Health Tips Kannada
ಸೊಪ್ಪಿನಿಂದ ಆರೋಗ್ಯಭಾಗ್ಯ
ಎಲ್ಲ ವಯೋಮಾನದವರಿಗೂ, ಎಲ್ಲ ಕಾಲಕ್ಕೂ ಆಹಾರಸೇವನೆಯಲ್ಲಿ ಸೊಪ್ಪು ಬಳಕೆಯನ್ನು ಉತ್ತೇಜಿಸಲಾಗುತ್ತದೆ,
ಸೊಪ್ಪುಗಳ ಬಳಕೆಯಿಂದ ನೂರಾರು ರೋಗಗಳನ್ನು ದೂರವಿಡಬಹುದು. ಸೊಪ್ಪಿನ ಬಳಕೆಯಿಂದ
ಉತ್ತಮ ಘಲಿತಾಂಶವೇ ಹೊರತು ದುಷ್ಪರಿಣಾಮಗಳು ಇಲ್ಲವೇ ಇಲ್ಲ.
ಹಲವಾರು ಸೊಪ್ಪುಗಳ ಬಳಕೆಯಿಂದ ನಮ್ಮ ಆರೋಗ್ಯ
ಹೇಗೆ ವೃದ್ಧಿಸಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ನೋಡೋಣ.
ಸಬ್ಬಸಿಗೆ ಸೊಪ್ಪು
ಬಾಣಂತಿಯರು ಸಬ್ಬಸಿಗೆ ಸೊಪ್ಪು ಸೇವಿಸಿದರೆ
ಎದೆಹಾಲು ವೃದ್ಧಿಯಾಗುವುದು.
ಸಬ್ಬಸಿಗೆ ಸೊಪ್ಪಿನ ಸಾರು ಮತ್ತು ಪಲ್ಯದ
ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಒಣದ ಸಬ್ಬಸಿಗೆ ಸೊಪ್ಪನ್ನು ಮೆಂತ್ಯದೊಂದಿಗೆ
ಮಿಶ್ರ ಮಾಡಿ ತುಪ್ಪದಲ್ಲಿ ಹುರಿದು ಒಣ ಮೆಣಸಿನಕಾಯಿ, ಉಪ್ಪು,
ಸಾಸಿವೆ ಸೇರಿಸಿ ಕುಟ್ಟಿ ಪುಡಿ ಮಾಡಿಕೊಂಡು ಬಳಸುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಅರಿಶಿನದೊಂದಿಗೆ
ನುಣ್ಣಗೆ ಅರೆದು ಹುಣ್ಣುಗಳಿಗೆ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ.
ಸಬ್ಬಸಿಗೆ ಸೊಪ್ಪಿನ ಕಷಾಯ ಮಗುವಿಗೆ
ಕುಡಿಸಿದರೆ ಹಾಲು ಜೀರ್ಣವಾಗುತ್ತದೆ ಮತ್ತು ಮಗುವಿಗೆ ನಿದ್ರೆ ಚೆನ್ನಾಗಿ ಬರುತ್ತದೆ.
ಪುದೀನ ಸೊಪ್ಪು
ಅದೇ ರೀತಿಯಲ್ಲಿ ಪುದೀನ ಸೊಪ್ಪಿನ ರಸವನ್ನು
ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ, ನೆಗಡಿ ಮತ್ತು
ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
ಪುದೀನ ಸೊಪ್ಪಿನ ಚಟ್ನಿ ಸೇವಿಸಿದರೆ
ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
ಪುದೀನ ಎಲೆಗಳನ್ನು ಗಿಡದಿಂದ ಸೇವಿಸುವುದರಿಂದ
ನಾಲಿಗೆಯ ರುಚಿಗ್ರಹಣ ಶಕ್ತಿ ವೃದ್ಧಿಯಾಗುತ್ತದೆ.
ಪುದೀನ ಸೊಪ್ಪಿನ ಕಶಾಯಕ್ಕೆ ಉಪ್ಪು ಬೆರೆಸಿ ಬಾಯಿ
ಮುಕ್ಕಳಿಸಿದರೆ ಗಂಟಲು ಕಟ್ಟಿರುವುದು ನಿವಾರಣೆಯಾಗುತ್ತದೆ.
ಊಟದ ನಂತರ ಒಂದೆರಡು ಪುದೀನ ಎಲೆಗಳನ್ನು
ಜಗಿದು ತಿಂದರೆ ಹಲ್ಲು ಹುಳುಕಾಗುವುದು ತಪ್ಪುತ್ತದೆ.
ಪುದೀನ ಶರೀರದಲ್ಲಿನ ಬೇಡದ ರಾಸಾಯನಿಕ
ಪದಾರ್ಥಗಳನ್ನು ರಕ್ತದಿಂದ ಬೇರ್ಪಡಿಸಿ ಮೂತ್ರದ ಮೂಲಕ ಹೊರಕ್ಕೆ ಹಾರುತದೆ.
ಪುದೀನ ರಸವನ್ನು ಮುಖಕ್ಕೆ ಹಚ್ಚಿದರೆ
ಮೊಡವೆಗಳು ಗುಣವಾಗುತ್ತವೆ.
ಬಾರಿಯಲ್ಲಿನ ದುರ್ವಾಸನೆಯನ್ನು ನಿವಾರಿಸಲು
ಪುದೀನ ಎಲೆಗಳನ್ನು ಅಗಿದು ತಿನ್ನಬೇಕು. ಇದರಿಂದ ವಸಡು ಮತ್ತು ಹಲ್ಲುಗಳು ದೃಢವಾಗುತ್ತವೆ.
ಪುದೀನ ಸೊಪ್ಪು ಮತ್ತು ಕೊತ್ತಂಬರಿ
ಸೊಪ್ಪನ್ನು ಸಣ್ಣಗೆ ಹಚ್ಚಿ ಅದಕ್ಕೆ ಈರುಳ್ಳಿ, ಸೌತೇಕಾಯಿ, ಟೊಮ್ಯಾಟೊ, ಕಾಳು ಮೆಣಸಿನ ಪುಡಿ, ಉಪ್ಪು ಮತ್ತು
ನಿಂಬೆರಸವನ್ನು ಕೂಡಿಸಿ ತಿಂದರೆ ಆರೋಗ್ಯವೃದ್ಧಿಯಾಗುತ್ತದೆ.
ಕರಿಬೇವಿನ ಸೊಪ್ಪು
ಕರಿಬೇವಿನ ಎಲೆಗಳನ್ನು ಪ್ರತಿದಿನ ಮೂರು
ತಿಂಗಳವರೆಗೆ ಸೇವನೆ ಮಾಡಿದರೆ ಮಧುಮೇಹ ರೋಗ ಗುಣವಾಗುತ್ತದೆ.
ಕರಿಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಅದ್ದಿ
ತಿಂದರೆ ಮೂಲವ್ಯಾಧಿ, ಆಮಶಂಕೆ, ಅತಿಸಾರ ರೋಗಗಳನ್ನು ನಿವಾರಿಸಬಹುದು.
ಧಡೂತಿ ವ್ಯಕ್ತಿಗಳು ಕರಿಬೇವಿನ ಚಟ್ನಿಯನ್ನು
ಪ್ರತಿದಿನ ಉಪಯೋಗಿಸುತ್ತಿದ್ದರೆ ಬೊಜ್ಜು ಕರಗಿ ಹೋಗಿ ದೇಹದ ತೂಕ ಕಡಿಮೆಯಾಗುವುದು.
ದಂಟಿನ ಸೊಪ್ಪು
ದಂಟಿನ ಸೊಪ್ಪು ನಿಯಮಿತವಾಗಿ ಸೇವಿಸಿದರೆ
ದೃಷ್ಟಿದೋಷ ಪರಿಹಾರವಾಗುತ್ತದೆ
ದಂಟಿನ ಸೊಪ್ಪು ಬಳಕೆಯಿಂದ ಲೈಂಗಿಕ ಶಕ್ತಿ
ವೃದ್ಧಿಯಾಗುತ್ತದೆ. ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವವನ್ನು ಈ ಸೊಪ್ಪು ಬಳಸುವುದರಿಂದ
ನಿವಾರಿಸಬಹುದು.
ದಂಟಿನ ಸೊಪ್ಪಿನ ಪಲ್ಯ ಸೇವಿಸಿದರೆ ಉಷ್ಣ ಕಡಿಮೆಯಾಗಿ
ಜೀರ್ಣಶಕ್ತಿ ವೃದ್ಧಿಯಾಗುವುದು.
ದಂಟಿನ ಸೊಪ್ಪನ್ನು ನಿಯಮಿತ ಸೇವಿಸುವುದರಿಂದ
ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ.
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಬೀಜ ಮತ್ತು ಒಣ ಶುಂಠಿಯ ಕಷಾಯ
ತಯಾರಿಸಿ ಸೇವಿಸಿದರೆ ಹೊಟ್ಟೆ ನೋವು ಗುಣವಾಗುವುದು.
ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ
ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವದರಿಂದ
ಉರಿ ಮೂತ್ರ ನಿವಾರಣೆಯಾಗುವುದು,
ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ನಿಂಬೆರಸ
ಮಿಶ್ರಮಾಡಿ ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು
ನಿವಾರಣೆಯಾಗುತ್ತವೆ.






