Health Tips Kannada
ನೀವು ಕೂಡ ಟೊಮ್ಯಾಟೋ ತಿಂತೀರ ?
ಉಪ್ಪು, ಈರುಳ್ಳಿಯಷ್ಟೇ
ಮಹತ್ವ ಟೊಮ್ಯಾಟೊಗೂ ಬಂದಿದೆ. ಟೊಮ್ಯಾಟೊ ಹಾಕದ ಸಾರು ಮಾಡುವುದೇ ಈಗ ಅಪರೂಪ. ಭಾರತೀಯರ
ಅಡುಗೆಯಲ್ಲಿ ಇಷ್ಟೊಂದು ಪ್ರಧಾನ ಸ್ಥಾನ ಪಡೆದ ಈ ಟೊಮ್ಯಾಟೊ ಮೂಲತಃ ಭಾರತದ್ದೇ ಅಲ್ಲ. ದಕ್ಷಿಣ
ಅಮೇರಿಕಾದ ಆಂಡೆಸ್ ಪರ್ವತಗಳಲ್ಲಿ ಇವು ಮೊದಲ ಬಾರಿಗೆ ಕಂಡು ಬಂದವು. ಮೆಕ್ಸಿಕೊದ ಆಜ್ ಟೆಕ್ ಜನರು
ಇದನ್ನು ಮೊದಮೊದಲು ಬಳಸುತ್ತಿದ್ದರು. ವರ್ಷಗಳು ಉರುಳಿದಂತೆ ಇದರ ಜನಪ್ರಿಯತೆ ಬೆಳೆಯ ತೊಡಗಿತು,
ಈಗ ಟೊಮ್ಯಾಟೊ ದಕ್ಷಿಣ ಅಮೇರಿಕಾದ ಎರಡನೇ ಅತ್ಯಂತ ಹೆಚ್ಚು ಬಳಕೆ ತರಕಾರಿ,
ಹುಳಿ, ಸಿಹಿ ಮಿಶ್ರಿತ ಟೊಮ್ಯಾಟೊ ತಿನ್ನಲು
ರುಚಿಯಾಗಿರುತ್ತದೆ.
ಇದಲ್ಲದೆ ಆರೋಗ್ಯಕಾರಿ ಅಂಶಗಳು ಈ
ಕೆಳಕಂಡಂತಿವೆ. ಟೊಮ್ಯಾಟೊ ಪೊಷಕಾಂಶಗಳ ಖಜಾನೆ.
ವಿಟಮಿನ್ 'ಸಿ'
ಪೊಟಾಸಿಯಂ
ವಿಟಮಿನ್ 'ಎ'
ಫಾಲಿಕ್ ಆಸಿಡ್
ಇದರಲ್ಲಿ ಯಥೇಚ್ಛವಾಗಿದೆ, ಡಯಟ್ ಮಾಡುವವರಿಗೆ ಇತರ ತರಕಾರಿ ಹಾಗೂ ಹಣ್ಣುಗಳಿಗಿಂತ ಟಮೊಟೋ ಉತ್ತಮ. ಹಣ್ಣು,
ತರಕಾರಿಗಳಿಗಿಂತಲೂ ಹೆಚ್ಚಿನ ಪೋಷಕ ಇದರಲ್ಲಿದೆ.
ವಿಟಮಿನ್ 'ಸಿ'
ಸರ್ವಿ ರೋಗ ತಡೆಗೆ ವಿಟಮಿನ್ 'ಸಿ' ಅತ್ಯಂತ ಪ್ರಭಾವಿ ಜೀವಾಂಶ. ಸಂಧಿವಾತ ಹಾಗೂ
ವಸಡುಗಳಲ್ಲಿ ರಕ್ತ ಸೋರುವಿಕೆಯಾಗುವ ಸ್ಕರ್ವಿ ರೋಗ ತಡೆಗಟ್ಟಲು ವಿಟಮಿನ್ 'ಸಿ' ಅತ್ಯವಶ್ಯಕ,
ಹಲ್ಲುಜ್ಜುವಾಗ ಬ್ರಶ್ ಅನ್ನು ಮೃದುವಾಗಿ ಬಳಸುವವರು ಆಹಾರದಲ್ಲಿ ಹೆಚ್ಚಿನ
ಟೊಮ್ಯಾಟೊ ಬಳಸುವುದು ಒಳ್ಳೆಯದು. ರೋಗ ನಿವಾರಕ ಅಂಶವಾಗಿಯೂ ಈ ಜೀವಾಂಶ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯ ಶೀತ ಹಾಗೂ ಮರುಕಳಿಸುವ ರೋಗಗಳ ನಿರ್ಬಂಧಕದಂತೆಯೂ ಇದು ಕೆಲಸ ಮಾಡುತ್ತದೆ. ಎಂದು ಹಲವಾರು
ಅಧ್ಯಯನಗಳು ದೃಢಪಡಿಸಿವೆ. ಇದರಲ್ಲಿಯ ಉರಿಯೂತ ನಿರೋಧಕ ಅಂಶವು ಅಸ್ತಮ ರೋಗ ಸೋಂಕುಗಳ
ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಎಳೆಯ ವಯಸ್ಸಿನಲ್ಲಿ ಅಸ್ತಮಾದಿಂದ ಬಳಲುತ್ತಿರುವ ಚಿಕ್ಕ
ಮಕ್ಕಳು ಆಹಾರದಲ್ಲಿ ಹೆಚ್ಚು ಟೊಮ್ಯಾಟೋ ಉಪಯೋಗಿಸಿದರೆ ಮುಂದೆ ಗಮನಾರ್ಹ ಪ್ರಮಾಣದಲ್ಲಿ
ಅಸ್ತಮಾದಿಂದ ಮುಕ್ತಿಯಾಗಬಹುದೆಂದು ಹಲವಾರು ಅಧ್ಯಯನದ ವರದಿಗಳು ತಿಳಿಸಿವೆ.
ವಿಟಮಿನ್ 'ಎ'
ರೋಗ ನಿರೋಧಕ ಕಾರ್ಯ, ಚರ್ಮದ ಕೋಮಲತೆ ಕಾಯ್ದುಕೊಳ್ಳುವಿಕೆ, ನರಸತ್ವ
ಹಾಗೂ ದೃಷ್ಟಿ ದೋಷ ನಿವಾರಣೆಯಲ್ಲಿ ವಿಟಮಿನ್ 'ಎ' ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ 'ಎ'
ಮಹತ್ವದ ಇರುವ ಟೊಮ್ಯಾಟೊ ಈ ಮೇಲಿನ ರೋಗಕ್ಕೆ ಔಷಧಿಯಾಗಬಲ್ಲದು.
ಫೋಲಿಕ್ ಆಮ್ಲ
ಫೋಲಿಕ್ ಆಮ್ಲ, ವಿಟಮಿನ್
'ಸಿ' ಹಾಗೂ ಬೀಟಾ
ಕೆರೋಟಿನ ಅಂಶ ಒಳಗೊಂಡ ಅಹಾರ ಸೇವನೆಯಿಂದ ಹೊಮೊಸಿಸ್ಟಿನ್ ಮಟ್ಟವನ್ನು ಪರಿಣಾಮಕಾರಿಯಾಗಿ
ಕಡಿಮೆಗೊಳಿಸಲು ಸಾಧ್ಯ. ಟೊಮ್ಯಾಟೊ ಈ ಮೂರು ಪೋಷಕಾಂಶಗಳನ್ನು ಹೊಂದಿದೆ.
ಪೊಟಾಸಿಯಂ
ದೇಹದ ಬೆಳವಣಿಗೆ ಹಾಗೂ ಸಾಮಾನ್ಯ ಆರೋಗ್ಯ
ಸ್ಥಿತಿ ಕಾಯ್ದು ಕೊಳ್ಳಲು ಪೊಟಾಸಿಯಂ ಬಹಳ ಮುಖ್ಯ. ಶರೀರದಲ್ಲಿ ಎಲ್ಲಾ ಜೀವಕೋಶಗಳಿಗೆ ಪೊಟಾಸಿಯಂ
ಬೇಕೇಬೇಕು. ಪೊಟಾಸಿಯಂ ಕೊರತೆಯಿಂದ ಮಾಂಸಖಂಡಗಳು ದುರ್ಬಲಗೊಳ್ಳುತ್ತದೆ. ಸ್ನಾಯು ಸೆಳೆತ,
ನಿರುತ್ಸಾಹ ಉಂಟಾಗುತ್ತದೆ. ಇಷ್ಟೇ ಅಲ್ಲದೇ ಟೊಮ್ಯಾಟೊ ಸೇವನೆಯಿಂದ ಕ್ಯಾನ್ಸರ್,
ಹೃದಯ ಸಂಬಂಧಿ ರೋಗಗಳು, ಅಸ್ಟಿಯೋ ಪೊರೋಸಿಸ್ (ಮೂಳೆ ಸವೆತ)ಕಣ್ಣಿನ
ರೋಗಗಳ ಡಯಾಬಿಟಿಸ್ ಮುಂತಾದ ರೋಗಗಳ ಅಪಾಯವನ್ನು ತಡೆಯಬಹುದು.







