Vaastu Tips Kannada
ಮನೆ ಕಟ್ಟುವ ಮುನ್ನ ಅಥವ ಮನೆಗೆ ಬಾಡಿಗೆಗೆ ಹೋಗುವ ಮುನ್ನ ಈ ಸುದ್ದಿ ಒಮ್ಮೆ ನೋಡಿ
ನಮಸ್ತೆ ಬಂಧುಗಳೆ ಒಂದು
ಮನೆ ಕಟ್ಟುವ ಮುನ್ನ ವಾಸ್ತುವಿನ ವಿಷಯದಲ್ಲಿ ಸಾವಿರ ಬಾರಿ ಯೋಚನೆ ಮಾಡಬೇಕು, ಹಾಗೆಯೇ ಇದು ಬರಿ ಮನೆ ಕಟ್ಟುವವರಿಗೆ ಮಾತ್ರವಲ್ಲಾ, ಮನೆಗೆ ಬಾಡಿಗೆಗೆ ಹೋಗುವವರಿಗು
ಇದು ಅನ್ವಯಿಸುತ್ತದೆ, ವಾಸ್ತು ದೋಷ ಇರುವಮನೆಗೆ ಬಾಡಿಗೆಹೋದರೆ ನಿಮಗೆ ಕನಸಿನಲ್ಲಿ
ಕೆಟ್ಟ ಸ್ವಪ್ನಗಳು, ಪೀಡೆ ಪಿಶಾಚಿಗಳ ಕಾಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಹದಗೆಟ್ಟ ಹಣಕಾಸಿನ ಪರಿಸ್ಥಿತಿ, ಯಾವುದೇ ಕಾರ್ಯ ಕೆಲಸ
ಕೈ ಗೂಡದೆ ಇರುವುದು ಹೀಗೆ ಸಾವಿರ ಸಮಸ್ಯೆಗಳು ಉಧ್ಭವಿಸುತ್ತದೆ, ಇದಕ್ಕೆಲ್ಲ ಸೂಕ್ತ ಪರಿಹಾರ ವಾಸ್ತುವಿನಲ್ಲಿದೆ. ಅದ್ದರಿಂದ ಈ ಆರ್ಟಿಕಲ್
ನಲ್ಲಿ ವಾಸ್ತುಪ್ರಕಾರ ಯಾವ ಯಾವ ದಿಕ್ಕಿನ್ನಲ್ಲಿ ಏನೇನಿರಬೆಕು ಎಂಬುದನ್ನು ತಿಳಿಸಿದ್ದೇವೆ, ದಯವಿಟ್ಟು ಪೂರ್ತಿ ಒದಿ.
ದಿಕ್ಕುಗಳಲ್ಲೇ
ಪರಮ ಪವಿತ್ರವಾದುದು ಈಶಾನ್ಯ ದಿಕ್ಕು. ಆದ್ದರಿಂದ ದೇವರಕೋಣೆ. ಪೂಜಾಗೃಹ ಈಶಾನ್ಯಕ್ಕಿದ್ದರೆ ಉತ್ತಮ. ಇದಲ್ಲದೆ ಬಾವಿ ಬೊರ್ವೆಲ್ ಕೂಡಾ ಈಶಾನ್ಯಕ್ಕಿದ್ದರೆ ಒಳಿತು. ಉತ್ತರ ದಿಕ್ಕಿನ ದಿಕ್ಷಾಲಕ ಕುಬೇರನಾದ್ದರಿಂದ ಹಣಕಾಸಿಗೆ ಸಂಬಂಧಪಟ್ಟ ವಸ್ತುಗಳನ್ನು ಅಮೂಲ್ಯ ಬೆಲೆ ಬಾಳುವ ಚಿನ್ನ, ರತ್ನಗಳನ್ನು,
ಅಮೂಲ್ಯ ಕಾಗದ ಪತ್ರಗಳನ್ನು ಇಡುವ ತಿಜೋರಿ,
ಕಪಾಟು ಉತ್ತರಕ್ಕಿದ್ದರೆ ಉತ್ತಮ.
ಆಗ್ನೆಯ ಅಧಿಪತಿ ಅಗ್ನಿಯಾದ್ದರಿಂದ ಅಡುಗೆ ಮನೆ, ಆಗ್ನಿಯಕ್ಕಿದ್ದರೆ ಉತ್ತಮ. ಅಡುಗೆ ಮಾಡಲು ಬಳಸುವ ಅಗ್ನಿಗೆ ಸಂಬಂಧಪಟ್ಟ ಸ್ಟವ್, ಒಲೆ, ಗ್ಯಾಸ್ ಮುಂತಾದವು ಆಗ್ನೆಯದಲ್ಲಿದ್ದರೆ ಅತ್ಯುತ್ತಮ.
ಮಲಗುವ ಕೋಣೆ
ದಕ್ಷಿಣಕ್ಕಿದ್ದರೆ ಉತ್ತಮ. ಆದರೆ ಉತ್ತರಕ್ಕೆ ತಲೆ ಹಾಕಿ ಮಲಗದಂತೆ ವ್ಯವಸ್ಥೆಯಿರಬೇಕು.
ಮಲಗುವ ಕೋಣೆ ಚೌಕಾಕಾರ ಅಥವಾ ನಿಯತಾಕಾರದಲ್ಲಿದ್ದರೆ ಉತ್ತಮ. ಮಲಗುವಾಗ ದಕ್ಷಿಣಕ್ಕೆ ತಲೆಹಾಕಿ ಮಲಗಿದರೆ ಉತ್ತಮ. ಹೀಗಾಗಿಯೇ ಏನೋ ಮಲಗುವಕೋಣೆ ದಕ್ಷಿಣದಲ್ಲಿದ್ದರೆ ಉತ್ತಮ.
ಎನ್ನುತ್ತಾರೆ ಹಿರಿಯರು. ಇದು ವೈಜ್ಞಾನಿಕವಾಗಿ ಕೂಡಾ ಉತ್ತಮ. ಉತ್ತರಕ್ಕೆ
ತಲೆಹಾಕಿ ಮಲಗಿದರೆ, ದೇಹದಲ್ಲಿನ ರಕ್ತ ಸಂಚಾರ, ಅಲ್ಲದೇ ಮಾನಸಿಕ ಪರಿಸ್ಥಿತಿ ಮೇಲೂ ಪರಿಣಾಮ
ಬೀರುತ್ತದೆ. ಹೀಗಾಗಿ ದಕ್ಷಿಣಕ್ಕೆ ತಲೆಹಾಕಿ ಮಲಗಿದರೆ ಉತ್ತಮ.
ಮಲಗುವ ಕೋಣೆಯನ್ನು
ವಾಸ್ತುರೀತ್ಯಾ ನಿರ್ಮಿಸದೇ ಮನಬಂದಂತೆ ನಿರ್ಮಿಸಿದರೆ, ನಂತರ
ಆ ಮಲಗುವ ಕೋಣೆಯಲ್ಲಿ ಮಲಗಿದಾಗ ಭಯಾನಕ ಸ್ವಪ್ನಗಳು ಬೀಳುವುದು, ನಿದ್ರೆ ಬರದಿರುವುದು, ಚಿಕ್ಕಮಕ್ಕಳು ಹಾಸಿಗೆಯಲ್ಲಿ ಮೂತ್ರಮಾಡುವುದು, ಕನಸಿನಲ್ಲಿ
ಕೂಗಾಡುವುದೇ ಮುಂತಾದವು ಸಂಭವಿಸುವ ಸಾದ್ಯತೆಗಳಿವೆ.
ಒಂದು ಮನೆಯ 4,
5 ಮಲಗುವ ಕೋಣೆ ಇಡಬೇಕಾದರೆ ಮುಖ್ಯ ಕೋಣೆಯನ್ನು ದಕ್ಷಿಣಕ್ಕಿಡುವುದು ಉತ್ತಮವೆಂದು ಜ್ಞಾನಿಕಗಳ ಅಭಿಪ್ರಾಯ ಕೆಲವು ಜನ ವಾಸ್ತುಶಾಸ್ತ್ರಜ್ಞರ ಪ್ರಕಾರ 4, 5
ಮಲಗುವ ಕೋಣೆ ಇಡಬೇಕಾದಾಗ ಮಾಸ್ಟರ್ ಬೆಡ್ ರೋಮ್ಮನ್ನು ನೈರುತ್ಯ
ದಿಕ್ಕಿಗೆ ಮಾಡಿ, ಉಳಿದವನ್ನು ಮಾಸ್ಟರ್ ಬೆಡ್ ರೂಮ್ ನ ಪೂರ್ವ
ಉತ್ತರ ದಿಕ್ಕಿಗೆ ಮಾಡಬಹುದೆಂದು ಅಭಿಪ್ರಾಯ.
ವಾಸ್ತುಶಾಸ್ತ್ರಜ್ಞರನೇಕರ
ಪ್ರಾಕಾರ ಪೂರ್ವದಿಕ್ಕಿಗೆ ಸ್ನಾನ ಗೃಹವಿದ್ದರೆ ಉತ್ತಮ. ಸ್ನಾನಕ್ಕೆ
ಬಿಸಿನೀರನ್ನು ಬಳಸುವವರು ಹೀಟರನ್ನು, ಗೀಸರನ್ನು ಆಗ್ನೆಯ ಮೂಲೆಯಲ್ಲಿ ಕೂರಿಸಬಹುದು. 'ಟ್ಯಾಪ್, ಷೋವರ್ ಅನ್ನು ಉತ್ತರದಿಕ್ಕಿನಲ್ಲಿ ಕೂರಿಸಬಹುದೆನ್ನುತ್ತಾರೆ ಪಂಡಿತರು. ವಾಷಿಂಗ್ ಮಷಿನ್ನನ್ನು ಆಗ್ನೆಯ ಹಾಗೂ ವಾಯುವ್ಯ ದಿಕ್ಕಿಗೆ ಇಡಬಹುದು. ಒಂದು ಸಂಪ್ರದಾಯದಲ್ಲಿ ಸ್ನಾನಕ್ಕೆ ಅತೀ ಮಹತ್ವವಿದೆ. ನದಿಗಳಲ್ಲಿ ಋಷಿಮುನಿಗಳು ಸ್ನಾನ ಮಾಡಿ ಪೂರ್ವದಿಕ್ಕಗೆ ಮುಖಮಾಡಿ ಸೂರ್ಯ ನನ್ನು ಪೂಜಿಸುತ್ತಾ ನದಿಗಳಲ್ಲಿ ಸೂರ್ಯನಿಗೆ
ಅರ್ಘನೀಡುತ್ತಿದ್ದರು.
ಪಶುಗಳ ಕೊಠಡಿ,
ಅತಿಥಿಗೃಹ, ಧಾನ್ಯಸಂಗ್ರಹ ಇವು ವಾಯುವ್ಯದಲ್ಲಿದ್ದರೆ ಉತ್ತಮ. ಆ ದಿಕ್ಕಿನ ಅಧಿಪತಿ ವಾಯುವಾದ್ದರಿಂದ ಇದು ಸೂಕ್ತವೆನಿಸುತ್ತದೆ. ಧಾನ್ಯ ಸಂಗ್ರಹದ ಮನೆ ಸದಾ ಗಾಳಿಯಿಂದ ಕೂಡಿದ್ದು ಧಾನ್ಯಗಳ ಹಾಳಾಗಬಹುದೆಂಬ ಉದ್ದೇಶದಿಂದ ಸುರಕ್ಷಿತವಾಗಿ ಸಂಗ್ರಹಿಸಲು ವಾಯುವ್ಯ ದಿಕ್ಕೇ ಎಂದರು ಪಂಡಿತರು. ಹಾಗೆ ಪಶುಗಳು ಕೊಠಡಿ ಕೂಡಾ ವಾಯುವ್ಯಕ್ಕಿದ್ದರೆ ಉತ್ತಮ ಎಂದರು ವೈದಿಕರು. ಉಗ್ರಾಣವು ನೈರುತ್ಯಕ್ಕಿದ್ದರೆ ಉತ್ತಮ.
ವಿದ್ವಾಂಸರ
ಪ್ರಕಾರ ವಾಸ್ತುಶಾಸ್ತ್ರಜ್ಞರ ಸಲಹೆಯಂತೆ ಭಾರವಾದ 'ವಸ್ತುಗಳನ್ನು ನೈರುತ್ಯಕ್ಕಿಡುವುದು ಉತ್ತಮ. ಭಾರವಾದ ವಸ್ತುಗಳನ್ನು ಸಂಗ್ರಹಿಸುವ ಕೋಣೆ, ಉಗ್ರಾಣ
ಇವೆಲ್ಲ ನೈರುತ್ಯಕ್ಕಿದ್ದರೆ ಉತ್ತಮ. ಆಯುಧ ಸಾಮಾನುಗಳನ್ನು
ಸಂಗ್ರಹಿಸುವ ಮನೆ (ಸ್ಟೋರ್ ರೂಮ್) ನೈರುತ್ಯದಲ್ಲಿರೆ ಉತ್ತಮ ಎನ್ನುತ್ತಾರೆ. ಭೋಜನದ (ಡೈನಿಂಗ್ ರೂಮ್)ಕೋಣೆಯಲ್ಲಿ ಡೈನಿಂಗ್ ಟೇಬಲ್ ಬಳಸಬೇಕಾಗುತ್ತದೆ. ಚೌಕಾಕಾರದ,
ಆಯತಾಕಾರದ, ಡೈನನಿಂಗ್ ಟೇಬಲ್ ಬಳಸಿದರೆ ಉತ್ತಮ. ಭೋಜನದ
ಮನೆಯಲ್ಲಿ ವಾಶ್‌ಬೇಸಿನ್ ಬಳಸುವದಾದರೆ ಡೈನಿಂಗ್ ರೂಮ್‌ನಲ್ಲಿ ಪೂರ್ವ ಉತ್ತರದ ಮೂಲೆಯಲ್ಲಿದ್ದರೆ ಉತ್ತಮ ಎನ್ನುತ್ತಾರೆ ವಿದ್ವಾಂಸರು.
ಮನೆಯಲ್ಲಿ
ಅತಿಥಿಗೃಹ ವಾಯುವ್ಯದಲ್ಲಿದ್ದರೆ ಉತ್ತಮ “ಅತಿಥಿ ದೇವೊ ಭವ” ಎಂದರು ಹಿರಿಯರು, ಅತಿಥಿ, ದೇವರಿಗೆ
ಸಮಾನ, ಮನೆಗೆ ಬಂದವರನ್ನು ಹಿರಿಯರನ್ನು ವಯಸ್ಕರನ್ನು ಜ್ಯೋತಿಸಿಗಳನ್ನು ವೈದಿಕರನ್ನು, ಪಂಡಿತರನ್ನು ಜ್ಞಾನಿಗಳನ್ನು ಎಂದಿಗೂ ಅವಮಾನಿಸಬಾರದು. ಸದಾ ಗೌರವದಿಂದ ಕಾಣಬೇಕು. ಮನೆಗೆ ಬಂದವರ ಮನಸ್ಸನ್ನು ನೂಯಿಸಬಾರದು.
ಮನೆಯಲ್ಲಿ ಅವರ ಗೌರವ, ಅತಿಥಿ ಸತ್ಕಾರ ಇವ ನಡೆಯಬೇಕು. ಆಗ ವಾಸ್ತುಪುರುಷನು ಸಂತಸಗೊಳ್ಳುತ್ತಾನೆ. ಹರಸುತ್ತಾನೆ. ಮನೆಯು ಶಾಂತಿ, ಸುಃಖ,
ಸಂಪತ್ತಿನಿಂದ ಕೂಡಿರುವುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ. ಈ ಉದ್ದೇಶದಿಂದಲೇನೋ ಅತಿಥಿಗೃಹ ನಿರ್ಮಿಸುತ್ತಾರೆನೋ. ಆದರೆ ವಾಯು ದಿಕ್ಕಿಗಿರುವುದು ಉತ್ತಮ.





