Health | secret | health and fitness | health tips | health & fitness

Health | secret | health and fitness | health tips | health & fitness


Health | secret | health and fitness | health tips | health & fitness

ಸುಲಭ ಬೆಲೆಯಲ್ಲಿ ಎಲ್ಲ ವರ್ಗದವರಿಗೂ ದೊರೆಯುವ ಬಾಳೆಹಣ್ಣು ಬೀಜಗಳಿಲ್ಲದ ಅತ್ಯಂತ ರುಚಿಕರವಾಗಿರುವ ವಿಶೇಷ ಫಲ. ನಮ್ಮ ಪೂಜೆ, ಪುನಸ್ಕಾರಗಳಲ್ಲಿ, ಶುಭ ಕಾರ್ಯಗಳಲ್ಲಿ ಬಾಳೆಹಣ್ಣಿಗೆ ಅಗ್ರಸ್ಥಾನ, ಬಾಳೆಹಣ್ಣು ಹೀಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಬಾಳೆಹಣ್ಣು ಎ, ಬಿ, ಸಿ ಜೀವ ಸತ್ವಗಳಿಂದ ಸಮೃದ್ಧವಾಗಿದೆ. ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ಮಕ್ಕಳ ಒಂದು ದಿನದ ಪಲಪೂರ್ಣ ಆಹಾರವಾಗುತ್ತದೆ.

ಬಾಳೆಹಣ್ಣು ಹಲವಾರು ವಿಧಗಳಲ್ಲಿ ನಮಗೆ ವರದಾನವಾಗಿದೆ. ಕರುಳಿನ ತೊಂದರೆಯಿಂದ ನರಳುತ್ತಿರುವವರು ಬಾಳೆಹಣ್ಣು ಮತ್ತು ಮೊಸರನ್ನು ಮಿಶ್ರ ಮಾಡಿ ಸೇವಿಸಿದರೆ ಕರುಳಿನ ತೊಂದರೆಗಳು ನಿವಾರಣೆಯಾಗುತ್ತವೆ. 


ಎಲುಬುರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಇದು ಉತ್ತಮ ಆಹಾರ. ಬಾಳೆಹಣ್ಣಿನಲ್ಲಿ ಡೆಕ್ಸ್ಟ್ರನ್ ಇದೆ. ಇದು ಜೀರ್ಣಶಕ್ತಿಗೆ

ನೆರವಾಗುತ್ತದೆ. ಊಟವಾದ ನಂತರ ಒಂದು ಬಾಳೆಹಣ್ಣನ್ನು ತಿನ್ನುವುದು ಬಹಳ ಜನರಿಗೆ ಅಭ್ಯಾಸ. ಇದಕ್ಕೆ ಬಾಳೆಹಣ್ಣಿನ ಜೀರ್ಣಶಕ್ತಿಯೇ ಮುಖ್ಯ ಕಾರಣ. 

ಬಾಳೆಹಣ್ಣಿನ ಸಿಪ್ಪೆಗೆ ಕ್ರಿಮಿ, ಕೀಟಗಳ ನಿರೋಧಕ ಶಕ್ತಿಯಿದೆ. ಅದ್ದರಿಂದ ಕ್ರಿಮಿ ಸಿಪ್ಪೆಯನ್ನು ಭೇದಿಸಿ ಒಳಕ್ಕೆ ಹೋಗಲಾರದು. ಒಳಕ್ಕೆ ಹೋದರೂ ಬಾಳೆಹಣ್ಣಿನ ತಿರುಳು ಕ್ರಿಮಿನಾಶಕ ಶಕ್ತಿ ಪಡೆದಿದೆ. ಆದ್ದರಿಂದ ಬಾಳೆಹಣ್ಣು ಎಷ್ಟು ಹಣ್ಣಾಗಿ ಮೆತ್ತಗಾದರೂ ಇತರೆ ಹಣ್ಣುಗಳಂತೆ ಹುಳ ಬೀಳುವುದಿಲ್ಲ ಎನ್ನುವುದನ್ನು ಗಮನಿಸಬಹುದು. 


ರಕ್ತದೊತ್ತಡ, ಮಲವಿಸರ್ಜನೆಯ ತೊಂದರೆ ಉಳ್ಳವರು ಬಾಳೆಹಣ್ಣಿನಿಂದ ಪಲಹಾರ ಪಡೆಯಬಹುದು. ಪ್ರತಿದಿನವೂ ಬಾಳೆಹಣ್ಣನ್ನು ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ. 

ಎಳೆಯ ಬಾಳೆಕಾಯಿಗಳನ್ನು ಸಿಪ್ಪೆ ಸಮೇತ ತಿಂದರೆ ಕರುಳಿನಲ್ಲಿರುವ ಸೂಕ್ಷ್ಮ ಕ್ರಿಮಿಗಳು ಮಲದ ಮೂಲಕ ಹೊರಬೀಳುತ್ತವೆ. 

ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆಹಣ್ಣು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಗುಣವಾಗುತ್ತದೆ. 

ಊಟದ ನಂತರ ಪ್ರತಿರಾತ್ರಿ ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಲೈಂಗಿಕ ಶಕ್ತಿ ವೃಥ್ಧಿಯಾಗುತ್ತದೆ, ರಕ್ತಮಸ್ಥಿ ಹೆಚ್ಚಾಗುತ್ತದೆ. ಅಲ್ಲದೆ ಹೆರಿಗೆಯೂ ಸುಖವಾಗಿ ಆಗುತ್ತದೆ. 

ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಚೆನ್ನಾಗಿ ಮೆದ್ದು ಅದಕ್ಕಿ ಬಾಳಿಹೂವಿನ ರಸ ಸೇರಿಸಿ ಸುಮಾರು 50 ದಿನಗಳ ಕಾಲ ಒಂದು ಚಮಚ ಸೇವಿಸಿದರೆ ಶರೀರ ತೂಕ ಇಳಿಯುತ್ತದೆ.

ಬಾಳೆಹಣ್ಣಿನ ಉಪಯೋಗಗಳು ಒಂದೇ ಎರಡೇ. ವಿಶ್ವದ ಎಲ್ಲಾ ಕಡೆ ಸಿಗುವ ಹಣ್ಣಿಂದರೆ ಬಾಳೆಹಣ್ಣು.

ಉಪವಾಸವಿದ್ದು ದೇಹವು ದಣಿದಿದ್ದರೆ ಒಂದು ಬಾಳೆ ಹಣ್ಣು ತಿಂದರೆ ಸಾಕು. ಅದರಲ್ಲಿರುವ ಗ್ಲುಕೋಸ್, ಸಕ್ಕರೆ ಅಂಶವು ದೇಹದಲ್ಲ ಶಕ್ತಿಯನ್ನು ವ್ಯದ್ಧಿಸುತ್ತದೆ. ಒಂದು ಬಾಳೆಹಣ್ಣು ತಿಂದರೆ 90 ನಿಮಿಷಗಳಷ್ಟು ಕೆಲಸ ಮಾಡಬಹುದು. ಆದ್ದರಿಂದಲೇ ಕ್ರೀಡಾಪಟುಗಳಿಗೆ ಬಾಳಿಹಣ್ಣು ತಿನ್ನುವಂತೆ ಪ್ರೇರೇಪಿಸಲಾಗುತ್ತದೆ.

ಒತ್ತಡದಿಂದ ನರಳುತ್ತಿದ್ದರೂ ಸಹ ಬಾಳೆಹಣ್ಣು ತಿನ್ನುವುದರಿಂದ ನಮ್ಮ ಮನಸ್ಸಿಗೆ ರಿಲ್ಯಾಕ್ಸ್ ದೊರೆಯುತ್ತದೆ. ಬಾಳೆಹಣ್ಣಿನಲ್ಲರುವ ಬಿ6 ವಿಟಮಿನ್ ನಿಂದ ನಮ್ಮ ಮನಸ್ಸು ಉಲ್ಲಾಸದಿಂದ ಇರುತ್ತದೆ.

ಅನಿಮೀಯದಿಂದ ನರಳುತ್ತಿರುವವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವಂತೆ ಮತ್ತು ಬೆಳಗಿನ ಸುಸ್ತನ್ನು ಕಡಿಮೆ ಮಾಡಲು ಇದು ಸಹಕಾರಿ.

ಇದರಲ್ಲಿರುವ ನಾರಿನಂಶವು ಮಲಬದ್ದತೆಯ ನಿವಾರಣಿಗೆ ಸಹಕಾರಿ.

ಸೊಳ್ಳೆ ಕಚ್ಚಿದಂತಹ ಭಾಗಕ್ಕೆ ಬಾಳೇಹಣ್ಣನ್ನು ಉಜ್ಜಿದರೆ, ನವೆ ಮತ್ತು ಉರಿಯಿಂದ ರಕ್ಷಿಸಿಕೊಳ್ಳಬಹುದು.

ಯಾವುದೇ ಕಾರಣಕ್ಕು ಬಾಳೆಹಣ್ಣನ್ನು ಪ್ರಿಜ್ ನಲ್ಲಿ ಇಡಬಾರದು.

ways to lose weight fastest, health and fitness, health tips, health club, fitness club, health & fitness, physical fitness, fitness & nutrition, and 8 fitness, healthy lifestyle tips, fitness goals, eating tips, nutrition tip Tuesday, diet and nutrition advice, physical fitness program, cardiovascular fitness, nutrition tips, lifestyles fitness, dietary tips, wellness tips, healthy eating tips, exercise and fitness, healthy ways to lose weight, nutrition and fitness, health related fitness, healthy snack ideas for weight loss, exercise cardiovascular fitness, balanced fitness,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.