರನ್ನು ಮುಖಕ್ಕೆ ಆಗಾಗ ಹಚ್ಚಬೇಕು.
ಅನ್ನ ಬಸಿದ
ಗಂಜಿಯನ್ನು ತಣ್ಣಗಾದ ಮೇಲೆ ಸ್ವಲ್ಪ ಉಪ್ಪು ಹರಳನ್ನು ಹಾಕಿ ಹಚ್ಚುವುದರಿಂದ ಸನ್‌ಬರ್ನ್
ಮಾಯವಾಗುವುದು.
ಕಾಪಿ, ಐಸ್ ಕ್ರೀಮ್ ತಿನ್ನುವ ಮೊದಲು ಹಾಗೂ ನಂತರ ನೀರು ಕುಡಿಯುವುದರಿಂದಕೊಬ್ಬಿನ ಅಂಶ ರಕ್ತದಲ್ಲಿ ಸೇರುವುದಿಲ್ಲ.
ಬೂದುಕುಂಬಳಕಾಯಿ
ರಸವನ್ನು ಬೆಳಗ್ಗೆ ಎದ್ದು ಕುಡಿಯುವುದರಿಂದ ತೂಕಕಡಿಮೆಮಾಡಬಹುದು.
ಬಿಳಿಮೂಲಂಗಿ ರಸವನ್ನು
ಸೇವಿಸುವುದರಿಂದ ತೂಕ ಕಡಿಮೆಯಾಗು.
ಬೆಳಗ್ಗೆ ಎದ್ದು
ವಾಕಿಂಗ್ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಬಹುದು.
ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯ, ಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಜೇನುತುಪ್ಪ, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ,ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿ, ಬೆಳ್ಳುಳ್ಳಿ,ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ,ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ,ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್, ಮನೆಮದ್ದು, Health Tips Kannada,