Vaastu Tips Kannada
ಈ ದಿಕ್ಕಿನಲ್ಲಿ ಈ ವಸ್ತು ಇದ್ದರೆ ನಿಮ್ಮ ಎಲ್ಲಾ ಸಮಸ್ಯೆಗಳು ಅಂತ್ಯ (ಆರೋಗ್ಯ,ಹಣಕಾಸು,ಸಂತಾನ,ನೆಮ್ಮದಿ,ಆಸ್ತಿ ವ್ಯಾಜ್ಯ,ಕಾನೂನು ವ್ಯಾಜ್ಯ)
ಪೂರ್ವ ದಿಕ್ಕು
ಸೂರ್ಯನು ಉದಯಿಸುವ
ದಿಕ್ಕಿಗೆ ಪೂರ್ವ ದಿಕ್ಕು ಎನ್ನುತ್ತಾರೆ. ಪುರಾತನ
ಕಾಲದಲ್ಲಿ ಋಷಿಮುನಿಗಳು ಬೆಳಿಗ್ಗೆ ಸೂರ್ಯೋದಯ ಕಾಲಕ್ಕೆ ನದಿಗಳಲ್ಲಿ ಸೂರ್ಯನಿಗೆ ಅರ್ಘ ನೀಡಿ ವಂದಿಸುತ್ತಿದ್ದರು. ದಿನವೂ ಬೆಳಿಗ್ಗೆ ಗಾಯತ್ರಿ ಮಂತ್ರ ಜಪಿಸುತ್ತಿದ್ದರು. ಪೂರ್ವದಿಕ್ಕು
ತುಂಬಾ ಪವಿತ್ರವಾದುದು. ಅದನ್ನು ಎಂದಿಗೂ
ಅಶುಚಿಗೊಳಿಸಬಾರದು. ಈ ದಿಕ್ಕಿನ
ದಿಕ್ಷಾಲಕ ದೇವರು ಇಂದ್ರ. ಆತನ ಆಯುಧ ವಜ್ರಾಯುಧ.
ಈ ದಿಕ್ಕಿನ ಪ್ರತಿನಿಧಿ ಗ್ರಹ ಸೂರ್ಯ.
ಪೂರ್ವದಿಕ್ಕು
ಪವಿತ್ರವಾದುದು
ಆದ್ದರಿಂದ ಮನೆಯ ಪೂರ್ವದಿಶೆ ಸ್ವಚ್ಚವಾಗಿಡಬೇಕು. ಮನೆಯ ನಿರ್ಮಾಣದ ಸಮಯದಲ್ಲಿ ಈ ದಿಕ್ಕಿನಲ್ಲಿ ಖಾಲಿಬಿಡಬೇಕು, ಅದು ಅತ್ಯುತ್ತಮ.
ದಿಕ್ಕು ದೋಷದಿಂದ ಮುಕ್ತವಾಗಿರಬೇಕು. ಪೂರ್ವದಿಶೆಯಲ್ಲಿ
ಕಸ, ಕಡ್ಡಿ, ಕೆಸರು, ಕಲ್ಲು, ಮುಳ್ಳು, ಮಣ್ಣು
ಇವುಗಳಿಂದ ತುಂಬಿದ್ದರೆ ಸಂತಾನದ ಮೇಲೆ ಹಣದ ಮೇಲೆ ಅದು
ಋಣಾತ್ಮಕ ಪ್ರಭಾವ ಬೀರುತ್ತದೆ,
ತೊಂದರೆ ಆಗುತ್ತದೆ. ಎಂದು ಜ್ಞಾನಿಗಳ ಅಭಿಪ್ರಾಯ. ಪೂರ್ವಕ್ಕೆ ಬಾಗಿಲು ಕಿಟಕಿಗಳಿದ್ದರೆ ಉತ್ತಮ ಎಂದು ವೈಧಿಕರ
ಅಭಿಪ್ರಾಯ. ಪೂರ್ವಕ್ಕೆ ಸ್ನಾನದ ಗೃಹವನ್ನು
ನಿರ್ಮಿಸಬಹುದು ಎನ್ನುತ್ತಾರೆ ಪಂಡಿತರು. ಈ ದಿಕ್ಕಿನ ವಾಸ್ತು ದೋಷ ನಿವಾರಣೆಗೆ ಗುರು ಮುಖದಿಂದ ಸಲಹೆ ಪಡೆದು ಗಾಯತ್ರಿ
ಮಂತ್ರ ಪಠಿಸಿ ಸೂರನಿಗೆ ಪೂಜೆ ಸಲ್ಲಿಸುವುದು. ಆರ್ಥ್ಯ ಸಲ್ಲಿಸುವುದು.
ಪಶ್ಚಿಮದಿಕ್ಕು
ಪೂರ್ವಕ್ಕೆ ಅಭಿಮುಖವಾದ
ದಿಕ್ಕೇ ಸೂರ್ಯನು ಮುಳುಗುವ ದಿಕ್ಕ ಪಶ್ಚಿಮ.
ಈ ದಿಕ್ಕಿನ ದಿಕ್ಷಾಲಕ ವರುಣ. ಆಯುಧ ಪಾಶ, ಪ್ರತಿನಿಧಿ ಗ್ರಹ ಶನಿ. ಸಾಮಾನ್ಯವಾಗಿ ಪಂಡಿತರ ಅಭಿಪ್ರಾಯದಂತೆ ಮನೆಯ
ಬಾಗಿಲು ಪಶ್ಚಿಮ ದಿಕ್ಕಿಗೆ ಇರಬಾರದು. ಊಟದ
ಕೋಣೆಯನ್ನು ಪಶ್ಚಿಮಕ್ಕೆ ನಿರ್ಮಿಸಬಾರದು.
ಈ ದಿಕ್ಕು ಆಯಷ್ಯ, ಕಿರ್ತಿ ಮೇಲೆ ಪರಿಣಾಮ ಬಿರುತ್ತದೆ. ಪಶ್ಚಿಮ ದಿಕ್ಕು ತಗ್ಗಿರಬಾರದು. ತಗ್ಗಿದ್ದರೆ ಬಹಳ
ಹಾನಿಯಾಗುತ್ತದೆ. ಎಂದು ವಿದ್ವಾಂಸರ
ಅಭಿಪ್ರಾಯ. ಪಶ್ಚಿಮಭಾಗ ತಗ್ಗಿದ್ದಲ್ಲಿ ಅಶಾಂತತೆ, ಅಪಕಿರ್ತಿ,
ಗೊಂದಲ ತಾಂಡವಾಡುತ್ತದೆ. ಪಶ್ಚಿಮ ದಿಕ್ಕಿನ ದೊಷ ನಿವಾರಣೆಗೆ ಶನಿ ಕಥೆ ಮಾಡಿಸುವುದು, ಶನಿಗ್ರಹಸ್ತೋತ್ರ,
ಶನಿಗ್ರಹ ಸ್ತೋತ್ರ ಪಠಣ ಮನೆಯಲ್ಲಿ ಮಾಡುವುದು ಕಾರಣವಾಗಬಹುದು ಅಲ್ಲದೇ ಶನಿವಾರ, ಸಾಸಿವೆ
ಎಣ್ಣೆ ಕರಿಎಳ್ಳು ಬ್ರಾಹ್ಮಣರಿಗೆ ದಾನ ಮಾಡುವುದು
ಕಾಣಬಹುದು. ಇದಲ್ಲದೆ ಮನೆಯಲ್ಲಿ
"ವರುಣಯಂತ್ರ" ಕೂಡಾ ಸ್ಥಾಪಿಸಬಹುದು. ಭಕ್ತಿಯಿಂದ ಶ್ರದ್ದೆಯಿಂದ ದಾನ, ಧರ್ಮ ಮಾಡುವುದು ಅತ್ಯವಶ್ಯಕ.
ಶ್ರದ್ಧೆಯಿಲ್ಲದೆ ಪೂಜೆ ದಾನ, ಧರ್ಮ, ಮಾಡಿದರೆ ಅದು ಫಲಕಾರಿ ಆಗುವುದಿಲ್ಲ.
ಉತ್ತರ ದಿಕ್ಕು
ಅನೇಕರ ಪೂರ್ವಕ್ಕೆ ಮುಖ ಮಾಡಿ ನಿಂತಾಗ ನಿಮ್ಮ ಎಡಕ್ಕೆ ಇರುವ ದಿಕ್ಕೇಉತ್ತರ. ಉತ್ತರ ದಿಕ್ಕಿನ ಸ್ವಾಮಿ ಕುಬೇರ. ಆಯುಧ
ಗದೆ, ಪ್ರತಿನಿಧಿ ಬುಧ. ಉತ್ತರ ದಿಕ್ಕಿನ ಸ್ವಾಮಿ ಕುಬೇರನಾದ್ದರಿಂದ ತಿಜೊರಿ, ಕಪಾಟು, ಹಣ, ಮುತ್ತು
ರತ್ನ, ಚಿನ್ನ, ಬೆಳ್ಳಿ ಇಡುವ
ಕಪಾಟು ಉತ್ತರಕ್ಕಿಡುವುದು ಉತ್ತಮ.ಉತ್ತರ
ದಿಕ್ಕು ಶುಚಿಯಾಗಿರಬೇಕು, ಮನೆಯಲ್ಲಿ ಬಡತನ ಇರುವವರನೇಕರ ಮನೆಯಲ್ಲಿ ಹಣದ ಸಮಸ್ಯೆಯಿಂದ ಒದ್ದಾಡುವ ಮನೆಯನ್ನು ವೀಕ್ಷಿಸಿದಾಗ ಉತ್ತರ ದಿಕ್ಕು ಅಶುಚಿಯಾಗಿದ್ದು ಗೊಬ್ಬರ ಗುಂಡಿ, ಅಶುಚಿ
ವಸ್ತುಗಳು ಉತ್ತರದಿಕ್ಕು ವಿಕೃತವಾಗಿರುವದನ್ನು ಕಾಣಬಹುದು. ಹಿರಿಯರ ಪ್ರಕಾರ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ವೈಜ್ಞಾನಿಕರನೇಕ ಪ್ರಕಾರ ಉತ್ತರ ದಿಕ್ಕಿಗೆ ತಲೆಹಾಕಿ
ಮಲಗಿದರೆ ರಕ್ತ ಸಂಚಾರದಲ್ಲಿ ತೊಂದರೆಯಾಗುವದೆಂದು (ರಕ್ತ
ಸಂಚಾರದಲ್ಲಿ ಏರು ಪೇರಾಗುವದೆಂದ
ಅಭಿಪ್ರಾಯ ಪಡುತ್ತಾರೆ.) ಬೆಲೆ ಬಾಳುವ ವಸ್ತು ಚಿನ್ನಗಳೆಲ್ಲವನ್ನು ಉತ್ತರ ದಿಶೆಯಲ್ಲಿ ಇಡುವುದು ಅತ್ಯುತ್ತಮ. ಉತ್ತರಕ್ಕೆ ದಕ್ಷಿಣಕ್ಕಿಂತ ಸ್ವಲ್ಪ ಹೆಚ್ಚು ಖಾಲಿ ಜಾಗ ಬಿಡಬೇಕು.
ಉತ್ತರ ದಿಕ್ಕಿನ ದೊಷ ಪರಿಹಾರಕ್ಕೆ
ಮನೆಯಲ್ಲಿ ಬುಧ ಆದರಿಸಬಹುದು. ಅಲ್ಲಿ ಕುಬೇರ ಯಂತ್ರ,
ಸ್ತೋತ್ರ ಪಠಣ ಬುಧವಾರ ವ್ರತ ಕುಬೇರ
ಪೂಜೆ ಮಾಡಬಹುದು. ಆದಷ್ಟು ಉತ್ತರ ದಿಕ್ಕು ಅಶುಚಿ(ದೋಷ) ಆಗದಂತೆ ನೋಡಿಕೊಳ್ಳಬೇಕು.
ದಕ್ಷಿಣ ದಿಕ್ಕು
ಪೂರ್ವಕ್ಕೆ
ಮುಖಮಾಡಿ ನಿಂತರೆ ಬಲಗೈ ಕಡೆಗಿರುವ ದಿಕ್ಕೇ ದಕ್ಷಿಣ, ಈ
ದಿಕ್ಕಿನ ದಿಕ್ಷಾಲಕ ಯಮ. ಪ್ರತಿ ನಿಧಿ ಗ್ರಹ ಕುಜ. ದಕ್ಷಿಣ ದಿಕ್ಕಿಗೆ ಮಲಗುವ ಕೋಣೆಯನ್ನು ನಿರ್ಮಿಸಬಹುದು. ದಕ್ಷಿಣ ದಿಕ್ಕಿನಲ್ಲಿ
ಹೆಚ್ಚು ಖಾಲಿ ಸ್ಥಳವಿದ್ದರೆ ಹಾನಿ
ಎನ್ನುತ್ತಾರೆ. ಪಂಡಿತರು.
ವಿದ್ವಾಂಸರ
ಪ್ರಕಾರ ದಕ್ಷಿಣಕ್ಕೆ ಗಿಡಮರಗಳನ್ನು ನೆಡಬಹುದು ಅಲ್ಲದೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು, ಕಾರಣ
ಉತ್ತರ ದಿಕ್ಕಿನ ವಿರುದ್ಧವಾದ
ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಬಹುದು. ಇದು ವೈಜ್ಞಾನಿಕವಾಗಿ ಕೂಡ ಉತ್ತಮ. ಏಕೆಂದರೆ ಭೂಮಿಯ ಉತ್ತರ ದಕ್ಷಿಣ ದ್ರುವಗಳಲ್ಲಿ ಪರಸ್ಪರ ಆಕರ್ಷಣೆ ಇರುವುದರಿಂದ
ಉತ್ತರಕ್ಕೆ ತಲೆ ಹಾಕಿ ರಕ್ತಸಂಚಾರದಲ್ಲಿ
ಏರುಪೇರಾಗಿ ಮಾನಸಿಕವಾಗಿ ಸಮತೋಲನದಲ್ಲಿ
ಏರು ಪೇರಾಗುತ್ತದೆ. ಆದ್ದರಿಂದ ದಕ್ಷಿಣಕ್ಕೆ ತಲೆ ಹಾಕಿ ಮಲಗಿದರೆ ಉತ್ತಮ ನಿದ್ರೆಯು ಜೊತೆ ಮಾನಸಿಕ ಸಮತೋಲನ ಕಾಯ್ದುಕೊಳ್ಳಬಹುದು. ದಕ್ಷಿಣ ದಿಕ್ಕಿನ ದೋಷ ನಿವಾರಣೆಗೆ ಕುಜ ಗ್ರಹ ಸ್ತೋತ್ರ ಪಠಣ, ಹನುಮಾನ
ಚರಿತಾ ಪಠಣ, ಗಣಪತಿ ಪೂಜೆ, ಮಂಗಳ ಯಂತ್ರ ಪೂಜೆ ಮಾಡಬಹುದು.
ಈಶಾನ್ಯ ದಿಕ್ಕು
ದಿಕ್ಕಿನ ಸ್ವಾಮಿ
ಈಶ್ವರ(ರುದ್ರ), ಪವಿತ್ರವಾದುದು. ಪೂರ್ವ ಹಾಗೂ ಉತ್ತರ ನಡುವಿನ ದಿಕ್ಕೆ ಈಶಾನ್ಯ ದಿಕ್ಕು ಈಶಾನ್ಯ ಪ್ರತಿನಿಧಿ ಗ್ರಹ ಗುರು. ಈ ದಿಕ್ಕು ಪರಮ ಆದ್ದರಿಂದ ಪೂಜಾಗೃಹ ಈಶಾನ್ಯಕ್ಕಿದ್ದರೆ ಉತ್ತಮ. ಬಾವಿಯನ್ನು ಈಶಾನ್ಯ ದಿಕ್ಕಿನಲ್ಲಿ ತೋಡಿದರೆ
ಅತ್ಯುತ್ತಮ ಎಂದು ಪಂಡಿತರು ಅಭಿಪ್ರಾಯ
ಪಡುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ಸ್ವತಃ ದೇವತೆಗಳು ವಾಸಿಸುತ್ತಾರೆ ಎನ್ನುತ್ತಾರೆ. ಪಂಡಿತರು ವಿದ್ಯಾರ್ಜನೆ, ಪೂಜಾಸ್ಥಳ, ಇವೆಲ್ಲವುಗಳಿಗೆ ಶುಭವಾದುದು ಈಶಾನ್ಯ ದಿಕ್ಕು
ಈಶಾನ್ಯ ದಿಕ್ಕಿಗೆ ಶೌಚಾಲಯ ಇರಲೇಕೂಡದು. ಈಶಾನ್ಯ ದಿಕ್ಕಿನಲ್ಲಿ ಕಸ, ಕಡ್ಡಿ, ಗೊಬ್ಬರದಗುಂಡಿ, ಕಲ್ಲು ಮುಳ್ಳು, ಇತ್ಯಾದಿ
ಇರಬಾರದು. ಈಶಾನ್ಯ ದಿಕ್ಕುದೋಷಯುಕ್ತವಾಗಿದ್ದರೆ ಆ ಮನೆಯು ಅಭಿವೃದ್ಧಿಯಾಗುವುದಿಲ್ಲ. ಅಲ್ಲದೇ ಸಕಲ ರೀತಿಯ ಕಷ್ಟ ನಷ್ಟಗಳ ಸುಳಿಗೆ ಆ ಮನೆ ಸಿಲುಕುವದಲ್ಲದೆ ಸಂತಾನದಲ್ಲಿ ಅಭಿವೃದ್ಧಿ ಆಗದು. ಸ್ನಾನದ ಮನೆ
ಕೂಡಾ ಮನೆಯಲ್ಲಿ ಈಶಾನ್ಯ ದಿಕ್ಕಿ ಗಿರಬಾರದು. ಪ್ರತಿನಿತ್ಯ
ಪೂಜೆ ಪುನಸ್ಕಾರ, ಮನೆಯಲ್ಲಿ ಪವೀತ್ರತೆ ಇದ್ದರೆ ಬದುಕೇ ಸುಗಮವಾಗಿರುತ್ತದೆ. ಈಶಾನ್ಯ ದಿಕ್ಕಿನಲ್ಲಿ ಎಂದಿಗೂ ಶೌಚಾಲಯ ಇರಬಾರದು ಶುಚಿತ್ವ ಪವಿತ್ರತೆಯನ್ನು ಈಶಾನ್ಯ ದಿಕ್ಕಿನಲ್ಲಿ ಕಾದುಕೊಂಡಷ್ಟು ಮನೆಯು ನಂದಗೊಕುಲವಾಗುವುದು.
ನೈರುತ್ಯ ದಿಕ್ಕು
ದಕ್ಷಿಣ, ಪಶ್ಚಿಮ ದಿಕ್ಕುಗಳ ನಡುವಿನ ದಿಕ್ಕೇ, ನೈರುತ್ಯ, ಈ ದಿಕ್ಕಿನ ಸ್ವಾಮಿ ನಿಋತಿ. ಪ್ರತಿನಿಧಿ ಗ್ರಹ ರಾಹು. ವಾಯುವ್ಯದಲ್ಲಿ ಅತಿಥಿಕೊಣೆ ನಿರ್ಮಿಸಬಹುದು. ನೈರುತ್ಯ ದಿಕ್ಕಿಗೆ ಭಾರವಾದ ವಸ್ತುಗಳನ್ನು ಇಡಬಹುದು. ಎನ್ನುತ್ತಾರೆ ಪಂಡಿತರು. ನೈರುತ್ಯ ದಿಕ್ಕಿಗೆ ಬಾಗಿಲಿಡಬಾರದು. ಎಂದು ಶಾಸ್ತ್ರಜ್ಞರ ಅಭಿಪ್ರಾಯ. ನೈರುತ್ಯ ಯಾವಾಗಲೂ ಭಾರವಾದ ವಸ್ತುಗಳನ್ನು ಇಡಲು ಬಳಸಬೇಕು. ಅಲ್ಲದೇ ಯಾವುದೇ ಸಮಯದಲ್ಲಿ ನೈರುತ್ಯ ತಗ್ಗಾಗಿರಬಾರದು ಒಂದೊಮ್ಮೆ ನೈರುತ್ಯ ತಗ್ಗಾದರೆ ಆ ಮನೆಯಲ್ಲಿ ಹಣದ ಅಡಚಣೆ ಅಲ್ಲದೆ ನೆಂಟರಿಷ್ಟರಲ್ಲಿ, ವ್ಯವಹಾರದಲ್ಲಿ
ತೊಂದರೆ, ಸಾಲದ ಬಾಧೆ ಆಗುತ್ತದೆ ಎಂದು ಶಾಸ್ತ್ರಜ್ಞರ ಅಭಿಪ್ರಾಯ. ನೈರುತ್ಯ ದಿಕ್ಕಿನಲ್ಲಿ ಬಾವಿ,
ಹಳ್ಳ, ಇರಬಾರದು. ಏಕೆಂದರೆ ಜಲದ ಆಧಾರ ದಿಕ್ಕು
ಈಶನ್ಯ, ಬಾವಿ ನೀರಿನ ಆಶಯಗಳ ಈಶನ್ಯಕ್ಕಿರಬೇಕು. ಈ ಈಶಾನ್ಯದ ವಿರುದ್ಧವಾದ ದಿಕ್ಕೇ ನೈರುತ್ಯವಾದ್ದರಿಂದ ಈಶಾನ್ಯಕ್ಕಿರಬೇಕಾದ ಬಾವಿ, ಹಳ್ಳ,
ನೈರುತ್ಯಕ್ಕಿದ್ದರೆ ಸಮತೊಲನ ತಪ್ಪುತ್ತದೆ ಏರುಪೇರಾಗುತ್ತದೆ.
ಹೀಗಾಗಿ ತೊಂದರೆಗಳಾಗುವ ಸಂಭವ ಇರುತ್ತದೆ. ಕೆಲವು ವಿದ್ವಾಂಸರ ಪ್ರಕಾರ
ನೈರುತ್ಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬಾರದು
ನೈರುತ್ಯದಿಕ್ಕಿನ ದೋಷ ನಿವಾರಣೆಗೆ ಈ ದಿಕ್ಕಿನ ಪ್ರತಿನಿಧಿ ಗ್ರಹ ರಾಹು ಸ್ತೋತ್ರ
ಪಠಣ. ಗಣಪತಿ ಪೂಜೆ ಮನೆಯಲ್ಲಿ ವಿಶೇಷ ಪೂಜೆ, ಈ
ರೀತಿ ಇದ್ದರೆ ಉತ್ತಮವೆಂದು ಪಂಡಿತರ ಅನಿಸಿಕೆ.
ವಾಯುವ್ಯ ದಿಕ್ಕು
ವಾಯುವ್ಯ ದಿಕ್ಕು
ಉತ್ತರ, ಪಶ್ಚಿಮದಿಕ್ಕುಗಳ ನಡುವೆ ಬರುತ್ತದೆ. ವಾಯವ್ಯ ದಿಕ್ಕಿನ ದೇವತೆ ವಟು(ವಾಯು), ಚಂದ್ರನ
ಪ್ರತಿನಿಧಿ ಗ್ರಹ. ಸದಾ ತುಂಬಾ ದಿಕ್ಕಿಗೆ ಅತಿಥಿ ಕೋಣೆ ನಿರ್ಮಿಸಬಹುದು. ಈ ದಿಕ್ಕು ಕೂಡಾ ಶುಚಿತ್ವದಿಂದ ಕೂಡಿರಬೇಕು. ವಾಯುವ್ಯದಲ್ಲಿ ಅತಿಥಿ ಕೋಣೆ ಸೂಕ್ತವಾದುದು. ಅಲ್ಲದೆ ಪಶುಗಳ ಕೊಠಡಿ, ಧಾನ್ಯಸಂಗ್ರಹ
ಅತಿಥಿ ಕೊಣೆ ವಾಯುವ್ಯದಲ್ಲಿದ್ದರೆ ಉತ್ತಮ. ಮನೆಯಲ್ಲಿ ಅಶಾಂತತೆ, ಡ್ರಾಯಿಂಗ್‌ರೊಂ ವಾಯುವ್ಯ ದಿಕ್ಕಿಗೆ
ಇಡಬಹುದಾಗಿದೆ. ವಾಯುವ್ಯದಲ್ಲಿ ಚಿಂತೆ ಹೆಚ್ಚುತ್ತದೆ. ಶೌಚಾಲಯವಿದ್ದರೆ ವಾಯುವ್ಯ ದಿಕ್ಕಿನ ದೋಷ ಪರಿಹಾರಕ್ಕಾಗಿ ವಾಯುವ್ಯದಿಕ್ಕಿನ ಪ್ರತಿನಿಧಿ ಗ್ರಹ ಚಂದ್ರನ ಸ್ತೋತ್ರ ಪಠಣ, ಗಣಪತಿ,
ಪೂಜೆ ಸೋಮವಾರ ವ್ರತ ಅನುಸರಿಸುವ ಪದ್ಧತಿ ಜಾರಿಯಲ್ಲಿದೆ.
ಗ್ಯಾರೆಜ್ ಅಥವಾ ವಾಹನಗಳ ನಿಲ್ಲಿಸುವ ಶೆಡ್‌ಅನ್ನು ವಾಯುವ್ಯ
ಪಕ್ಕದಲ್ಲಿ ನಿರ್ಮಿಸಬಹುದು. ಎಂದು ಪಂಡಿತರು ಅಭಿಪ್ರಾಯ.
ಆಗ್ನೆಯ ದಿಕ್ಕು
ಪೂರ್ವ ಮತ್ತು
ದಕ್ಷಿಣಗಳ ನಡುವಿನ ದಿಕ್ಕೇ ಆಗ್ನೆಯ. ಆಗ್ನೆಯದ ಅಧಿಪತಿ
ಅಗ್ನಿ. ಪ್ರತಿನಿಧಿ ಗ್ರಹ ಶುಕ್ರ ಆಗೋಯದಲ್ಲಿ ಅಡುಗೆ ಮನೆ ಇದ್ದರೆ
ಉತ್ತಮ. ಅಡುಗೆ ಮನೆಯ ಆಗ್ನೆಯ ಮೂಲೆಯಲ್ಲಿ ಸ್ಟವ್, ಗ್ಯಾಸ್, ಅಗ್ನಿಗೆ ಸಂಬಂಧ ಪಟ್ಟ ವಸ್ತುಗಳನ್ನು ಆಗ್ನೆಯ ದಿಕ್ಕಿಗೆ ಇಡುವುದು ಅತ್ಯುತ್ತಮ. ಅಲ್ಲದೆ ಜನರೇಟರ್, ಟ್ರಾನ್ಸ್ ಫಾರರ್, ಆಗ್ನೆಯ
ದಿಕ್ಕಿಗೆ ಇದ್ದರೆ ಉತ್ತಮ. ಆಗ್ನೆಯ ದಿಕ್ಕಿಗೆ ಅಧಿಪತಿ
ಅಗ್ನಿಯಾಗಿದ್ದರಿಂದ ಅಗ್ನಿಗೆ ಸಂಬಂದಪಟ್ಟ ವಸ್ತುಗಳನ್ನು ಆಗ್ನೆಯ ದಿಕ್ಕಿಗೆ
ಇಡುವುದು ಉತ್ತಮ. ಸ್ನಾನದ ಮನೆಯಲ್ಲಿ ಗೀಜರ್, ಹೀಟರ್‌ನ್ನು
ಆಗ್ನೆಯ ಕೋಣೆಯಲ್ಲಿ ಇರಿಸಿದ್ದರೆ ಉತ್ತಮ. ಊಟದ ಕೋಣೆಯನ್ನು ಆಗ್ನೆಯದಲ್ಲಿ
ನಿರ್ಮಿಸಬಹುದು.



