ಅಂಗಡಿ, ಆಪೀಸು, ವಿಚಾರದಲ್ಲಿ ವಾಸ್ತುಶಾಸ್ತ್ರ ತಿಳಿದರೆ ನಿಮ್ಮ ಆದಾಯಕ್ಕಿಲ್ಲ ಮಿತಿ | Vaastu Tips Kannada

Vaastu Tips Kannada 

 ಅಂಗಡಿ, ಆಪೀಸು, ವಿಚಾರದಲ್ಲಿ ವಾಸ್ತುಶಾಸ್ತ್ರ  ತಿಳಿದರೆ ನಿಮ್ಮ ಆದಾಯಕ್ಕಿಲ್ಲ ಮಿತಿ

ಆಫೀಸುಗಳನ್ನು, ಕಂಪನಿ ಆಫೀಸುಗಳನ್ನು, ಪತ್ರಿಕಾ ಕಾರ್ಯಾಲಯಗಳನ್ನು ವಾಸ್ತುರೀತ್ಯಾ ರಚಿಸುವುದು ಉತ್ತಮ. ಏಕೆಂದರೆ ನನ್ನ ಅನುಭವದಲ್ಲಿ ಹೇಳುವದಾದರೆ. ಸಾಲಸೋಲಮಾಡಿ ವಾಸ್ತುರೀತ್ಯಾ ಸಣ್ಣ ಆಪೀಸ್ ರಚಿಸಿ ಖಾಸಗಿ ಕೆಲಸ ಪ್ರಾರಂಭಿಸಿದವರ ಕೆಲವೇ ವರ್ಷಗಳಲ್ಲಿ ಕಾರಿನಲ್ಲಿ ಓಡಾಡಿದವರಿದ್ದಾರೆ. ಇದಲ್ಲದೆ ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಆಫೀಸುಗಳನ್ನು ಮನಬಂದಂತೆ ನಿರ್ಮಿಸಿ ಮುಚ್ಚಿದವರಿದ್ದಾರೆ.

ಆದ್ದರಿಂದ ಆಫೀಸು ನಿರ್ಮಿಸುವಾಗ ವಾಸ್ತುಶಾಸ್ತ್ರಜ್ಞರ ಸಲಹೆ ಪಡೆಯಿರಿ. ಆಫೀಸಿನಲ್ಲಿ, ಕ್ಯಾಶಿಯರ್ ಕೋಣೆ, ತಿಜೋರಿ ಉತ್ತರಕ್ಕಿಡುವುದು ಉತ್ತಮ. ಏಕೆಂದರೆ ಕುಬೇರನು ಉತ್ತರ ದಿಕ್ಕಿನ ಅಧಿಪತಿಯಾದ್ದರಿಂದ ಉತ್ತರಕ್ಕೆ ತಿಜೋರಿ ಬೆಲೆಬಾಳುವ ವಸ್ತು ಆಫೀಸಿನ ಆಸ್ತಿಪತ್ರಗಳನ್ನು ಹಣಕಾಸಿಗೆ ಸಂಬಂಧಪಟ್ಟ ಅಮೂಲ್ಯ ಕಾಗದ ಪತ್ರಗಳನ್ನು ಮುಂತಾದವನ್ನು ಇಡುವ ಪೆಟ್ಟಗೆ ಕ್ಯಾಶಿಯರ್ ತಿಜೋರಿ ಉತ್ತರ 'ದಿಕ್ಕಿಗಿರುವುದು ಉತ್ತಮ. ಕೆಲವರು ಈಶಾನ್ಯಕ್ಕೂ ಇಡಬಹುದೆನ್ನುತ್ತಾರೆ.


ಸಾಮಾನ್ಯವಾಗಿ ಪ್ರತಿ ಕಾವ್ಯಾಲಯದಲ್ಲೂ ದೇವತಾ ಫೋಟೋ ಇರುತ್ತದೆ. ಕೆಲವು ಕಡೆ ಪ್ರತಿ ದಿನವೂ ದೇವರಿಗೆ ದೀಪ ಹಚ್ಚಿ ಕೆಲಸ ಪ್ರಾರಂಭಿಸಿದರೆ ಇನ್ನು ಕೆಲವೆಡೆ ಲಕ್ಷ್ಮೀಪೂಜೆ ಮುಂತಾದ ಪೂಜಾ ಸಮಯದಲ್ಲಿ ಮಾತ್ರ ಪೂಜಿಸುತ್ತಾರೆ. ಪೂಜಾಗೃಹ ಅಥವಾ ದೇವರ ಫೋಟೋ ಈಶಾನ್ಯ ದಿಕ್ಕಿಗಿದ್ದರೆ ಉತ್ತಮ. ಆಫೀಸಿನಲ್ಲೂ ಈಶಾನ್ಯ ಮೂಲೆ ಪವಿತ್ರವಾಗಿರಬೇಕು.

ಬೇರೆ ಆಫೀಸುಗಳಿಂದ ಕಾರ್ಯಾಲಯಕ್ಕೆ ಭೇಟಿ ಕೊಡುವವರಿಗಾಗಿಯೇ ಒಂದು ಕೋಣೆ ಇದ್ದರೆ ಉತ್ತಮ. ಆ ಕೋಣೆ ವಾಯುವ್ಯಕ್ಕಿರಲಿ. ನಾನು ನೋಡಿದ ಉದಾಹರಣೆ ಹೇಳುವುದಾದರೆ, ಚಿಕ್ಕ ಕಂಪನಿ ಆ ಕಂಪನಿಗೆ ಬೇರೆ ಬೇರೆ ಕಡೆಯಿಂದ ಕಸ್ಟಮರ್‌ ವಿಜಿಟ್ ನಿಡುತ್ತಿದ್ದರೂ ಆ ಕಂಪನಿಯ ಪ್ರೌಡಕ್ಟಗೆ ಆರ್ಡರ್ ಕೊಡುತ್ತಿರಲಿಲ್ಲ. ಆಗ ನಾನು ಅವರಿಗೆ ಒಂದು ಸಲಹೆ ಕೊಟ್ಟೆ, ಬೇರೆ ಕಡೆಯಿಂದ ವಿಜಿಟ್ ಬರುವವರಿಗೆ ಕೂಡುವ ಕೋಣೆಯನ್ನು ಬದಲಾಯಿಸಿರಿ. ಬೇರೆ ಕಡೆಯಿಂದ ಕಂಪನಿಗೆ ವಿಜಿಟ್ ಗೆ ಬರುವವರು ಉಳಿಯುವ ಅತಿಥಿ ಕೋಣೆ ವಾಯುವ್ಯಕ್ಕೆ ನಿರ್ಮಿಸಿ, ಕಂಪನಿಗೆ ಬರುವವರು ಕಂಪನಿಯ ವ್ಯವಹಾರ ಮಾತನಾಡುವ ಮುಂಚೆ ಈ ವಾಯುವ್ಯದಲ್ಲಿರುವ ಅತಿಥಿ ಗೃಹದಲ್ಲಿ ತಂಗುವ ವ್ಯವಸ್ಥೆ ಮಾಡಿ ಎಂದೆ. ನನ್ನ ಸಲಹೆ ತೆಗೆದುಕೊಂಡು ಕೆಲವೇ ದಿನಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆ ಕಂಪನಿ ಅಭಿವೃದ್ಧಿಯಾಯಿತು.

ಕಚ್ಚಾ ಸಾಮಗ್ರಿಗಳನ್ನು ಭಾರವಾದ ವಸ್ತುಗಳನ್ನು ಸಂಗ್ರಹಿಸುವ ಕೋಣೆ ನೈರುತ್ಯಕ್ಕಿರಲಿ, ಭಾರವಾದ ವಸ್ತುಗಳನ್ನು ನೈರುತ್ಯದಲ್ಲಿಡುವುದು ಉತ್ತಮ ಎಂದರು ಶಾಸ್ತ್ರಜ್ಞರು, ಒಂದು ಉದಾಹರಣೆ ಹೇಳುವದಾದರೆ ಒಂದು ಚಿಕ್ಕ ಕಂಪನಿ ಮಾಲಿಕರು ನನ್ನನ್ನು ಭೇಟಿಯಾಗಿ, ಅವರ ಸಮಸ್ಯೆ ಹೇಳಿದರು. ಅವರು ಎಷ್ಟೇ ಜಾಗ್ರತೆ ವಹಿಸಿದರು ಕಚ್ಚಾಸಾಮಗ್ರಿಗಳು ಸ್ಟೋರ್ ರುಮ್‌ನಲ್ಲಿರುವ ಸಾಮಾನುಗಳು ಆಶ್ಚರ್ಯಕರ ರೀತಿಯಲ್ಲಿ ಕಳುವಾಗುತ್ತವೆ. ಈ ವಿಷಯದಲ್ಲಿ

ಪೋಲಿಸ್ ಕಂಪ್ಲೆಟ್ ಕೊಟ್ಟರು ಉಪಯೋಗವಾಗದೆ ಕಳ್ಳತನ ಮುಂದುವರೆಯುತ್ತಿತ್ತು. ಆಗ ನಾನು ಅವರಿಗೊಂದು ಸಲಹೆ ನೀಡಿದೆ. ಭಾರವಾದ ವಸ್ತು, ಕಚ್ಚಾ ವಸ್ತುಗಳನ್ನಿಡುವ ಉಗ್ರಾಣವನ್ನು ನೈರುತ್ಯ ದಿಕ್ಕಿಗೆ ಮಾಡಿ ಎಂದೆ, ಆಶ್ಚರ್ಯಕರ ರೀತಿಯಲ್ಲಿ ಅವರ ಸಮಸ್ಯೆ ಬಗೆಹರಿಯಿತು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾತ. ನೈರುತ್ಯಕ್ಕೆ ಉಗ್ರಾಣ ಮಾಡಿದ ಕೊಡಲೆ ಸಿಕ್ಕಿಹಾಕಿಕೊಂಡ ಕಳ್ಳತನ ಮಾಡಿಸುವಾತ ಅವನ ಬಾವನೆಂಟನಾಗಿದ್ದು ಆತನು ಸಿಕ್ಕಿಕೊಂಡ. ಇಂದು ಯಾವ ಕಳ್ಳತನದ ಭಯವಿಲ್ಲದೆ ಆ ಕಂಪನಿ ಆಶ್ಚರ್ಯಕರ ರೀತಿಯಲ್ಲಿ ಅಭಿವೃದ್ಧಿ ಆಗುತ್ತಿದೆ.

ಇಂದಿನ ಕಂಪ್ಯೂಟರ್ ಆವಿಷ್ಕಾರದಿಂದ ಪ್ರತಿ ಚಿಕ್ಕ ಕಾರ್ಯಾಲಯದಲ್ಲೂ ಕಂಪ್ಯೂಟರಿನ ಅವಶ್ಯಕತೆ ಇದೆ. ಕಂಪ್ಯೂಟರನ್ನು ಯಾವ ದಿಕ್ಕಿಗೆ ಇಡಬೇಕು.? ಆಗ್ನೇಯ ಹಾಗೂ ಪೂರ್ವಕ್ಕೆ ಕಂಪ್ಯೂಟರ್ ಇಡಬಹುದೆಂದು ಶಾಸ್ತ್ರಜ್ಞರ ಅಭಿಮತ.

ವ್ಯಾಪಾರ ಮಳಿಗೆಗಳನ್ನು ತೆಗೆಯುವಾಗ ವಾಸ್ತು ಹೇಗೆ ಉಪಯುಕ್ತ

ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ಹಾಗೂ ಹಣಕ್ಕೆ ಸಂಬಂಧ ಪಟ್ಟವನ್ನು ಉತ್ತರ ದಿಕ್ಕಿಗೆ ಮುಖಮಾಡಿ ಇಟ್ಟರೆ ಉತ್ತಮ. ಅಂಗಡಿಯಲ್ಲಿ ಕೂರುವ ಯಜಮಾನ ಪೂರ್ವಕ್ಕೆ ಉತ್ತರಕ್ಕೆ ಮುಖಮಾಡಿ ಕುಳಿತು ವ್ಯಾಪಾರ ಮಾಡಿದರೆ ಉತ್ತಮವೆಂದು ವೈಧಿಕರ ಅಭಿಪ್ರಾಯ, ಭಾರವಾದ ವಸ್ತುಗಳನ್ನು ನೈರುತ್ಯ ದಿಕ್ಕಿಗೆ ಇಡುವುದು ಉತ್ತಮ. ಅಂಗಡಿಯ ಮುಖ,ಅಂಗಡಿಯಲ್ಲಿ ವ್ಯಾಪಾರ ಮಾಡುವವರು ದಕ್ಷಿಣ, ಪಶ್ಚಿಮಕ್ಕೆ ಮುಖಮಾಡದಿರುವದೇ ಉತ್ತಮ.

ಅಂಗಡಿಯನ್ನು ಆರಿಸುವಾಗ ಚೌಕಾಕಾರ ನಿಯತ ಚತುರ್ಭುಜ ಆಕಾರ ಉತ್ತಮವಾದುದು. ಐಮೂಲೆ, ತ್ರಿಕೋಣ, ಅನಿಯಮಿತ ಆಕಂದ ಜಾಗ ಉಪಯುಕ್ತವಲ್ಲ. ಅದು ನಷ್ಟಕ್ಕೆ ದಾರಿ ಮಾಡಿ ಕೊಡುತ್ತದೆ ಎಂದು ಪಂಡಿತರ ಅಭಿಪ್ರಾಯ. ಅಂಗಡಿಗೆ ಜಾಗ ಆರಿಸುವಾಗ ಜಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಯೊಗ್ಯ ಜ್ಯೋತಿಷಿಗಳಿಂದ ಯಾವ ಜಾಗ ಉತ್ತಮವೆಂದು ತಿಳಿಯಬೇಕು

ವ್ಯಾಪಾರ ಪ್ರಾರಂಭಿಸುವ ಮೊದಲು ಗಣಪತಿ ದೇವನಿಗೆ, ಹನುಮಾನ್ ದೇವರಿಗೆ, ಕುಲದೇವರಿಗೆ, ಆ ಜಾಗದ ಅಧಿದೇವತೆಗೆ ಹರಕೆ ಸಲ್ಲಿಸಿ ವ್ಯಾಪರ ಪ್ರಾರಂಭಿಸುವುದು ಅತ್ಯುತ್ತಮ, ಇದಲ್ಲದೇ ಅಂಗಡಿ ತೆಗೆದಾಗ ತಪ್ಪದೇ ದೀಪ ಹಚ್ಚುವುದು, ಲಕ್ಷ್ಮೀಪೂಜೆ ಮಾಡುವುದು ಶ್ರೇಯಸ್ಕರ. ಅಂಗಡಿಗೆ 2, 3 ಬಾಗಿಲುಗಳಿದ್ದರೆ ಪ್ರಧಾನ ಬಾಗಿಲು ಉಳಿದ ಬಾಗಿಲುಗಳಗಿಂತ ದೊಡ್ಡದಿರಬೇಕು.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಜೇನುತುಪ್ಪ, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.