Health Tips Kannada
ಸಿಕ್ಸ್ ಪ್ಯಾಕ್ ಮಾಡಲು ಜಿಮ್ ಹೋಗಬೇಕಿಲ್ಲ ಈ ಆಸನವನ್ನು 30 ದಿನ ಮಾಡಿದರೆ
ಸಾಕು (ಭಾಗ-2)
ಭೂನಮನ ಪದ್ಮಾಸನ
ಪ್ರಾರಂಭಿಕ
ಸ್ಥಿತಿ : ಪದ್ಮಾಸನದಲ್ಲಿ ಕೈಗಳನ್ನು ಹಿಂದೆ ಕಟ್ಟಿಕೊಂಡು, ಬೆನ್ನನ್ನು
ಸರಳವಾಗಿ ಲಂಬವಾಗಿಟ್ಟುಕೊಂಡು ಕುಳಿತುಕೊಳ್ಳಬೇಕು. ಸಾಧ್ಯವಾದರೆ ಎಡಗೈಯಿಂದ ಬಲಗಾಲಿನ
ಅಂಗುಷ್ಠವನ್ನೂ, ಬಲಗೈಯಿಂದ ಎಡಗಾಲಿನ ಅಂಗುಷ್ಠವನ್ನೂ
ಹಿಡಿದುಕೊಳ್ಳಬೇಕು. (ಬೆನ್ನಿನ ಹಿಂದಿನಿಂದ).
ಮಾಡುವ
ವಿಧಾನ :
೧. ಸಾವಕಾಶವಾಗಿ ದೇಹವನ್ನು ಸರಳವಾಗಿ ಬಾಗಿಸಿ,
ಎದುರುಗಡೆ ನೆಲದತ್ತ ಒಯ್ಯುತ್ತ, ದೀರ್ಘವಾಗಿ
ಉಚ್ಛಾಸ ಮಾಡುತ್ತ, ಹಣೆಯನ್ನು ಭೂಮಿಗೆ ಹಚ್ಚಲು ಪ್ರಯತ್ನಿಸಬೇಕು.
೨. ನಂತರ ಸಾವಕಾಶವಾಗಿ ತಲೆಯನ್ನು
ಮೇಲಕ್ಕೆತ್ತುತ್ತ, ನೀಳವಾಗಿ ಉಸಿರೆಳೆದುಕೊಳ್ಳುತ್ತ, ಮತ್ತೆ ಮುಂಚಿನಂತೆ ಸರಳವಾಗಿ ಕುಳಿತುಕೊಳ್ಳಬೇಕು.
೩. ೮-೧೦ ಸಾರೆ ದೇಹವನ್ನು ಹೀಗೆ
ಶ್ವಾಸೋಚ್ಛಾಸ ಸಹಿತ, ಮೇಲೆ-ಕೆಳಗೆ ಮಾಡುವುದರಿಂದ ಹೊಟ್ಟೆಗೂ,
ಸೊಂಟಕ್ಕೂ ಉತ್ತಮ ವ್ಯಾಯಾಮ ದೊರೆಯುತ್ತದೆ. ಈ ಆಸನಕ್ಕೆ 'ಯೋಗಮುದ್ರಾ' ಎಂಬ ಸಂಜ್ಞೆಯೂ ಉಂಟು.
ಸಮಯ
: ೨ - ೩ ನಿಮಿಷಗಳು (ಪ್ರಾರಂಭದಲ್ಲಿ ಅರ್ಧ ನಿಮಿಷ ಮಾಡಿದರೆ ಸಾಕು).
ಲಾಭಗಳು
:
ಈ ಆಸನದಿಂದ ಹೊಟ್ಟೆಯಲ್ಲಿಯ ಎಲ್ಲ ದೋಷಗಳು
ನಿವಾರಣೆ ಯಾಗುವುವು.
ಸೊಂಟವು ಸಶಕ್ತವಾಗಿ, ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.
ಮಲಬದ್ಧತೆ ಇಲ್ಲದಂತಾಗುವುದು. ಪಚನಶಕ್ತಿ
ಹೆಚ್ಚಾಗುವುದು.
ಬೆನ್ನೆಲುಬಿನ ಸ್ಥಿತಿಸ್ಥಾಪಕತ್ವವು ಹೆಚ್ಚಿ,
ಬೆನ್ನೆಲುವು ನಿರ್ದೋಷವೂ, ರೋಗಮುಕ್ತವೂ
ಆಗುವುದು.
ಸೂಚನೆ
:
ಇದು ಉತ್ತಮವಾದ ವ್ಯಾಯಾಮ, ಎಲ್ಲ ವಯಸ್ಸಿನವರಿಗೂ ಹಿತಕರ ವಾದುದು. ಗರ್ಭಿಣಿ ಸ್ತ್ರೀಯರು ಮಾತ್ರ ಇದನ್ನು
ಮಾಡಕೂಡದು.
ಸೋಡ್ಡಿಯಾನ ಪದ್ಮಾಸನ
ಪ್ರಾರಂಭಿಕ
ಸ್ಥಿತಿ : ಕಾಲುಗಳನ್ನು ಚಾಚಿ, ಕೈಗಳನ್ನು ಬದಿಯಲ್ಲಿ ಊರಿ
ಕುಳಿತುಕೊಳ್ಳಬೇಕು.
ಮಾಡುವ
ವಿಧಾನ :
೧. ಕೈಗಳ ಸಹಾಯದಿಂದ ಎಡ ಪಾದವನ್ನು ಬಲತೊಡೆಯ
ಮೇಲಿಟ್ಟು, ಹಿಮ್ಮಡವು ಕಿಬ್ಬೊಟ್ಟೆಯ ಮೂಲದಲ್ಲಿ ಬರುವಂತೆ
ಇಡಬೇಕು.
೨. ಬಲಪಾದವನ್ನು ಎಡತೊಡೆಯ ಮೇಲೆ, ಹಿಮ್ಮಡವು ಕಿಬ್ಬೋಟ್ಟೆಯ ಮೂಲದಲ್ಲಿ ಬರುವಂತೆ ಇಟ್ಟುಕೊಂಡು, ಬೆನ್ನುಹುರಿ ಸರಳವಾಗಿರುವಂತೆ ದೇಹ ಇರಿಸಿಕೊಂಡು, ಅಂಗೈಗಳನ್ನು
ಮೊಣಕಾಲ ಮೇಲಿರಿಸಬೇಕು. ನೇರವಾಗಿ ಎದೆಯ ಸೆಟೆಸಿ ಕುಳಿತುಕೊಳ್ಳಬೇಕು.
೩. ಆಮೇಲೆ ಶ್ವಾಸವನ್ನು ಪೂರ್ಣ ಹೊರಗೆ
ಬಿಟ್ಟು, ಹೊಟ್ಟೆಯನ್ನು ಸಾಧ್ಯವಿದ್ದಷ್ಟು ಒಳಗೆ-ಹೊರಗೆ,
ಒಳಗೆ-ಹೊರಗೆ ಮಾಡಬೇಕು. ಅನಂತರ ಶ್ವಾಸವನ್ನು ಒಳಗೆ ನಿಧಾನವಾಗಿ ತೆಗೆದುಕೊಂಡು,
ಮತ್ತೆ ಮೊದಲಿನ ಹಾಗೆ ಸಂಪೂರ್ಣ ವಾಗಿ ಉಚ್ಛಾಸಮಾಡಿ ಹೊಟ್ಟೆಯನ್ನು ಒಳಗೆ-ಹೊರಗೆ
ಮಾಡಬೇಕು.
೪. ಕೈಗಳನ್ನು ಮೊಣಕಾಲುಗಳ ಮೇಲಿಂದ ತೆಗೆದು,
ಬಲಗಾಲನ್ನು ಪದ್ಮಾಸನದಿಂದ ಉತ್ತಾಪಿಸಿ, ಮುಂದೆ
ಚಾಚಬೇಕು.
೫. ನಂತರ ಎಡಗಾಲನ್ನು ಪದ್ಮಾಸನದಿಂದ ಉತ್ತಾಪಿಸಿ,
ಮುಂದೆ ಚಾಚಬೇಕು. ಕೈಗಳನ್ನು ಬದಿಗೆ ಊರಬೇಕು.
ಸಮಯ
: ಬೇಕಾದಷ್ಟು ಸಮಯದ ವರೆಗೆ ಈ ಆಸನವನ್ನು ಹಾಕಬಹುದು.
ಲಾಭಗಳು
:
ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.
ಹೊಟ್ಟೆಶೂಲೆ, ಹೊಟ್ಟೆಯುಬ್ಬರ,
ಹೊಟ್ಟೆಯಲ್ಲಿಯ ರೋಗಗಳ ನಿವಾರಣೆಯಾಗಿ ಪಚನಶಕ್ತಿ ಹೆಚ್ಚುವದು.
ಯಕೃತ್-ಪ್ಲಿಹಾದಿಗಳು ಶುದ್ಧವಾಗಿ
ಬಲಗೊಳ್ಳುವುವು.
ಕಾರ್ಯ ಮಾಡಲು ಹೊಸ ಹುರುಪು ಬರುವುದು
ಇದೊಂದು ಸರ್ವರೋಗ ಪರಿಹಾರಕ ಯೋಗಸಾಧನೆಯಾಗಿದೆ.
ಸೂಚನೆ
:
ಎಲ್ಲ ವಯಸ್ಸಿನ ಸ್ತ್ರೀ-ಪುರುಷರು ಮಾಡಲು
ಉಪಯುಕ್ತವಾದ ಆಸನವಿದು. “ಪದ್ಮ' ಎಂದರೆ ಕಮಲದ ಹೂವು, ಕಮಲವನ್ನು ಹೋಲುವ ಈ ಆಸನವು ಅತಿ ಮಹತ್ವವುಳ್ಳದ್ದು. ಧ್ಯಾನಮಾಡುವವರಿಗೆ ಇದು
ಯೋಗ್ಯವಾದ ಆಸನವೆಂದು ಜ್ಞಾನಿಗಳ ಅಭಿಪ್ರಾಯ.
ಸಿದ್ಧಾಸನ
ಪ್ರಾರಂಭಿಕ
ಸ್ಥಿತಿ : ಕಾಲುಗಳನ್ನು ಚಾಚಿ, ಕೈಗಳನ್ನು ಬದಿಯಲ್ಲಿ ಊರಿ
ಕುಳಿತುಕೊಳ್ಳಬೇಕು.
ಮಾಡುವ
ವಿಧಾನ :
೧. ಎಡಗಾಲಿನ ಹಿಮ್ಮಡವನ್ನು ಎಡಗೈಯಿಂದ
ಹಿಡಿದು, ಅದನ್ನು ವೃಷಣ ಹಾಗೂ ಗುದದ ಮಧ್ಯದಲ್ಲಿ ಸೇರಿಸಿ
ಇಡಬೇಕು.
೨. ಬಲಗಾಲಿನ ಹಿಮ್ಮಡವನ್ನು ಚಿತ್ರದಲ್ಲಿ
ತೋರಿಸಿದಂತೆ ಜನನೇಂದ್ರಿಯದ ಮೇಲ್ಬದಿಯ ಎಲುವಿಗೆ ಒತ್ತಿ ಇಡಬೇಕು. ನಡುವನ್ನು ಬಾಗಿಸದೆ ನೆಟ್ಟಗೆ
ಸರಳವಾಗಿ ಕುಳಿತುಕೊಳ್ಳಬೇಕು. ದೃಷ್ಟಿಯು ನಾಸಿಕಾಗ್ರದಲ್ಲಿರಬೇಕು. ಕಾಲಬೆರಳುಗಳನ್ನು ತೊಡೆಗಳ
ಸಂದಿಯಲ್ಲಿ ಸೇರಿಸಬೇಕು. ಕೈಗಳಿಂದ ಮೊಣಕಾಲನ್ನು ಗಟ್ಟಿಯಾಗಿ ಹಿಡಿದಿರಬೇಕು. ಸ್ಪಷ್ಟವಾಗಿ,
ಸಶಬ್ಬವಾಗಿ ಉಸಿರಾಡಿಸಬೇಕು. ಸೋಡ್ಡಿಯಾನ ಪದ್ಮಾಸನದಂತೆ ಉಸಿರುಬಿಟ್ಟು, ಹೊಟ್ಟೆಯನ್ನು ಒಳಗೆ - ಹೊರಗೆ ತರುವ ಕ್ರಿಯೆಯನ್ನು ಮಾಡಬೇಕು. ಯೋಗದಲ್ಲಿ ಈ
ಕ್ರಿಯೆಗೆ 'ಭಸ್ಮಿಕಾ' (ಕಮ್ಮಾರನ
ತಿದಿ) ಎನ್ನುವರು. ಶ್ವಾಸವನ್ನು ಬಿಟ್ಟಾಗ ಹೊಟ್ಟೆಯನ್ನು ಶಕ್ಯವಿದ್ದಷ್ಟೂ ಒಳಗೆ ಎಳೆದು
ಕೊಳ್ಳಬೇಕು. ಶ್ವಾಸವನ್ನು ತೆಗೆದುಕೊಂಡಾಗ, ಎದೆ -
ಹೊಟ್ಟೆಗಳನ್ನು ಶಕ್ಯವಿದ್ದಷ್ಟೂ ಉಬ್ಬಿಸಬೇಕು.
ಇದಾದ ಮೇಲೆ ಬಲಗಾಲನ್ನು ಚಾಚಬೇಕು.
ಎಡಗಾಲನ್ನೂ ಚಾಚಬೇಕು. ಕೈಗಳನ್ನು ದೇಹದ ಬದಿಗೆ ಇಟ್ಟು, ಪ್ರಾರಂಭಿಕ
ಸ್ಥಿತಿಗೆ ತರಬೇಕು.
ಸಮಯ
: ಬೇಕಾದಷ್ಟು ಸಮಯದ ವರೆಗೆ ಈ ಆಸನವನ್ನು ಮಾಡಬಹುದು.
ಲಾಭಗಳು
:
ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತ ಹೋಗುವುದು.
ಯಕೃತ್ ಪ್ಲೀಹಾದಿಗಳು ನಿರ್ದೋಷವಾಗುವುವು.
ಅಲ್ಲದೆ ಹೊಟ್ಟೆಶೂಲೆ, ಹೊಟ್ಟೆಯುಬ್ಬರ, ಹೊಟ್ಟೆನೋವು ಮೊದಲಾದ ಹೊಟ್ಟೆಯ ರೋಗಗಳು,
ಕೇವಲ ಇದೊಂದೇ ಆಸನದ ನಿತ್ಯಾಭ್ಯಾಸದಿಂದ ಸಂಪೂರ್ಣವಾಗಿ ಇಲ್ಲವಾಗುವುವು.
ಉತ್ತಿತ ಪದ್ಮಾಸನ (ತೋಲಾಸನ)
ಪ್ರಾರಂಭಿಕ
ಸ್ಥಿತಿ : ಮೊದಲು ಭೂಮಿಯ ಮೇಲೆ ಕುಳಿತು, ಕಾಲುಗಳನ್ನು ನೀಳವಾಗಿ ಚಾಚಿ ಇಡಬೇಕು. ಅನಂತರ ಬಲಗಾಲನ್ನು ಮೊಣಕಾಲಲ್ಲಿ ಬಾಗಿಸಿ,
ಬಲಪಾದವನ್ನು
ಕೈಇಂದ ಹಿಡಿದು, ಅದನ್ನು
ಎಡತೊಡೆಯ ಮೂಲದಲ್ಲಿ ಸೇರಿಸಿ, ಬಲದ ಹಿಮ್ಮಡಗಳನ್ನು ಹೊಕ್ಕಳದ ಕಡೆಗೆ
(ನಾಭಿಸ್ಥಾನಕ್ಕೆ) ಬರುವಂತೆ ಮಾಡಬೇಕು. ಬಳಿಕ ಎಡಗಾಲನ್ನು ಮಡಿಚಿ, ಎಡಪಾದವನ್ನು
ಕೈಯಿಂದ ಹಿಡಿದು ಹಿಮ್ಮಡವನ್ನು ಹೊಕ್ಕಳಿನ ಹತ್ತಿರ ತಂದಿರಿಸಬೇಕು. ಅಂಗಾಲುಗಳೆರಡೂ
ಮೇಲ್ಮುಖವಾಗಿರಬೇಕು.
ಮಾಡುವ
ವಿಧಾನ :
೧. ನಂತರ ಎರಡೂ ಕೈಗಳನ್ನು ತೊಡೆಯ ಪಕ್ಕದಲ್ಲಿ
ಊರಿ, ಪೂರ್ತಿ ಉಚ್ಛಾಸ ಮಾಡಿ. ದೇಹದ ಪೂರ್ತಿ ಭಾರವನ್ನು
ಚಾಚಿದ ತೋಳುಗಳುಳ್ಳ ಕೈಗಳ ಮೇಲೆ ಹಾಕಿ ಸಮತೋಲನವನ್ನು ಕಾಯ್ದುಕೊಂಡು, ದೇಹವನ್ನು
ಸಾಧ್ಯವಿದ್ದಷ್ಟು ಮೇಲಕ್ಕೆ ಎತ್ತಬೇಕು.
೨. ಅನಂತರ ಶ್ವಾಸವನ್ನು ತೆಗೆದುಕೊಳ್ಳುತ್ತ,
ನಿಧಾನವಾಗಿ ದೇಹವನ್ನು ಕೆಳಗಿಳಿಸುತ್ತ, ಪೂರ್ವಸ್ಥಿತಿಗೆ
ಬರಬೇಕು.
೩. ಆಮೇಲೆ, ಪದ್ಮಾಸನದಲ್ಲಿದ್ದ
ಕಾಲುಗಳನ್ನು ಬದಲಾಯಿಸಿ, ಮತ್ತೆ ಮುಂಚಿನಂತೆಯೇ ಉಚ್ಛಾಸದೊಂದಿಗೆ
ದೇಹವನ್ನು ಮೇಲೆತ್ತಬೇಕು. ನಿಮಗೆ ಸಾಧ್ಯವಿದ್ದಷ್ಟು ಕಾಲ ಸಮತೋಲ ಸ್ಥಿತಿಯಲ್ಲಿ ಇರಬೇಕು.
ಸಮಯ
: ನಾಲ್ಕಾರು ಸಲ, ಪ್ರತಿಸಲ ಅರ್ಧ ನಿಮಿಷದಂತೆ ಮಾಡಬಹುದು.
ಲಾಭಗಳು
:
ಹೊಟ್ಟೆಯ ಬೊಜ್ಜು ಹೋಗುವುದು, ಹೊಟ್ಟೆಯ ಕರುಳುಗಳಿಗೆ ತುಂಬ ಶ್ರಮಬಿದ್ದು, ಪಚನಕ್ಕೂ,
ಮಲಶುದ್ದಿಗೂ ಅವು ಸಮರ್ಥವಾಗುವುವು.
ಬಾಹುಗಳು ಬಲಗೊಂಡು, ಭುಜಗಳು ಶಕ್ತಿಯುತವಾಗುವುವು.
ಸೂಚನೆ
:
ಎಲ್ಲ ವಯಸ್ಸಿನವರಿಗೆ ಇದು ಉತ್ತಮವಾದುದು, ಗರ್ಭಿಣಿ
ಸ್ತ್ರೀಯರು ಇದನ್ನು ಮಾಡಕೂಡದು.
ಏಕಪಾದ ಕಂದರಾಸನ
ಪ್ರಾರಂಭಿಕ
ಸ್ಥಿತಿ : ಕಾಲುಗಳನ್ನು ಚಾಚಿ ಕುಳಿತುಕೊಳ್ಳಬೇಕು.
ಮಾಡುವ
ಕ್ರಮ:
೧. ಎಡಗಾಲನ್ನು ಮಡಿಚಿ ಬಲಪೃಷ್ಠದಡಿಯಲ್ಲಿಡಬೇಕು.
೨. ಕೈಗಳ ಸಹಾಯದಿಂದ ಬಲಗಾಲನ್ನು ದೀರ್ಘ
ಉಚ್ಛಾಸದೊಂದಿಗೆ ಕತ್ತಿನ ಮೇಲೆ ಇಟ್ಟುಕೊಳ್ಳಬೇಕು.
೩. ಎರಡೂ ಕೈಗಳಿಂದ ಕಾಲನ್ನು
ಹಿಡಿದುಕೊಳ್ಳಬೇಕು.
೪. ಸೊಂಟವನ್ನು ನೆಟ್ಟಗೆ ಇಡಲು
ಪ್ರಯತ್ನಿಸಬೇಕು. ಕತ್ತನ್ನೂ, ದೃಷ್ಟಿಯನ್ನೂ ಸರಳವಾಗಿಡಬೇಕು.
ಸ್ವಲ್ಪಹೊತ್ತು ಕುಂಭಕ ಮಾಡಬೇಕು. ನಂತರ ಶ್ವಾಸವನ್ನೆಳೆದುಕೊಳ್ಳುತ್ತ, ಪ್ರಾರಂಭಿಕ
ಸ್ಥಿತಿಗೆ ಬರಬೇಕು. ಇದೇ " ಪ್ರಕಾರವಾಗಿ, ಎಡಗಾಲಿನಿಂದಲೂ ಈ
ಆಸನವನ್ನು ಮಾಡಬೇಕು.
ಸಮಯ
: ಕಾಲು ನಿಮಿಷದಿಂದ ೧ ನಿಮಿಷ. ಹೆಚ್ಚೆಂದರೆ ೨ ನಿಮಿಷಗಳ ವರೆಗೂ ಮಾಡಬಹುದು.
ಲಾಭಗಳು
:
ಹರ್ನಿಯಾ, ಅಪೆಂಡಿಸೈಟಿಸ್ದಂತಹ
ಘಾತಕ ರೋಗಗಳ ನಿವಾರಣೆ ಮತ್ತು , ಸತು, ಕಿಬ್ಬೊಟ್ಟೆ,
ಸೊಂಟದಲ್ಲಿಯ ದೋಷಗಳ ನಿವಾರಣೆಯಾಗುತ್ತದೆ.
ಏಕಪಾದ ಪಶ್ಚಿಮತಾನಾಸನ
ಪ್ರಾರಂಭಿಕ
ಸ್ಥಿತಿ : ಕಾಲುಗಳನ್ನು ಚಾಚಿ ಕೈಗಳನ್ನು ಬದಿಗೆ ಇಟ್ಟು ಕುಳಿತುಕೊಳ್ಳಬೇಕು.
ಮಾಡುವ
ವಿಧಾನ :
೧. ಎಡಗಾಲನ್ನು ಮಡಿಚಿ, ಬಲ ಮೊಣಕಾಲ ಬದಿಗೆ ಎಡಪಾದವನ್ನು ಹಚ್ಚಿ ಕುಳಿತುಕೊಳ್ಳಬೇಕು.
೨. ಎರಡೂ ಕೈಗಳನ್ನು ಮುಂದೆ ಚಾಚಿ, ಬೆನ್ನನ್ನು ಸರಳವಾಗಿ ಬಾಗಿಸುತ್ತ, ದೀರ್ಘ
ಉಚ್ಛಾಸ ಮಾಡುತ್ತ ಕಾಲಿನ ಹೆಬ್ಬೆರಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು.
೩. ಹಣೆಯನ್ನು ಬಲ ಮೊಣಕಾಲಿಗೆ ಹಚ್ಚಲು
ಪ್ರಯತ್ನಿಸಬೇಕು. (ಬಾಹ್ಯ ಕುಂಭಕದ [ಶೂನ್ಯಕದ] ಸ್ಥಿತಿಯಲ್ಲಿ - ಅಂದರೆ ಉಸಿರನ್ನು ಪೂರ್ತಿ ಬಿಟ್ಟ
ಸ್ಥಿತಿಯಲ್ಲಿರಬೇಕು).
೪. ನಂತರ ತಲೆಯನ್ನೆತ್ತಿ ಅಂಕೆ ೨ ರ
ಸ್ಥಿತಿಗೆ ಬರಬೇಕು.
೫. ದೀರ್ಘವಾಗಿ ಶ್ವಾಸವನ್ನು
ತೆಗೆದುಕೊಳ್ಳುತ್ತ, ಅಂಗುಷ್ಠವನ್ನು ಬಿಟ್ಟು, ನಿಧಾನವಾಗಿ ದೇಹವನ್ನು ೧ನೆಯ ಅಂಕೆಯ ಸ್ಥಿತಿಗೆ ತರಬೇಕು.
ನಂತರ ವಿರುದ್ದದ ಕಾಲನ್ನು ಚಾಚಿ ಈ ಆಸನವನ್ನು
ಮತ್ತೆ ಮಾಡಬೇಕು. ಎರಡೂ ಕಾಲುಗಳನ್ನು ಚಾಚಿ ಕೂಡ ಈ ಆಸನವನ್ನು ಮಾಡಬಹುದು. ಆಗ ಅದು “ದ್ವಿಪಾದ
ಪಶ್ಚಿಮತಾನಾಸನ' ವಾಗುತ್ತದೆ.
ಸಮಯ
: ಕಾಲು ನಿಮಿಷದಿಂದ ೨ ನಿಮಿಷಗಳು. (ಪ್ರಾರಂಭದಲ್ಲಿ ಕಾಲು ನಿಮಿಷ).
ಲಾಭಗಳು
: ಹೊಟ್ಟೆಯ ಬೊಜ್ಜು ಕರಗಿ, ಹೊಟ್ಟೆ, ಬೆನ್ನು,
ಸೊಂಟ, ಮೀನಖಂಡ, ಸಂದುಗಳಲ್ಲಿಯ
ದೋಷಗಳ ನಿವಾರಣೆಯಾಗುವುದು, ಪಚನಶಕ್ತಿ ಬೆಳೆಯುವುದು.
ಸೂಚನೆ
:
ಎಲ್ಲ ವಯಸ್ಸಿನವರು ಮಾಡಲು ಉತ್ತಮವಾದ ಆಸನವು.
ಗರ್ಭಿಣಿ ಸ್ತ್ರೀಯರು ಮಾತ್ರ ಇದನ್ನು ಮಾಡಕೂಡದು.
ಈ ಒಂದು ಮಾಹಿತಿಯ ಮೊದಲನೆ ಭಾಗಕ್ಕಗಿ ಇಲ್ಲಿ ಕ್ಲಿಕ್ ಮಾಡಿ
ಸಿಕ್ಸ್ ಪ್ಯಾಕ್ ಮಾಡಲು ಜಿಮ್ ಹೋಗಬೇಕಿಲ್ಲ ಈ ಆಸನವನ್ನು 30 ದಿನ ಮಾಡಿದರೆ ಸಾಕು (ಭಾಗ-1)







