ಎದೆಯನ್ನು ವಜ್ರದಂತೆ ಗಟ್ಟಿ ಗೊಳಿಸುತ್ತದೆ ಈ 4 | ಯೋಗಾಸನಗಳು | | ಯೋಗ | Health Tips Kannada

Health Tips Kannada



ಎದೆಯನ್ನು ವಜ್ರದಂತೆ ಗಟ್ಟಿ ಗೊಳಿಸುತ್ತದೆ ಈ 4 ಯೋಗಾಸನಗಳು

೧) ಪೃಷ್ಟವಲಿತ ಹನುಮಾನಾಸನ

ಪ್ರಾರಂಭಿಕ ಸ್ಥಿತಿ: ಸಾವಧಾನ ಸ್ಥಿತಿಯಲ್ಲಿ ನಿಂತಿರಬೇಕು.


ಮಾಡುವ ವಿಧಾನ :

೧. ಎಡಗಾಲನ್ನು ಎದುರಿಗೆ ಮೂರಡಿ ಮುಂದೆ ಇರಿಸಿ, ಮೊಣಕಾಲಿನಲ್ಲಿ ಸ್ವಲ್ಪ ಮಡಿಚಿ, ಬಲಗಾಲನ್ನು ಹಿಂಬದಿಗೆ ನೀಟಾಗಿ ಇರಿಸಬೇಕು.

೨. ಎರಡೂ ಕೈಗಳನ್ನು ಜೋಡಿಸಿ ತಲೆಯ ಮೇಲೆ ಎತ್ತಿ ಹಿಡಿಯಬೇಕು.

೩. ದೀರ್ಘಶ್ವಾಸದೊಂದಿಗೆ ದೇಹವನ್ನು ಸಾಧ್ಯವಿದ್ದಷ್ಟು ಸಂಪೂರ್ಣವಾಗಿ ಹಿಂದಕ್ಕೆ ಬಾಗಿಸಿ, ಕೈಗಳನ್ನು ಮಣಿಸದೆ ಹಿಂದೆ ಚಾಚಬೇಕು. ಆಕಾಶವನ್ನು ನೋಡುತ್ತ ಹಾಗೆಯೇ ಕೈಗಳನ್ನು ನೆಲಕ್ಕೆ ತಗಲಿಸುವಂತೆ ಪ್ರಯತ್ನಿಸಬೇಕು. ಈ ವೇಳೆಯಲ್ಲಿ ಕುಂಭಕಾವಸ್ಥೆಯಲ್ಲಿರಬೇಕು.

೪. ನಂತರ ಸಾವಧಾನವಾಗಿ ಕೈಗಳನ್ನು ನೀಟಾಗಿ ವಿರುದ್ಧ ದಿಕ್ಕಿಗೆ ದೀರ್ಘೋಚ್ಛಾಸದೊಂದಿಗೆ ಪೂರ್ವಸ್ಥಿತಿಗೆ ತರುತ್ತ, ಅದೇ ಕಾಲಕ್ಕೆ ಎಡಗಾಲನ್ನು ಪೂರ್ವಸ್ಥಿತಿಗೆ ತಂದು, ಎರಡನೆಯ ಅಂಕೆಯ ಸ್ಥಿತಿಗೆ ಬಂದು ಸಾವಧಾನ ಸ್ಥಿತಿಯನ್ನು ಸಾಧಿಸಬೇಕು. ನಂತರ ಇದೇ ರೀತಿ ಬಲಗಾಲನ್ನು ಮುಂದೆ ಇಟ್ಟು ಈ ವ್ಯಾಯಾಮ ವನ್ನು ಮೇಲಿನಂತೆ ಅನುಕ್ರಮವಾಗಿ ಮಾಡಬೇಕು. ಪ್ರತಿಯೊಂದು ಕಾಲಿನ ಕನಿಷ್ಟ ಐದೈದು ಆವರ್ತನಗಳನ್ನು ಮಾಡಬೇಕು.

 

ಸಮಯ : ಅರ್ಧ ನಿಮಿಷದಿಂದ ೨ ನಿಮಿಷಗಳ ವರೆಗೆ.

ಲಾಭಗಳು :

  1. ಸೊಂಟ, ಮೊಣಕಾಲ ಸಂದು, ಎದೆ, ಹೊಟ್ಟೆ, ಪಕ್ಕೆಗಳಿಗೆ ಉತ್ತಮ ವ್ಯಾಯಾಮ ದೊರೆಯುವುದು. ಆದ್ದರಿಂದ ಹದಿಹರೆಯದ ಹುಡುಗರು ಈ ಆಸನವನ್ನು ಕ್ರಮವಾಗಿ ಮಾಡುತ್ತಿದ್ದರೆ ಆಜಾನುಬಾಹು ಶರೀರವನ್ನು ಹೊಂದಬಹುದಾಗಿದೆ.
  2. ಬೆನ್ನೆಲುಬಿನ ಸ್ಥಿತಿಸ್ಥಾಪಕಶಕ್ತಿಯು ವರ್ಧಿಸಿ, ಬಲಗೊಂಡು, ಬೆನ್ನು, ಗೋಣುಗಳ ಯಾವುದೇ ಬಗೆಯ ನೋವು-ಕಾಯಿಲೆಗಳು ಕಡೆಹಾಯುವುದಿಲ್ಲ.
  3. ಬೊಜ್ಜು ಕರಗುವುದು, ಅಪಚನ, ಮಲಬದ್ಧತೆಗಳ ನಿವಾರಣೆಯಾಗುವುದು.
  4. ಈ ಆಸನದಿಂದ ಮೂಲವ್ಯಾಧಿಯೂ ಕ್ರಮೇಣ ಗುಣವಾಗುವುದು.
  5. ಎದೆ ವಿಶಾಲವಾಗುವುದು. ಅಪಸ್ಮಾರ, ಗೂರಲು ಮುಂತಾದ ರೋಗಗಳು ಇಲ್ಲವಾಗುವುವು.

 

೨) ಆಕರ್ಣ ಧನುರಾಸನ

ಪ್ರಾರಂಭಿಕ ಸ್ಥಿತಿ : ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಬೇಕು.


ಮಾಡುವ ವಿಧಾನ :

೧. ಬಲಗೈಯಿಂದ ಎಡಗಾಲಿನ ಹಾಗೂ ಎಡಗೈಯಿಂದ ಬಲಗಾಲಿನ ಹೆಬ್ಬೆರಳುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು.

೨. ಎಡಗಾಲಿನ ಅಂಗುಷ್ಠವನ್ನು ಬಲಗಿವಿಯ ವರೆಗೆ ಉಛ್ವಾಸದೊಂದಿಗೆ ಎಳೆದು ತರಬೇಕು.

೩. ನಂತರ ಶ್ವಾಸವನ್ನೆಳೆದುಕೊಳ್ಳುತ್ತ ಎಡಗಾಲನ್ನು ಮೊದಲನೆಯ ಅಂಕೆಯ ಸ್ಥಿತಿಗೆ ತರಬೇಕು.

೪. ಈಗ, ತದ್ವಿರುದ್ಧವಾಗಿ ಬಲಗಾಲ ಹೆಬ್ಬೆರಳನ್ನು ಎಡಗಿವಿಯ ವರೆಗೆ ಉಛ್ವಾಸದೊಂದಿಗೆ ಎಳೆದು ತರಬೇಕು.

ಎರಡು ಮತ್ತು ನಾಲ್ಕನೆಯ ಅಂಕೆಯ ಸ್ಥಿತಿಯಲ್ಲಿ ಇರುವಾಗ, ತುಸು ಸಮಯ ಕುಂಭಕದಲ್ಲಿದ್ದು, ನಂತರ ಶ್ವಾಸವನ್ನೆಳೆದುಕೊಳ್ಳುತ್ತ ಪೂರ್ವಸ್ಥಿತಿಗೆ ಬರಬೇಕು. .

ಸಮಯ: ಕಾಲು ನಿಮಿಷದಿಂದ ೨ ನಿಮಿಷ.

ಲಾಭಗಳು :

  1. ಹೊಟ್ಟೆಯ, ಬೆನ್ನಿನ ಮತ್ತು ಎದೆಯ ವಿಕಾರಗಳು ಇಲ್ಲವಾಗುವುವು.
  2. ಕಿಬ್ಬೊಟ್ಟೆಯೊಳಗಿನ ಮಾಂಸ-ಖಂಡಗಳು ಕುಗ್ಗುವುದರಿಂದ ಮಲವಿಸರ್ಜನೆ ಸರಳ ವಾಗುತ್ತದೆ.
  3. ಸೊಂಟದ ಕೀಲುಗಳಲ್ಲಿಯ ಸಾಮಾನ್ಯವಾದ ಕೊಂಕುಗಳು ಇದರಿಂದ ಸರಿಯಾಗುವವು
  4. ಬೆನ್ನು ಮೂಳೆಯ ಕೆಳಭಾಗಕ್ಕೂ ಒಳ್ಳೆಯ ವ್ಯಾಯಾಮವು ಸಿಗುವದು.

 

೩) ಮತ್ಸ್ಯಾಸನ

ಪ್ರಾರಂಭಿಕ ಸ್ಥಿತಿ : ನೆಲದ ಮೇಲೆ ನೀಟಾಗಿ ಕುಳಿತುಕೊಳ್ಳಬೇಕು.

ಮಾಡುವ ವಿಧಾನ :

೧. ಪದ್ಮಾಸನ ಹಾಕಬೇಕು.

೨. ಆಯಾ ಕೈಯಿಂದ ಆಯಾ ತೊಡೆಯ ಮೇಲಿರುವ ಅಂಗುಷ್ಠವನ್ನು ಹಿಡಿದು ಕೊಳ್ಳಬೇಕು.

೩. ತೊಡೆಗಳನ್ನು ನೆಲಕ್ಕೆ ಬಿಗಿಯಾಗಿ ಊರಿಟ್ಟು, ದೀರ್ಘಶ್ವಾಸದೊಂದಿಗೆ ಬೆನ್ನನ್ನು ಮಣಿಸುತ್ತ ದೇಹವನ್ನು ಹಿಂದಕ್ಕೊಯ್ದು, ದೇಹದ ಭಾರವನ್ನು ತಲೆಯ ಮೇಲೆ ಹಾಕಬೇಕು. ಆಗ ಪದ್ಮಾಸನ ಸ್ಥಿತಿಯು ನೆಲದಿಂದ ಮೇಲೆ ಏಳಬಾರದು.

೪. ನಂತರ ಉಸಿರನ್ನು ಹೊರಗೆ ಹಾಕಿ, ನೆತ್ತಿಯನ್ನು ನೆಲಕ್ಕೆ ಊರಿ, ಎದೆಯನ್ನೂ, ಹೊಟ್ಟೆಯ ಭಾಗವನ್ನೂ ಸಾಧ್ಯವಿದ್ದಷ್ಟು ಮೇಲೆತ್ತಬೇಕು. ದೃಷ್ಟಿ ನೇರವಾಗಿರಬೇಕು. ಈ ಸ್ಥಿತಿಯಲ್ಲಿ ಕೆಲ ಸಮಯ ನೀಳವಾಗಿ ಉಸಿರಾಡಿಸುತ್ತಿರಬೇಕು.

೫. ಅನಂತರ ಉಸಿರನ್ನು ಒಳಗೆ ಎಳೆದುಕೊಂಡು, ತಲೆಯನ್ನು ಸಾವಕಾಶವಾಗಿ ನೆಲದ ಮೇಲೆ ಚಾಚಬೇಕು. ಕೈಗಳನ್ನು ಬಿಟ್ಟು, ಪದ್ಮಾಸನವನ್ನು ಬಿಚ್ಚಿ, ಕಾಲುಗಳನ್ನು ಚಾಚಬೇಕು. ನಂತರ ಮೊದಲಿನಂತೆ ಕುಳಿತುಕೊಳ್ಳಬೇಕು. :

[ ಈ ಆಸನವನ್ನು ಅಂಗಾತ ಮಲಗಿಕೊಂಡು, ನಂತರ ಆ ಅವಸ್ಥೆಯಲ್ಲಿಯೇ ಪದ್ಮಾಸನ ಹಾಕಿಕೊಂಡು ಸಹ ಮಾಡಬಹುದು. ಸುಖಾಸನ, ಸಿದ್ಧಾಸನದಲ್ಲೂ ಮಾಡಬಹುದು ].

ಸಮಯ : ಅರ್ಧದಿಂದ ೨ ನಿಮಿಷ

ಲಾಭಗಳು :

ಉದರ, ಗಂಟಲು, ಕುತ್ತಿಗೆ, ಸೊಂಟ, ಹೊಟ್ಟೆ ಹಾಗೂ ಎದೆಗಳು ನಿರ್ದೋಷವಾಗುತ್ತವೆ. ಎದೆಯು ಅಗಲವಾಗುತ್ತದೆ.

 

 ೪) ವಿಸ್ತ್ರತವಾದ ಹಸ್ತಪಾರ್ಶ್ವಚಾಲನಾಸನ

ಪ್ರಾರಂಭಿಕ ಸ್ಥಿತಿ : ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು.



ಮಾಡುವ ವಿಧಾನ :

೧. ದ್ವಿಪಾದ ಪಶ್ಚಿಮತಾನಾಸನದಂತೆ ಕಾಲುಗಳನ್ನು ಪಸರಿಸಿ, ಕೈಗಳನ್ನು ಸರಳವಾಗಿ ಎದೆಯ ಎತ್ತರಕ್ಕೆ, ಭೂಮಿಗೆ ಸಮಾಂತರವಾಗಿ ಎದುರಿಗೆ ಎತ್ತರಿಸಿ ಹಿಡಿಯಬೇಕು.

೨. ಶರೀರದ ಎಡಬದಿಗೆ ಉಛ್ವಾಸದೊಂದಿಗೆ ಎರಡೂ ಕೈಗಳನ್ನು - ಸಾಧ್ಯವಿದ್ದಷ್ಟು ಹಿಂದಕ್ಕೆ ಚಾಚಿ, ಮುಖವನ್ನು ಆ ಕಡೆಗೆ ತಿರುವಬೇಕು.

೩. ಶ್ವಾಸವನ್ನೆಳೆದುಕೊಳ್ಳುತ್ತ, ಮತ್ತೆ ೧ ನೆಯ ಅಂಕೆಯ ಸ್ಥಿತಿಗೆ ಬರಬೇಕು.

, ಮತ್ತೆ, ಉಛ್ವಾಸದೊಂದಿಗೆ ಶರೀರದ ಬಲಬದಿಗೆ ಎರಡೂ ಕೈಗಳನು ಸಾಧ್ಯವಿದ್ದಷ್ಟು ಹಿಂದೆ ಚಾಚಿ, ಮುಖವನ್ನು ಆ ಬದಿಗೆ ಹೊರಳಿಸಬೇಕು.

ಈ ರೀತಿ ಪ್ರತಿಯೊಂದು ಬದಿಗೆ ಕನಿಷ್ಟ ಐದೈದು ಆವರ್ತನಗಳನ್ನು ಮಾಡಬೇಕು.

ಸಮಯ : ಕಾಲು ನಿಮಿಷದಿಂದ ೨ ನಿಮಿಷ.

ಲಾಭಗಳು : ಎಲ್ಲ ಕೀಲುಗಳು, ಹೊಟ್ಟೆ, ಸೊಂಟ, ಕಿಬ್ಬೊಟ್ಟೆ, ಪುಪ್ಪುಸ ಮತ್ತು ಹೃದಯಇವು ನಿರ್ದೋಷವಾಗಿ ಬಲಗೊಳ್ಳುವವು. ಚಪಲತ ಹೆಚ್ಚುವದು.

ಸೂಚನೆ : ಎಲ್ಲ ವಯಸ್ಸಿನವರು ಮಾಡಬಹುದು. ಗರ್ಭಿಣಿಯರು ಮಾಡಕೂಡದು.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಜೇನುತುಪ್ಪ, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.